ಹರಿಮೇಧಾ
ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪೀಠಾರೋಹಣ ರಜತ ಮಹೋತ್ಸವ ಹಾಗೂ
ಸ್ವರ್ಣಜಯಂತ್ಯುತ್ಸವದ
ಸ್ಮರಣ ಸಂಚಿಕೆ
ಬಿಡುಗಡೆಯ ದಿನಾಂಕ  : ೩೧.೧೨.೨೦೦೫

ಗೀತೆಯಶ್ಲೋಕ ತುಂಬಿಕೊಂಡಿದೆ ಸರ್ವಲೋಕ 

- ಸುಂದರರಾವ್, ಗಿರಿನಗರ, ಬೆಂಗಳೂರು

        ಭಂಡಾರಕೇರಿ ಮಠಾಧೀಶರಾದ ವಿದ್ಯೇಶತೀರ್ಥರ ಪ್ರವಚನ ವೈಖರಿ ಚೇತೋಹಾರಿ. ಪ್ರವಚನವನ್ನು ಮನೋರಂಜನೆಯನ್ನಾಗಿ ಹೇಳುವುದು ಒಂದು ವಿಧವಾದರೆ, ಇನ್ನೊಂದು ವಿಧ, ಶಾಸ್ತ್ರಸಮ್ಮತವಾದ ಅರ್ಥವನ್ನು ಸಂಗತವಾಗಿ ಕ್ರೋಢೀಕರಿಸಿ ಹೇಳುವುದು. ಕೊನೆಯ ಈ ರೀತಿ ಮಧ್ವರ ಶಾಸ್ತ್ರ ಪ್ರಪಂಚವನ್ನು ಪರಿಚಯಿಸುವುದಷ್ಟೇ ಅಲ್ಲದೇ ಆ ಸ್ಲೋಕವು ಸಾಮಾನ್ಯರ ಮನಸ್ಸಿನಲ್ಲಿ ಅನುರಣನ ಮಾಡಿದರೆ, ಜಿಜ್ಞಾಸುಗಳ ವಿದ್ವಾಂಸರ ದೃಷ್ಠಿಯಲ್ಲಿ ಆ ಅರ್ಥಗಳನ್ನೆಲ್ಲಾ ಸ್ಮರಿಸಲು ಸಹಾಯಕ್ವಾಗುವುದು. ಇಂತಹ ಪ್ರವಚನಗಳು ವಿಸ್ತೃತವೇದಿಕೆಯ ಪಾಠಗಳಾಗಿ ಪರಿವರ್ತಿತವಾಗಿ ಶ್ರೋತೃಗಳಿಗೆ ಗ್ರಂಥದ ಬಗೆಗೆ ಶ್ರದ್ಧೆ ಹೆಚ್ಚಿಸುವುದು. ಇದರ ಅನುಸಂಧಾನದ ಪುಷ್ಟಿಗಾಗಿ ಕೆಳಗಿನ ಶ್ಲೋಕವನ್ನು ನೀಡಲಾಗಿದೆ.
ಬಹೂನಾಂ ಜನ್ಮನಾಂ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ
ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ ||
        ಈ ಶ್ಲೋಕವು ಜ್ಞಾನಿಪ್ರಶಂಸಾ ಸಂದರ್ಭದಲ್ಲಿ ಮೂಡಿಬಂದಿದೆ ಇದರ ಸ್ಥೂಲ ಅರ್ಥ - ಅನೇಕ ಜನ್ಮಾವಸಾನದಲ್ಲಿ ವಾಸುದೇವನೇ ಸರ್ವ ಎಂದು ಅರಿತ ಜ್ಞಾನಿ ನನ್ನನ್ನು ಹೊಂದುತ್ತಾನೆ. ಅಂತಹಾ ಮಹಾನ್ ಚೇತನ ದುರ್ಲಭ. ಏಕೆಂದರೆ ಅವನು ಕೃಷ್ಣನಿಗೆ ಅತ್ಯಂತ ಪ್ರಿಯ!
        ಸರ್ವ ಎಂದರೆ ಪೂರ್ಣ - ಅಂದರೆ ಗುಣಪೂರ್ಣ ಹೀಗಾಗಿ ದೋಷರಹಿತ. ಮಧ್ವಾಚಾರ್ಯರ ಮಾತಿನಂತೆ.
