೧. ಪರಮಹಂಸ ಪಾವಿತ್ರ್ಯ
೨. ಭಂಡಾರಕೇರಿ ಮಠ
೩. ಸಾಧಕರ ಆಗರ-ತಪಸ್ವಿಗಳ ಭಂಡಾರ
೪. ಶ್ರೀ ಭಂಡಾರಕೇರಿ ಮಠದ ಗುರುಪರಂಪರೆ
೫. ಸುರೋತ್ತಮ ತೀರ್ಥರು
೬. ಶ್ರೀ ವಿದ್ಯಾಮಾನ್ಯ ತೀರ್ಥರು
೭. ಪೂರ್ವಾಶ್ರಮದ ಕಿರು ಪರಿಚಯ
೮. ಅಧ್ಯಯನಶೀಲತೆ ಹಾಗೂ ಪದವಿಗಳು
೯. ಸ್ವೀಕರಿಸಿದ ಸಂನ್ಯಾಸ
೧೦. ನಿರಂತರ ಅಧ್ಯಯನ ಪಾಠ ಪ್ರವಚನಗಳ ಸಮ್ಮೇಳನ
೧೧. ಸಂಚಾರದಿಂದ ತತ್ವ ಪ್ರಸಾರ - ಹೆಜ್ಜೆ ಹೆಜ್ಜೆಗೂ ದುಸ್ತರ
೧೨. ಸಾಧನೆಗಳು
೧೨.೧.ಕಟ್ಟಡಗಳು ಭಕ್ತರಿಗೆ ಭದ್ರ ನೆಲೆ
೧೨.೨.ತತ್ತ್ವಪ್ರಸಾರ
೧೨.೩.ಸಾಮಾನ್ಯರಿಗೆ ಪಾಠ-ಪ್ರವಚನಗಳು
೧೨.೪.ಗ್ರಾಂಥಿಕ ಕೊಡುಗೆಗಳು
೧೨.೫.ಶಾಸ್ತ್ರದ ಹಿನ್ನೆಲೆಯುಳ್ಳ ಪ್ರೌಢವಿದ್ಯಾರ್ಥಿಗಳಿಗೆ ಪಾಠಗಳು
೧೨.೬.ಇತರರಿಂದಲೂ ತತ್ತ್ವಪ್ರಸಾರಕ್ಕೆ ಪ್ರೋತ್ಸಾಹ!
೧೨.೭.ವಿದ್ವಾಂಸರನ್ನು ಒಂದೆಡೆ ಸೇರಿಸುವ ಸನ್ನಾಹ
೧೨.೮.ಹಿರಿಯ ತಲೆಮಾರಿನ ವಿದ್ವಾಂಸರಿಂದ ಅಗಾಧ ಪುರಸ್ಕಾರ
೧೨.೯.ಅರವತ್ತನೆಯ ವರ್ಷದ ಅದ್ಭುತ ಸಮಾರಂಭ - ವಜ್ರಮಹೋತ್ಸವ ದಾಖಲೆ
೧೨.೧೦.ಇತರ ವಿದ್ವಾಂಸರಿಂದಲೂ ಗ್ರಂಥಗಳ ಪ್ರಕಾಶನ ಯೋಜನೆ
೧೨.೧೧.ಶಾಸ್ತ್ರೀಯ ಉಪನ್ಯಾಸಗಳಿಂದ ಮಾಧ್ವ ವಿವರಣೆಗೆ ಜನಪ್ರಿಯತೆ
೧೨.೧೨.ಗುರುಗಳ ಗುಟ್ಟಾದ ಪ್ರಶಸ್ತಿ
೧೨.೧೩ಹರಿಯ ಆರಾಧನಾ-ಅರ್ಚನೆಯ ವೈಭವಗಳು
೧೩. ಶ್ರೀಗಳವರ ಮುಂದಿನ ಯೋಜನೆಗಳು
೧. ಪರಮಹಂಸ ಪಾವಿತ್ರ್ಯ
ಹಂಸನಾಮಕ ಪರಮಾತ್ಮನ ಪರಂಪರೆಯಿಂದ ಬಂದ
ಪೀಠಗಳ ಪಾವಿತ್ರ್ಯ ಹಾಗೂ ಪ್ರಭಾವ ಅಷ್ಟಿಷ್ಟಲ್ಲ. ಹಂಸನು ಕ್ಷೀರವನ್ನು ಮಾತ್ರ
ತೆಗೆದುಕೊಂಡು ನೀರಸವಾದ ನೀರನ್ನು ಬಿಡುವಂತೆ ಎಂತಹ ಪರಿಸರದಲ್ಲೂ ಸಹ ಆಧುನಿಕ
ಕಾಲಗತಿಯಲ್ಲೂ ಸಹ ಸಮಾಜಕ್ಕೆ ಪುಷ್ಟಿಕರವಾದ ಅಂಶವನ್ನೇ ಸ್ವೀಕರಿಸಿ ಲೌಕಿಕ ಹಾಗೂ
ತಾಂತ್ರಿಕ ಜಗತ್ತಿನ ಪ್ರಗತಿಗೆ ಕಾರಣವಾಗುವುದೇ ಅದರ ಉದ್ದೇಶ. ಹಂಸವು ಬೇರೆ ನೀರತ್ತ
ಸುಳಿಯದೆ ಮಾನಸ ಸರೋವರದತ್ತ ಚಲಿಸುವಂತೆ ಅಂತರ್ಮುಖಿಯಾಗಿ ಸಾಧನೆಗೆ ಮಾಡುವುದೂ ಸಹ
ಇಲ್ಲಿ ಸೇರಿಕೊಂಡಿದೆ.
ಧನಲಪಕ್ಷಗಳಿಂದ ಬೆಳಗುವ ಆ ಹಂಸ
ಜ್ಞಾನ-ಕರ್ಮ ಇವೆರಡೂ ಪರಿಶುದ್ಧವಾಗಿದ್ದು ಅದರ ಜೊತೆಗೆ ತಿರುಗುತ್ತಿರುವ ಆ ಪಕ್ಷಿ
ಪರಿವ್ರಾಜಕರಾಗಿ ಸಮಾಜವನ್ನೂ ಶುದ್ಧೀಕರಿಸಬೇಕಾದ ಮಹತ್ವವನ್ನು ಸಾರುತ್ತದೆ.
ಈ ಪರಂಪರೆಯು ಪುನಃ ಮಧ್ವಾಚಾರ್ಯರಿಂದ
ಪ್ರತಿಪಾದಿತವಾಗಿ ಶುದ್ಧೀಕರಿಸಲ್ಪಟ್ಟಿತು. ಕಾಲ-ದೇಶ-ಆಚರಣೆ-ಅಜ್ಞಾನ ಇವುಗಳಿಂದ ಒದಗಿದ
ಆತಂಕಗಳನ್ನೆಲ್ಲಾ ಮಧ್ವರು ಶುದ್ಧೀಕರಿಸಿ ಪರಮಾತ್ಮನಿಗೆ ಹಿಂದಿನಂತೆಯೇ ಪ್ರಿಯವಾಗುವಂತೆ
ಮಾಡಿದರು. ಅಂತಹ ಹಂಸನಾಮಕ ಪರಮಾತ್ಮನ ಪರಂಪರೆಯಿಂದ, ಮಧ್ವಾಚಾರ್ಯರಿಂದ ಪ್ರತಿಷ್ಠಿತವಾದ
ಈ ಸಂಸ್ಥಾನ ಇನ್ನೂ ಪಾವಿತ್ರ್ಯ ಪ್ರಗತಿಗಳನ್ನು ಬೆಳಿಸಿಕೊಳ್ಳುತ್ತಿದೆ,
ಬೆಳಿಸುತ್ತಿದೆ. ಇದರ ಒಂದು ಸ್ಥೂಲ ಪರಿಚಯವನ್ನು ಇಲ್ಲಿ ಮಾಡುವ ಪ್ರಯತ್ನ ನಡೆದಿದೆ.
