ಭಂಡಾರಕೇರಿ ಮಠ,ಉಡುಪಿ
ಶ್ರೀ
ವಿದ್ಯೇಶತೀರ್ಥರ ಕೃತಿ
ತಸ್ಥೌದ್ವಿತೀಯೇನಚ ಸೂರ್ಯಮಂಡಲೇ
ಗಾಯತ್ರೀ ಹೃದಯ
ಪ್ರಕಾಶಕರು
ಭಾಗವತಾಶ್ರಮ ಪ್ರಕಾಶನ
ಗಿರಿನಗರ, ಬೆಂಗಳೂರು
ವಿಷಯ ಸೂಚಿ
ಅನುಗ್ರಹವಾಣಿ
ಹೃದಯವಾಣಿ
ಜಪ ಶಬ್ದದ ಅರ್ಥವೇನು?
ಮಂತ್ರ್ ಶಬ್ದದ ಮಹತ್ತ್ವಪೂರ್ಣ ಅರ್ಥ
ಗಾಯತ್ರೀ ಮಂತ್ರಾರ್ಥ
ಧ್ಯೇಯ ನಾರಾಯಣನ ಸ್ವರೂಪ
ಪ್ರಮಾಣಸಿದ್ಧ ಧ್ಯೇಯತ್ವ
ಗಾಯತ್ರೀ ಯಾರು ? ಮತ್ತು ಏಕೆ?
ಸವಿತೃ ಪದದ ಭಾವ ವೈಭವ
ವರೇಣ್ಯ ಶಬ್ದದ ಮಹತ್ತ್ವ
ಭರ್ಗ ಶಬ್ದದ ರಹಸ್ಯವೇನು?
ದೇವ ಶಬ್ದದ ದಿವ್ಯಾರ್ಥವೇನು?
ಧೀಮಹಿ ಪದದ ಸ್ವಾರಸ್ಯ
ಧಿಯೋಯೋನಃ ಪ್ರಚೋದಯಾತ್
ಗಾಯತ್ರೀಯಲ್ಲಿ ಪುರುಷಸೂಕ್ತ
ಗಾಯತ್ರೀಯಲ್ಲಿ ಪ್ರಾರ್ಥಿತವಾದ ತತ್ವಜ್ಞಾನದ ಸ್ವರೂಪವೇನು?
ಶ್ರೀ ಶ್ರೀ ವಿದ್ಯಾಮಾನ್ಯತೀರ್ಥ ಸ್ವಾಮೀಜಿ
ಶ್ರೀ ಫಲಿಮಾರು ಮತ್ತು ಭಂಡಾರಕೇರಿ ಮಠ
ಉಡುಪಿ - ೫೭೬ ೧೦೧, ದಕ್ಷಿಣ ಕನ್ನಡ
ಅನುಗ್ರಹವಾಣಿ
ಶ್ರೀ
ವಿದ್ಯೇಶತೀರ್ಥರು ಸದಾ ಪಾಠ ಪ್ರವಚನ ಭಗವತ್ಪೂಜಾ, ಜಪ-ತಪಃ ಪಾರಾಯಣರು. ೧೫
ದಿನಗಳಲ್ಲಿ ನೂರು ಪುಟದವರೆಗೆ ಗಾಯತ್ರೀ ಹೃದಯವೆಂಬ ಶ್ರೇಷ್ಠ ಪ್ರಬಂದವನ್ನು
ಚಾತುರ್ಮಾಸ್ಯ ಕಾಲದಲ್ಲಿ ಬರೆದು ಶ್ರೀ ಬದರೀ ನಾರಾಯಣ ದೇವರಿಗೆ ಸಮರ್ಪಿಸುವ ಸಂಕಲ್ಪ
ಮಾಡಿದ್ದಾರೆ. ಈ ಪ್ರಬಂದದಲ್ಲಿ ಗಾಯತ್ರೀಯ ಪ್ರತಿ ಪದಗಳಿಗೂ ಬಹ್ವರ್ಥಗಳನ್ನು
ಸಪ್ರಮಾಣ್ವಾಗಿ ಬರೆದಿದ್ದಾರೆ. ಇಲ್ಲ ಪದಗಳು ಹೃದಯಂಗಮವಾಗಿ ಇವೆ. ಗಾಯತ್ರೀಯ 'ಸವಿತುಃ'
ಎಂಬ ಒಂದು ಪದಕ್ಕೆ ೩೬ ಅಭಿಪ್ರಾಯಗಳುಬರೆಯಲ್ಪಟ್ಟಿವೆ. ಪರಮತ ಖಂಡನವೂ ಸಂದ್ರ್ಭಕ್ಕೆ
ಸರಿಯಾಗಿ ಇದರಲ್ಲಿ ಇದೆ. ಗಾಯತ್ರೀ ಜಪ ಮಾಡುವವರೆಲ್ಲರೊ ಇದನ್ನು ಅವಶ್ಯವಾಗಿ ಓದಬೇಕು.
