ಭಂಡಾರಕೇರಿ ಮಠ,ಉಡುಪಿ



ಶ್ರೀ ಭಂಡಾರಕೇರಿಮಠದ ಪರಂಪರೆ
ಶ್ರೀ ವಿದ್ಯಾಮಾನ್ಯತೀರ್ಥರು
ಶ್ರೀ ವಿದ್ಯೇಶತೀರ್ಥರು
ಶ್ರೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭಾ



ಶ್ರೀ ಭಂಡಾರಕೇರಿಮಠದ ಗುರು ಪರಂಪರೆ
ಉಡುಪಿ ರಾಮನಾಥ ಆಚಾರ್ಯ

ಆಚಾರ್ಯ ಮದ್ವರ ಆಶ್ರಮ ಗುರುಗಳು ಅಚ್ಯುತಪ್ರಜ್ಞರು. ಇವರ ಪರಂಪರೆಯೇ ಭಂಡಾರಕೇರಿ ಮಠ. ಭಂಡಾರಕೇರಿ ಉಡುಪಿಯಿಂದ ಉತ್ತರಕ್ಕೆ ೨೦ ಕಿ.ಮೀ. ದೂರದ ಬಾರಕೂರಿನಲ್ಲಿದೆ. ಈ ಮಠದ ಆರಾದ್ಯ ಮೂರುತಿ - ಪಟ್ಟದ ದೇವರು ಶ್ರೀರಾಮ. ಆಚಾರ್ಯಮಧ್ವರು ವೇದವ್ಯಾಸರ ಆಶ್ರಮಕ್ಕೆ ಹೊರಟಾಗ ಅವರ ಬೆನ್ನು ಹಿಡಿದು ಸಾಗಿದ ಸತ್ಯತೀರ್ಥರು ಈ ಮಠದ ಅಧಿಪತಿಗಳಾಗಿದ್ದರು. ಆಚಾರ್ಯರ ಹಿಂದೆ ಹೊರಟ ಸುಯೊಗದಿಂದ ಇವರು ಆಚಾರ್ಯರ ಸೂತ್ರಭಾಷ್ಯದ ಮೊದಲ ಲಿಪಿಕಾರರದರು. ಭಾಷ್ಯದ ಒಂದಕ್ಷರ ಬರೆದಲ್ಲಿ ಗಂಗಾನದಿ ತಟದಲ್ಲ್ಲಿ ವಿಷ್ಣುದೇವಾಲಯ ನಿರ್ಮಿಸಿದ ಫಲವನ್ನು ಪದೆಯುತ್ತಾರೆ. ಇಂತಹ ವಿಶೇಷಪುಣ್ಯಕ್ಕೆ ಪಾತ್ರರಾದವರು ಸತ್ಯತೀರ್ಥರು. ಇವರು ಶ್ರೀಮನ್ಮಧ್ವರಿಂದ ಮೂರು ಸಲ ಋಕ್ ಶಾಖೆಯ ಪಾಠವನ್ನು ಹೇಳಿಸಿಕೊಂಡವರು
ಅಚ್ಯುತಪ್ರಜ್ಞರಿಂದ ಇಂದಿನವರೆಗೂ ಮೂವತ್ತನಾಲ್ಕು ಮಂದಿ ಪಟ್ಟವನ್ನಾಳಿದವರು
೧. ಅಚ್ಯುತ ಪ್ರಜ್ಞರು ೧೩. ರಘುವರತೀರ್ಥರು ೨೫. ರಾಜವಂದ್ಯತೀರ್ಥರು
೨. ಆನಂದತೀರ್ಥರು ೧೪. ದಾಮೋದರತೀರ್ಥರು ೨೬. ವಿದ್ಯಾರಾಜತೀರ್ಥರು
೩. ಸತ್ಯತೀರ್ಥರು ೧೫. ರಘುವಲ್ಲಭತೀರ್ಥರು ೨೭. ವಿದ್ಯಾಧಿರಾಜತೀರ್ಥರು
೪. ಸತ್ಯವ್ರತತೀರ್ಥರು ೧೬. ಸುರೋತ್ತಮತೀರ್ಥರು ೨೮. ವಿದ್ಯಾಸಾಗರತೀರ್ಥರು
೫. ವಿಶ್ವಾಧೀಶತೀರ್ಥರು ೧೭. ವಿಶ್ವೋತ್ತಮತೀರ್ಥರು ೨೯. ವಿದ್ಯಾಪತಿತೀರ್ಥರು
೬. ಗದಾಧರತೀರ್ಥರು ೧೮. ರಾಜಾಧಿರಾಜತೀರ್ಥರು ೩೦. ವಿದ್ಯಾನಿಧಿತೀರ್ಥರು
೭. ವೇದಾಂತತೀರ್ಥರು ೧೯. ರಾಘವೇಂದ್ರತೀರ್ಥರು ೩೧. ವಿದ್ಯಾವಾರಿಧಿತೀರ್ಥರು
೮. ವಿದ್ಯಾಧೀಶತೀರ್ಥರು ೨೦. ರಘುಭೂಷಣತೀರ್ಥರು ೩೨. ವಿದ್ಯಾರ್ಣವತೀರ್ಥರು
೯..ವಿಶ್ವಮೂರ್ಥಿತೀರ್ಥರು ೨೧. ರಘುರಾಜತೀರ್ಥರು ೩೩. ವಿದ್ಯಾಮಾನ್ಯತೀರ್ಥರು
೧೦. ರಘುವೇದಾಂತತೀರ್ಥರು ೨೨. ರಘುಪುಂಗವತೀರ್ಥರು ೩೪. ವಿದ್ಯೇಶತೀರ್ಥರು - ಈಗಿನ ಪೀಠಾಧಿಪತಿಗಳು.
೧೧. ರಘುನಾಥತೀರ್ಥರು ೨೩. ರಘುವರ್ಯತೀರ್ಥರು
೧೨. ಹಿರಣ್ಯಗರ್ಭತೀರ್ಥರು ೨೪. ರಘುರಾಜತೀರ್ಥರು
 

ಶ್ರೀ ವಿದ್ಯಾಮಾನ್ಯತೀರ್ಥರು
ಮಹತ್ವದಘಟನೆಗಳು ಮತ್ತು ಸಾಧನೆಗಳು
ಪ್ರಶಂಸೆ-ಪ್ರಭಾವ-ಪವಾಡಗಳು


ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರ
ಬದುಕಿನ 
ಮಹತ್ವದಘಟನೆಗಳು ಮತ್ತು ಸಾಧನೆಗಳು
ತಂದೆ ತಾಯಿ ಶ್ರೀ ಕುಪ್ಪಣ್ಣ ತಂತ್ರಿಗಳು ಹಾಗೂ ಶ್ರೀಮತಿ ರಾಧಮ್ಮ
ಹುಟ್ಟಿದ ಊರು ಎರ್ಮಾಳು
ಹುಟ್ಟಿದ ದಿನ ಪ್ರಮಾದಿ ಸಂವತ್ಸರ ಆಷಾಡಮಾಸ ಕೃಷ್ಣಪಕ್ಷ ನವಮಿ ಭರಣಿ ನಕ್ಷತ್ರ ರವಿವಾರ - ೨೭.೭.೧೯೧೩
ಪೂರ್ವಾಶ್ರಮದ ಹೆಸರು ನಾರಾಯಣ
ಉಪನಯನ ಎಂಟನೇ ವರ್ಷ ವಯಸ್ಸಿನಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಶ್ರೀಸುದೀಂದ್ರತೀರ್ಥರು ಎರ್ಮಾಳಿನ ಮನೆಗೆ ಆಗಮಿಸಿದ ಶುಭ ದಿನದಂದು
ಕೃಷ್ಣಾಮಂತ್ರೋಪದೇಶ ಉಪನಯನದಂದು ಶ್ರೀ ಶ್ರೀಸುದೀಂದ್ರತೀರ್ಥರಿಂದ
ಪ್ರಾಥಮಿಕ ಶಿಕ್ಷಣ ಎರ್ಮಾಳಿನಲ್ಲಿ ತಂದೆ ಶ್ರೀ ಕುಪ್ಪಣ್ಣ ತಂತ್ರಿಗಳಿಂದಲೇ