೨. ಭಂಡಾರಕೇರಿ ಮಠ
ಆಚಾರ್ಯ ಮಧ್ವರ ಆಶ್ರಮ ಗುರುಗಳೇ
ಅಚ್ಯುತಪ್ರಜ್ಞರು. ಇವರ ಪರಂಪರೆಯೇ ಭಂಡಾರಕೇರಿ ಮಠ. ಈ ಸ್ಥಳವು ಉಡುಪಿಯಿಂದ ಉತ್ತರಕ್ಕೆ
೨೦ ಕಿ.ಮೀ. ದೂರದಲ್ಲಿರುವ ಬಾರಕೂರಿನಲ್ಲಿದೆ. ಆಧುನಿಕ ಯುಗದ ಜಂಜಾಟಗಳಿಂದ ದೂರವಾಗಿ
ಸಸಿ-ಗಿಡಗಳ ನಿರ್ಮಲ ಪರಿಸರ-ಪಕ್ಷಿಗಳ ಕಲರವ-ಅಬ್ಬರಗಳಿಲ್ಲದ ಪ್ರಶಾಂತತೆ - ಮೈಮನಗಳನ್ನು
ಸಾಧನೆಗೆ ಅಣಿಗೊಳಿಸುವ ಸರೋವರ ಇವುಗಳಿಂದ ಕೂಡಿರುವ ಈ ಸ್ಥಳ ತಪೋವನವಾಗಿದ್ದು ಸಾಧಕರಿಗೆ
ಹೇಳಿಮಾಡಿಸಿದಂತಿದೆ. ಬಾರಕೂರು ಗ್ರಾಮ ಸಾಧಕರನ್ನು ಬರಮಾಡಿಕೊಂಡು ಸಾಧನೆಗೆ ಕೂರು ಎಂದು
ಪ್ರೇರೇಪಿಸಲು ಮೂಲಸ್ಫೂರ್ತಿ ನೀಡುವಂತಿದೆ. ಇಲ್ಲಿಯೇ ಹಲವು ಕಾಲನೆಲಿಸಿ ಸಾಧನೆಯ ಮಾಡಿದ
ವಿದ್ಯಾಮಾನ್ಯ ತೀರ್ಥರ ದೈಹಿಕ ತಪಸ್ಸು-ಜ್ಞಾನಗಳ ದೃಡೀಕರಣ ಆ ಸಾಮರ್ಥ್ಯ ಇಲ್ಲಿ ಇನ್ನೂ
ಇರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಸಂಸ್ಥಾನದ ಆರಾಧ್ಯಮೂರ್ತಿ ಶೀತಾಲಕ್ಷ್ಮಣ ಸಹಿತ
ಶ್ರೀರಾಮಚಂದ್ರನಾಗಿದ್ದಾನೆ.
೩. ಸಾಧಕರ ಆಗರ-ತಪಸ್ವಿಗಳ ಭಂಡಾರ
ಶ್ರೀ ಮಧ್ವಾಚಾರ್ಯರಿಂದ ಪ್ರತಿಷ್ಠಿತವಾದ
ಈ ಮಠ ತಪಸ್ವಿಗಳ ಭಂಡಾರವಾಗಿ ಭಂಡಾರಕೇರಿ ನಾಮ ಅನ್ವರ್ಥವಾಗಿದೆ. ಶ್ರೀ ಸತ್ಯತೀರ್ಥರು
ಆಚಾರ್ಯ ಮಧ್ವರ ಪರಮಪ್ರಿಯ ಶಿಷ್ಯರಾಗಿದ್ದವರು. ಅಷ್ಟೇ ಅಲ್ಲದೆ ಮಧ್ವಾಚಾರ್ಯರಿಂದ ಮೂರು
ಬಾರಿ ಐತರೇಯ ಶೃತಿಗಳನ್ನು ಮುಖತಃ ಕೇಳಿದ ಮಹಾನುಭಾವರು. ವಾಯುಜೀವೋತ್ತಮತ್ವ-
ಹರಿಸರ್ವೋತ್ತಮತ್ವಗಳ ಉತ್ತುಂಗಶಿಖರ ಎನಿಸಿದ ಐತರೇಯ ಉಪನಿಷತ್ಸಾರವನ್ನು ಹಲವು ಬಾರಿ
ವಿಮರ್ಶಿಸಿಕೊಂಡ ಪುಣ್ಯಪುರುಷರು. ಆ ಪುಣ್ಯದ ಫಲವಾಗಿ ಮಧ್ವರು ಬದರಿಗೆ ಹೊರಟುನಿಂತಾಗ
ಅವರ ಅಗಲಿಕೆಯನ್ನು ಸಹಿಸದೆ ದೈಹಿಕವಾಗಿಯೂ ಅವರನ್ನು ಅನುಸರಿಸಿದವರು. ಹೀಗೆ
ಸತ್ಯತೀರ್ಥರು ಆಚಾರ್ಯ ಮಧ್ವರ ಮಾನಸಿಕ ಹಾಗೂ ದೈಹಿಕವಾದ ಅನುಯಾಯಿಗಳು. ಇಷ್ಟೆಲ್ಲದರ
ಜೊತೆಗೆ ಸಾಧನೆಯ ಛಲದಲ್ಲಿಯೂ ಸತ್ಯತೀರ್ಥರು ಎಂದೂ ಹಿಂದೆ ಬಿದ್ದವರಲ್ಲ.
ಆಚಾರ್ಯ ಮಧ್ವರ ಬ್ರಹ್ಮಸೂತ್ರಭಾಷ್ಯದ
ಪ್ರತಿಯೊಂದು ಅಕ್ಷರದ ಲೇಖನಕ್ಕೂ ಸಹ ಗಂಗಾನದಿಯ ತಟದಲ್ಲಿ ವಿಷ್ಣು ದೇವಾಲಯ ಕಟ್ಟಿದ
ಭಾರೀ ಪುಣ್ಯವೇ ಮೀಸಲಾಗಿದೆ ಎಂದು ಮಧ್ವ ವಿಜಯಕಾರರು ಸೂಚಿಸಿದ್ದಾರೆ. ಅಂತಹ
ಮಧ್ವಭಾಷ್ಯದ ಪ್ರಥಮ ಪ್ರತಿಯನ್ನು ಸಿದ್ದಪಡಿಸಿದ ವಿಶ್ವದಾಖಲೆಯ ವೀರರು ಸತ್ಯತೀರ್ಥರು.
ಹೀಗೆ ಶ್ರವಣ - ಮನನ - ತಪಸ್ಸು - ಲೇಖನ
- ಸಂಚಾರ ಇವುಗಳಲ್ಲೆಲ್ಲಾ ಭಾರೀ ಸಾಹಸವನ್ನೇ ಮಾಡಿದ ಸತ್ಯತೀರ್ಥರ ಹೆಸರೇ ಪರಮ
ಪ್ರಭಾವಶಾಲಿಯಾಗಿದೆ. ಇಂತಹ ಸತ್ಯತೀರ್ಥರಿಂದ ಪ್ರವರ್ತಿತಮಠ ಎಂಬ ಗರಿಮೆ ಇಲ್ಲಿ
ಗಮನಾರ್ಹ.
೪. ಶ್ರೀ ಭಂಡಾರಕೇರಿ ಮಠದ ಗುರುಪರಂಪರೆ
ಅಚ್ಯುತಪ್ರಜ್ಞರಿಂದ ಇಂದಿನವರೆಗೂ ಮೂವತ್ತನಾಲ್ಕು ಮಂದಿ ಪಟ್ಟವನ್ನಾಳಿದವರು
| ೧. ಅಚ್ಯುತ ಪ್ರಜ್ಞರು |
೧೩. ರಘುವರತೀರ್ಥರು |
೨೫. ರಾಜವಂದ್ಯತೀರ್ಥರು |
| ೨. ಆನಂದತೀರ್ಥರು |
೧೪. ದಾಮೋದರತೀರ್ಥರು |
೨೬. ವಿದ್ಯಾರಾಜತೀರ್ಥರು |
| ೩. ಸತ್ಯತೀರ್ಥರು |
೧೫. ರಘುವಲ್ಲಭತೀರ್ಥರು |
೨೭. ವಿದ್ಯಾಧಿರಾಜತೀರ್ಥರು |
| ೪. ಸತ್ಯವ್ರತತೀರ್ಥರು |
೧೬. ಸುರೋತ್ತಮತೀರ್ಥರು |
೨೮. ವಿದ್ಯಾಸಾಗರತೀರ್ಥರು |
| ೫. ವಿಶ್ವಾಧೀಶತೀರ್ಥರು |
೧೭. ವಿಶ್ವೋತ್ತಮತೀರ್ಥರು |
೨೯. ವಿದ್ಯಾಪತಿತೀರ್ಥರು |
| ೬. ಗದಾಧರತೀರ್ಥರು |
೧೮. ರಾಜಾಧಿರಾಜತೀರ್ಥರು |
೩೦. ವಿದ್ಯಾನಿಧಿತೀರ್ಥರು |
| ೭. ವೇದಾಂತತೀರ್ಥರು |
೧೯. ರಾಘವೇಂದ್ರತೀರ್ಥರು |
೩೧. ವಿದ್ಯಾವಾರಿಧಿತೀರ್ಥರು |
| ೮. ವಿದ್ಯಾಧೀಶತೀರ್ಥರು |
೨೦. ರಘುಭೂಷಣತೀರ್ಥರು |
೩೨. ವಿದ್ಯಾರ್ಣವತೀರ್ಥರು |
| ೯..ವಿಶ್ವಮೂರ್ಥಿತೀರ್ಥರು |
೨೧. ರಘುರಾಜತೀರ್ಥರು |
೩೩. ವಿದ್ಯಾಮಾನ್ಯತೀರ್ಥರು |
| ೧೦. ರಘುವೇದಾಂತತೀರ್ಥರು |
೨೨. ರಘುಪುಂಗವತೀರ್ಥರು |
೩೪. ವಿದ್ಯೇಶತೀರ್ಥರು - ಈಗಿನ ಪೀಠಾಧಿಪತಿಗಳು. |
| ೧೧. ರಘುನಾಥತೀರ್ಥರು |
೨೩. ರಘುವರ್ಯತೀರ್ಥರು |
|
| ೧೨. ಹಿರಣ್ಯಗರ್ಭತೀರ್ಥರು |
೨೪. ರಘುರಾಜೀರ್ಥರು |
|
ಈ ಮಠದ ಪರಂಪರೆಯಲ್ಲಿ ಪ್ರವರ್ತಕರಾದ ಸತ್ಯತೀರ್ಥರ ಮಹಿಮೆ
ಈಗಾಗಲೇ ಗಮನಿಸಿಯಾಗಿದೆ. ಹೀಗೆ ಕೆಲವು ಯತಿಗಳ ಸೂಕ್ಷ್ಮ ಪರಿಚಯ ಹೀಗಿದೆ.
