ಭಂಡಾರಕೇರಿ ಮಠ,ಉಡುಪಿ
ಹುಬ್ಬಳ್ಳಿ ಚಾತುರ್ಮಾಸ್ಯ ವ್ರತದ
ಸವಿನೆನಪಿನ ಪ್ರಕಟಣೆ
ಶ್ರೀ
ವಿದ್ಯೇಶತೀರ್ಥರ ಕೃತಿ
ಗಾಯತ್ರಿಯಲ್ಲಿ ಆಧ್ಯಾತ್ಮದೀಪ
(ಶ್ರೀ ವಿದ್ಯಾಮಾನ್ಯ ತೀರ್ಥಾಂತರ್ಗತ ಮದ್ವವಲ್ಲಭನಿಗೆ ಅರ್ಪಿತ)
ಪ್ರಕಾಶಕರು
ಭಾಗವತಾಶ್ರಮ ಪ್ರಕಾಶನ
ಗಿರಿನಗರ, ಬೆಂಗಳೂರು
|| ಮುನ್ನಡಿ ||
ಭಗವಂತನು
ಹಲವಾರು ದಿವ್ಯ ರೂಪಗಳನ್ನು ತೊಟ್ಟು ಧರೆಗಿಳಿದು ಬರುತ್ತಾನೆ. ಮೇಲ್ನೋಟಕ್ಕೆ ಕಂಸ,
ಸಾಲ್ವ, ಶಿಶುಪಾಲ, ದಂತವಕ್ರ ಮುಂತಾದ ಅಸುರೀ ಸಂಪತ್ತಿನ ಪ್ರತೀಕರಾದ ದುಷ್ಟರನ್ನು
ಮರ್ದಿಸುವ ಸಲುವಾಗಿಯೇ ಆತ ದಿವ್ಯ ಜನ್ಮವನ್ನು ತಳಿಯುತ್ತಾನೆ ಎಂದು ಭಾವನೆ ಬರವುದು
ಸಹಜ. ಆದರೆ ಅದೇ ಉದ್ದೇಶದಿಂದ ಆತ ಬಹು ರೂಪಗಳಿಂದ ಪ್ರಕಟನಾಗುತ್ತಾನೆ ಎನ್ನುವುದು
ಸಮಂಜಸವೆನಿಸಲಾರದು. ''ಮರ್ತ್ಯಾವತಾರ ಸ್ಮಿಹ ಮರ್ತ್ಯ ಶಿಕ್ಷಣಂ'' ಎಂದು ಭಾಗವತ
ವಚನವು ತಿಳಿಸಿರುವಂತೆ ಮಾನವೀಯ ಮೌಲ್ಯಗಳ ಬಗೆಗೆ ಶ್ಕ್ಷಣ ನೀಡುವ ಉದ್ದೇಶದ
ಹಿನ್ನೆಲೆಯಲ್ಲೂ ಭಗವಂತನು ಆದರ್ಶ ಮಾನವತ್ವದ ಸಂಸ್ಥಾಪಕನಾಗಿ ಅವತಾರ ತಾಳುತ್ತಾನೆ.
ಸರ್ವ ಸಮರ್ಥನಾದ ಭಗವಂತನು ವೈಕುಂಠದಲ್ಲಿ ನೆಲೆಸಿದರೂ ಸುದರ್ಶನ ಚಕ್ರ ಪ್ರಯೋಗ
ಮಾತ್ರದಿಂದ ಭೂತಲದಲ್ಲಿರುವ ಲೋಕ ಕಂಟಕರಾದ ಕಂಸಾದಿಗಳನ್ನು ಇಲ್ಲವಾಗಿಸಲು ಅಶಕ್ತನೆಂದು
ನಿರ್ಧರಿಸುವುದು ಸಮಂಜಸವೇ?