ಮುಂದಿನ ವಿದ್ಯಾಭ್ಯಾಸ ಉಡುಪಿ ಅನಂತೇಶ್ವರದೇವಾಲಯದಲ್ಲಿ ನೆಡೆಯುತ್ತಿದ್ದ ಶ್ರೀಮನ್ವಧ್ವಸಿದ್ಧಾಂತಪ್ರಬೋಧಿನೀಸಂಸ್ಕೃತ ಮಹಾಪಾಠಶಾಲೆಯಲ್ಲಿ
ಆಶ್ರಮಗುರುಗಳು ಅದಮಾರು ಯತಿಪರಂಪರೆಯಲ್ಲಿ ೨೧ನೆ ಯತಿಗಳಾಗಿದ್ದ ಶ್ರೀ ಶ್ರೀವಿಬುಧಪ್ರಿಯತೀರ್ಥರು
ಸನ್ಯಾಸದ ದಿನ ಕ್ರೋಧನ ಸಂವತ್ಸರದ ಕಾರ್ತೀಕ ಕೃಷ್ಣ ಪಂಚಮಿ - ೫.೧೧.೧೯೨೫
ಆಶ್ರಮದೀಕ್ಷೆ ನಡೆದಸ್ಠಳ ಉಡುಪಿ ಶ್ರೀಕೃಷ್ಣಮಠದ ಸರ್ವಜ್ಞ ಸಿಂಹಾಸನದ ಸಮಕ್ಷಮದಲ್ಲಿ
ಆಶ್ರಮನಾಮ ಶ್ರೀ ವಿದ್ಯಾಮಾನ್ಯತೀರ್ಥ
ಆರೋಹಣ ಮಾಡಿಸಿದ ಪೀಠ ಬಾರ್ಕೂರಿನ ಭಂಡಾರಕೇರಿಮಠದ ೩೪ನೇ ಯತಿಗಳಾಗಿ ಪೀಠಾರೋಹಣ
ಯತಿಗಳಾದ ಬಳಿಕ ವಿದ್ಯಾಭ್ಯಾಸ ನಾಲ್ಕು ತಿಂಗಳು ಉಡುಪಿಯಲ್ಲಿ (ಪರ್ಯಾಯದ ಉಳಿದ ಅವಧಿ) ನಂತರ ಮೂರು ವರ್ಷ ಘಟಿಕಾಚಲದಲ್ಲಿ  ಅದಮಾರು ಪೀಠದ ಶ್ರೀ ಶ್ರೀವಿಬುಧಪ್ರಿಯತೀರ್ಥರಲ್ಲಿ
ಮುಂದಿನ ವಿದ್ಯಾಭ್ಯಾಸ ನ್ಯಾಯ, ವೇದಾಂಘನ ವಿದ್ವಾಂಸರಾಗಿದ್ದ ಇನ್ನ ವಾಸುದೇವಾಚಾರ್ಯರಲ್ಲಿ ಭಂಡಾರಿಕೇರಿಮಠದಲ್ಲಿ ದಶಪ್ರಕರಣಗಳು, ದಶೋಪನಿಷತ್ತುಗಳು ಹಾಗೂ ತತ್ತ್ವಪ್ರಕಾಶಾಕಾ ಇವುಗಳ ಅದ್ಗ್ಯಯನ 
ಪ್ರೌಢಗ್ರಂಥಗಳ ಅಧ್ಯಯನ ಉತ್ತರಾದಿಮಠದ ಶ್ರೀ ಶ್ರೀ ಸತ್ಯಧ್ಯಾನತೀರ್ಥರಲ್ಲಿ
ಸುಧಾಧ್ಯಯನ ನಡೆದ ಸ್ಠಳ ತಿರುಪತಿಯಲ್ಲಿ ಒಂದು ವರ್ಷದ ಅವಧಿಯಲ್ಲಿ  ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಮೂಲಕ
ಸುಧಾಮಂಗಳ ನಡೆದ ಸ್ಠಳ ಬಳ್ಳಾರಿಯಲ್ಲಿ ಪೆನುಗೊಂಡೆ ನರಸಿಂಗರಾಯರ ಮನೆಯಲ್ಲಿ
ಶ್ರೀಗಳವರ ಮೊದಲಶಿಷ್ಯ ಪಿ.ಕೆ.ಹರಿದಾಸಾಚಾರ್ಯರು (ಸುಧಾಧ್ಯಯನ ಸಮಯದಲ್ಲಿ - ತತ್ತ್ವಪ್ರಕಾಶಿಕಾ)
ತತ್ತ್ವಪ್ರಕಾಶಿಕಾ ಮಂಗಲ ಶ್ರೀ ಶ್ರೀ ಸತ್ಯಧ್ಯಾನತೀರ್ಥರು ವಿಜಾಪುರದಲ್ಲಿ ಚಾತುರ್ಮಾಸ್ಯದಲ್ಲಿದ್ದಾಗ ಶ್ರೀಪರ್ವತೀಕರ್ ಗೃಹದಲ್ಲಿ
ಸುಧಾಪಾಠದ ಉಪಕ್ರಮ ಶ್ರೀ ಶ್ರೀ ಸತ್ಯಧ್ಯಾನತೀರ್ಥರಿಂದ ನ್ಯಾಯಾಮೃತ ಕೇಳುತ್ತಿರುವಾಗಲೇ ಶ್ರೀಗಳವರು ಹರಿದಾಸಾಚಾರ್ಯರು, ವಾದಿರಾಜಾಚಾರ್ಯರು ಮತ್ತು ಲಕ್ಷ್ಮೀನಾರಾಯಣ ಕೊಡಂಚ ಮೊದಲಾದವರಿಗೆ ಸುಧಾಪಾಠ ಹೇಳಲು ಉಪಕ್ರಮಿಸಿದರು 
ಮೊದಲ ಸುಧಾಪ್ರವಚನ ಮಂಗಲೋತ್ಸವ ತಿರುಪತಿಯಲ್ಲಿ ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಸಮಕ್ಷಮದಲ್ಲಿ 
ಶ್ರೀ ಶ್ರೀ ಸತ್ಯಧ್ಯಾನತೀರ್ಥರ ಜೊತೆಗೆ ಇದ್ದು ಅಧ್ಯಯನ ಮಾಡಿದ ಗ್ರಂಥಗಳು ನಾಲ್ಕು ವರ್ಷಗಳ ಅವಧಿಯಲ್ಲಿ ನ್ಯಾಯಸುಧಾ, ನ್ಯಾಯಾಮೃತ, ತರ್ಕತಾಂಡವ ಚಂದ್ರಿಕಾಗಳನ್ನಲ್ಲದೆ ನ್ಯಾಯಶಾಸ್ತ್ರವನ್ನೂ ಅದ್ಯಯನ ಮಾಡಿದ್ದರು
ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಶ್ರೀಪಾದರಿಗೆ ಅನುಗ್ರಹಿಸಿದ ಪ್ರಶಸ್ತಿ ವಿದ್ಯಾಭ್ಯಾಸವನ್ನು ಪೂರೈಸಿ ಹೊರಟ ಸಂದರ್ಬದಲ್ಲಿ ಶ್ರೀಗಳನ್ನು ಶ್ರೀ ಶ್ರೀ ಸತ್ಯಧ್ಯಾನತೀರ್ಥರು ಬಿಗಿದಪ್ಪಿ ಗದ್ಗದಿತ ಕಂಠರಾಗಿ ಕೊಟ್ಟ ಪ್ರಶಸ್ತಿ 'ನೀವು ವಿದ್ಯಾಭಂಡಾರ ಆಗಿರುವಿರಿ'
ಎರಡನೇ ಸುಧಾಪ್ರವಚನ ಮಂಗಲೋತ್ಸವ ಶ್ರೀರಂಗದಲ್ಲಿ ಚಾತುರ್ಮಾಸ್ಯ ಕೈಗೊಂಡಿದ್ದಾಗ (ಕಲಕೇರಿ ರಾಮಾಚಾರ್ಯರಿಗೆ) ಎರಡನೇ ಸುಧಾಪ್ರವಚನ ಮಂಗಲೋತ್ಸವ ನಡೆಸಿದರು
ಮೊದಲ ಬದರಿಯಾತ್ರೆ ಕಾಶಿಯಿಂದ ಹರಿದ್ವಾರಕ್ಕೆ ತೆರಳಿದ ಶ್ರೀಪಾದರು ಅಲ್ಲಿಂದ ೧೫೦ ಮೈಲು ಕಾಲುನಡಿಗೆಯಿಂದ ಭಾಷ್ಯಪಾರಾಯಣ ಮಾಡುತ್ತಾ ಬದರಿ ತಲುಪಿ ಒಂದು ವಾರಕಾಲ ಸಾಧನೆ ನೆಡಿಸಿದರು.
