|| ಶ್ರೀ ಕೋದಂಡರಾಮೋ ವಿಜಯತೇ ||
|| ಜಗದ್ಗುರು ಶ್ರೀ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನ ||
ಶ್ರೀ ಶ್ರೀ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ
ಶ್ರೀ ಸತ್ಯತೀರ್ಥ ಭಂಡಾರಕೇರಿ ಮಠ, ಉಡುಪಿ - ೫೭೬ ೧೦೧
ಶ್ರೀ ಭಾಗವತಾಶ್ರಮ ಪ್ರತಿಷ್ಠಾನ
ಶ್ರೀ ಭಾಗವತನಿಕೇತನ
ನಂ. ೧೩೪೩, ೨ನೇ ಹಂತ, ಗಿರಿನಗರ, ಬೆಂಗಳೂರು - ೫೬೦ ೦೮೫
ಶ್ರೀಯಮನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧಾರಣಾ ಧ್ಯಾನ ಸಮಾಧಿ
ರೂಪಾಷ್ಟಾಂಗ ಯೋಗನಿರತ ಶ್ರೀಮದ್ವೈಷ್ಣವ ಮತಪ್ರವರ್ತಕ ಸರ್ವಜ್ಞ ತ್ರಿಜಗದ್ಗುರು
ಶ್ರೀಮದಾನಂದತೀರ್ಥ ಪ್ರಿಯಶಿಷ್ಯವರ ಶ್ರೀಮತ್ ಸತ್ಯತೀರ್ಥಶುಭಸಂಪದಾಯ ಪ್ರವರ್ಥಕ
ಶ್ರೀ ಭಂಡಾರಕೇರಿ ಮಠಾಧೀಶರಾದ ಪ್ರಾತಃಸ್ಮಾಣೀಯ ಶ್ರೀ ವಿದ್ಯಾಮಾನ್ಯ ತೀರ್ಥ ಕರಕಮಲ ಸಂಜಾತರಾದ
ಶ್ರೀ ಶ್ರೀ ವಿದ್ಯೇಶತೀರ್ಥರು
ಸಮಸ್ತ ಭಗವದ್ಭಕ್ತರಿಗೆ
ಮಾಡುವ ಶ್ರೀ ಮನ್ನಾರಾಯಣ ಸ್ಮರಣೆಗಳು
ನಾವು ಹರಿ-ಗುರುಗಳ ಅನುಗ್ರಹದಿಂದ ಸ್ವಾಶ್ರಮೋಚಿತ ಕರ್ತವ್ಯನಿರತರಾಗಿ ಕುಶಲಿಗಾಳಾಗಿದ್ದೇವೆ. ನಿಮ್ಮ
ಯೀಗಕ್ಷೇಮವನ್ನು ಶ್ರೀ ಸಂಸ್ಥಾನಕ್ಕೆ ಪದೇಪದೇ ತಿಳಿಸುತ್ತಾ ಇರಬೇಕು.
ಪ್ರಕೃತ ನಾವು ಧಾರವಾಡ ಭಕ್ತಜನತೆಯ ಅಪೇಕ್ಷೆಯ ಮೇರೆಗೆ ೨೮ನೇ ಚಾತುರ್ಮಾಸ್ಯ ವ್ರತ ದೀಕ್ಷೆಯನ್ನು
ಧಾರವಾಡದ ಮಾಳಮಡ್ಡಿಯಲ್ಲಿರುವ ಪ್ರಹ್ಲಾದ ವಿದ್ಯಾರ್ಥಿ ನಿಲಯದಲ್ಲಿ ತಾ|| ೩-೮-೨೦೦೭ ರಂದು ( ಶ್ರೀ ಜಯತೀರ್ಥರ
ಪುಣ್ಯತಿಥಿ) ಸ್ವೀಕರಿಸಲಿದ್ದೇವೆ. ನೀವು ಸಪರಿವಾರ ೩-೮-೨೦೦೭ ರಿಂದ ೨೬-೯-೨೦೦೭ ರ ಅವಧಿಯಲ್ಲಿ ಉಪಾಸ್ಯ
ಮೂರ್ತಿಯಾದ ಶ್ರೀ ಕೋದಂಡರಾಮದೇವರ ಸನ್ನಿಧಾನಕ್ಕೆ ಆಗಮಿಸಿ ಪೂಜಾ-ಪ್ರಸಾದ-ಪಾಠ-ಪ್ರವಚನಾದಿ
ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಕೋದಂಡರಾಮದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಅಪೇಕ್ಷಿಸುತ್ತೇವೆ.
ಇತಿ ಶ್ರೀಮನ್ನಾರಾಯಣ ಸ್ಮರಣೆಗಳು
ಶ್ರೀ ವಿದ್ಯೇಶ ತೀರ್ಥರು
ಶ್ರೀ ಭಂಡಾರಕೇರಿ ಮಠ, ಉಡುಪಿ
ಚಾತುರ್ಮಾಸ್ಯ ಮೊಕ್ಕಾಂ : ಪ್ರಹ್ಲಾದ ವಿದ್ಯಾರ್ಥಿ ನಿಲಯ, ಮಾಳಮಡ್ಡಿ, ಧಾರವಾಡ
ಮೊಬೈಲ್: ಶ್ರೀಪಾದರು : ೯೪೪೮೩೮೧೫೨೭, ಕಾಂತೇಶ ಜೋಶಿ : ೯೯೪೫೩೪೬೯೬೨
web site : www.vidyeshabhandara.org, e-mail : vidyesha@vidyeshabhandara.org