ಭಗವಾನ್ ಶ್ರೀ ಕೃಷ್ಣ ತನ್ನ ದಿವ್ಯಚರಿತ್ರೆಯ ಮೂಲಕ ಹತ್ತು ಹಲವು ಅಧ್ಯಾತ್ಮ ಮುಖಗಳನ್ನು
ಪಂಡಿತ ಪಾಮರರಿಗೂ ಜ್ಞಾನವಾಗುವಂತೆ ತೋರಿದ್ದಾನೆ. ಆತನ ಚರಿತ್ರೆಯ ಕೆಲವೊಂದು
ಘಟನೆಗಳಿಂದ ಹೇಗೆ ಅಧ್ಯಾತ್ಮರ್ಥಗಳು ಪ್ರಕಟವಾಗುವವು ಎಂಬುದನ್ನು ಈ ಕಿರುಕೃತಿಯಲ್ಲಿ
ತೋರಿಸಲು ಪ್ರಯತ್ನಿಸಿದ್ದೇವೆ. ಜತೆಯಲ್ಲಿ ಅಧ್ಯಾತ್ಮರ್ಥಗಳ ಮೇಲೆ ತನ್ನ ಚರಿತ್ರೆಯ
ಮೂಲಕ ಬೆಳಕನ್ನು ಚೆಲ್ಲಿ ಆಧ್ಯಾತ್ಮ ದೀಪವೆಂದು ಖ್ಯಾತನಾದ ಭಗವಾನ್ ಶ್ರೀ ಕೃಷ್ಣ
ಗಾಯತ್ರಿ ಮಂತ್ರದಲ್ಲಿ ಹೇಗೆ ಪ್ರತಿ ಪಾದ್ಯನಾಗಿದ್ದಾನೆ ಎಂಬುದನ್ನು ವಿವರಿಸಲು ಯಥಾ
ಶ್ಕ್ತಿ ಯತ್ನಿಸಿದ್ದೇವೆ. ಹುಬ್ಬಳ್ಳಿಯಲ್ಲಿ ೧೯೯೨ ರ ಚಾತುರ್ಮಾಸ್ಯ ದೀಕ್ಷ
ಬದ್ಧರಾಗಿದ್ದಾಗ ನಾವು ದಶಮ ಸ್ಕಂದದ ಮೇಲೆ ಪ್ರವಚನ ಮಾಡುತ್ತಿರುವ ಸಂದರ್ಭದಲ್ಲಿ ಹೇಳಿದ
ವಿಚಾರವನ್ನು ಈ ಕೃತಿಯಲ್ಲಿ ಸಂಯೋಜಿಸಿದ್ದೇವೆ.
ಶ್ರೀ ಕೃಷ್ಣ ತಾನು ಗೀತೆಯಲ್ಲಿ '' ಮತ್ತಃ ಪರತರಂ ನಾನ್ಯತ್ ಕಿಂಚಿದಸ್ತಿ ಧನಂಜಯ''
ಎನ್ನುವ ವಚನದಲ್ಲಿ ಹೇಳಿದ ತನ್ನ ಸರ್ವೋತ್ತಮತ್ವವನ್ನು ಅರ್ಜುನನಿಗೆ
ದಿವ್ಯದೃಷ್ಟಿಯನ್ನು ನೀಡಿ ಪ್ರತ್ಯಕ್ಷವಾಗಿ ತೋರಿದ್ದಾನೆ. ತನ್ನನ್ನೇ ಬ್ರಹ್ಮ ರುದ್ರ
ಇಂದ್ರ ಮುಂತಾದ ಶ್ರೇಷ್ಠ ದೇವತೆಗಳೂ ಅವಲಂಬಿಸಿರುವುದನ್ನ ತೋರಿಸಿ ಆತನಿಗೆ ತನ್ನ
ಸರ್ವೋತ್ಕರ್ಷವನ್ನು ಮನವರಿಕೆ ಮಾಡಿಕೊಟ್ಟಿದ್ದಾನೆ.