ಗಯೆಯಲ್ಲಿ ಚಾತುರ್ಮಾಸ್ಯ ವ್ರತ ಬದರಿಯಾತ್ರೆ ಪೂರೈಸಿದ ಶ್ರೀಪಾದರು ಗಯೆಯಲ್ಲಿ ಚಾತುರ್ಮಾಸ್ಯ ಕೈಗೊಂಡರು
ಗಯೆಯಲ್ಲಿ ಪವಾಡ ಗಯೆಯಲ್ಲಿ ಶ್ರೀವಿಷ್ಣುಪಾದಕ್ಕೆ ಪವಮಾನ ಸೂಕ್ತದ ಪಠನಪೂರ್ವಕ  ಅಭಿಷೇಕ ನಡೆಸುತ್ತಿರಲು, ಫಲ್ಗುನದಿಯಲ್ಲಿ ಪ್ರವಾಹ ಹಿರಿಯುವಷ್ಟೂ ದೊಡ್ಡ ಪ್ರಮಾಣದಲ್ಲಿ ಮಳೆ ಸುರಿಯಿತು
ಶ್ರೀಗಳವರ ವಾದದ ಮೊದಲ ವಿಜಯ ೧೯೪೦ನೇ ಇಸವಿ ಕಾರ್ತೀಕ ಮಾಸದಲ್ಲಿ ವಿಜಯನಗರದ ಸಂಸ್ಥಾನದಲ್ಲಿ ಮಹಾಮಹೋಪಾದ್ಯಾಯ ಶ್ರೀತಾತಾ ಸುಬ್ರಾಯಶಾಸ್ತ್ರಿಗಳ ಜೊತೆಗೆ ವಾದ ನಡೆಸಿ ವಿಜಯಿಗಳಾಗಿದ್ದರು
ಚಂದ್ರಿಕಾ, ನ್ಯಾಯಸುಧಾದಿಗಳ ೪ನೇ ಮಂಗಳ ಭಂಡಾರಕೇರಿಯಲ್ಲಿ ಶ್ರೀಕಾಣಿಯೂರು ವಿದ್ಯಾಸಮುದ್ರತೀರ್ಥರ ನೇತೃತ್ವದಲ್ಲಿ ಚಂದ್ರಿಕಾ, ಶ್ರೀಮನ್ನ್ಯಾಯಸುಧಾ ಗ್ರಂಥಗಳ ಪ್ರವಚನದ ೪ನೇ ಮಂಗಳೋತ್ಸವ
ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಶುಭಾರಂಭ ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು (೧೯೪೩, ಫೆಬ್ರವರಿ) ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ
ಪೇಜಾವರಮಠದ ಶ್ರೀವಿಶ್ವೇಶ್ವತೀರ್ಥರ ಮೊದಲ ಸಂಪರ್ಕ ಸ್ವರ್ಭಾನು ಸಂವತ್ಸರದ ಮಾಘಶುದ್ಧ ನವಮಿಯಂದು , ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಮಾದ್ವರಾದ್ಧಾಂತ ಸಂವರ್ಧಕ ಸಭೆಯ ಮೊದಲ ಅಧಿವೇಶನದಲ್ಲಿ ಶ್ರೀಗಳಿಗೆ ಅಧ್ಯಕ್ಷಗಿರಿಯನ್ನು ಅನುಗ್ರಹಿಸಿದ ಶುಭ ಸನ್ನಿವೇಶದಲ್ಲಿ
ಪೇಜಾವರದ ಶ್ರೀಗಳವರಿಗೆ ಪಾಠ ಪ್ರಾರಂಭಿಸಿದ ಸ್ಥಳ ಏರಕೀಮಠದ ಶ್ರೀಮದಾಚಾರ್ಯ ಕರಾರ್ಚಿತ ಶ್ರೀಭೂಸಹಿತ ಕೇಶವನ ಸನ್ನಿಧಿಯಲ್ಲಿ, ವೇದಾಂತದ ತತ್ವಸಂಖ್ಯಾನ ಹಾಗೂ ನ್ಯಾಯಶಾಸ್ತ್ರದ ತರ್ಕ ಸಂಗ್ರಹಗಳ ಪಾಠದ ಶುಭಾರಂಭ (ಇತರ ವಿದ್ಯಾರ್ಥಿಗಳು, ಕಾಪು ಹಯಗ್ರೀವಾಚಾರ್ಯರು, ವೇಂಕಟರಮಣ ಐತಾಳರು, ಗುರುರಾಜ ಬಲ್ಲಾಳ ಮುಂತಾದವರು)
ಪೇಜಾವರ ಶ್ರೀಗಳಿಗೆ ನಡೆಸಿದ ಸುಧಾಪಾಠದ ಮಂಗಳೋತ್ಸವ ಉಡುಪಿ ಪೇಜಾವರಮಠದಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರತೀರ್ಥರ ಅಧ್ಯಕ್ಷತೆಯಲ್ಲಿ ಅಷ್ಠಮಠಾದೀಶರ ಸಮುಪಸ್ಠಿತಿಯಲ್ಲಿ
ಪೇಜಾವರ ಶ್ರೀಗಳಿಗೆ ಅಧ್ಯಾಪನ ನಡಿಸಿದ ಅವಧಿ ಸುಮಾರು ಎಂಟು ವರ್ಷಗಳು
ಭಂಡಾರಕೇರಿಯ ಗುರುಕುಲ ಪೇಜಾವರ ಶ್ರೀಗಳವರು ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಅಧ್ಯಯನ ನಡೆಸುತ್ತಿದ್ದ ಶುಭ ಅವಧಿಯಲ್ಲಿ ಶ್ರೀ ಶ್ರೀವಿದ್ಯಾಮಾನ್ಯತೀರ್ಥರ ಕುಲಪತಿತನದಲ್ಲಿ ಗುರುಕುಲ ಮೆರಿದಿತ್ತು 
ಸರ್ವಜ್ಞಪೀಠಾರೋಹಣ ರಜತೋತ್ಸವ ೧೯೫೦ ರಲ್ಲಿ ಉಡುಪಿಯಲ್ಲಿ ಪೇಜಾವರಮಠದಲ್ಲಿ ಶ್ರೀ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ನಡೆಯಿತು
ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ ಮತ್ತು ಶಿಷ್ಯನ ಸುಧಾಮಂಗಲೋತ್ಸವ ೧೯೫೨ ರಲ್ಲಿ  ೪೮ ದಿನಗಳ ಕಾಲ ಕಾಷ್ಠಮೌನ ವ್ರತ ವನ್ನು ಶ್ರೀಪಾದರು ನೆಡಿಸಿದರು. ೧೯೫೩ ರಲ್ಲಿ ಶಿಷ್ಯ ಶ್ರೀವಿಶ್ವೇಶತೀರ್ಥರು ಗುರುಗಳ ಸಮುಪಸ್ಠಿತಿಯಲ್ಲಿ ಸುಧಾಮಂಗಲೋತ್ಸವವನ್ನು ನೆಡಿಸಿದರು
ಶ್ರೀವಿಶ್ವೇಶತೀರ್ಥರಿಗೆ ಪ್ರೇರಣೆ ೪.೧.೧೯೫೩ರಲ್ಲಿ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ನಡೆದ ಅಖಿಲ ಭಾರತ ಮಾಧ್ವತತ್ವಜ್ಞಾನ ಸಮ್ಮೇಳನಕ್ಕೆ ಪ್ರೇರಣೆ ನೀಡಿದವರು ಶ್ರೀ ಶ್ರೀವಿದ್ಯಾಮಾನ್ಯತೀರ್ಥರು
ಕಾಂಚಿಪುರದಲ್ಲಿ ನೆಡೆದ ವಾದದಲ್ಲಿ ವಿಜಯ ಮನ್ಮಥ ಸಂತ್ಸರದಲ್ಲಿ ಫಾಲ್ಗುಣಶುದ್ಧ ತ್ರಯೋದಶಿಯಂದು ಕಾಂಚೀಪುರದಲ್ಲಿ ಕುಂಭಕೋಣದ ಕಾಮಕೋಟಿ ಶಂಕರಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತಸಭೆಯಲ್ಲಿ ಮಹಾಮಹೋಪಾದ್ಯಾಯ ಅನಂತಕೃಷ್ಣಶಾಸ್ತ್ರಿ, ಶ್ರೀಸುಬ್ರಹ್ಮಣ್ಯಶಾಸ್ತ್ರಿ, ಸುಂದರಶಾಸ್ತ್ರಿ ಮುಂತಾದವರ ಪೂರ್ವಪಕ್ಷಗಳಿಗೆ ಸಮಾಧಾನಿಸಿ ದ್ವೈತಕ್ಕೆ ಅಪೂರ್ವತ್ವವನ್ನು ಸಮರ್ಥಿಸಿ ಶ್ರೀಪಾದರು ಜಯಿಸಿದ್ದರು.