೫. ಸುರೋತ್ತಮ ತೀರ್ಥರು
ಆನಂತರ ಈ ಪರಂಪರೆಯಲ್ಲಿ ಬೆಳಗಿದ
ಮಹಾನುಭಾವರ ಪಂಕ್ತಿಯಲ್ಲಿ ಸುರೋತ್ತಮತೀರ್ಥರು ಪ್ರಾತಃಸ್ಮರಣೀಯರು. ಇವರು
ವಿದ್ವತ್ಕುಲಲಲಾಮ ಎಂದು ಪ್ರಸಿದ್ಧರಾದ ಶ್ರೀ ವಾದಿರಾಜ ತೀರ್ಥ ಶ್ರೀಮಚ್ಚರಣರ
ಪೂರ್ವಾಶ್ರಮದ ತಮ್ಮಂದಿರು. ಇವರು ರಚಿಸಿರುವ ಯುಕ್ತಿಮಲ್ಲಿಕಾ ವ್ಯಾಖ್ಯಾನವಂತೂ
ವಿದ್ವನ್ಮಂಡಲಿಗೆ ಚಿರಪರಿಚತವಾಗಿದೆ. ಇಡೀ ಜಿಜ್ಞಾಸು ಪ್ರಪಂಚ ಇವರಿಗೆ ಚಿರಋಣಿ.
೬. ಶ್ರೀ ವಿದ್ಯಾಮಾನ್ಯ ತೀರ್ಥರು
ಶ್ರೀ ಭಡಾರಕೇರಿ ಮಠವನ್ನು ಸಮರ್ಥವಾಗಿ
ನಿರ್ವಹಿಸಿದ್ದರ ಫಲಶ್ರುತಿಯೋ ಎಂಬಂತೆ ಫಲಿಮಾರು ಮಠದ ಪೀಠಾಧಿಪತ್ಯ ಇವರಿಗೆ ಮುಂದೆ
ಲಭಿಸಿತು ಎನ್ನುವುದೇ ಇವರಲ್ಲಿದ್ದ ವಾಜ್ಞಯ ತಪಸ್ಸು, ಕಠಿಣ ಬ್ರಹ್ಮಚರ್ಯ ಇವುಗಳಿಗೆ
ಸಾಕ್ಷಿಯಾಗಿದೆ. ಪಾಠ-ಪ್ರವಚನಗಳು-ಸರ್ವಮೂಲ ಗ್ರಂಥ ಪ್ರಕಾಶನ, ವಿದ್ವಾಂಸರಿಗೆ
ಪ್ರೋತ್ಸಾಹ, ವಿದ್ಯಾರ್ಥಿಗಳಿಗೆ ಸ್ವಯಂ ತರಬೇತಿ, ಎಲ್ಲಕ್ಕೂ ಮಿಗಿಲಾಗಿ ಶಿಷ್ಯವರ್ಗದ
ಅನುಷ್ಠಾನಕ್ಕೆ ಸ್ವಯಂ ಆಚರಿಸುತ್ತಾ ಸ್ಪೂರ್ತಿನೀಡುವ ಇವರ ಜೀವನ ಸಂವಿಧಾನ, ಅಪಾರ
ವಿದ್ವತ್ತಿದ್ದರೂ ಮಗುವಿನಂತಹ ಮುಗ್ದ ಹೃದಯ , ವಾದಕ್ಕೆ ಕುಳಿತಾಗ ಚೂರು ಜಗ್ಗದ
ತತ್ವನೈಷ್ಠುರ್ಯ ಒಟ್ಟಿನಲ್ಲಿ ಹೇಳಬೇಕಾದರೆ ''ಅಭಿನವ ಆನಂದತೀರ್ಥರು'' ಎಂದು ಇಡೀ
ಮಾಧ್ವಜನತೆ ಹೆಮ್ಮೆಪಡುವಷ್ಟು ಒಂದು ಶಕೆಯನ್ನು ನಿರ್ಮಿಸಿದ ಮಹಾನುಭಾವರು. ತಮ್ಮ
ತಪಶ್ಯಕ್ತಿ - ವಿದ್ವತ್ಪ್ರೋತ್ಸಾಹಗಳಿಂದ ಹಳ್ಳಿಯ ಮೂಲೆಯಲ್ಲಿದ್ದ ಮಠ ಜನರ ಮನೆ
ಮಾತಾಯಿತು. ಇತರ ಪೀಥಾಧಿಪತಿಗಳೂ ಇವರ ಬಳಿಗೆ ಬಂದು ಕಲಿಯುವಂತಹ ವಾತಾವರಣ
ನಿರ್ಮಾಣವಾಯಿತು. ಒಟ್ಟಿನಲ್ಲಿ ಭಂಡಾರಕೇರಿ ಮಠ ಜ್ಞಾನ-ತಪಸ್ಸು-ದಾನ-ವಾತ್ಸಲ್ಯ ಇವುಗಳ
ಖಾಲಿಯಾಗದ ಭಂಡಾರವಾಗಿಯೇ ಮೆರೆಯಿತು.
ಪ್ರಸ್ತುತ ಪೀಠಾಧಿಪತಿಗಳಾದ ವಿದ್ಯೇಶ ತೀರ್ಥರು
೭. ಪೂರ್ವಾಶ್ರಮದ ಕಿರು ಪರಿಚಯ
ಉಡುಪಿಯ ಹತ್ತಿರದ ಕಲ್ಯಾಣಪುರದಲ್ಲಿ
ವೇದವತಿ ಹಾಗೂ ಶ್ರೀ ಪೂರ್ಣಭಟ್ಟ ದಂಪತಿಗಳಲ್ಲಿ ೬-೭-೧೯೫೪ ರಂದು ಗಂಡು ಮಗುವೊಂದು
ಜನಿಸಿತು. ಆ ಮಗುವು ವೈದಿಕ ಸಂಸ್ಕಾರ ಸದಾಚಾರಗಳ ಪ್ರತಿಷ್ಠಿತ ಮನೆಯೊಂದರಲ್ಲಿ ಜನ್ಮ
ತಾಳಿದ್ದು ಮನೆಮಂದಿಗೆಲ್ಲಾ ಸಂತಸ ತಂದಿತು. ಇಡೀ ಜಗತ್ತಿಗೆ ಕ್ಷಣವನ್ನೂ
ವ್ಯರ್ಥಗೊಲಿಸದೆ ಹರಿಸ್ಮರಣೆ ಸಾಗಿಸುವುದರ ಸಾಕ್ಷಿಯಾಗಿಯೇ ಎಂಬಂತೆ ಮಗುವಿಗೆ ಹರಿ
ಕೃಷ್ಣ ಎಂದು ನಾಮಕರಣ ಮಾಡಿದರು. ಮುಂದೆ ಐದನೆಯ ತರಗತಿವರೆಗೆ ಅಧ್ಯಯನ ಮಾಡಿ ಪೇಜಾವರ
ಶ್ರೀಪಾದರ ಎರಡನೆಯ ಪರ್ಯಾಯದಲ್ಲಿ ಇವರು ವೇದಾಭ್ಯಾಸ ಹಾಗೂ ಸಾಂಸ್ಕೃತಿಕ
ವಿದ್ಯಾರ್ಥಿಯಾಗಿ ಸೇರಿಕೊಂಡರು. ಪ್ರಾಯಶಃ ಆ ವೇಳೆಗಾಗಲೇ ಶಿಷ್ಯನಲ್ಲಿ
ಚಿಗುರೊಡೇಯುತ್ತಿದ್ದ ಪ್ರತಿಭೆ-ಪರಿಶ್ರಮಗಳನ್ನು ಕಂಡುಕೊಂಡು ನೈಜಗುರುಗಳಾದ
ವಿಶ್ವೇಶತೀರ್ಥರು ಇಅವರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಿದರು.