ಸತ್ಯ ಸಂಕಲ್ಪತ್ವ ಭಗವಂತನ ಅಸಾಧಾರಣ ಮಹಿಮೆ. ಅದನ್ನು ಶ್ರೀ ಕೃಷ್ಣ ತನ್ನಲ್ಲಿ
ಇರುವುದೆಂದು ಸ್ಪಷ್ಟಪಡಿಸಿದ್ದಾನೆ. ಸುಭದ್ರೆಯನ್ನು ದುರ್ಯೋಧನನಿಗೆ ನೀಡುತ್ತೇನೆಂದು
ವಚನ ಕೊಟ್ಟಿದ್ದರೂ ಜೀವನಾದ ಬಲಭದ್ರನು ಆಕೆಯನ್ನು ದುರ್ಯೋಧನನಿಗೆ ನೀಡಲು
ಸಮರ್ಥನಾಗಲಿಲ್ಲ. ಶ್ರೀ ಕೃಷ್ಣನ ಸಂಕಲ್ಪದಂತೆ ಅರ್ಜುನನೇ ಆಕೆಯನ್ನು ಪಡೆದ. ಈ
ನಿದರ್ಶನದಿಂದ ಜೀವರು ಸತ್ಯ ಸಂಕಲ್ಪರಲ್ಲ, ಶ್ರೀ ಕೃಷ್ಣನೇ ಉಪನಿಷತ್ತಿನಲ್ಲಿ
ವರ್ಣಿಸಲ್ಪಟ್ಟ ''ಸತ್ಯಸಂಕಲ್ಪ'' ನೆಂದು ಸ್ಫುಟವಾಯಿತು.
ಮೋಕ್ಷದಲ್ಲಿ ಭಗವಂತ-ಮುಕ್ತಜೀವರ ನಡುವೆ ಭೇದವಿವೆನ್ನುವ ವಾದವು ಮಿಥ್ಯಾವಾದವೆಂದು
ಭಗವಾನ್ ಶ್ರೀಕೃಷ್ಣನು ಪ್ರತ್ಯಕ್ಷದರ್ಶನದ ಮೂಲಕ ಅರ್ಜುನನಿಗೆ ಸಾಬೀತು ಪಡಿಸಿದ್ದಾನೆ.
''ಅಮೀಹಿತ್ವಾಸುರ ಸಂಘಾಃವಿಶಂತಿ'' ಎನ್ನುವ ವಚನದ ಉದ್ಗಾರದಿಂದ ಅರ್ಜುನನು ಎಲ್ಲಾ
ಮುಕ್ತದೇವತೆಗಳು ಭಗವಂತನನ್ನು ಪ್ರವೇಶಿಸುತ್ತಿರುವುದನ್ನು ಪ್ರತ್ಯಕ್ಷವಾಗಿ
ಕಂಡಿದ್ದಾನೆಂದು ಸಿದ್ದವಾಗುವುದು. ಮನೆ-ಅದನ್ನು ಪ್ರವೇಶಿಸುವವರ ನಡುವೆ ಭೇದವಿರುವಂತೆ
ಭಗವಂತ ಹಾಗೂ ಭಗವಂತನನ್ನು ಪ್ರವೇಶಿಸುವ ಮುಕ್ತ ಜೀವರ ನಡುವೆಯೂ ಭೇದವಿರುವುದು
ಸಹಜವಾದುದರಿಂದ ಮುಕ್ತಿಯಲ್ಲಿ ಭೇದವಿಲ್ಲ ಎನ್ನುವ ವಾದವು ಸಮಂಜಸವಲ್ಲವೆಂದು
ನಿರ್ಣೀತವಾಗುವುದು ಪಾಲನೆ ಮಾತ್ರ ವಿಷ್ಣುವಿಗೆ ಸಂಬಂಧಿಸಿದ್ದು ಸೃಷ್ಠಿ ಸಂಹಾರಗಳು
ಬ್ರಹ್ಮ ರುದ್ರರಿಗೆ ಸಂಬಂಧಿಸಿದ ವ್ಯಾಪಾರಗಳು ಎನ್ನುವ ಲೋಕ ಪ್ರಸಿದ್ಧಿಯನ್ನು ಭಗವಾನ್
ಶ್ರೀಕೃಷ್ಣನು ಅಲ್ಲಗಳೆದಿದ್ದಾನೆ. ತಾನೇ ಗೋಪಿಕಾ ಸ್ತ್ರೀಯರಲ್ಲಿ ೧೦ ಲಕ್ಷ ಮಂದಿ
ಗೋಪಾಲರನ್ನು ಸೃಜಿಸಿದರೆ ೧೬೧೦೦ ಮಂದಿ ರಾಜಕನ್ಯೆಯರಲ್ಲಿ ೧೦ ಪುತ್ರರನ್ನು ಏಕ
ಪುತ್ರಿಯನ್ನು ಸೃಜಿಸಿ ತಾನೇ ಸ್ವತಂತ್ರ ಸೃಷ್ಟಿ ಕರ್ತನೆಂದು ಆತ ಸಾಬೀತು ಪಡಿಸಿದ.