ಮುಷ್ಠಿ ಅಕ್ಕಿದಾನ ಯೋಜನೆ ಬೆಂಗಳೂರಿನ ಶ್ರೀಪೂರ್ಣವಿದ್ಯಾಪೀಠದ ವಿದ್ಯಾರ್ಥಿಗಳ ಭೋಜನ ವ್ಯವಸ್ಥೆ ಗಾಗಿ 'ಮುಷ್ಠಿ ಅಕ್ಕಿ ದಾನ ಯೋಜನೆ' ಎಂಬ ಸುಲಭ ಯೋಜನೆಯನ್ನು ರೂಪಿಸಿದವರು ಶ್ರೀಪಾದರು
ದಿ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿದ ಭಾಷಣ ೧೯೫೮ರಲ್ಲಿ ಹೈದರಾಬಾದಿನಲ್ಲಿ ನಡೆದ ಮೂರನೆಯ ಮಾಧ್ವತತ್ವ ಸಮ್ಮೇಳನ ದಲ್ಲಿ ಪಾಲ್ಗೊಂಡಿದ್ದ ಶ್ರೀಪಾದರ ಭಾಷಣ ಆ ಸಮ್ಮೇಳನದ ಉದ್ಘಾಟಕರಾಗಿದ್ದ ಡಾ|| ರಾಜೇಂದ್ರಪ್ರಸಾದರನ್ನು ಆಕರ್ಷಿಸಿತ್ತು. ಇವರ ಪತ್ನಿ ಹಾಗೂ ಅಕ್ಕ ಶ್ರೀಗಳವರಿಂದ ಶ್ರೀ ಕೃಷ್ಣ ಮಂತ್ರದ ಉಪದೇಶವನ್ನು ಪಡೆದರು
ಕಾಶಿಯಲ್ಲಿ ವಿದ್ವತ್ ಸಭೆಯಲ್ಲಿ ಮೆರೆದುದು ೧೯೫೮ನೇ ನವೆಂಬರ್ ೩೦ನೇ ದಿನ ದಂದು ಕಾಶಿಯಲ್ಲಿ ಮಹಾಮಹೋಪಾಧ್ಯಾಯ ಗಿರಿಧರಶರ್ಮಾ ಚತುರ್ವೇದಿ ಇವರ ಅಧ್ಯಕ್ಷತೆಯಲ್ಲಿ ನಡೆದ ಅದ್ವೈತ ವಿದ್ವಾಂಸರ ಸಭೆಯಲ್ಲಿ ಶ್ರೀಪಾದರ ವೈದುಷ್ಯವನ್ನು ಮೆಚ್ಚಿಕೊಂಡ ವಿದ್ವಾಂಸರು ಶ್ರೀಪಾದರಿಗೆ ಮಾನಪತ್ರ ಸಮರ್ಪಿಸಿ ಗೌರವಿಸಿದರು
ದಿಲ್ಲಿಯಲ್ಲಿ ನಡದ ವೇದಶಾಖಾ ಪ್ರತಿನಿಧಿ ಸಮ್ಮೇಳನದಲ್ಲಿ ಭಾಗವಹಿಸಿದುದು ಶ್ರೀಶಂಕರಪತ್ರಜಿ ಸ್ವಾಮಿಯವರು ದಿಲ್ಲಿಯಲ್ಲಿ ಕರೆದ ವೇದಶಾಖಾ ಪ್ರತಿನಿಧಿ ಸಮ್ಮೇಳನದಲ್ಲಿ ವೈಷ್ಣವ ಪೀಠಾಧಿಪತಿಗಳ ಪರವಾಗಿ ಶ್ರೀಪಾದರು ಪಾಲ್ಗೊಂಡು ಉದ್ಭೋದಕ ಭಾಷಣ ನೀಡಿದರು
ಅದ್ವೈತತತ್ವಸುಧಾ ಸಮೀಕ್ಷಾ ಗ್ರಂಥ ನಿರ್ಮಾಣ ಶ್ರೀಅನಂತಕೃಷ್ಣಶಾಸ್ತ್ರಿಗಳು ಬರೆದ 'ಅದ್ವೈತತಸುಧಾ' ಎಂಬ ಶೀಮನ್ನ್ಯಾಯಸುಧಾ ಖಂಡನಾಭಾಸಕ್ಕೆ ಖಂಡನ ರೂಪದಲ್ಲಿ 'ಅದ್ವೈತತತ್ವ ಸುಧಾ ಸಮೀಕ್ಷಾ' ಎಂಬ ಪ್ರೌಢಹ್ರಂಥವನ್ನು ಶ್ರೀಪಾದರು ರಚಿಸಿದರು
ಹೈದರಾಬಾದ್ ಬಾಗಲಿಂಗಪಲ್ಲಿಯಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ವೃಂದಾವನ ಪ್ರತಿಷ್ಠಾಪನೆ ೭.೨.೧೯೫೯ ರಂದು ಹೈದರಾಬಾದ್ ಬಾಗಲಿಂಗಪಲ್ಲಿ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರತಿಷ್ಠಾಪನೆ
ಬದರಿಕ್ಷೇತ್ರದಲ್ಲಿ ಕಾಷ್ಠಮೌನವ್ರತ ೧೯೬೧ (ಮೇ ತಿಂಗಳು) ಅಧಿಕ ಜ್ಯೇಷ್ಠ ಪ್ರತಿಪತ್ ನಿಂದ ನಿಜ ಜ್ಯೇಷ್ಠ ಚತುರ್ದಶಿಯವರೆಗೆ ೪೮ ದಿನಗಳವರೆಗೆ ಕಾಷ್ಠಮೌನವ್ರತ ಶ್ರೀಪಾದರು ಆಚರ್ಸಿದರು
ದಿಲ್ಲಿಯಲ್ಲಿ ವಾತುರ್ಮಾಸ್ಯ ೧೯೬೧ನೇ ಇಸವಿಯಲ್ಲಿ ಭಕ್ತರ ಕೋರಿಕೆಯಂತೆ ಶ್ರೀಪಾದರು ದಿಲ್ಲಿಯಲ್ಲಿ ಚಾತುರ್ಮಾಸ್ಯ ವ್ರತ ಕೈಕೊಂಡಿದ್ದರು
ದಿಲ್ಲಿಯಲ್ಲಿ ರಾಮನವಮೀ ಮಹೋತ್ಸವ ಪ್ರತಿವರ್ಷ ನಡೆಸುವಂತೆ ದಿಲ್ಲಿಯಲ್ಲಿ ಚಾತುರ್ಮಾಸ್ಯ ಕೈಗೊಂಡ ಸಂದರ್ಭದಲ್ಲೂ ಶ್ರೀಪಾದರು ಬಹುವಿಜೃಂಭಣೆಯಿಂದ ಶ್ರೀರಾಮನವಮಿ ಮಹೋತ್ಸವವನ್ನು ನಡೆಸಿದ್ದು, ಶ್ರೀಗಳವರ ಉಪನ್ಯಾಸದಿಂದ ಆಗಿನ ರಾಷ್ಟ್ರಾಧ್ಯಕ್ಷರಾಗಿದ್ದ ಬಾಬು ರಾಜೇಂದ್ರಪ್ರಸಾದ್, ಉಪರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ರಾಧಾಕೃಷ್ಣನ್, ಶ್ರೀನಂದಾ, ಶ್ರೀ ಅನಂತಶಯನ ಅಯ್ಯಂಗಾರ್ ಮುತಾದವರು ಪ್ರಭಾವಿತರಾಗಿದ್ದರು
ದಿಲ್ಲಿಯಲ್ಲಿ ಶ್ರೀಪಾದರ ನೇತೃತ್ವದಲ್ಲಿ ನಡೆದ 'ವಿಶ್ವಕಲ್ಯಾಣಯಾಗ ಶ್ರೀಪಾದರು ದಿಲ್ಲಿಯಲ್ಲಿದ್ದಾಗ ಅಷ್ಟಗ್ರಹಯೋಗದ ದುಷ್ಪರಿಣಾಮದ ಪರಿಹಾರಕ್ಕಾಗಿ, ಶ್ರೀಪಾದರ ನೇತೃತ್ವದಲ್ಲಿ ರೂಪಗೊಂಡ 'ವಿಶ್ವಕಲ್ಯಾಣಯಾಗ ಸಮಿತಿ' ಯ ಮೂಲಕ ೬ ಲಕ್ಷ ರೂ ವೆಚ್ಚದಲ್ಲಿ ೧೨ ದಿನಗಳ ಅವಧಿಯಲ್ಲಿ ಯಮುನಾ ನದಿಯ ತೀರದ ತುದಿಯ ಘಾಟಿನ ಬಯಲಿನಲ್ಲಿ ೭೦೦ ಉತ್ತರ ದಕ್ಷಿಣ ಭಾರತದ ಋತ್ವಿಜರು ಪಾಲ್ಗೋಂಡು 'ವಿಶ್ವಕಲ್ಯಾಣಯಾಗ' ವನ್ನು  ಯಶಸ್ವಿಯಾಗಿ ನಡೆಸಿದರು.
ದಿಲ್ಲಿಯಲ್ಲಿ ವಿದ್ವತ್ ಸಭೆಯಲ್ಲಿ ಜಯ ದಿಲ್ಲಿಯಲ್ಲಿ ನಡೆದ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ ಆಯೋಜಿಸಲಾದ ದ್ವೈತಾದ್ವೈತಚರ್ಚೆಯ ಸಭೆಯಲ್ಲಿ ಶ್ರೀರಾಮಚಂದ್ರಶಾಸ್ತ್ರಿ ಷಡಂಗ ಮುಂತಾದವರ ವಿರುದ್ಧವಾಗಿ ವಕ್ಯಾರ್ಥ ನಡೆಸಿ ದ್ವೈತಸಿದ್ಧಾಂತವನ್ನು ಸಮರ್ಥಿಸಲಾಯಿತು.
