ಇತಿಹಾಸ-ಪುರಾಣ ಪ್ರಪಂಚಕ್ಕೆ ಶ್ರೀಮಧ್ವರ ಕೊಡುಗೆ
-ಆನಂದತೀರ್ಥ. ವಿ. ನಾಗಸಂಪಿಗೆ
ನಿರ್ದೇಶಕರು, ಪೂರ್ಣಪ್ರಜ್ಞ ಸಂಶೋಧಾನಾ ಸಂಸ್ಥಾನ, ಬೆಂಗಳೂರು- ೨೮
ಇತಿಹಾಸ
ಪುರಾಣಗಳು, ವೇದಗಳ - ತಿರುಳು. ಇತಿಹಾಸ ಪುರಾಣಗಳ ಬಿಳಕಿನಲ್ಲೇ ವೇದಗಳನ್ನು
ಅರ್ಥೈಸಿ ಕೊಳ್ಳಬೇಕು. ಪುರಾಣೇತಿಹಾಸಗಳ ಆಳ ಮತ್ತು ವ್ಯಾಪಕಾಧ್ಯಯನವಿಲ್ಲದ ವೇದ
ಪ್ರವಚನಕಾರರನ್ನು ಕಂಡು ವೇದವೇ ಹೆದರಿ ಹಿಮ್ಮೆಟ್ಟುತ್ತದೆ ಎನ್ನುತ್ತಾರೆ ಪ್ರಾಚೀನರು -
''ಇತಿಹಾಸ ಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್ |
ಬಿಭೇತ್ಯಲ್ಪಶ್ರುತಾದ್ ವೇದೋ ಮಾನಯಂ ಪ್ರಚಲೇದಿತಿ ||
ಈ ಹಿನ್ನೆಲೆಯಲ್ಲಿ ಪೌರಾಣಿಕ ಮತ್ತು ಐತಿಹಾಸಿಕ ಸಾಹಿತ್ಯದ
ಅಧ್ಯಯನ, ಆಧ್ಯಾತ್ಮದ ಪ್ರಗತಿಗೆ ಅನಿವಾರ್ಯ. ಆಚಾರ್ಯ ಪುರುಷರೆಂದು ಪ್ರಖ್ಯಾತರಾದ
ಅನೇಕರು ಇತಿಹಾಸ ಪುರಾಣಗಳಲ್ಲಿ ಅಪಾತತಃ (ಮೇಲು ನೊಟದಲ್ಲಿ)