ಅನ್ನದಾನ-ವಿದ್ಯಾದಾನಗಳೊಂದಿಗೆ ಸ್ಫೂರ್ತಿಯನ್ನು ನೀಡುತ್ತಿದ್ದ ಶ್ರೀಪಾದರ ವ್ಯಕ್ತಿತ್ವ
ಹರಿಕೃಷ್ಣ ಎಂಬ ಈ ವಟುವಿನ ಮನಸ್ಸು ಪೂರ್ಣವಾಗಿ ಆಕರ್ಷಿಸಿತ್ತು. ಆಗಲೇ ಒಂಬತ್ತು
ವರ್ಷಗಳ ತನಕ ಕಾವ್ಯ-ವ್ಯಾಕರಣ-ತರ್ಕ-ವೇದಾಂತ ಗ್ರಂಥಗಳ ಅಧ್ಯಯನ ಮುಕ್ತಾಯದ
ಹಂತದಲ್ಲಿತ್ತು.
೮. ಅಧ್ಯಯನಶೀಲತೆ ಹಾಗೂ ಪದವಿಗಳು
ಪ್ರತಿಕ್ಷಣವನ್ನು ಸಹ
ಹರಿಸ್ಮರಣ-ಅಧ್ಯಯನ-ಚಿಂತನ-ಪರಿಶ್ರಮಗಳಿಂದ ಸಾರ್ಥಕಗೊಳಿಸಿ ಕೊಳ್ಳುತ್ತಿದ್ದ ಇಅವರನ್ನು
ಸನ್ಮಾನ-ಪದವಿಗಳು ತಾವಾಗಿಯೇ ಹುಡುಕಿಕೊಂಡು ಬಂದವು. ೧೯೭೮ ರಲ್ಲಿ ಮೈಸೂರಿನ ಪ್ರೌಡ
ವಿದ್ಯಾಭ್ಯಾಸ ಪರೀಕ್ಷಾ ಮಹಾಸಭಾ ನಡೆಸುವ ಧರ್ಮಶಾಸ್ತ್ರ ವಿದ್ವನ್ಮಧ್ಯಮಾ
ಪರೀಕ್ಷೆಯಲ್ಲಿಯೂ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ೧೯೮೦ ರಲ್ಲಿ ಮೇಲ್ಕಂಡ
ಸಂಸ್ಥೆಯು ಜರುದಿಸುವ ದ್ವೈತ ವೇದಾಂತ ವಿದ್ವದುತ್ತಮ ಪರೀಕ್ಷೆಯಲ್ಲಿ
ವೈಶಿಷ್ಟ್ಯುಶ್ರೇಣಿಯಲ್ಲಿ ತೇರ್ಗಡೆಗೊಂಡು ಪುರಸ್ಕಾರ ಪಡೆದರು.
ಭಾರತ ಸರಕಾರದ ''ಶಿಕ್ಷಾ ಸಮಾಜ ಕಲ್ಯಾಣ
ಮಂತ್ರಾಲಯ'' ನಡೆಸುವ ಅಳಿಲ ಭಾರತ ಸಂಸ್ಕೃತಿ ಭಾಷಣ ಸ್ಪರ್ಧೆಯಲ್ಲಿ ೧೯೭೮ ರಲ್ಲಿ
ಮೀಮಾಂಸಾ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದರು. ೧೯೮೦ ರಲ್ಲಿ ಧರ್ಮಶಾಸ್ತ್ರ
ವಿಭಾಗದಲ್ಲಿ ಚಿನ್ನದ ಪದಕ ಸೂರೆಗೊಂಡ ಇವರ ವಿಚಕ್ಷಣತೆಗೆ ಮನಮೆಚ್ಚಿ ಪೇಜಾವರ
ಶ್ರೀಪಾದರು ತುಂಬುಹೃದಯದಿಂದ ಆಶೀರ್ವದಿಸಿದರು. ಪ್ರಾಯಶಃ ಆಗಲೇ ಪೇಜಾವರ ಶ್ರೀಪಾದಂಗಳವರ
ಮನಸ್ಸಿನಲ್ಲಿ ಇವರ ಬಗ್ಗೆ ಭಾರೀ ಆಶೋತ್ತರ ಚಿಗುರೊಡೆದಿರಬೇಕು. ವಿದ್ಯಾರ್ಥಿ ತಾನು
ಕಲಿತ ಸಂಸ್ಠೆಗೆ, ಕಲಿಸಿದ ಗುರುಗಳಿಗೆ ಮಾತ್ರವೇ ಕೀರ್ತಿ ತರದೆ ಮಾಧ್ವಗುರು ಪರಂಪರೆಗೆ
ಗರಿಮೆ ಮೂಡಿಸಬಲ್ಲ ಎನಿಸಿರಬೇಕು.
ಇವರ ವಿರಕ್ತಿ - ವಿದ್ವತ್ತು - ಪರಿಶ್ರಮ
ಇವುಗಳೆಲ್ಲಾ ಪರಿಪಕ್ವವಾಗುತ್ತಿದ್ದಂತೆ ಕಾಲವೂ ಪರಿಪಕ್ವತೆಯತ್ತ ತಿರುಗುತ್ತಿತ್ತು.
ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯಾಮಾನ್ಯ ತೀರ್ಥರು ತಮ್ಮ ಪೀಠಕ್ಕೆ
ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸಂಕಲ್ಪ ವ್ಯಕ್ತಪಡಿಸಿ ತಮ್ಮ ಪ್ರಿಯ ಶಿಷ್ಯ
ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥರಿಗೆ ವ್ಯಕ್ತಿಯನ್ನು ಸೂಚಿಸಲು ಪ್ರಸ್ತಾಪಿಸಿದರು.
ಆಗ ವಿಶ್ವೇಶತೀರ್ಥರ ಮನಸ್ಸಿನಲ್ಲಿ ನಿಂತಿದ್ದ ಈ ಶಿಷ್ಯನ ಹೆಸರು ಪ್ರಸ್ತಾಪವಾಯಿತು.
ಅನುಮೊದನೆಯೂ ಆಯಿತು. ಎಲ್ಲರನ್ನೂ ಪ್ರೋತ್ಸಾಹಿಸುವ ಇವರ ವ್ಯಕ್ತಿತ್ವ ಸಂನ್ಯಾಸಕುಲಕ್ಕೆ
ಕೀರ್ತಿ ತಂದಿತು. ಇದಕ್ಕಾಗಿ ಇಡೀ ಮಾಧ್ವ ಸಮಾಜ ವಿಶ್ವೇಶತೀರ್ಥರನ್ನು ಇಂದಿಗೂ
ಸ್ಮರಿಸಬೇಕು ಆರಾಧಿಸಬೇಕು.
೯. ಸ್ವೀಕರಿಸಿದ ಸಂನ್ಯಾಸ
೨೧-೪-೧೯೮೦ ರಂದು ಪೇಜಾವರ ಮಠಾಧೀಶರ ಉಪಸ್ಥಿತಿಯಲ್ಲಿ
ವಿದ್ಯಾಮಾನ್ಯ ತೀರ್ಥರು ಹರಿಕೃಷ್ಣ ಎಂಬ ಇವರಿಗೆ ಸಂನ್ಯಾಸಾಶ್ರಮ ನೀಡಿ
ವಿದ್ಯೇಶತೀರ್ಥರೆಂದು ನಾಮಕರಣ ಮಾಡಿ ಭಂಡಾರಕೇರಿ ಮಠದ ಉತ್ತರಾಧಿಕಾರಿಗಳೆಂದು
ಘೋಷಿಸಿದರು. ಮುಂದೆ ಭಂಡಾರಕೇರಿ ಮಠವು ತನ್ನ ಮತ್ತೊಂದು ಸುಅವರ್ಣ ಯುಗಕ್ಕೆ ಅನತಿ
ಕಾಲದಲ್ಲಿಯೇ ಪೀಠಿಕೆ ಹಾಡಿಕೊಂಡು ಪ್ರಾರಂಭವಾಯಿತು.
೧೦. ನಿರಂತರ ಅಧ್ಯಯನ=ಪಾಠ ಪ್ರವಚನಗಳ ಸಮ್ಮೇಳನ
ಮುಂದೆ ಸಂನ್ಯಾಸ ಸ್ವೀಕಾರದ ಅನಂತರ ಎರಡೇ
ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠಹೇಳಿ ಶ್ರೀಮನ್ನ್ಯಾಯ ಸುಧಾಮಂಗಳ ಮಾಡಿದರು.