ಸಣ್ಣ ವಟುಗಳಿಗೆ ತಿಳಿಸಿ ಹೇಳಬೇಕು. ಈಗಿನ ವಟುಗಳು ಗಾಯತ್ರೀ ತಾಯಿಯನ್ನು ಬಿಟ್ಟು
ಅನರ್ಥಕ್ಕೆ ಒಳಗಾಗಿದ್ದಾರೆ. ಅವರು ಗಾಯತ್ರೀಯ ಮಹಿಮೆ ಯನ್ನು ತಿಳಿಯದೆ ಗಾಯತ್ರೀ
ತಾಯಿಯನ್ನು ಬಿಟ್ಟು ಅನರ್ಥಕ್ಕೆ ಒಳಗಾಗಬಾರದು. ಇದೇ ಈ ಪ್ರಬಂಧದ ಉದ್ದೇಶ.
ಶ್ರೀವಿದ್ಯೇಶತೀರ್ಥರು
ಈ ವರೆಗೆ ಅನೇಕ ಪ್ರಬಂಧಗಳನ್ನು ಪ್ರಕಾಶಪಡಿಸಿದ್ದಾರೆ. ಅವೆಲ್ಲವನ್ನೂ ಎಲ್ಲರೊ ಓದಿ
ಸಂತೋಷಪಟ್ಟಿದ್ದಾರೆ. ಇದರಂತೆ ಮುಂದೆಯೂ ಸಜ್ಜನರಿಗೆ ಉಪಕಾರಕ ಅನೇಕ ಪ್ರಬಂಧಗಳನ್ನು
ಬರೆಯುತ್ತಾ ಸರ್ವ ಸಜ್ಜನ ಹೃಸಯಾಂತರ್ಗತ ಮಧ್ವಾಂತರ್ಗತ ಶ್ರೀ ವೇದವ್ಯಾಸ ದೇವರು
ಅನುಗ್ರಹ ಪಾತ್ರರಾಗಲಿ. ಈ ಪ್ರಬಂದವನ್ನು ಗುರುಗುಂಡಿ ರಾಮಾಚಾರ್ಯರು ದ್ವೈತ ವೇದಾಂತ
ವಿದ್ವಾನ್ ಉಡುಪಿ ಸಂಸ್ಕೃತ ಮಹಾಪಾಠಶಾಲಾ ಪ್ರಾಧ್ಯಾಪಕರು. ಇವರು ಸ್ಮರಣಾರ್ಥವಾಗಿ ಅವರ
ಸಿಪುತ್ರರಾದ ಯಾದವಾಚಾರ್ಯರು ಸಂಪೂರ್ಣ ಖರ್ಚು ಕೊಟ್ಟು ಎರಡನೇ ಮುದ್ರಣ ಮಾಡಿಸಿದ್ದಾರೆ.