ತನ್ನ ಕೋರೆ ಹಲ್ಲುಗಳಿಂದ ಭಿನ್ನ ಭಿನ್ನವಾದ ಮಸ್ತಕವುಳ್ಳವರಾಗಿ ಮುಂದೆ ಸಾಯಲಿರುವ
ದುರ್ಯೋಧನಾದಿಗಳನ್ನು ಅರ್ಜುನನಿಗೆ ವಿಶ್ವರೂಪ ದರ್ಶನದ ವೇಳೆ ತೋರಿಸಿ ತಾನೇ ಸ್ವತಂತ್ರ
ಸಂಹಾರಕರ್ತ ಎಂಬುದನ್ನೂ ಸ್ಫುಟಗೊಳಿಸಿದ. ಆದರೆ ಆಶ್ವತ್ಠಾಮಾಚಾರ್ಯರು ರುದ್ರದೇವರ
ಸ್ವರೂಪರಾಗಿದ್ದರೂ ಬ್ರಹ್ಮದೇವರ ಶಾಪದಿಂದ ಬ್ರಹ್ಮಚಾರಿಯಾಗಿಯೇ ಉಳಿದು ಏಕ ಪುತ್ರನನ್ನೂ
ಸೃಷ್ಟಸಲು ಸಮರ್ಥರಾಗಲಿಲ್ಲ. ಅಷ್ಟೇ ಅಲ್ಲ ಪರೀಕ್ಷಿತ್ ರಾಜನನ್ನು ಉತ್ತರೆಯ
ಗರ್ಭದಲ್ಲಿರುವಾಗ ಕೊಲ್ಲಲು ಬ್ರಹ್ಮಾಸ್ತ್ರದಿಂದ ಅವರು ಬಲು ಪ್ರಯತ್ನಿಸಿದರೂ, ಹರಿಅಯ
ಸಂಕಲ್ಪದಂತೆ ಅವರು ವಿಫಲರಾದರು. ಪರೀಕ್ಷತ್ ರಾಜನನ್ನು ಸಂರಕ್ಷಿಸಲು ಕಟಿಬದ್ಧನಾದ
ಶ್ರೀಕೃಷ್ಣನ ಸಂಕಲ್ಪವೇ ಸಫಲವಾತಿತು. ಅಷ್ಟೇ ಅಲ್ಲ ಶಿಬಿರದಲ್ಲಿರುವ ಪಾಂಡವರಸೇನೆಯನ್ನು
ನಿರ್ಮೂಲಗೊಳಿಸಲು ಅವರು ವಿಫಲರಾದರು. ತನ್ನ ಮೂಲ ರೂಪರಾದ ರುದ್ರ ದೇವರೇ ಶಿಬಿರ
ಸಂರಕ್ಷಕರಾಗಿರುವುದರಿಂದ ಒಳಗೆ ಪ್ರವೇಶಿಸಲು ಸಮರ್ಥರಾಗಲಿಲ್ಲ. ಆವಾಗ ಶಿಬಿರ ಸಿತ್ತಲೂ
ಬಹು ರೂಪದಿಂದ ನಿಂತು ಸಂರಕ್ಷಿಸುತ್ತಿರುವ ಭಗವಂತನನ್ನು, ತನ್ನನ್ನೆ ಬಲಿಪಶುರೂಪದಲ್ಲಿ
ಕಲ್ಪ್ಸಿ ಮಾನಸ ಯಜ್ಞದಿಂದ ಆರಾದಿಸಿದಾಗ ಅಶ್ವತ್ಠಾಮಾಚಾರ್ಯರು ಪ್ರಸನ್ನನಾದ ಬಗವಂತನ
ಅನುಗ್ರಹದ ಬಲದಿಂದ ರುದ್ರದೇವರಿಂದ ಶಿಬಿರದ ಒಳಗೆ ಪ್ರವೇಶಿಸಲು ಅವಕಾಶವನ್ನು
ಪಡೆದವರಾಗಿ ಶಿಬಿರ ನಿವಾಸಿಗಳನ್ನು ಕೊಲ್ಲಲು ಸಮರ್ಥರಾದರು.