ಇದರೊಂದಿಗೆ ಶ್ರೀವಿದ್ಯಾಮಾನ್ಯತೀರ್ಥರಲ್ಲಿ ನ್ಯಾಯಶಾಸ್ತ್ರದ ಉದ್ಗ್ರಂಥಗಳು,
ನ್ಯಾಯಾಮೃತ, ತರ್ಕತಾಂಡವ ತಾತ್ಪರ್ಯ ಚಂದ್ರಿಕೆಯನ್ನು ಕಲಿತು
ವಿದ್ವತ್ತು-ಗುರ್ವನುಗ್ರಹಗಳೆರಡನ್ನೂ ಸಂಪಾದಿಸಿದರು. ಮುಂದೆ ಕಾಶಿಗೆ ತೆರಳಿ ಎರಡು
ವರ್ಷಗಳ ತನಕ ವಿದ್ವದ್ವರೇಣ್ಯರ ಬಳಿಯಲ್ಲಿ ಮೀಮಾಂಸಾಶಾಸ್ತ್ರ ಹಾಗೂ ನ್ಯಾಯಶಾಸ್ತ್ರಗಳ
ಕೋಟಿ ಕ್ರಮ ಪದ್ಧತಿಯನ್ನು ಅಭ್ಯಾಸ ಮಾಡಿದರು. ಹೀಗೆ ಇವರ ಜ್ಞಾನದಾಹ ಹಾಗೂ ಪರಿಶ್ರಮಗಳು
ದೈನಂದಿನ ಜೀವನದ ಅವಿಭಾಜ್ಯ ಅಂಗವಾದವು. ಹೀಗೆ ಹತ್ತು ವರ್ಷಗಳತನಕ ಪಾಠ -
ಪ್ರವಚನಗಳನ್ನೇ ನಡೆಸುತ್ತಾ ಶಿಷ್ಯರಿಗೆ ವಿದ್ಯೆ ಧಾರೆಯೆರೆಯುತ್ತಾ ವಾಙ್ಮಯ ತಪಸ್ಸನ್ನು
ಆಚರಿಸಿದರು. ಪ್ರಾಯಶಃ ಈ ಎಲ್ಲಾ ಹಂತಗಳೂ ಅವರನ್ನು ''ವಿದ್ಯೇಶತೀರ್ಥ''ರೆಂಬ ಅನ್ವರ್ಥ
ನಾಮಧೇಯತೆಗೆ ಪರಿಪಕ್ವರನ್ನಾಗಿಸಿದವು.
ಇನ್ನು ಮುಂದೆ ಸಂಚಾರ - ತತ್ವ
ಪ್ರಸಾರಗಳನ್ನು ಮಾಡಲು ಯೋಚಿಸಿದ ಶ್ರೀಗಳವರಿಗೆ ದಾರಿಯು ಸುಗಮವಲ್ಲದಿರುವುದು
ಅರಿವಾದುವು.
೧೧. ಸಂಚಾರದಿಂದ ತತ್ವ ಪ್ರಸಾರ - ಹೆಜ್ಜೆ ಹೆಜ್ಜೆಗೂ ದುಸ್ತರ
ಸಂನ್ಯಾಸದ ಅನಂತರದ ಪಾಠ-ಪ್ರವಚನ, ಪೂಜೆ
ಬ್ರಹ್ಮಚರ್ಯ - ಅಧ್ಯಯನ ಇವುಗಳನ್ನೇ ನಡೆಸುತ್ತಿದ್ದರೂ ಮುಂದಿನ ಹಾದಿ ಸುಗಮವೂ -
ಸುಲಭವೂ ಸಹ ಆಗಿರಲಿಲ್ಲ.
ಮಠವು ಎಲ್ಲೆಡೆ ಹೆಸರು ಮಾಡಿದ್ದರೂ ಸಹ
ದಾನ-ಧರ್ಮಗಳ ನೆಲೆವೀಡಾಗಿದ್ದ ಈ ಮಠದಲ್ಲಿ ಹಣ ಏನೇನೂ ಇಅರಲಿಲ್ಲ. ಸಂಸ್ಕೃತಿಯನ್ನೇ
ಕಟ್ಟುತ್ತಿದ್ದರೂ ಸಹ ಭಂಡಾರಕೇರಿ ಹಾಗೂ ಉಡುಪಿಯಲ್ಲಿ ಬಿಟ್ಟು ಬೇರೆಡೆ ಯಾವ ಕಟ್ಟಡವೂ
ಇಅರಲಿಲ್ಲ. ಇರುವ ಕಟ್ಟಡಗಳೂ ಸಹ ಸಂಪೂರ್ಣ ಶಿಥಿಲವಾಗಿತ್ತು. ಬೆಳಕು ಮಳೆಗಳು
ಕಟ್ಟಡದಲ್ಲಿರುವವರನ್ನು ನಿಸ್ಸಂಕೋಚವಾಗಿ ಆಕ್ರಮಿಸುತ್ತಿದ್ದವು. ವಿರಕ್ತರಾದ
ಶ್ರೀಪಾದರು ನೆಲೆಯೂರುವವರಾದರೂ ಅತಿಥಿಗಳಿಗೆ - ವಿದ್ವಾಂಸರಿಗೆ ಇದು ದುಸ್ತರವೇ
ಆಗಿತ್ತು. ಶ್ರೀಪಾದಂಗಳವರ ಬಳಿಯಲ್ಲಿ ಅಧ್ಯಯನಕ್ಕೆ ಬಂದ ಬೆಂಗಳೂರು ಹೊರಾಂಗಾಣದಲ್ಲಿ ಮಠ
ಮಾಡಿಕೊಂಡಿರುವ ಯತಿಗಳು ಪಟ್ಟ ಪಾಡಂತೂ ಹೇಳತೀರದು. ಇರುವ ಕಟ್ಟಡವೇ ಇಕ್ಕಟ್ಟಿನದ್ದು.
ಅದರಲ್ಲಿಯೂ ಮೂಲೆಯ ಒಂದು ಭಾಗ. ಅದೂ ಸಹ ಮಳೆಯು ಬಂದರೆ ಮಳೆಗೆ - ಇಳೆಗೂ ವ್ಯತ್ಯಾಸವೇ
ಇಲ್ಲ ಎಂಬ ಸ್ಥಿತಿ. ನಡುವೆ ನಾರುವ ನೀರಿನ ದುರ್ವಾಸನೆ. ಹೀಗೆ ನೆಲೆಯೂರಲೂ ಇಕ್ಕಟ್ಟಿನ
ಸ್ಥಿತಿ ! ಎಂತಹವರೂ ಕೈಕಟ್ಟಿ ಕುಳಿತಕೊಳ್ಳಬೇಕಾದ ಸಂದರ್ಭ. ಆಗ ಶ್ರೀಪಾದರ ಕೈಗಳು
ಹರಿಗೆ ಕೈ ಜೋಡಿಸಿದ್ದನ್ನು ಬಿಟ್ಟರೆ ಮತ್ತೇನೂ ಮಾಡದಾದವು.
ಹರಿಯು ತನ್ನ ಭಕ್ತರನ್ನು ಪರೀಕ್ಷಿಸುವ
ರೀತಿ ಹೀಗೆ. ಕೆಲವೊಮ್ಮೆ ಸಂಪತ್ತು ಇರಿಸಿ ನೋಡುತ್ತಾನೆ. ಮತ್ತೊಮ್ಮೆ ಹರಸಿ ! ಆದರೂ ಸಹ
ಭಕ್ತರು ಸ್ಮರಿಸುವುದನ್ನು ಮಾತ್ರ ಬಿಡಲಾರರು. ಶ್ರೀಪಾದಂಗಳವರೂ ಪೂರ್ವಾಶ್ರಮದಲ್ಲಿಯೂ
ಸಹ ಹರೇ ಕೃಷ್ಣ ಹರೇ ರಾಮ ಎಂಬ ಸ್ಮರಣೆಯ ಸಂಪತ್ತನ್ನು ಬಿಟ್ಟವರಲ್ಲ. ನಿಜ ಹೇಳಬೇಕೆಂದರೆ
ಅವರಿಗಿದ್ದ ಪೂರ್ವಾಶ್ರಮದ ಸಂಪತ್ತು ಇದೊಂದೇ.
ಆಗ ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥರ
ಪೂರ್ಣಪ್ರಜ್ಞವಿದ್ಯಾಪೀಠ ಇವರನ್ನು ಕೈ ಬೀಸಿ ಕರೆಯಿತು. ಶ್ರೀಪಾದಂಗಳವರು ತಮ್ಮ
ಸಂಸ್ಥೆಯಲ್ಲಿಯೇ ಇರಲು ಸೂಚಿಸಿದರು. ಶ್ರೀಗಳವರ ವಾಸ್ತವ್ಯ ಅಲ್ಲೇ ನೆಲೆಯೂರಿತು. ಆದರೆ
ಹಿಂದೆ ವಿದ್ಯಾರ್ಥಿಯಾಗಿದ್ದಾಗ ಇರುವುದಕ್ಕೂ - ಈಗ ಸಂಸ್ಥಾನ ಸಮೇತನಾಗಿ ಸಂನ್ಯಾಸಿಯಾಗಿ
ಇರಲೂ ಸಹ ವ್ಯತ್ಯಾಸ ಅಗಾಧ. ಆಗಂತೂ ಸಂಚರಿಸಲು ವಾಹನವಿಲ್ಲ. ತಾನೂ ನಡೆದು
ಎಲ್ಲೆಂದರಲ್ಲಿ ಹೋಗಲೂ ಇಲ್ಲ. ಆಗ ದೂರದವರೊಡನೆ ಮಾತಾಡಲು Coin booth ಬಳಿ
ಶಿಷ್ಯರನ್ನು ಕಳಿಸಿ ಕರೆ ಕಳಿಸುವ ಸಂದರ್ಭ. ಅದನ್ನು ನೆನೆಸಿಕೊಂಡಾಗ ಪ್ರಾಮಾಣಿಕ
ಸಾಧನೆಯು ಮೆಟ್ಟಲು ಎಷ್ಟು ಕಷ್ಟ ಎಂದು ಮನವರಿಕೆಯಾಗದಿರದು.