ಅವರಿಗೊ ಶ್ರೀ ಹರಿವಾಯುಗಳ ವಿಶೇಷಾನುಗ್ರಹವು ಸದಾ ಇರಲಿ.
ಶ್ರೀ ವಿದ್ಯಾಮಾನ್ಯತೀರ್ಥರು
೨೨.೧೨.೧೯೯೯
ಹೃದಯವಾಣಿ
ಅನೇಕರು
ಹೇಳುತ್ತಾರೆ. ಈಶ್ವರನು ಮನಿಷ್ಯನನ್ನು ಸೃಷ್ಟಿಸಲಿಲ್ಲ. ಮನುಷ್ಯನೇ ಈಶ್ವರನನ್ನು ತನ್ನ
ಬುದ್ಧಿಯಿಂದ ಸೃಷ್ಟಿಸಿದ್ದಾನೆ. ಧರ್ಮ, ಈಶ್ವರ ಮೊದಲಾದ ಪದಾರ್ಥಗಳೆಲ್ಲ ಕೇವಲ ಭ್ರಮೆ,
ಮೂಢನಂಬಿಕೆಯ ಕೂಸು ಎಂದು. ಆದರೆ ಗಾಯತ್ರೀ ಹೇಳುತ್ತಾಳೆ - 'ಒಮ್ಮೊಮ್ಮೆ ಮಾನವನಿಗೆ ಕೈ
-ಕೊಡುವ ಬುದ್ಧಿಯು ಆತನ ವಶದಲ್ಲಿಲ್ಲದಿರುವುದರಿಂದ ಈಶ್ವರನನ್ನು ಸೃಷ್ಟಿಸಿವ
ಬುದ್ಧಿಯನ್ನು ಮಾನವನಿಗೆ ನೀಡುವ ನಿಜವಾದ ಈಶ್ವರನೊಬ್ಬನಿದ್ದಾನೆ. ಮಾನವನು ವಿಕೃತವಾಗಿ
ಈಶ್ವರನನ್ನು ತನ್ನ ಬುದ್ಧಿಯಿಂದ ಸೃಷ್ಟಿಸಿದರೆ, ಆತನ ವಿಕೃತ ಬುದ್ಧಿಯನ್ನು
ಸೃಶ್ಟಿಸಿದ್ದಾನೆ ಈಶ್ವರನು. ಆದುದರಿಂದ ನಾಸ್ತಿಕವಾದ ಸರಿಯಲ್ಲ' ಎಂದು. ನಾವಿಂದು
ಸಮಾಜದಲ್ಲಿ ಲಂಚ , ಭ್ರಷ್ಟಾಚಾರ ಮೊದಲಾದ ವಿಕೃತ ದೃಶ್ಯಗಳನ್ನು ಕಾಣುತ್ತೇವೆ. ಇದರ
ಮೂಲಭೂತ ಸಮಸ್ಯೆ ಯಾವುದು? ಕಾಯಿದೆ, ಕಾನೂನುಗಳ ಕೊರತೆಯೇ? ಅಲ್ಲ. ಇದರ ಮೂಲಭೂತ ಸಮಸ್ಯೆ
ಸದ್ಬುದ್ಧಿಯ ದಾರಿದ್ರ್ಯ. ಎಲ್ಲಿಯವರೆಗೆ ಹೃದಯ ಪರಿವರ್ತನೆ ಇಲ್ಲವೋ, ಅಲ್ಲಿಯವರೆಗೆ
ನಾವು ಸಮಾಜದಲ್ಲಿ ಪರಿಶುದ್ಧ ವಾತಾವರಣವನ್ನು ಕಾಣಲಾರೆವು. ಇದನ್ನು ಮನಗೊಂಡೇ
ಜ್ಞಾನಿಗಳು ಲೋಕಕಲ್ಯಾಣಾರ್ಥವಾಗಿ ಎಲ್ಲರಿಗೂ ಸದ್ಬುದ್ಧಿಯನ್ನು ನೀಡುವಂತೆ ಗಾಯತ್ರೀ