ಈ ನಿದರ್ಶನದಿಂದ ಸ್ವತಂತ್ರರಾಗಿ ರುದ್ರದೇವರು ಸಂಹಾರ ಮಾಡಲು ಸಮರ್ಥರಲ್ಲವೆಂದೂ
ಸ್ಪಷ್ಟವಾಯಿತು. ಧರ್ಮ , ಜ್ಞಾನ, ಭಕ್ತಿ, ವಿಚಾರಶೀಲತೆ, ಚಾರಿತ್ರ್ಯನಿಯಮ, ಮುಂತಾದ
ದೈವಿಕ ಮೌಲ್ಯದ ಪ್ರತೀಕರಾದ ಪಂಚಪಾಂಡವರು ತಮ್ಮ ಸರ್ವಸ್ವವನ್ನು ದ್ಯೂತದಿಂದ ಕಳೆದು
ಕೊಂಡರೂ ದವೈತವನವನ್ನು ಅವಲಂಬಿಸಿ ಭಗವಂತನ ಆರಾಧನೆಯನ್ನು ಮಾಡಿದರು. ಸೂರ್ಯಮಂಡಲ
ಮಧ್ಯವರ್ತಿ ನಾರಾಯಣನು ಅನುಗ್ರಹಿಸಿದ ಅಕ್ಷಯ ಪಾತ್ರೆಯಿಂದ ಸಾವಿರಾರು ಮುನಿಯತಿಗಳಿಗೆ
ಭೋಜನವನ್ನು ಮಾಡಿಸಿ ತಾವು ಭುಂಜಿಸಿ ಸ್ವರ್ಗಸಿಖವನ್ನು ವನದಲ್ಲಿ ಪಡೆದರು.
ದ್ವೈತವನಾಲಂಬಿತರಾದ ಪಾಂಡವರು ಶ್ರೀಕೃಷ್ಣನನ್ನು ತಮ್ಮ ಕಡೆಗೆ ಸೆಳೆಯಲೂ ಸಮರ್ಥರಾದರು.
ಇದರ ಅಂತರಾರ್ಥ-ಧರ್ಮ, ಜ್ಞಾನ ಭಕ್ತ್ಯಾದಿಗುಣಗಳು, ಆಧ್ಯಾತ್ಮ ವಿಚಾರಶೀಲತೆ,
ಚಾರಿತ್ರ್ಯ-ವಿನಯ ಮುಂತಾದ ದೈವಿಕ ಮೌಲ್ಯಗಳು ಎಲ್ಲಿದ್ದರೂ ಶ್ರೀ ಭಗವಂತನ ಅನುಗ್ರಹದಿಂದ
ವಿಜೃಭಿಸುತ್ತವೆ ಎಂದು. ಆದುದರಿಂದ ಜೀವ-ಪರಮಾತ್ಮ ನಡುವೆ ಇರುವ ದ್ವೈತ (ಭೇದ) ವನ್ನು
ಅವಲಂಬಿಸಿದಾಗ ಈ ದೈವಿಕ ಮೌಲ್ಯ್ಗಳು ಚೆನ್ನಾಗಿ ಶ್ರೀ ಕೃಷ್ಣನ ಅನುಗ್ರಹದಿಂದ ಪ್ರಕಾಶಿ
ಸುವುದಲ್ಲದೆ ಕೃಷ್ಣನನ್ನು ತಮ್ಮ ಕಡೆಗೆ ಸೆಳೆದುಕೊಳ್ಳಲೂ ಸಮರ್ಥವಾಗುತ್ತವೆ, ಎಂದು
ದ್ವೈತವನಾವಲಂಬಿತರಾಗಿ ಶ್ರೀಕೃಷ್ಣನನ್ನು ತಮ್ಮ ಕಡೆಗೆ ಸೆಳೆದುಕೊಂಡ ದೈವಿಕ ಮೌಲ್ಯ
ಪ್ರತೀಕರಾದ ಪಾಂಡವರ ನಿದರ್ಶನದಿಂದ ಸಾಬೀತಾಗುವುದು.
