ಹರಿಮೇಧಾ
ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ

ಸ್ಮರಣ ಸಂಚಿಕೆ
ಬಿಡುಗಡೆಯ ದಿನಾಂಕ  : ೩೧.೧೨.೨೦೦೫

ವಿಶ್ವೇಶತೀರ್ಥ ಪ್ರಶಸ್ತಿಃ
ಭಂಡಾರಕೇರಿ ಮಠಾಧೀಶಾನಾಂ ಶ್ರೀ ವಿದ್ಯೇಶತೀರ್ಥಾನಾಂ
ರಜತಪೀಠಾರೋಹಣೋತ್ಸವೇ
ಸ್ವರ್ಣಜಯಂತಿ ಸಂದರ್ಭೇ ಶಿಷ್ಯವಾತ್ಸಲ್ಯ ಪೂರ್ವಕಂ ಪೇಜಾವರಮಠಾಧೀಶೈಃ
ಶ್ರೀ
ವಿಶ್ವೇಶತೀರ್ಥ ಶ್ರೀಪಾದೈಃ ಪ್ರದತ್ತಾ ಸ್ವರ್ಣಪ್ರಶಸ್ತಿಃ
-
ಶಾಸ್ತ್ರಾರ್ಥ ಶಿಕ್ಷಾಸು ಮುರಾರಿ ಭಕ್ತಿ ದೀಕ್ಷಾಸು
ವೇದಾಂತ ವಿಚಕ್ಷಣಾನಾಂ |
ರಕ್ಷಾಸು ವೀಕ್ಷಾಸು ಚ ಭಾರತಾದೇಃ
ವಿದ್ಯೇಶತುಲ್ಯೋ ನ ಹಿ ವಿದ್ಯತೇsದ್ಯ ||
ಶಾಸ್ತ್ರ ಪಾಠಣ ಭಕ್ತಿ ದೀಕ್ಷಣ ವೇದಾಂತ ವಿದ್ವಾಂಸರ ಸಂರಕ್ಷಣಾ ಭಾರತಾದಿಗ್ರಂಥ ಪರಿವೀಕ್ಷಣ ಇವುಗಳಲ್ಲಿ ವಿದ್ಯೇಶತೀರ್ಥರಿಗೆ ಸಮರು ಈಗ ಸಿಗರು.
ಶ್ರೀ ಮದ್ಭಾಗವತ ಗ್ರಂಥ ಜ್ಞಾನಗಂಗಾ ಭಗೀರಥಾನ್ |
ಶ್ರೀ ವಿದ್ಯೇಶಮಹಾಭಾಗಾನ್ ಅಭಿನಂದಾಮಹೇ ವಯಮ್ ||
ಭಾಗವತ ಗ್ರಂಥದ ಜ್ಞಾನಗಂಗೆಯ ಹರಿಸಿದ ಭಗೀರಥರಾದ ವಿದ್ಯೇಶತೀರ್ಥರನ್ನು ನಾವು ಅಭಿನಂದಿಸುವೆವು.
ವಿದ್ಯಾವಿಮರ್ಶೇ ವಿನಯೇ ವಿರಾಗೇ ವಿದ್ವದಾಶ್ರಯೇ |
ಅದ್ವಿತೀಯೋsದ್ಯ ವಿದ್ಯೇಶಃ ಹೃದ್ಯೋ ವಿದ್ಯೋತತಾಂ ಸದಾ ||
ವಿದ್ಯೆಯ ವಿಮರ್ಶೇ, ವಿನಯ, ವೈರಾಗ್ಯ, ವಿದ್ವದಾಶ್ರಯ ಇವರಲ್ಲಿ ವಿದ್ಯೇಶತೀರ್ಥರು ಅದ್ವಿತೀಯರು. ಅಚ್ಚುಮೆಚ್ಚಿನ ಅವರು ಬೆಳಗಲಿ ಎಂದೆಂದು ಬಹುಕಾಲ.

ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ ಸಮತಿ

ಗಿರಿನಗರ  -  ಬೆಂಗಳೂರು