ಮಳೆಯ ವಿಘ್ನ ಸಂಭವಿಸಿದಂತೆ ತಡೆದ ಪವಾಡ ದಿಲ್ಲಿಯಲ್ಲಿ ವಿಶ್ವಕಲ್ಯಾಣಯಾಗದ ಸಂದರ್ಭದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ,ಶ್ರೀಪಾದರು ಮಳೆಯಾಗಲಾರದು ಎಂದು ನೀಡಿದ ಆಶ್ವಾಸನೆಗೆ ಅನುಗುಣವಾಗಿ ಮೋಡವೆಲ್ಲ ಚದುರಿ ಹೋಗಿ ಆಕಾಶ ಶುಭ್ರವಾಗಿತ್ತು. ಶ್ರೀಪಾದರ ಪ್ರಾರ್ಥನೆಯ, ಇಚ್ಛಾಶಕ್ತಿಯ ಸಾಮರ್ಥ್ಯವನ್ನು ಕಂಡು ಎಲ್ಲರೂ ಅಚ್ಚರಿಗೊಂಡರು. 'ಇಂಡಿಯನ್ ಎಕ್ಸ್ ಪ್ರೆಸ್ 'ನಂತಹ ಪತ್ರಿಕೆಗಳೂ ಶ್ರೀಪಾದರ ಈ ಪವಾಡವನ್ನು ಪ್ರಶಂಸಿಸಿದ್ದವು
ಸನಾತನ ಧರ್ಮಪ್ರತಿನಿಧಿಗೆ ಮೂರು ವರ್ಷಕಾಲ ಅಧ್ಯಕ್ಷರಾಗಿ ಆಯ್ಕೆ ೬೦೦ ಶಾಖೆಗಳನ್ನು ಹೊಂದಿದ್ದು ಹೊಸದಿಲ್ಲಿಯಲ್ಲಿ ಕೇಂದ್ರದ ಕಛೇರಿಯನ್ನು ಪಡೆದಿದ್ದ ೫೦ ವರ್ಷಗಳಿಂದ ಸನಾತನ ಧರ್ಮವನ್ನು ಪ್ರಚಾರ ಮಾಡುತ್ತ ಬಂದಿದ್ದ ಸನಾತನ ಧರ್ಮಪ್ರತಿನಿಧಿ ಸಭಾಕ್ಕೆ ೧೯೬೨ ರಿಂದ ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಶ್ರೀಪಾದರು ಆಯ್ಕೆಗೊಂಡಿದ್ದರು
ಮಾಧ್ವತತ್ವಜ್ಞಾನ, ಸಮ್ಮೇಳನದ ಉದ್ಘಾಟನೆ ಬೆಂಗಳೂರಿನಲ್ಲಿ ೧೯೬೩ರಲ್ಲಿ ನಡೆದ ಐದನೇ ಮಾಧ್ವತತ್ವಜ್ಞಾನ ಸಮ್ಮೇಳನದ ಉದ್ಘಾಟನೆಯನ್ನು ಶ್ರೀಪಾದರು ನಡೆಸಿದ್ದರು
ಗೋಹತ್ಯೆ ನಿಷೇಧಿಸಲು ಉಪವಾಸ ಗೋಹತ್ಯಾ ನಿಷೇಧದ ಕಾನೂನನ್ನು ಜಾರಿಗೊಳಿಸ ಬೇಕೆಂದು ಶ್ರೀಪೇಜಾವರ ಶ್ರೀಗಳ ಜೊತೆ ೧೯ ಮತ್ತು .೨೦.೧೧.೧೯೬೬ ರ ಎರಡುದಿನ ನಿರಶನ ವ್ರತ 
ಉಡುಪಿಯ ಪಲಿಮಾರು ಮಠದ ಆಧಿಪತ್ಯ ಅದುವರೆಗೆ ಭಂಡಾರಕೇರಿ ಮಠಕ್ಕಷ್ಟೇ ಅಧಿಪತಿಗಳಾಗಿದ್ದ ಶ್ರೀಪಾದರು ೩.೨.೧೯೬೯ರಂದು ಉಡುಪಿ ಪಲಿಮಾರುಮಠಕ್ಕೂ ಅಧಿಪತಿಗಳಾಗಿ ಉಡುಪಿ ಶ್ರೀಕೃಷ್ಣನನ್ನು ಮುಟ್ಟಿ ಆರಾಧಿಸುವ ಅಧಿಕಾರವನ್ನು ಪಡೆದರು
ಮೊದಲ ಪರ್ಯಾಯ ೧೮.೧.೧೯೭೦ ರಿಂದ ೧೭.೧.೭೨ರವರೆಗೆ ಶ್ರೀಪಾದರ ಪ್ರಥಮ ಪರ್ಯಾಯ
ಉಡುಪಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠ ಶ್ರೀಪಾದರ ಪ್ರಥಮ ಪರ್ಯಾಯಾವಧಿಯಲ್ಲಿ ಕೃಷ್ಣಮಠದ ಚಂದ್ರಶಾಲೆಯಲ್ಲಿ ಶ್ರೀಕೃಷ್ಣನ ಸಮಕ್ಷಮದಲ್ಲಿ ಸರ್ವಮೂಲಪಾಠವನ್ನು ಶ್ರೀಪಾದರು ನಡೆಸಿದ್ದರು
ಪ್ರವಚನದ ಮಂಗಳದಂದು ಚಿನ್ನದ ತೋಟ್ಟಿಲ ಅರ್ಪಣೆ ಪರ್ಯಾಯದ ಕೊನೆಯ ಅವಧಿಯಲ್ಲಿ ನಡೆದ ಪ್ರವಚನದ ಮಂಗಳೋತ್ಸವದಂದು ಉಡುಪಿ ಶ್ರೀಕೃಷ್ಣನಿಗೆ ಚಿನ್ನದ ತೊಟ್ಟಿಲ ಸಮರ್ಪಣೆ
ಪ್ರಕರಣ ಗ್ರಂಥಗಳ ಪ್ರಕಟಣೆ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ವತಿಯಿಂದ ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೯ ರಿಂದ ೧೯೭೨ ರವರೆಗೆ) ಆಚಾರ್ಯರ ಪ್ರಕರಣ ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ
ಸರ್ವಮೂಲ ಗ್ರಂಥಗಳ ಪ್ರಕಟಣೆ ಅಖಿಲಭಾರತ ಮಾಧ್ವಮಹಾಮಂಡಲದಿಂದ ಐದು ಸಂಪುಟಗಳಲ್ಲಿ ಪ್ರಕಟಗೊಂಡ (೧೯೬೮ ರಿಂದ ೧೯೭೪ ರವರೆಗೆ) ಹೃಷೀಕೇಶತೀರ್ಥೀಯ ಪಾಠಾನುಸಾರವಾದ ಸರ್ವಮೂಲ ಗ್ರಂಥಗಳ ಪ್ರಕಾಶನದಲ್ಲಿ ಪ್ರಮುಖಪಾತ್ರ
ಅದಮಾರಿನ 'ಆದರ್ಶಗುರುಕುಲ' ದ ಕುಲಪತಿತ್ವ ೧೯೭೪ ರಿಂದ ೧೯೮೪ ರವರೆಗೆ ನಡೆದ ಅದಮಾರಿನ 'ಆದರ್ಶ ಗುರುಕುಲ' ದ ಕುಲಪತಿಗಳಾಗಿ ಶ್ರೀವಿಶ್ವಪ್ರಿಯತೀರ್ಥರಿಗೂ (ಅದಮಾರುಮಠ), ಶ್ರೀಸುಗಣೇಂದ್ರತೀರ್ಥರಿಗೂ (ಪುತ್ತಿಗೆಮಠ), ಶ್ರೀವಿದ್ಯಾಧೀಶತೀರ್ಥರಿಗೂ (ಪಲಿಮಾರು ಕಿರಿಯಪಟ್ಟ), ಶ್ರೀವಿದ್ಯೇಶತೀರ್ಥರಿಗೂ (ಭಂಡಾರಕೇರಿ ಕಿರಿಯಪಟ್ಟ) ನ್ಯಾಯವೇದಾಂತಶಾಸ್ತ್ರಗಳ ಅಧ್ಯಾಪನ ಶ್ರೀಪಾದರಿಂದ
ಪಲಿಮಾರುಮಠಕ್ಕೆ ಉತ್ತರಾಧಿಕಾರಿ ನಿಯೋಜನೆ ೧೦.೬.೧೯೭೯ ರಂದು ಅದಮಾರಿನಲ್ಲಿ ರಮೇಶತಂತ್ರಿ ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿದ್ಯಾಧೀಶತೀರ್ಥ ಎಂಬ ನಾಮಕರಣ ಮಾಡಿ ಶ್ರೀಪಲಿಮಾರುಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಿದರು
ಭಂಡಾರಕೇರಿಮಠಕ್ಕೆ ಉತ್ತರಾಧಿಕಾರಿ ನಿಯೋಜನೆ ೨೧.೪.೮೦ ರಂದು ಬಾರ್ಕೂರಿನ ಭಂಡಾರಕೇರಿಯಲ್ಲಿ ಹರಿಕೃಷ್ಣ ಎಂಬುವರಿಗೆ ಸಂನ್ಯಾಸ ದೀಕ್ಷೆಯನ್ನು ನೀಡಿ ಶ್ರೀವಿದ್ಯೇಶತೀರ್ಥ ಎಂಬ ನಾಮಕರಣ ಮಾಡಿ ಶ್ರೀಭಂಡಾರಕೇರಿ ಮಠಕ್ಕೆ ಉತ್ತರಾಧಿಕಾರಿಯಾಗಿ ನಿಯೋಜಿಸಿದರು
ಪಲಿಮಾರು ಮಠಾಧಿಪತ್ಯ ಕಾನೂನು ಸಮ್ಮತ ಉಡುಪಿ ಸಿವಿಲ್ ಜಡ್ಜ್ ಕೋರ್ಟಿನ ತೀರ್ಪು ಸುಮಾರು ಹತ್ತು ವರ್ಷಗಳಿಂದ ವಿವಾದಗ್ರಸ್ತವಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರ ಪಲಿಮಾರು ಮಠಾಧಿಪತ್ಯ ಕಾನೂನು ಸಮ್ಮತವೆಂದು ಉಡುಪಿ ಸಿವಿಲ್ ಜಡ್ಜ್ ಕೋರ್ಟಿನ ನ್ಯಾಯಮೂರ್ತಿ ಎನ್.ಎಸ್.ಸಂಗೊಳ್ಳಿಯವರು ೩೦.೧೦.೧೯೮೦ ರಂದು ತೀರ್ಪು ನೀಡಿದರು