ದಿ| ಶ್ರೀಮತಿ ಲಲಿತಾಬಾಯಿ ಗುರುರಾಜ ಭಟ್ ಕಮ್ತೂರು ಇಅವರ ಶ್ರೇಯಸ್ಸಿಗಾಗಿ ಅವರ
ಸುಪುತ್ರರಾದ ಶ್ರೀಕಾಂತ ಕೆಮ್ತೂರು ಹಾಗೂ ಅವರ ಸಹೋದರ ಶ್ರೀ ಕೃಷ್ಣರಾಜ ಭಟ್ ಕೆಮ್ತೂರ
ಇವರು ಕ್ರ್‍ಇತಿಯ ಪ್ರಕಾಶನದ ವೆಚ್ಚವನ್ನು ಉದಾರ ಹೃದಯದಿಂದ ನೀಡಿದ್ದಾರೆ. ಅವರ
ಔದಾರ್ಯವು ಈ ಗ್ರಂಥದ ಪ್ರಯೋಜನವು ಜನತೆಗೆ ತಲುಪಿ ಸಫಲವಾಗಲಿ ಎಂದು ಹಾರೈಸುವುದಲ್ಲದೆ
ಶ್ರೀಕಾಂತ ಸಹೋದರರಿಗೆ ಶ್ರೀ ರಾನಚಂದ್ರನ ವಿಶೇಷ ಅನುಗ್ರಹವಾಗಲೆಂದು ಭಗವಂತನನ್ನು
ಪ್ರಾರ್ಥಿಸುತ್ತೇವೆ.
ಶ್ರೀ ವಿದ್ಯೇಶ ತೀರ್ಥರು
ದೇವಕಿನಂದನನು ಭೂಭಾರ ಹರಣ ಮಾಡುವ ಸಲುವಾಗಿ ಧರಗಿಳಿದು
ಬಂದನು. ''ಉತ್ಕೃಷ್ಟಬಲ'' ವನ್ನು ದೈತ್ಯ ಶ್ಲ್ತಿಗಳ ವಿರ್ದ್ಧ ಪ್ರಯೋಗಿಸಿ ,
ಜಯಗಳಿಸಿದ ಆತ ''ಕೃಷ್ಣ'' ನೆಂದು ಪ್ರಖ್ಯಾತನಾದ. ''ಕೃಷಿರುತ್ಕೃಷ್ಟ ವಚನೋಣಕಾರೋ ಬಲ ವಾಚಕಃ '' - 'ಉತ್ಕೃಷ್ಟಬಲವಂತ''ನು ಎನ್ನುವುದೇ ಕೃಷ್ಣ ಶಬ್ದದ ಅರ್ಥತಾನೆ?
ಬಾಲ್ಯಾವಸ್ಠೆಯಲ್ಲಿ ಪೂತನಾ, ಶಕಟ, ತೃಣಾವರ್ತ ಮುಂತಾದ ಅಸುರರಸಂಘವನ್ನು ಸಂಹರಿಸಿದ
ಪುಟ್ಟ ಬಾಯಿಯಲ್ಲಿ ಬ್ರಹ್ಮಾಂಡವನ್ನು ತಾಯಿಗೆ ಎರಡಿಬಾರಿ ತೋರಿಸಿ ತಾನು ಬ್ರಹ್ಮಾಂಡ
ಧಾರಕನಾದ ಜಗತ್ತಿನ ತಂದೆಯೇ ವಿನಾ ಮಗನಲ್ಲವೆಂದು ಸಾಬೀತು ಪಡಿಸಿದ.