ಉತ್ತರ ಕರ್ನಾಟಕದಲ್ಲಿ ಬರೀ
ಹುಡುಗರನ್ನಿಟ್ಟುಕೊಂಡು ಸರಳವಾದ ಇವರನ್ನು ಬಿಡೀ ಸನ್ಯಾಸಿಗಳು ಎಂದು ಲೇವಡಿ ಮಾಡಿದ್ದೂ
ಉಂಟು! ಆಗ ಹನಿಹನಿಗುಡಿದರೆ ಹಳ್ಳ ಎಂಬ ಮಾತಿನ ಅರಿವಾಯಿತು. ಇದನ್ನು ನೆನೆಸುವ
ಮಠಮಂದಿಗಳಲ್ಲಿ ಕಣ್ಣೂ ಸಹ ಹನಿಗೂಡುತ್ತದೆ. ಅಂದು ಸೇವಕರಾಗಿ ಬಂದ ಬಾಲಕರನ್ನು ಕೈಯಲ್ಲಿ
ಎತ್ತಿಕೊಂಡು ಬೆಳೆಸಬೇಕಾದ ಶ್ರೀಪಾದಂಗಳವರ ವಾತ್ಸಲ್ಯ ಅಷ್ಟು ಹಿರಿದು.
ಪಾದಪೂಜೆ - ಭಿಕ್ಷೆಗಳಿಗೆ ತೆರಳಲೂ ಸಹ ವಾಹನವಿಲ್ಲ - ಆದ್ದರಿಂದ ಬರಲಾಗದು ಎಂಬಂತಹ ಸ್ಥಿತಿ!
ಆಗ ಅಲ್ಪ ಅಲ್ಪ ಹಣವನ್ನು ಕೂಡಿಹಾಕುತ್ತಾ
ಇದ್ದರು. ನಗರದ ದೂರದಲ್ಲಿ ಭೂಮಿ ಸಿಕ್ಕೀತು - ಭಕ್ತರೇ ಬರಲಾರರು. ನಗರದ ಬಳಿಗೆ
ಭಕ್ತವರ್ಗ. ಆದರೆ ಭೂಮಿಯು ಮಾತ್ರ ತುಂಬಾ ದುಬಾರಿ. ಆಗ ಗಿರಿನಗರದ ಕೃಷ್ಣಭಟ್ಟರ ಮೂಲಕ
೮೫೦೦೦ ಹಣ ನೀಡಿ ೧೩.೧.೧೯೯೩ ರಲ್ಲಿ ಭೂಮಿ ರಿಜಿಸ್ಟ್ರೇಷನ್ ಆಯಿತು.
ಆಗ ಭೂಮಿ ಕೈಗೆ ಬಂದರೂ ಭವನ ಮೇಲೇರಲಾರದ
ಸ್ಥಿತಿ. ಎಲ್ಲಾ ಕೂಡಿದರೂ ೬೦,೦೦೦ ರೂ ಆಗದು. ಅದರಿಂದ ಮಣ್ಣಿನ ಗೋಡೆಯನ್ನು ಕಟ್ಟುವ
ಸಂಕಲ್ಪ. ಅದಕ್ಕೂ ಕಷ್ಟ. ಮುಂದೆ ಆಭರಣಗಳುಳ್ಳ ಸಂಸ್ಥಾನದ ದೇವರು-ಮೈಲಿಗೆಗಳ ಸಂರಕ್ಷಣೆಯ
ಚಿಂತೆ. ಹೀಗಾಗಿ ಮಣ್ಣಿಗಿಂತ ಇಟ್ಟಿಗೆ ಭದ್ರ ಎಂಬ ಚಿಂತೆ. ೫ ಚದರ ಅಡಿಗಳಷ್ಟು ಕಟ್ಟುವ
ಯೋಜನೆ. ಮುಂದೆ ಏಳು ಅಡಿಗಳಷ್ಟಕ್ಕೆ ಬದಲಾವಣೆ. ಮುಂದೆ ಪಾಠವಿಲ್ಲದ ಮಠ ಹೇಗೆ ? ಎಂಬ
ಯೋಚನೆ. ಮೇಲ್ಗಡೆಯ ಕಟ್ಟಡ. ಆಗ ಭಕ್ತರನ್ನು ಊಟ ನೀಡದೆ ಕಳುಹಿಸುವುದೇ ಎಂದು ಕಳಿಕಳ
ಮುಂಭಾಗವನ್ನು ಕಟ್ಟುವ ಸಾಹಸ.
ಈ ನಡುವೆ ಭಾಗವತ ಪ್ರವಚನ-ಗೃಹ ಸಂದರ್ಶನ
ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆಗ ೧೯೯೪ ನೆಯ ಇಸವಿ. ಗಯಾದಲ್ಲಿ ಚಾತುರ್ಮಾಸ ಆಗ
ಬಿಡದೆ ವಿಷ್ಣುಪಾದ ಧ್ಯಾನ. ಅಲ್ಲಿ ವಿಷ್ಣುಪಾದದ ಧ್ಯಾನ ಭಗವಂತನಿಗೆ ಕಟ್ಟಡವನ್ನು
ಮೇಲೇಳಿಸುವ ಸಂಕಲ್ಪ. ಹೀಗಾಗಿ ೬.೧೯೯೫ ರಲ್ಲಿ ಭಾಗವತಾಶ್ರಮ ಕಟ್ಟಡದ ಉದ್ಘಾಟನೆ.
ಒಟ್ಟಾರೆ ೧೦ ಲಕ್ಷ ರೂ ಗಳ ವೆಚ್ಚದಲ್ಲಿ ''ಭಾಗವತ ನಿಕೇತನ'' ಎಂಬ ಭವನ ಪೇಜಾವರ ಹಾಗೂ
ಫಲಿಮಾರು ಶ್ರೀಪಾದರ ಸಾನ್ನಿಧ್ಯದಲ್ಲಿ ಉದ್ಘಾಟನೆಯಾಯಿತು.
ಇಂದು ಭಕ್ತರ ಶ್ರದ್ಧಾ-ಭಕುತಿಗಳಿಗೆ
ಹೋಮ-ಹವನಗಳಿಗೆ ಭಗವಂತನ ಆರಾಧನೆಗಳಿಗೆ ನಿರಂತರ ಕೇತುಸ್ಥಾನವಾಗಿ ಬೆಳಗಿತ್ತಿದೆ.
''ಭಾಗವತ ನಿಕೇತನ'' ಇಂದು ಬೆಂಗಳೂರಿನ ಹಾಗೂ ಗಿರಿನಗರದ ಜನತೆಗೆ ಈ ಭವನ
ಗರಿಮೂಡಿಸಿದೆ.
೧೨. ಸಾಧನೆಗಳು
೧೨.೧.ಕಟ್ಟಡಗಳು ಭಕ್ತರಿಗೆ ಭದ್ರ ನೆಲೆ
- ಆಸ್ತಿಕ ಜನಾಂಗದ ಶ್ರದ್ಧೆ-ಭಕುತಿಗಳಿಗೆ ಅನುಗುಣವಾಗಿ ಎಲ್ಲಾ ವೈದಿಕ ಕಾರ್ಯಕ್ರಮಗಳು ಶುಭಕಾರ್ಯಕ್ರಮಗಳ ತಾಣವಾಗಿ ಭಾಗವತನಿಕೇತನದ ಕೊಡುಗೆ ಅಪಾರ
- ಬೆಳೆಯುತ್ತಿರುವ ಅವಶ್ಯಕತೆಗಳಿಗೆ ಅನುಗುಣವಾಗಿ ಮತ್ತೊಂದು ಭೋಜನ ಶಾಲೆಯು ಸಹ ಈಗ ಸೇರಿಕೊಂಡಿದ್ದು ವಿಶಾಲವಾಗಿ ಕಂಗೊಳಿಸುತ್ತಿದೆ.