ಪಾಜಕಕ್ಷೇತ್ರದಲ್ಲಿ ಶ್ರೀಮಧ್ವ ಜಯಂತಿಯ ಆಚರಣೆ ೧೫.೧೦.೧೯೮೦ ರಿಂದ ೧೯.೧೦.೧೯೮೦ ರವರೆಗೆ ಐದುದಿನ ಕಾಲ ಪಾಜಕಕ್ಶೇತ್ರದಲ್ಲಿ ಅತಿವೈಭವದಿಂದ ಶ್ರೀಮಧ್ವಜಯಂತೀ ಆಚರಣೆಯ ಪ್ರಧಾನನೇತೃತ್ವ ಶ್ರೀಪಾದರದ್ದು
ಪ್ರಯಾಗದಲ್ಲಿ ಶ್ರೀಮಧ್ವನವಮೀ ಮಹೋತ್ಸವ ೩೧.೧.೧೯೮೨ ರಿಂದ ೨.೨.೧೯೮೨ ರವರೆಗೆ ಪ್ರಯಾಗದಲ್ಲಿ ನಡೆದ ಶ್ರೀಮಧ್ವನವಮಿ ಮಹೋತ್ಸವದಲ್ಲಿ ಹಿರಿಯ ಪಾತ್ರ
ಬೆಂಗಳೂರು ಪೂರ್ಣಪ್ರಜ್ಞ  ವಿದ್ಯಾಪೀಠದಲ್ಲಿ ಶ್ರೀಕೃಷ್ಣಪ್ರತಿಷ್ಠೆ ೪.೭.೧೯೮೩ ರಂದು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಕೃಷ್ಣದೇವಾಲಯದಲ್ಲಿ ಶ್ರೀಕೃಷ್ಣನ ಪ್ರತಿಷ್ಠೆ ಶ್ರೀಪಾದರಿಂದ
ಶ್ರೀಪಾದರ ಎರಡನೇ ಪರ್ಯಾಯ ೧೮.೧.೧೯೮೬ ರಿಂದ ೧೭.೧.೧೯೮೮ ರವರೆಗೆ ಶ್ರೀಪಾದರ ಎರಡನೇ ವೈಭವದ ಪರ್ಯಾಯ
ಜ್ಞಾನಯಜ್ಞ-ನಿರಂತರ ಪ್ರವಚನ ಶ್ರೀಪಾದರ ಎರಡನೇ ಪರ್ಯಾಯಾವಧಿಯಲ್ಲಿ ೧೨.೫.೧೯೮೬ ರಿಂದ ೧೭.೧.೧೯೮೮ ರವರೆಗೆ ಊರ ಹಾಗೂ ಪರವೂರ ನಲ್ವತ್ತಕ್ಕಿಂತಲೂ ಅದಿಕ ವಿದ್ವ್ಂಸರು ರಾಮಾಯಣಾದ್ಗಳ ಪ್ರವಚನ ನೆಡ್ಸಿದ್ದರು
ಜಪ-ಪಾರಾಯಣಗಳ ಸುರಿಮಳೆ ಎರಡನೇ ಪರ್ಯಾಯದ ಅವಧಿಯಲ್ಲಿ ೭೫೦ ನೇ ಮಧ್ವಜಯಂತಿ ಸಂಭವಿಸಿದ್ದು, ಆಪ್ರಯುಕ್ತ ೭೪೦ ಬಾರಿ ಸರ್ವಮೂಲ ಪಾರಾಯಣಗಳನ್ನೂ, ಲೋಕಕಲ್ಯಾಣಕ್ಕಾಗಿಕೋಟಿ ಗಾಯತ್ರಿಜಪವನ್ನೂ, ಕೋಟಿಕೃಷ್ಣಮಂತ್ರವನ್ನೂ ವಿದ್ವಾಂಸರಿಗೆ, ಪುರೋಹಿತರಿಗೆ ಸಂಭಾವನೆಕೊಟ್ಟು ನಡೆಸಲಾಯಿತು
ವ್ಯಾಪಕ ಸನ್ಮಾನ ಎರಡನೇ ಪರ್ಯಾಯಕ್ಲದಲ್ಲಿ ನೂರಕ್ಕಿಂತಲೂ ಹೆಚ್ಚು ವಿದ್ವಾಂಸರನ್ನೂ, ಐವತ್ತಕ್ಕಿಂತಲೂ ಹೆಚ್ಚು ಪುರೋಹಿತರನ್ನೂ ಸಮ್ಮಾನಿಸಿ ಅವರಿಂದ ಇನ್ನಷ್ಟು ಸಾಧನೆ, ಸೇವೆ ನೆಡೆಯುವಂತೆ ಪ್ರೋತ್ಸಾಹಿಸಲಾಗಿತ್ತು
೭೫ ದಿನಗಳ ಕಾಲ ಸುವರ್ಣ ರರ್ಥೋತ್ಸವ ೭೫೦ ನೆ ಮಧ್ವಜಯಂತ್ ಪ್ರಯುಕ್ತ ನಿರಂತರವಾಗಿ ೭೫ದಿನಗಳಲ್ಲಿ ಶ್ರೀಕೃಷ್ಣನಿಗೆ ಸುವರ್ಣರಥೋತ್ಸವ ನಡೆಸಲಾಗಿತ್ತು
ವೇಧದ ಪರಿಗಣನೆಯಲ್ಲಿ ಈಗ ದೃಗ್ಗಣಿತವೂ ಗ್ರಾಹ್ಯ ೧೭.೪.೧೯೮೬ ರಂದು ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀಪಾದರು ಏಕಾದಶೀ-ಅನುಷ್ಠಾನದ ಬಗ್ಗೆ ಈ ನಿಲುವನ್ನು ಮಂಡಿಸಿದ್ದರು
ಪ್ರಯಾಗದಲ್ಲಿ 'ಮಾಧ್ವಪೀಠ' ದ ಸ್ಠಾಪನೆ ೧೯೮೬ ವೈಶಾಖ ಶುದ್ಧ ಪಂಚಮಿಯಂದು ಪರ್ಯಾಯ ಪೀಠಾರೂಢರಾದ ಶ್ರೀಪಾದರು ಪ್ರಯಾಗದಲ್ಲಿ 'ಮಾಧ್ವಪೀಠ'ವನ್ನು ಸ್ಥಾಪಿಸಿ, ಗಡಚಿಂತಿ ರಾಮಾಚಾರ್ಯರಿಗೆ ಸಂನ್ಯಾಸದೀಕ್ಷೆ ನೀಡಿ, ಶ್ರೀವಿದ್ಯಾವಲ್ಲಭತೀರ್ಥರನ್ನಾಗಿ ಪರಿವರ್ತಿಸಿ, ಆಪೀಠಕ್ಕೆ ಅವರನ್ನೇ ಅಧಿಪತಿಯನ್ನಾಗಿ ನಿಯೋಜಿಸಿದ್ದರು
ಸುವರ್ಣರಥದ ಸಮರ್ಪಣೆ ೨೫ ಕೆ.ಜಿ. ಚಿನ್ನದ ೧೪ ಅಡಿ ಎತ್ತರದ ೮೫ ಲಕ್ಷ ರೂ. ಬೆಲೆಬಾಳುವ ಸುವರ್ಣರಥವನ್ನು ೧೨.೬.೮೬ ರಿಂದ ೫.೭.೮೬ ರ ಅವಧಿ ಒಳಗೆ ಸಿದ್ಧಪಡಿಸಿ, ೫.೭.೮೬ ರ ಶುಭದಿನದಂದು ಶ್ರೀಕೃಷ್ಣನಿಗೆ ಸಮರ್ಪಿಸಲಾಗಿದೆ
ಸರ್ವಮೂಲಪಾಠದ ಮಂಗಳ ಪರ್ಯಾಯ ಕಾಲದಲ್ಲಿ ಇಪ್ಪತ್ತಕ್ಕೂ ಅಧಿಕ ಪರವೂರಿನ ಗೃಹಸ್ಥಶಿಷ್ಯರಿಗೆ ಪರಿವಾರ ಸಹಿತವಾಗಿ ಶ್ರೀಮಠದಲ್ಲಿ ಇರಲು ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು, ಆ ಜಿಜ್ಞಾಸುಗಳಿಗೂ, ಊರಿನ ಕೆಲವು ಜಿಜ್ಞಾಸುಗಳಿಗೂ ಶ್ರೀಪಾದರು ಸರ್ವಮೂಲ ಗ್ರಂಥಗಳ ಪಾಠ ನೆಡೆಸಿದ್ದು ಅದರ ಮಂಗಲೋತ್ಸವ ೧೦.೧.೮೭ ರಂದು ಜರಗಿತ್ತು
ಶ್ರೀವಿಷ್ಣುಸಹಸ್ರನಾಮ ಪುಸ್ತಕಗಳ ಪ್ರಕಾಶನ  ನಾಲ್ಕು ಬೃಹತ್ ಸಂಪುಟಗಳಲ್ಲಿ ವಿಷ್ಣುಸಹಸ್ರನಾಮ ಪುಸ್ತಕಗಳ ಪ್ರಕಟಣೆ (೧೦.೧.೮೮ ರಿಂದ ೧೦.೧೧.೯೨ರ ವರೆಗೆ)
 ೭೫ನೇ ವರ್ಷದ ಜನ್ಮದಿನಾಚರಣೆ ೨೮.೮.೮೮ ರಂದು ಬೆಂಗಳೂರಿನಲ್ಲಿ ಹತ್ತುದಿನಗಳ ಕಾಲ ಶ್ರೀಪಾದರ ೭೫ ನೇ ವರ್ಷದ ಜನ್ಮದಿನೋತ್ಸವದ ವೈಭವದ ಆಚರಣೆ ನಡೆಯಿತು
ಬದರಿಯಲ್ಲಿ ಶ್ರೀಮಧ್ವಾಚಾರ್ಯರ ಪ್ರತಿಷ್ಠೆ ಶ್ರೀಮಧ್ವರ ೭೫೦ ನೆ ಜಯಂತೀ ಪ್ರಯುಕ್ತ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಡು ಬದರಿಯಲ್ಲಿ ೧೦.೧೦.೮೯ ರಂದು ಶ್ರೀಮದ್ವರ ಪ್ರತೀಕದ ಪ್ರತಿಷ್ಠಾಪನೆ ಶ್ರೀಪಾದರಿಂದನೆಡೆಯಿತು