ಏಳು ವರ್ಷದ ಬಾಲಕನಾಗಿ ಏಳು ದಿನಗಳ ಪರ್ಯಂತ ಎಡಗೈಯಿಂದಲೇ ಗೋವರ್ದನ ಗಿರಿಯನ್ನು ಧರಿಸಿ
ಇಂದ್ರನ ವೃಷ್ಟಿಯಿಂದ ಗೋ - ಗೋಪಾಲರನ್ನು ಸಂರಕ್ಷಿಸಿದ. ಈ ಅದ್ಭುತ ಲೀಲೆಯನ್ನು ತೋರುವ
ಮೂಲಕ ತಾನು ''ಪರದೈವ'' ನೆಂದು ನಂದಾದಿಗಳ ವಿಶ್ವಾಸವನ್ನು ದೃಡಗೊಳಿಸಿದ. ''ಶ್ರೀ
ಕೃಷ್ಣನು ನಾರಾಯಣನೇ'' ಎನ್ನುವ ಗರ್ಗಾಚಾರ್ಯರಮಾತು ಅಕ್ಷರಶಃ ಸತ್ಯವೆಂದು
ಮನವರಿಕೆಯನ್ನುಂಟುಮಾಡಿದ. ಬೆಣ್ಣೆ ಕದ್ದು ತಿಂದನೆಂದು ತನ್ನ ವಿರುದ್ಧ ಗೋಪಿಕಾ
ಸ್ತ್ರೀಯರು ಸೂರುನೀಡಿದಾಗ . ಮಣ್ಣು ತಿಂದು ತಾಯಿಗೆ ಮುಖದಲ್ಲಿ ಬ್ರಹ್ಮಾಂಡತೋರಿ ,
ಬ್ರಹ್ಮಾಂಡ ಧರಿಸಿದ ಈ ದೇಹವು ಬೆಣ್ಣೆಯನ್ನು ಅಪೇಕ್ಷಿಸುವ ಪ್ರಾಕೃತ ದೇಹವಲ್ಲ.
ಹೀಗಾಗಿ ಈ ದೇಹಕ್ಕೆ ಬೆಣ್ಣೆಯೂ ಮೃತ್ತಿಕೆಯೂ ಒಂದೇ, ಅವು ಯಾವುದೇ ರೀತಿಯ ಪರಿಣಾಮವನ್ನು
ಬೀರಲಾರವು. ಎಂದು ಸ್ಪಷ್ಟಪಡಿಸಿದ. ಹೀಗಿರುವಾಗ ನಿಷ್ಫಲವಾದ ನವನೀತದಲ್ಲಿ ತನಗೆ ಲೋಭ
ಎಲ್ಲಿಂದವೆಂದು ಸೂಚ್ಯವಾಗಿ ಪ್ರಶ್ನಿಸಿದ. ಬ್ರಹ್ಮಾಂಡವೇ ತನ್ನ ಸ್ವಾಧೀನದಲ್ಲಿದೆ
''ಈಶಾವಾಸ್ಯಮಿದಂ ಸರ್ವಂ '' ಆದುದರಿಂದ ಬ್ರಹ್ಮಾಂಡದಲ್ಲಿ ಸೇರಿದ ಬಂಧನಕ್ಕೊಳಗಾಗದೆ
ತಾನು ''ನಿತ್ಯಮುಕ್ತ'' ನೆಂದು ಸಾಬೀತು ಪಡಿಸಿದ. ಪ್ರತಿ ಬಾರಿ ಬೇರೆ-ಬೇರೆ
ಹಗ್ಗಗಳನ್ನು ಜೋಡಿಸಿ ಕಟ್ಟಲು ಪ್ರಯತ್ನಿಸಿದಾಗಲೂ ತನ್ನನ್ನು ಕಟ್ಟಲು ೨ ಅಂಗುಳಗಳಷ್ಟು
ಹಗ್ಗವು ಕಡಿಮೆಯಾಗುತ್ತಿರುವುದನ್ನು ತೋರಿಸಿದ. ಇದರ ಅಂತರಂಗಾರ್ಥವೇನು? ತನ್ನನ್ನು ಕಟಿ
ವಶಪಡಿಸಿಕೊಳ್ಳಲು ವೈರಾಗ್ಯ-ಪ್ರೇಮ-ಜ್ಞಾನ ಎಂಬ ಸಾಧನ ತ್ರಯವು ಅಗತ್ಯ. ತನ್ನ ತಾಯಿ
ಒಲೆಯಲ್ಲಿಟ್ಟ ಹಾಲು ಉಕ್ಕಿ ಬಂದಾಗ ಹಾಲಿನ ಮೇಲಣ ಆಶೆಯಿಂದ ತನಗೆ ಎದೆ
ಹಾಲುನ್ನುಣ್ಣಿಸುವುದನ್ನು ಮಧ್ಯದಲ್ಲೇ ನಿಲ್ಲಿಸಿ, ಅದನ್ನು ತೆಗೆಯಲು ಹಾಲಿನತ್ತ
ಧಾವಿಸಿದಳು. ಹೀಗಾಗಿ ಆಕೆಗೆ ತನ್ನ ಮೇಲೆ ಪುತ್ರಪ್ರೇಮವಿದ್ದರೂ ಭೋಗವಿಷಯಗಳಲ್ಲಿ
ವೈರಾಗ್ಯವಿಲ್ಲ. ನಿತ್ಯವೂ ಬಂಧಮುಕ್ತನೂ ಬ್ರಹ್ಮಾಂಡೋದರನೂ ಆದ ತನ್ನನ್ನು ಕಟ್ಟಲು
ಪ್ರ್ಯತ್ನ್ಸಿದ ಆಕೆಗೆ ತನ್ನ ಮಾಹಾತ್ಮೈಜ್ಞಾನವೂ ಇಲ್ಲವೆಂದು ಸಾಂಕೇತಿಕವಾಗಿ ತೋರಿಸಲು
ತನ್ನನ್ನು ಕಟ್ಟುವ ಹಗ್ಗವು ೨ ಅಂಗುಳಗಳಷ್ಟು ಕಡಿಮೆಯಾಗುತ್ತಿರುಉದನ್ನು ತೋರಿಸಿದ.