- '''ಭಾಗವತನಿಕೇತನ''
ಭವನದ ಎಡಬದಿಯಲ್ಲಿ ಆಚೆ ರಸ್ತೆಯ ಮುಂಭಾಗದಲ್ಲಿ ಮತ್ತೊಂದು ಕಟ್ಟಡ ನಿರ್ಮಾಣದ
ಹಂತದಲ್ಲಿದ್ದು ಶೀಘ್ರದಲ್ಲಿಯೇ ಸಾಧನೆಯ ತಾಣವಾಗುವುದಕ್ಕೆ ಅಲ್ಲದೇ ಪ್ರವಚನ ಮಂದಿರವಾಗಿ
ಜ್ಞಾನಪಿಪಾಸುಗಳಿಗೆ ಔತಣ ನೀಡಲಿದೆ.
- ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಭಾಗವತಾಶ್ರಮ ಶಾಖೆಯೊಂದು ಅಸ್ತಿತ್ವಕ್ಕೆ ಬಂದಿದ್ದು ೧೯೯೭ ರಲ್ಲಿ ಸಾಗಿದ ಗಣನೀಯ ಸಾಧನೆಯಾಗಿದೆ.
- ವಿದ್ಯಾಮಾನ್ಯ
ತೀರ್ಥರ ಕನಸಾದ ಸುರೋತ್ತಮ ತೀರ್ಥರ ವೃದಾವನ ನವೀಕರಣ ಹಾಗೂ ವಿದ್ಯಾಮಾನ್ಯ್ ತೀರ್ತರ
ವೃತ್ತ್ಕಾ ವೃಂದಾವನದ ಪ್ರತಿಷ್ಟೆಯು ೨೦೦೧ ರಲ್ಲಿ ಭಂಡಾರಕೇರಿಯಲ್ಲಿ ಜರುಗಿದ್ದು ಗಣನೀಯ
ಸಾಧನೆಯಾಗಿದೆ.
- ೨೦೦೩
ರಲ್ಲಿ ಅಚ್ಯುತಪ್ರಜ್ಞರ ವಾಸ ಭೂಮಿಯಾದ ರಥಬೀದಿಯ ಭಂಡಾರಕೇರಿ ಮಠದ ನಿವೇಶನದಲ್ಲಿ
ಮಾಧ್ವರಾದ್ದಾಂತ ಸಂವರ್ಧಕ ಸಭೆಯ ವಜ್ರಮಹೋತ್ಸವ ಸ್ಮಾರಕ ಭವನವನ್ನು ೫೦ ಲಕ್ಷ ರೂಗಳ
ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪಾಠ ಪ್ರವಚನಗಳ ತಾಣವಾಗಿ ಇದು ಕಂಗೊಳಿಸಬೇಕೆಂಬ ಉದ್ದೇಶ
ಹೊಸ ಆಶೋತ್ತರಗಳನ್ನು ಮೂಡಿಸಲಿದೆ
೧೨.೨.ತತ್ತ್ವಪ್ರಸಾರ
೧೨.೩.ಸಂಚಾರದಿಂದ ಬೇರೆಡೆಗಳಲ್ಲಿ ಪಾಠ-ಪ್ರವಚನ
ತತ್ವಪ್ರಸಾರವು ಸಂನ್ಯಾಸ ಧರ್ಮದ ಆದ್ಯಕರ್ತವ್ಯವಾಗಿದ್ದು ಇದನ್ನು ಹಲವು ಮುಖಗಳಲ್ಲಿ
ಆಚರಿಸಬಹುದಾಗಿದೆ.ಸಂಚಾರಗಳನ್ನು ಹಮ್ಮಿಕೊಂಡು ಮುಖತಃ ಜನರನ್ನು ಭೆಟ್ಟಿಯಾಗಿ
ಉಪನ್ಯಾಸ-ಪಾಠಗಳಿಂದ ತತ್ತ್ವಪ್ರಸಾರ ಸಾಗುತ್ತಿರುವಂತೆಯೇ ಚಾತುರ್ಮಾಸದಲ್ಲಿ ಆ ಊರಿನ
ವಿಶ್ರಾಂತ ಭಕ್ತರನ್ನು ಬೆಳಿಗ್ಗೆಯೇ ಒಗ್ಗೂಡಿಸಿ ಮಾಧ್ವ ಗ್ರಂಥಗಳ ಪಾಠ-ಮಂಗಳಗಳನ್ನು
ಪ್ರತಿವರ್ಷವೂ ಹಮ್ಮಿ ಕೊಳ್ಳಲಾಗಿತ್ತಿದೆ. ಪ್ರತಿ ಉರಿನಲ್ಲಿಯೂ ಈ ಜಾಗೃತಿ ಸ್ವಯಂ
ಶ್ರೀಪಾದರಿಂದಲೇ ಜರುಗುತ್ತಿದೆ.
೧೨.೪.ಸಾಮಾನ್ಯರಿಗೆ ಪಾಠ-ಪ್ರವಚನಗಳು
ಇನ್ನು
ಸ್ವಾಮಿಗಳು ಸಂಚಾರದಲ್ಲಿ ತಮ್ಮ ವಿದ್ಯಾರ್ಥಿಗಳ್ಗೆ ಹಾಗೂ ಅವಲಂಬಿತ ಭಕ್ತಗೃಹಸ್ತರಿಗೆ
ಶಾಸ್ತ್ರ ಪಾಠಗಳನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದಾರೆ. ಸ್ವಯಂ ಶ್ರೀಪಾದರು ೧೯೮೬
ರಲ್ಲಿ ಶ್ರೀಮನ್ನ್ಯಾಯಸುಧಾ ಮಂಗಳವನ್ನು ವಿದ್ಯಾರ್ಥಿಗಲಿಗೆ ಜರುಗಿಸಿರುವುದು ಒಂದಾದರೆ,
ಉಳಿದ ವೇಳೆಗಳಲ್ಲಿ ಸಾಧಾರಣ ಗೃಹಸ್ಥರಿಗೆ ಸ್ಥೂಲ ಪಾಠ ನಡೆಸಿ ಆಚರಿಸಿದ ಮಂಗಳಗಳು
ಹಲವಾರು.
೧೨.೫.ಗ್ರಾಂಥಿಕ ಕೊಡುಗೆಗಳು
ಇನ್ನು
ತಪಸ್ಸು - ಸಂಚಾರ - ಪಾಠ - ಪ್ರವಚನ - ಸಾಮಾಜಿಕ ಮಾರ್ಗದರ್ಶನಗಳಷ್ಟೇ ಅಲ್ಲದೆ
ಸಮಯವನ್ನು ಸಾಧನೆಗೆ ಹುಡುಕಿಕೊಂಡು ರಾತ್ರಿಯಲ್ಲೊ ಸಹ ಲೇಖನವನ್ನು ಬರೆಯುತ್ತಾ ಶಾಶ್ವತ
ಚಿಂತನೆಯನ್ನು ದಾಖಲಾತಿಗಾಗಿ ಶ್ರೀಗಳವರು ಪ್ರತೀ ಚಾತುರ್ಮಾಸ್ಯದಲ್ಲಿಯೂ ಪ್ರಾಯಶಃ
ಗ್ರಂಥ ಒಂದರ ರಚನೆಯನ್ನು ನೆರವೇರಿಸಿದ್ದಾರೆ. ಕೆಲವು ಶಾಸ್ತ್ರದ ಗಹನ ಪ್ರಮೇಯಗಳನ್ನು
ಚರ್ಚಿಸಿದರೆ ಮತ್ತೆ ಕೆಲವು ಜನಸಾಮಾನ್ಯರ ಚಿಂತನೆಗೆ ಹೊಸ ಮಜಲನ್ನು ನೀಡಿದೆ.