ಮಂತ್ರದ ಮೂಲಕ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಕೆಲವರು ಸ್ವಪ್ನವು ಕೇವಲ ಭ್ರಮೆ. ಇದಕ್ಕೆ ವಾಸ್ತವ ಸೃಷ್ಟಿಇಲ್ಲ. ಜೀವನೇ ಭ್ರಾಂತಿಯಿಂದ
ಇದನ್ನು ಸೃಷ್ಟಿಸಿದ್ದಾನೆ ಎಂದು ಹೇಳುತ್ತಾರೆ. ಆದರೆ ಗಾಯತ್ರೀಯಲ್ಲಿರುವ ದೇವಸ್ಯ ಪದವು
(ಸ್ವಪ್ನಾರ್ಥವನ್ನು ನೀಡುವ ದಿವ್ ಧಾತು ಮೂಲವಾದ ಪದವು) ಸ್ವಪ್ನವು ಸತ್ಯ ಅದನ್ನು
ಸಂಸ್ಕಾರದಿಂದ ಭಗವಂತನೇ ಸೃಷ್ಟಿಸಿದ್ದಾನೆ ಎಂದು ಸೂಚಿಸಿ ಹರಿಯಲ್ಲಿ ವಿಶೇಷವಾಗಿ
ಭಕ್ತಿಯನ್ನು ಮೂಡಿಸಿದೆ.
ಕೆಲವು ವಾದಿಗಳು ಇಲ್ಲಿರುವ ಭರ್ಗ ಶಬ್ಧದಿಂದ ರುದ್ರದೇವರನ್ನು ಹೇಳಲಾಗಿದೆ ಎಂದು
ವಾದಿಸುತ್ತಾರೆ. ಆದರೆ ಗಾಯತ್ರೀ ಭಾಷ್ಯವೆನಿಸಿದ ಭಾಗವತವು ಇದನ್ನು ಅಲ್ಲಗಳೆದಿದೆ.
ಭರ್ಗ ಶಬ್ಧದ ಅರ್ಥ ಎಲ್ಲರನ್ನೂ ಸಲಹುವವನು ಹಾಗೂ ಎಲ್ಲರಿಂದಲೂ ವ್ಯಾಪಾರಗಳನ್ನು
(ಕಾರ್ಯಗಳನ್ನು) ಮಾಡಿಸುವವನು' ಎಂದು. ರುದ್ರದೇವರಲ್ಲಿ ಈ ಅರ್ಥವು
ಸಮನ್ವಯವಾಗುವುದಿಲ್ಲ. ರುದ್ರದೇವರು, ಭಸ್ಮಾಸುರನು ತಾನು (ರುದ್ರ) ನೀಡಿದ ವರವನ್ನು
ಪರೀಕ್ಷಿಸಲು ತನ್ನ ತಲೆಯಮೇಲೆ ಕೈಯನ್ನು ಇಡಲು ಬಂದಾಗ ಆತನಿಂದ ತಮ್ಮನ್ನು
ರಕ್ಷಿಸಿಕೊಳ್ಳಲು ಸಮರ್ಥರಾಗಲಿಲ್ಲ. ಆತನ ನಾಶಕ್ಕೋಸ್ಕರ ಆತನಿಂದ ಯಾವ ವ್ಯಾಪಾರವನ್ನು
ಮಾಡಿಸಬೇಕು? ಎನ್ನುವ ವಿಚಾರವು ಅವರ ತಲೆಯಲ್ಲಿ ಸುಳಿಯದೇ ಹೀಯಿತು. ಕೊನೆಗೆ ಶ್ರೀ
ಹರಿಯೇ ವೇಷವನ್ನು ಮರೆಸಿಕೊಂಡು ತನ್ನ ಬುದ್ಧಿಯ ಕೌಶಲದಿಂದ ಭಸ್ಮಾಸುರನನ್ನು ಸಂಹರಿಸಿ