ಉಡಪಿ ಶ್ರೀಕೃಷ್ಣನಿಗೆ ವಜ್ರಕಿರೀಟದ ಸಮರ್ಪಣೆ ೩೦೦೦ ವಜ್ರಮಣಿಗಳನ್ನು, ಎರಡು ನಾಯಕಮಣಿಗಳನ್ನೂ ಒಳಗೊಂಡಿದ್ದು, ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ವಜ್ರದ ಕಿರೀಟ ೧೧.೧೧.೮೯ ರಂದು ಉಡುಪಿ ಶ್ರೀಕೃಷ್ಣನಿಗೆ ಶ್ರೀಪಾದರಿಂದ ಸಮರ್ಪಿಸಲಾಯಿತು
ಪಲಿಮಾರಿನಲ್ಲಿ 'ಯೋಗದೀಪಿಕಾ' ಸಂಸ್ಥೆಯ ಸ್ಠಾಪನೆ ೧೯೯೦ ರಲ್ಲಿ ಪಲಿಮಾರಿನಲ್ಲಿ 'ಯೋಗದೀಪಿಕಾ' ಶಿಕ್ಷಣ ಸಂಸ್ಥೆಯನ್ನು ಶ್ರೀಪಾದರು ಸ್ಥಾಪಿಸಿದರು
ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಬಿಡುಗಡೆ ಚಳುವಳಿಯಲ್ಲಿ ಪಾಲ್ಗೊಂಡಿದ್ದು ೨೭.೧೦.೯೦ ರಿಂದ ೨೩.೧೧.೯೦ ರ ವರೆಗೆ ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಬಿಡುಗಡೆಯ ಚಳುವಳಿಯಲ್ಲಿ ಪಾಲ್ಗೊಂಡು ಶ್ರೀವಿಶ್ವೇಶತೀರ್ಥರ ಜೊತೆಯಲ್ಲಿ ಬಂಧನಕ್ಕೊಳಗಾಗಿದ್ದರು
ಶ್ರೀಮುಖ್ಯಪ್ರಾಣ ಪಂಚಾಂಗವನ್ನು ಹೊರಡಿಸಲು ಪ್ರೇರಣೆ ೧೯೯೩ ರಲ್ಲಿ ಶ್ರೀಸುಗುಣೇಂದ್ರತೀರ್ಥರ ಮೂಲಕ ದೃಗ್ಗಣಿತಾವಲಂಬಿ ಶ್ರೀಮುಖ್ಯಪ್ರಾಣ ಪಂಚಾಂಗ ಹೊರಡಲು ಪ್ರೇರಣೆ
ಪೂರ್ಣಪ್ರಜ್ಞ ವಿದ್ಯಾಪಠದಲ್ಲಿ ಸಂಶೋಧನಾಕೇಂದ್ರದ ಉದ್ಘಾಟನೆ ೧೪.೯.೯೪ ರಂದು ಬೆಂಗಳೂರಿನ ಪೂರ್ಣಪ್ರಜ್ಞವಿದ್ಯಾಪೀಠದಲ್ಲಿ ಶ್ರೀವಿಶ್ವೇಶತೀರ್ಥರ ಅದ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಶ್ರೀಪಾದರು ಪೂರ್ಣಪ್ರಜ್ಞ ಸಂಶೋಧನಾ ಮಂದಿರವನ್ನುಉದ್ಘಾಟಿಸಿದರು
ಶ್ರೀರಂಗದಲ್ಲಿ ಸಹಸ್ರಚಂದ್ರದರ್ಶನ ಸಮಾರಂಭ ೧೯೯೪ ಅಕ್ಟೋಬರ್ ೧೩,೧೪ರಂದು ಶ್ರೀರಂಗಕ್ಷೇತ್ರದಲ್ಲಿ ಶ್ರೀಗಳವರ ಸಹಸ್ರಚಂದ್ರದರ್ಶನ ಸಮಾರಂಭ ನಡೆದಿದ್ದು, ಅದರ ಅಂಗವಾಗಿ ತುಲಾಭಾರ ಸುವರ್ಣಾಭಿಷೇಕ ನಡೆದಿತ್ತು
ಘಟಿಕಾಚಲದಲ್ಲಿ ಸಭಾಭವನ ಮತ್ತು ಅತಿಥಿಗೃಹಗಳ ನಿರ್ಮಾಣ ತಮ್ಮ ಆಶ್ರಮ ಗುರುಗಳಾದ ಶ್ರೀವಿಬುಧಪ್ರಿಯರ ಸ್ಮರಣಾರ್ಥ ೧೨ ಲಕ್ಷ ರೂ. ವೆಚ್ಚದ ಸಭಾಭವನ ಮತ್ತು ಅತಿಥಿಗೃಹಗಳ ನಿರ್ಮಾಣವನ್ನು ಘಟಿಕಾಚಲದಲ್ಲಿ ಮಾಡಿದರು
ಗೊಕರ್ಣ ಪರ್ತಗಾಳಿ ಮಠಾದೀಶರ ಸುಧಾಮಂಗಲೋತ್ಸವ ಅಧ್ಯಕ್ಷತೆ ೧೯೯೮ರಲ್ಲಿ ಉಡುಪಿ ಕಲ್ಯಾಣಪುರದ ಶ್ರೀ ವೇಂಕಟರಮಣದೇವಳದಲ್ಲಿ ನಡೆದ ಶ್ರೀಗೊಕರ್ಣ ಪರ್ತಗಾಳಿ ಮಠಾದೀಶರಾದ ಶ್ರೀವಿದ್ಯಾಧಿರಾಜತೀರ್ಥರ ಸುಧಾಮಂಗಲೋತ್ಸವ ಅಧ್ಯಕ್ಷತೆಶ್ರೀಪಾದರದು
ಉಡುಪಿಯಲ್ಲಿ ತತ್ವಸಂಶೋಧನ ಸಂಸತ್ತಿನ ಸ್ಠಾಪನೆ ೧೯೯೮ ರ ಮಧ್ವಜಯಂತಿಯಂದು ಉಡುಪಿಯ ಪಲಿಮಾರು ಮಠದಲ್ಲಿ 'ತತ್ವಸಂಶೋಧನ ಸಂಸತ್' ಸಂಶೋಧನಾ ಕೇಂದ್ರದ ಸ್ಠಾಪನೆ ಶ್ರೀಪಾದರಿಂದ
ಹರಿದ್ವಾರದಲ್ಲಿ ಚಾತುರ್ಮಾಸ್ಯವ್ರತ ೧೯೯೯ರಲ್ಲಿ ಚಾತುರ್ಮಾಸ್ಯವ್ರತವನ್ನು ಹರಿದ್ವಾರದಲ್ಲಿ ನಡೆಸಿದ್ದು, ಆ ಐವತ್ತನಾಲ್ಕು ದಿನಗಳಲ್ಲೂ ಪ್ರತಿನಿತ್ಯ ಗಂಗಾಸ್ನಾನ ಉಪನಿಷತ್ ಪಾಠ ಮುಂತಾದವುಗಳನ್ನು ನಡೆಸಿದ್ದರು
ಪೀಠಾರೋಹಣದ ಅಮೃತೋತ್ಸವ ಉಡುಪಿಕೃಷ್ಣ, ಮುಖ್ಯಪ್ರಾಣದ ಸನ್ನಿಧಾನದಲ್ಲಿ ೧೫.೪.೨೦೦೦ ಮತ್ತು ೧೬.೪.೨೦೦೦ ರ ದಿನಗಳಲ್ಲಿ ಶಿಷ್ಯರು, ಅಭಿಮಾನಿಗಳು ಸೇರಿ ಶ್ರೀಪಾದರ ಪೀಠಾರೋಹಣ ಅಮೃತೋತ್ಸವವನ್ನು ಪರ್ಯಾಯ ಪೀಠಾರೂಢ ಶ್ರೀ ವಿಶ್ವೇಶತೀರ್ಥರ ನೇತೃತ್ವದಲ್ಲಿ ವೈಭವೋಪೇತವಾಗಿ ಆಚರಿಸಿದರು
ತಾಪಸ ಹಾಗೂ ನಧ್ವಸಿದ್ಧಾಂತದ ನವರತ್ನಗಳು 'ತಾಪಸ' ಎಂಬ ಶ್ರೀಪಾದರಿಗೆ ಸಮರ್ಪಿತವಾದ ಅಭಿವಂದನಾಗ್ರಂಥ ಅವರ ವ್ಯಕ್ತಿತ್ವವನ್ನು ಸಾಧನೆಗಳನ್ನು, ಚಿಂತನೆಗಳನ್ನು ತಿಳಿಸುತ್ತಿದ್ದರೆ 'ಮಧ್ವಸಿದ್ಧಾಂತದ ನವರತ್ನಗಳು ' ಎಂಬ ಧ್ವನಿಸುರಳಿ ಶ್ರೀಮಧ್ವಸಿದ್ಧಾಂತದ ಹರಿಸರ್ವೋತ್ತಮತ್ವವೇ ಮುತಾದ ಒಂಭತ್ತು ಪ್ರಮುಖ ತತ್ವಗಳ ಕುರಿತು ಶ್ರೀಪಾದರ ಚಿಂತನೆಯನ್ನು ಅವರ ಮಾತಿನಲ್ಲೇಯೇ ಘೋಷಿಸುತ್ತಿದೆ
ಮಹಾಪ್ರಸ್ಥಾನ ೨೦೦೦ ಇಸವಿಯ ಮೇ ೧೪ ರ ಏಕಾದಶಿಯಂದು ಹಿಂದಿನ ಐದು ದಿನಗಳಲ್ಲಿ ಹೇಗೋ ಹಾಗೆಯೇ ತೀರ್ಥ ಮಾತ್ರ ಸ್ವೀಕರಿಸಿ, ಬೆಳಗ್ಗಿನಿಂದ ಬೇರೆಬೇರೆ ಮಂತ್ರಗಳನ್ನು ಬಾಯಲ್ಲಿ ಪಠಿಸುತ್ತಾ, ಶ್ರೀರಾಮಮಂತ್ರದ ಪಠನೆಯೊಂದಿಗೆ ರಾತ್ರಿ ೭.೨೫ಕ್ಕೆ ಮಹಾ ಪ್ರಸ್ಥಾನ ಕೈಗೊಂಡು ಶ್ರೀಕೃಷ್ಣನ ಪಾದಾರವಿಂದಕ್ಕೆ ಸೇರಿದರು



ಪ್ರಶಂಸೆ-ಪ್ರಭಾವ-ಪವಾಡಗಳು
(ಸಗ್ರಿ ರಾಘವೇಂದ್ರ ಉಪಾಧ್ಯಾಯ ರಿಂದ ಸಂಪಾದಿತ-ಸಂಕಲಿತ-ಲಿಖಿತವಾದ ಮತ್ತು ಶ್ರೀ ಪಲಿಮಾರುಮಠ, ಉಡುಪಿ ಹಾಗೂ ಪರವಿದ್ಯಾ ಪ್ರಕಾಶನ, ಮೂಡುಸಗ್ರಿ ಇವರಿಂದ ಪ್ರಕಟಿತ 'ಮಹಾಪ್ರಸ್ಥಾನ' ಕೃತಿಯ ೪೧ ರಿಂದ ೫೩ ನೆ ಪುಟಗಳಿಂದ ಉಧೃತ)
ವಿದ್ಯಾಭಂಡಾರ
ನೀವು ವಿದ್ಯಾಭಂಡಾರ ಆಗಿರುವಿರಿ !