ಶ್ರಿ ವಿದ್ಯೇಶತೀರ್ಥರಿಂದ ಸ್ವಯಂ ರಚಿದ ಗ್ರಂಥಗಳು
- ಹರಿತತ್ವ ಚೂಡಾಮಣಿ
- ಗೀತೆಯಲ್ಲಿ ಪ್ರಾಣತತ್ವ ಮಹಿಮೆ
- ಭಾಗವತವು ಬೆಳಗಿದ ವೇದಾಂತ ದೀಪಾವಳಿ
- ಅಹಂ ಬ್ರಹ್ಮಾಸ್ಮಿ
- ಗುರಿ ಇಲ್ಲದ ದಾರಿ
- ಭಗವಂತನ ನೈರ್ಗುಣ್ಯ ನಿರಾಕರಣೆ
- ಶಿವರಾತ್ರಿ ರಹಸ್ಯ
- ವಾಸುದೇವನಲ್ಲಿ ಗೀತಾಕಟಾಕ್ಷ
- ಗೀತಾಸಾರ ಸೌರಭ
|
- ಗೀತಾರ್ಥವೈಭವ
- ಗಾಯತ್ರಿ ಹೃದಯ
- ಗಾಯತ್ರಿಯಲ್ಲಿ ಅಧ್ಯಾತ್ಮದೀಪ
- ಗಾಯತ್ರೀಭಾವ ತಿಲಕಂ (ಸಂಸ್ಕೃತ)
- ಗಾಯತ್ರಿ ಕಂಡ ರಾಮಾಯಣ
- ಕಠತತ್ತ್ವ ಕೌಸ್ತುಭ
- ಕಾಠಕತತ್ತ್ವಮಾಲಾ
- ಗಾಯತ್ರಿಯಲ್ಲಿ ವ್ಯಾಸಚಿಂತನ
- ಭಾಗವತ ರಸಸಂದೇಶ
|
೧೨.೬.ಶಾಸ್ತ್ರದ ಹಿನ್ನೆಲೆಯುಳ್ಳ ಪ್ರೌಢವಿದ್ಯಾರ್ಥಿಗಳಿಗೆ ಪಾಠಗಳು
ತರ್ಕ
- ವೇದಾಂತ - ಸಾಹಿತ್ಯದ ಹಿನ್ನೆಲೆಯುಳ್ಳ ಪ್ರೌಡ ವಿದ್ಯಾರ್ಥಿಗಳಿಗೆ
ಶ್ರೀಮನ್ನ್ಯಾಯಸುಧಾ ಪಾಠಮಾಡಿ ಅವರನ್ನೂ ವಿದ್ವಾಂಸರನ್ನಾಗಿಸಿ, ಅವರಿಂದಲೂ ತತ್ತ್ವ
ಪ್ರಸಾರಕ್ಕೆ ಪ್ರೋತ್ಸಾಹ ಹಾಗೂ ಸಂಚಾಲನೆ ಸಿಗುವಂತೆ ಮಾಡಿದ್ದಾರೆ.
೧೨.೭.ಇತರರಿಂದಲೂ ತತ್ತ್ವಪ್ರಸಾರಕ್ಕೆ ಪ್ರೋತ್ಸಾಹ!
ತಾವು
ತತ್ತ್ವಪ್ರಸಾರ ನಡೆಸುವುದಷ್ಟೇ ಅಲ್ಲದೆ ಇತರರಿಂದಲೂ ತತ್ತ್ವಪ್ರಸಾರ ನಡೆಸುವಲ್ಲಿ
ಸ್ವಾಮಿಗಳಿಗೆ ಅಮಿತ ಉತ್ಸಾಹ. ಹೀಗಾಗಿ ೧೯೯೫ ರ ಜುಲೈ ತಿಂಗಳಲ್ಲಿ ''ಪೂರ್ಣಪ್ರಜ್ಞ
ಜ್ಞಾನಸೇವಾನಿಧಿ''ಯನ್ನು ಸ್ಥಾಪಿಸಿದ್ದು ಒಂದು
ಲಕ್ಷ ರೂ. ಮೂಲನಿಧಿಯನ್ನಿಟ್ಟು ತತ್ತ್ವ ಪ್ರಸಾರವನ್ನು ವಿದ್ವಾಂಸರಿಂದಲೂ
ಮಾಡಿಸುತ್ತಿದ್ದಾರೆ. ಮದ್ರಾಸು, ಹೈದರಾಬಾದ್, ಬೆಂಗಳೂರು, ಹುಬ್ಬಳ್ಳಿ, ಕೊಯಮತ್ತೂರು,
ಶ್ರೀರಂಗ, ಅನಂತಪುರ ಮೊದಲಾದ ಕ್ಷೇತ್ರಗಳಲ್ಲಿ ಶ್ರೇಷ್ಠ ವಿದ್ವಾಸರಿಂದ ಪಾಠ-ಪ್ರವಚನ
ಏರ್ಪಡಿಸಿ ಪ್ರೋತ್ಸಾಹ ನೀಡುತ್ತಿದ್ದಾರೆ. ಭಾಗವತ ಸಪ್ತಾಹ - ಇತರ ವಿಷಯಗಳ ಉಪನ್ಯಾಸವೂ
ಸಹ ಈ ಯೋಜನೆಯಡಿ ಜರುಗುತ್ತದೆ.
೧೨.೮.ವಿದ್ವಾಂಸರನ್ನು ಒಂದೆಡೆ ಸೇರಿಸುವ ಸನ್ನಾಹ
ಮಾದ್ವರಾದ್ಧಾಂತ
ಸಂವರ್ಧಕ ಸಭೆಯು ವಿದ್ವಾಂಸರನ್ನು ಗುರುತಿಸಿ ಗೌರವಿಸಿ ಅವರನ್ನು
ಪ್ರೋತ್ಸಾಹಿಸುವುದಷ್ಟೇ ಅಲ್ಲದೆ ಸಾಮಾಜಿಕ ಮನ್ನಣೆಯನ್ನು ನೀಡುವುದರೊಂದಿಗೆ ವಿದ್ವಾಂಸರ
ಸಾಧನೆಯ - ಪರಸ್ಪರ ವಿನಿಮಯ ಸಂದೇಹಗಳಿಗೂ ತಾಣ ಒದಗಿಸಿತ್ತು. ಮಾಧ್ವರಾದ್ದಾಂತ ಸಭೆಯು
ವಿದ್ಯಾಮಾನ್ಯ ತೀರ್ಥರ ಹಾಗೂ ವಿಶ್ವೇಶತೀರ್ಥರ ಮಾರ್ಗದರ್ಶನದಲ್ಲಿ ನಡೆದ ದಾರಿ
ಚೇತೋಹಾರಿ. ಇದಕ್ಕೆ ಕಿರೀಟವಿಟ್ಟಂತೆ ''ವೇದವ್ಯಾಸ ಜಯಂತಿ'' ಯನ್ನು
ಹಮ್ಮಿಕೊಳ್ಳಲಾಗಿದ್ದು ಇದು ವಿದ್ಯೇಶತೀರ್ಥರ ಹೊಸ ಉತ್ಸವದ ಆವಿಷ್ಕಾರ ಎನ್ನಬಹುದು.
ಹಿರಿಯ ತಲೆಮಾರಿನ ವಿದ್ವಾಂಸರಿಂದ ಅಗಾಧ ಪುರಸ್ಕಾರ
ಈ ಉತ್ಸವಗಳಲ್ಲಿ
ಶ್ರಿಪಾದಂಗಳವರಾದ ವಿದ್ಯಾಶತೀರ್ಥರು ಮೂರು ದಿನಗಳ ಸಭೆ ನಡೆಸುವುದಷ್ಟೇ ಅಲ್ಲದೆ
ವಿದ್ವಾಂಸರನ್ನು ಸಂಭಾವನೆ, ಕಲಶಗಳನ್ನು ನೀಡಿ ಪುರಸ್ಕರಿಸುವುದಷ್ಟೇ ಅಲ್ಲದೇ,
ಸಭೆಯನ್ನು ಒಮ್ಮೆಯೂ ತಪ್ಪದೆ ಆಶೀರ್ವದಿಸುತ್ತಾ ಉಪಸ್ಥಿತಿ - ಉಪದೇಶಗಳಿಂದ ಅದಕ್ಕೆ ಜೀವ
ತುಂಬುತ್ತಿರುವ ಗುರುಗಳಾದ ವಿಶ್ವೇಶತೀರ್ಥರಿಗೆ ತುಲಾಭಾರವು ಆಗಿ ಸಂಜೆಯ ಸಮಯ
ವೇದವ್ಯಾಸರ ಮೆರವಣಿಗೆಯೂ ಸಹ ಆಗುತ್ತಾ ಬೇರೆ ಊರಿನ ಸಮಸ್ತ ಜನತೆಗೂ ಸಹ ವೇದವ್ಯಾಸರ
ಸ್ಮರಣೆಗೆ ಕಾರಣವಾಗಿದೆ. ಪ್ರತಿ ಸಭೆಗೂ ಸಹ ಸುಮಾರು ೪ ಲಕ್ಷ ರೂ. ಗಳ ವೆಚ್ಚ
ತಗಲುತ್ತದೆ. ಇದು ಪ್ರತಿವರ್ಷವೂ ಸಹ ವೈಭವದಿಂದ ಮೇಲೇರುತ್ತಾ ಇದ್ದು ಮಾದ್ಧ್ವ ಜನೆತಯ
ಉತ್ಸಾಹ ಹಾಗೂ ಸಂಘಟನೆಗೂ ಕಾರಣವಾಗಿದೆ.
೧೨.೯.ಅರವತ್ತನೆಯ ವರ್ಷದ ಅದ್ಭುತ ಸಮಾರಂಭ - ವಜ್ರಮಹೋತ್ಸವ ದಾಖಲೆ
|
ವಿದ್ವಾಂಸರು |
ಪ್ರಶಸ್ತಿ |
|
ವಿದ್ವಾಂಸರು |
ಪ್ರಶಸ್ತಿ |
| ೧ |
ಶ್ರೀ ಡಿ.ಪ |