ರುದ್ರದೇವರನ್ನು ರಕ್ಷಿಸಿದನೆಂದು ಭಾಗವತವು ಚಿತ್ರಿಸಿದೆ. ಇದರಿಂದ ತಮ್ಮನ್ನು
ರಕ್ಷಿಸಿಕೊಳ್ಳಲು ಸಮರ್ಥರಾಗದ, ಭಸ್ಮಾಸುರನಿಂದ ಸನ್ನಿವೇಶಕ್ಕನುಗುಣವಾಗಿ
ವ್ಯಾಪಾರವನ್ನು ಮಾಡಿಸಲು ಅಶಕ್ತರಾದ ರುದ್ರ ದೇವರಲ್ಲಿ ಭರ್ಗ ಶಬ್ಧದ ಅರ್ಥವು
ಸಮನ್ವಿತ್ತವಾಗದೇ ಇರುವುದರಿಂದ ಅವರು ಭರ್ಗಶಬ್ದದಿಂದ ಹೇಳಿಸಿಕೊಳ್ಳಲು
ಯೋಗ್ಯರಲ್ಲವೆಂದು ಗಾಯತ್ರೀ ಭಾಷ್ಯವೆನಿಸಿದ ಭಾಗವತವು ಸೂಚಿಸಿದೆ. ಆದುದರಿಂದ ಭರ್ಗನು
ಶ್ರೀಹರಿಯೇ, ಸೂರ್ಯನಲ್ಲಿ ರುದ್ರದೇವರಿದ್ದರೂ ಪುಂಡರೀಕಾಕ್ಷನೆನಿಸಿದ ಸುಂದರನಾದ ಶ್ರೀ
ನಾರಾಯಣನನ್ನೇ ಅಲ್ಲಿ ಧ್ಯಾನಿಸಬೇಕೆಂದು ಶಾಸ್ತ್ರದ ಸಾರ. 'ಸೂರ್ಯನಾರಾಯಣ' ಎನ್ನುವ
ನಾಮದ ಪ್ರಸಿದ್ಧಿಯೂ ಇದನ್ನೇ ಸಾಬೀತು ಪಡಿಸಿದೆ.
ಮಹಾ ವಿದ್ವಾಂಸರೂ ಹಾಗೂ ತಮ್ಮ ತೀರ್ಥರೂಪರಾದ ಗುರುಗುಂಡಿ ಶ್ರೀ ರಾಮಾಚಾರ್ಯರ
ಶ್ರೇಯಸ್ಸಿಗಾಗಿ ಹರಿಗುರುಭಕ್ತರಾದ ಅವರ ಸುಪುತ್ರ ಶ್ರೀ ಕೆ. ಯಾದವಾಚಾರ್ಯರು ಈ ಕೃತಿಯ
ಪುನಃಪ್ರಕಾಶನದ ವೆಚ್ಚವನ್ನು ನೀಡಿದ್ದಾರೆ. ಅವರನ್ನು ಶ್ರೀ ಹರಿ ವಾಯುಗಳು ವಿಶೇಷವಾಗಿ
ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
ಶ್ರೀಹರಿಯನ್ನು ಕೊಂಡಾಡುವ ಗಾಯತ್ರೀ ಮಾತೆಯ ಭಾವದುಗ್ಧವು ಪ್ರತಿಯೊಬ್ಬ ವಿಪ್ರನ ಹೃದಯವನ್ನು ಪುಷ್ಟಿಗೊಳಿಸಲಿ ಎಂದು ಆಶಿಸುತ್ತೇವೆ.
ಶ್ರೀ ವಿದ್ಯೇಶತೀರ್ಥರು
೨೨.೧೨.೧೯೯೯
ಮುಂದುವರೆಯಿವುದು