        ೧. ಅವನು ಸರ್ವ ಎಂದರೆ ಏನು? ೧. ಪೂರ್ಣ ಅಂತ.
ಅಂದರೆ ಗುಣಪೂರ್ಣ ಆದ್ದರಿಂದ ದೋಷ  ಲವ ಲೇಶ ಇಲ್ಲದವನು. ಶ್ರೀ ಮಧ್ವಾಚಾರ್ಯರ ಮಾತಿನಂತೆ ಪ್ರಚ್ಯುತೋಶೇಷ ದೋಷೈಃ ಸದಾಪೂರ್ತಿತಃ. ೨. ಅಂತರ್ಯಾಮಿಯಾಗಿ ಸರ್ವವನ್ನು ಮಾಡುವವನು ಸೃಷ್ಟಾದ್ಯಷ್ಟಕಾಗಳನು. ಸೃಷ್ಟಿ ಸ್ಥಿತಿ ಲಯ ನಿಯಮನಗಳನ್ನು ಮಾಡುವುವನು. ಜ್ಞಾನ ಅಜ್ಞಾನ ಬಂಧ ಮೋಕ್ಷಗಳನ್ನು ಕೊಡುವವನು. ಚೇತನ ವರ್ಗಕ್ಕೆ ಎಂಟು ಯಥಾಯೋಗ್ಯವಾಗಿ, ಅಚೇತನ ವರ್ಗಕ್ಕೆ ಸೃಷ್ಟ್ಯಾದಿ ಮಾತ್ರ. ೩. ಸರ್ವಂ ಎಂದರೆ ಎಲ್ಲಾ ಸತ್ತಾ ಪ್ರತೀತಿ ಪ್ರವೃತ್ತಿ ಪರಮಾತ್ಮನ ಅಧೀನ ಎಂದು ತಿಳಿಯುವುದು. ೪. ಸರ್ವಂ ಎಂದರೆ ಸರ್ವಾಭೀಷ್ಟಪ್ರದ - ಐಹಿಕ ಹಾಗು ಪಾರತ್ರಿಕ ಸುಖಪ್ರದ ಪೂರ್ಣವಾದ ಮೋಕ್ಷಪ್ರದ. ೫. ಪರಮಾತ್ಮನೇ ಸರ್ವ. ಮಾತಾ ಪಿತೃ ಭ್ರಾತೃ ಸುಹೃತ್ ಮಿತ್ರ ಪುತ್ರ ಬಂಧು ಇತ್ಯಾದಿ ''ತ್ವಮೇವ ಮಾತಾ ಚ..... ಸರ್ವಂ ಮಮ ದೇವ ದೇವ''. ನಮ್ಮ ಬಂಧುಗಳೆಲ್ಲಾ ನಮಗೆ ಪ್ರಿಯರಾಗಿರುವುದು. ಅವನ ಸಂಪರ್ಕದಿಂದಲೇ ಆದ್ದರಿಂದ ಅವನು ಸರ್ವ. ೬. ರವೇಣಸಹಿತಃ ಸರ್ವಃ - ಯೋಗ ವೃತ್ತಿಯಿಂದ ಎಲ್ಲ ಶಬ್ದಗಳಿಂದ ಎಲ್ಲ ಶಬ್ದಗಳಿಂದ ಪ್ರಧಾನವಾಚ್ಯ. ಸಕಲ ಶಬ್ದ ಪ್ರತಿಪಾದಿತ.
        ಹಾಗೆಯೇ ಬಹುನಾಂ ಜನ್ಮನಾಮಂತೇ ಎಂಬುದರ ಸ್ವಾರಸ್ಯ ನೋಡೋಣ.