ನಂತರ ಮಗನು ತಾಯಿಯ ವಶದಲ್ಲಿರಬೇಕೆಂದು ಬೋಧಿಸಲು ಭಂಧಮುಕ್ತನಾದರೂ ತಾನು ಪುಟ್ಟಕರುವಿನ
ಹಗ್ಗದ ಭಂಧನಕ್ಕೊಳಗಾದ. ಹಿಂದೆ ಯಶೋದೆಯ ಸರ್ವ ಹಗ್ಗಗಳನ್ನು ಜೋಡಿಸಿ ಕಟ್ಟಲು ಬಂದಾಗ ಆ
ಹಗ್ಗಗಳ ಬಂಧನಕ್ಕೆ ಸಿಲುಕದ ಶ್ರೀಕೃಷ್ಣ ಈಗ ಪುಟ್ಟಕರುವಿನ ಹಗ್ಗದ ಬಂನಕ್ಕೆ ಒಳಗಾಗಿ
ತಾನು ಆಣುವಿಗಿಂತಲೂ ಅಣು, ಮಹತ್ತಿಗಿಂತಲೂ ಮಹತ್ ಎಂದು ಉಪನಿಷತ್ತಿನಲ್ಲಿ ಹೇಳಿದ
ಮಹಾತ್ಮ್ಯೆಯನ್ನು ಸಾಬೀತು ಪಡಿಸಿದ. ಜನ್ಮವೆತ್ತಿದಾಗಲೇ ಶಂಖ ಚಕ್ರ ಗಧಾ ಪದ್ಮ
ಧಾರಿಯಾಗಿ ಪೀತಾಂಬರ ವಸನನಾಗಿ ದಿವ್ಯ ಕರ್ಣಕುಂಡಲ ಕಿರೀಟವಿಭೂಷಿತನಾಗಿ ತೋರಿ ತನ್ನ
ದೇಹವು ತಂದೇ ತಾಯಿಯ ನಿಮಿತ್ತದಿಂದ ಉಂಟಾದ ಪ್ರಾಕೃತ ದೇಹವಲ್ಲವೆಂದು ಸ್ಪಷ್ಟಪಡಿಸಿದ.
ಹೆಚ್ಚೇಕೆ? ಈ ತನ್ನ ದಿವ್ಯದೇಹದ ದರ್ಶನ ಮಾತ್ರದಿಂದ ವಸುದೇವನನ್ನು ಕಂಸನಿಂದ ಬಂದ
ಸಂಕೋಲೆ, ಗೋಪಿಯರ ಬೆಣ್ಣೆಯೂ ನನ್ನ ವಷದಲ್ಲಿ ಇದೆ, ಹೀಗಾಗಿ ಅದನ್ನು ತೆಗೆದರೆ ನಾನೇಕೆ
ಕಳ್ಳನಾಗಬೇಕು? ಎಂದು ವಿಶ್ವರೂಪ ಪ್ರದರ್ಶನದ ಮೂಲಕ ಸೂಚ್ಯವಾಗಿ ಪ್ರಶ್ನಿಸಿದ.
ಮುಂದುವರೆಯಿವುದು
