ಹರಿಮೇಧಾ
ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ

ಸ್ಮರಣ ಸಂಚಿಕೆ
ಬಿಡುಗಡೆಯ ದಿನಾಂಕ  : ೩೧.೧೨.೨೦೦೫

ಗುರುನಮನ ನಕ್ಷತ್ರ ಮಾಲಿಕಾ
ಬನ್ನಂಜೆ ಗೋವಿಂದಾಚಾರ್ಯ
ಈಶಾವಾಸ್ಯಮ್, ಅಂಬಲಪಾಡಿ
-
ಭಾಗವತದ ಪದಪದಗಳಲ್ಲಿ
ಅಕ್ಷರಕ್ಷರಗಳಲ್ಲಿ
ಭಗವಂತನಿರವನ್ನು ಕಂಡವರು
ತತ್ವಶಾಸ್ತ್ರಗಳ ಸವಿಯನುಂಡವರು
ಕಾವಿಯನ್ನುಟ್ಟವರು

ಕಾಮನೆಯ ಸುಟ್ಟವರು
ಹರಿನಾಮ ತಿಲಕವಿಟ್ಟು
ಹರಿನಾಮ ಪುಲಕ ತೊಟ್ಟು
ಸಾಧನೆಯ ಭೋಧನೆಯ ದಟ್ಟಡವಿಯಲ್ಲಿ
ದಂಡಪಾಣಿಗಳಾಗಿ ಒಬ್ಬಂಟಿ ಅಂಡಲೆಯುವವರು

ಪುಂಡರೀಕಾಕ್ಷನ ನೆನಪಿಂದ ನಿತ್ಯ ಮಿಂದವರು
ಹರಿಯನ್ನು ಅನುದಿನವು ನೆನೆಯಿರೋ ಎಂದವರು
ಮಾತಿನಂಗಳದಲ್ಲಿ
ಮಾತಿಗೆಟುಕದವನನ್ನು ಕಂಡರಿಸಿದವರು
ಕಣ್ಣು ಬಿಡದವರಿಗೆ

ಒಳಗಣ್ಣನಿತ್ತವರು
ಮತ್ತವರು ಬಾಳ ದುಗುಡಗಳ ಕಿತ್ತವರು
ಆಧ್ಯಾತ್ಮವಿದ್ಯೆಯ ತವರು
ಐವತ್ತು ಆದವರು
ಮತ್ತು ಐವತ್ತು ಆಗಬೇಕಾದವರು
ಬರಿದೆ ಲೌಕಿಕವಾರ್ತೆ ಬಲ್ಲದವರು
ತತ್ವಚಂತನೆಯಲ್ಲಿ ಶ್ರಮ ಇಲ್ಲದವರು
ಭಾಗವತಾಶ್ರಮದವರು

ಇವರು ನಮ್ಮವರು ಇವರು ನಿಮ್ಮವರು
ಯಾರ ಮೇಲೂ ದ್ವೇಷ ಇರದವರು
ಬೋಳು ಬಯಲಲ್ಲಿ ಹಿರಿಯ ದೊಡ್ಡಾಲ
ಇರಲಿ ನಮ್ಮ ಜತೆ ನೂರು ಕಾಲ

ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ ಸಮತಿ

ಗಿರಿನಗರ  -  ಬೆಂಗಳೂರು