೨. ೧. ಬಹು = ಪೂರ್ಣ. ಪೂರ್ಣನಾದ ಪರಮಾತ್ಮನ ಅವತಾರಗಳ ಅಂತೇ (ಸತಿ) = ನಿರ್ಣಯವಾಗುತ್ತಿರಲಿಕ್ಕೆ ಎಂದು. ಯಾವುದು ಪೂರ್ಣಾವತಾರ, ಯಾವುದು ಆವೇಶ ಅವತಾರ ಎಂಬುದರ ಅರಿವು ಬೇಕು. ನರ, ಬಲರಾಮ, ಪೃಥು ಇತ್ಯಾದಿಗಳು ಆವೇಶವತಾರಗಳು, ರಾಮಕೃಷ್ಣ ವೇದವ್ಯಾಸಾದಿಗಳು ಸಾಕ್ಷಾದವತಾರ. ೨. ಬಹುವಿಧ ಸೃಷ್ಟ್ಯಾದಿಗಳ ನಿರ್ಣಯವಾದಾಗ ಎಂದು ಲಕ್ಷ್ಮಿಗೆ ಸೃಷ್ಟಿ = ಸಿಸುಕ್ಷಾ, ಆಕಾಶಕ್ಕೆ ಮೂರ್ತ ಪದಾರ್ಥ ಸಂಬಂಧ (ನಿತ್ಯ ಪದಾರ್ಥಗಳಿಗೆ ವೇದಾದಿಗಳ್ಗೆ) ಅಭಿವ್ಯಕ್ತಿ, ಅನಿತ್ಯ ಪದಾರ್ಥಗಳಿಗೆ ಅಭೂತ್ವಾ ಭಾವಿತ್ವ ಅಂದರೆ ಇತ್ಪತ್ತಿ.
        ೩. ಇನ್ನು ಜ್ಞಾನವಾನ್ ಅಂದಾಗ ಈ ರೀತಿ ಹೇಳಬಹುದು. ಜ್ಞಾನವಾನ್ ಎಂದರೆ ಜ್ಞಾನ ಎಂದರೆ ವಾಯುದೇವರಿಗೆ ಹೆಸರು, ಅಥವಾ ಜಿಜ್ಞಾಸೆ. ಅನಶ್ಚ ಎಂದಾಗಲೂ ಜ್ಞಾನ ಎಂದಾಗುತ್ತದೆ. ವಾಯುಪ್ರಸಾದ ಪಡೆದವನು ಜ್ಞಾನವಾನ್. ಅಂತಹವನು ಮಾತ್ರ '' ವಾಸುದೇವ'' ಸರ್ವ ಎಂದು ಯಥಾರ್ಥವಾಗಿ ತಿಳಿಯ ಬಲ್ಲ.
        ೪. ಆತ್ಮಾಸುದುರ್ಲಭ: ಪರಮಾತ್ಮನನ್ನು ತಪ್ಪಾಗಿ ತಿಳಿಯುವವನು ಅವನನ್ನು ಹೊಂದುವುದೇ ಇಲ್ಲ ಎಂಬ ಅರ್ಥ ಶ್ಲೋಕದ ಉತ್ತರಾರ್ಧದಿಂದ ತಿಳಿಯುತ್ತದೆ. ವಾಸುದೇವಃ 'ಸರ್ವಂ' ಎಂದು ಪ್ರಪಂಚದಿಂದ ಭಗವಂತನಿಗೆ ಅಭೇದ ತಿಳಿಯುವವನು. ಪರಿಣಾಮವಾದಿ ಮತ್ತು ವಿವರ್ತವಾದ್ಯಾದವನು. ಸಮಂ ಎಂದರೆ 'ನಿರ್ದೋಷಂ ಹಿ ಸಮಂಬ್ರಹ್ಮ' ಮತ್ತು ಸಾಮ್ಯ ದೃಷ್ಟಿಯುಳ್ಳವನು ಬ್ರಹ್ಮನ ಕೊಲೆಗಡುಕ ಆತ್ಮ ಹಂತಕ ಅವನಿಗೆ ಆತ್ಮಾ ಸುದುರ್ಲಭಃ (ಆತ್ಮಾಚ ಅಸುಶ್ಚ ಆತ್ಮಾಸೂ ದುರ್ಲಭೌ ಯಸ್ಯ) ಪರಮಾತ್ಮಾ ಮತ್ತು ಮುಖ್ಯಪ್ರಾಣರು. ದುರ್ಲಭ ಎಂದರೆ ಅವರ ಪ್ರಾಪ್ತಿ ಇಲ್ಲ. ಆದ್ದರಿಂದ ಅವರಿಗೆ ಅಂಧಂತಮಸ್ಸೇ. ಈ ಶ್ಲೋಕದಿಂದ ಸಜ್ಜನರಿಗೆ ಮೋಕ್ಷ ಎಂದು ಗೊತ್ತಾಗಿತ್ತದೆ. ಅಸಜ್ಜನರಿಗೆ ಅಂಧಂತಮಸ್ಸು ಎಂದು ಧ್ವನಿತವಾಗುತ್ತದೆ.