- ಶ್ರೀ ಸತ್ಯಧ್ಯಾನತೀರ್ಥರು, ಶ್ರೀಮದುತ್ತರಾದಿಮಠ
(ವಿದ್ಯಾಭ್ಯಾಸವನ್ನು ಪೂರೈಸಿ ಹೊರಟ ಸಂದರ್ಭದಲ್ಲಿ)
ಜ್ಞಾನಾಭಿವೃದ್ಧಿ
ಶ್ರೀಗಳವರಿಗೆ ಆಯುರಾರೋಗ್ಯಸಂಪತ್ತುನ್ನೂ ಜ್ಞಾನಾಭಿವೃದ್ಧಿಯನ್ನೂ ಪರಮಾತ್ಮನು ಕರುಣಿಸಲಿ !
- ಶ್ರೀ ಸುಧೀಂದ್ರತೀರ್ಥರು, ಪುತ್ತಿಗೆಮಠ
(ಶ್ರೀಮನ್ಮಾಧ್ವರಾದ್ಧಾಂತಸಂವರ್ಧಕ ಸಭೆಯ ಆರನೇ ಅಧಿವೇಶನ ಅಧ್ಯಕ್ಷಭಾಷಣದಲ್ಲಿ)
ಅನುಕರಣೀಯ
ವಿದ್ಯಾರ್ಥಿ ವಿದ್ವಾಂಸರುಗಳಿಗೆ ವಿಶೇಷವಾಗಿ ಪ್ರೋತ್ಸಾಹಿಸುತ್ತಿರುವ ಶ್ರೀ ಭಂಡಾರಕೇರಿ ಶ್ರೀಗಳು ಈ ಅವಿರತ ಪರಿಶ್ರಮ ಅತ್ಯಂತ ಪ್ರಶಂಸನೀಯ, ಅನುಕರಣೀಯ.
- ಶ್ರೀ ವಿದ್ಯಾಸಮುದ್ರತೀರ್ಥರು, ಕಾಣಿಯೂರುಮಠ
(ಸಭೆಯ ೧೩ನೇ ಅಧಿವೇಶನದಲ್ಲಿ ಪಾಲ್ಗೊಂಡು)

ಈ ಶತಮಾನದ ಶ್ರೇಷ್ಠ ಯತಿ
ತಳಸ್ಪರ್ಶಿ ತತ್ವಜ್ಞಾನ ಎಲ್ಲರಲ್ಲಿ ಸರಳವಾಗಿ ವ್ಯವಹರಿಸುವ ಸೌಜನ್ಯ, ವಿದ್ವಾಂಸರಿಗೆ-ವಿದ್ಯಾರ್ಥಿಗಳಿಗೆ ಸಂಭಾವನೆ ನೀಡಿದಷ್ಟು ತೃಪ್ತಿಯಿಲ್ಲದ ಔದಾರ್ಯ, ಯಾವುದೇ ಕಪ್ಪುಚುಕ್ಕೆ ಇಲ್ಲದ ಶುದ್ಧ ಸ್ಫಟಿಕದಂತೆ ಪರಿಶುದ್ಧವಾದ ಚಾರಿತ್ರ್ಯ, ಪಾಠಪ್ರವಚನ-ಜಪ-ಪೂಜೆ ಮುಂತಾದ ಸಾಧನೆ ಈ ಐದು ಅಸಾಧಾರಣ ಗುಣಗಳನ್ನು ಮೇಳೈಸಿಕೊಂಡಿರುವ ಶ್ರೀಪಾದರು ಈ ಶತಮಾನದ ಶ್ರೇಷ್ಠಯತಿಗಳು.
- ಶ್ರೀ ವಿಶ್ವೇಶತೀರ್ಥರು, ಪೇಜಾವರಮಠ
(೧೬.೪.೨೦೦೦ದಂದು ನಡೆದ ಶ್ರೀಪಾದರ ಪೀಠಾರೋಹಣ ಅಮೃತೋತ್ಸವದಲ್ಲಿ)
ಶಾಸ್ತ್ರಾರ್ಥದ ಅನುಭವ
ಶ್ರೀ ವಿದ್ಯಾಮಾನ್ಯತೀರ್ಥರು ಶಾಸ್ತ್ರಾರ್ಥವನ್ನು ಅನುಭವಾರೂಢವನ್ನಾಗಿಸಿ ಕೊಂಡವರು
- ಶ್ರೀ ವಿಬುಧೇಶತೀರ್ಥರು ಅದಮಾರುಮಠ
(ಪೀಠಾರೋಹಣ ಅಮೃತೋತ್ಸವದಲ್ಲಿ)
ಸಾ ನಿಶಾ ಪಶ್ಯತೋ ಮುನೇಃ
ರಾತ್ರಿ ನಾಟಕ, ಆಟ, ನೃತ್ಯ, ಸಂಗೀತ - ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರೆ ಐದು ಹತ್ತು ನಿಮಿಷಗಳಲ್ಲೇ ನಿದ್ದೆ ಆರಂಭಿಸುತ್ತಾರೆ. ಆದರೆ ಶಾಸ್ತ್ರಾರ್ಥದ ವಾಕ್ಯಾರ್ಥ ಆರಂಭಿಸಿದರೆ ಎಷ್ಟು ಹೊತ್ತಾದರೂ ನಿದ್ದೆ ಇಲ್ಲ. ರಾತ್ರಿ ಮಲಗಿ ಮಧ್ಯೆ ಎಚ್ಚರಿಕೆ ಆಯಿತೆಂದರೆ ಎದ್ದು ಗ್ರಂಥಾವ ಲೋಕನ ನಡೆಸುತ್ತಾರೆ.
- ಶ್ರೀ ವಿಶ್ವಪ್ರಿಯತೀರ್ಥರು ಅದಮಾರುಮಠ
('ಪರಮಗೌರವ' ದಲ್ಲಿ)
ಪೂಜ್ಯತೆಯ ಪ್ರತಿರೂಪ
ಬಹುಜನರು ಕಂಡಂತೆ ನಮ್ಮ ದೃಷ್ಟಿಯಲ್ಲಿ ಶ್ರೀಗಳು ಯಾವ ರಾಸಾಯನಿಕ ಕ್ರಿಯೆಗೂ, ವಿಕ್ರಿಯೆಗೊ ಒಳಪಡದ ಅಪ್ಪಟ ಚಿನ್ನ, ಪೂಜ್ಯತೆಯ ಪ್ರತಿರೂಪ.
- ಶ್ರೀ ಸುಗುಣೇಂದ್ರತೀರ್ಥರು, ಪುತ್ತಿಗೆಮಠ
(ಶ್ರೀಪಾದರ ೭೫ನೇ ಹುಟ್ಟುಹಬ್ಬದ ಸಂದರ್ಭದಲ್ಲಿ)

ವಯಮೇವ ಸಾಕ್ಷಿಣಃ
ಮಧ್ವಶಾಸ್ತ್ರದ ಪಾಠಪ್ರವಚನಗಳನ್ನು ಅನನ್ಯ ನಿಷ್ಟೆಯಿಂದ ನಡೆಸಿದಲ್ಲಿ ಭಗವಂತನು ಪೂರ್ಣಾನುಗ್ರಹವನ್ನು ಕರುಣಿಸುವನೆಂಬುದಕ್ಕೆ ನಮ್ಮ ಗುರುಗಳು ಉತ್ತಮ ಸಾಕ್ಷಿ. ಅವರು ಹೇಳುತ್ತಿರಿತ್ತಾರೆ -ನಾವು ಮಧ್ವಶಾಸ್ತ್ರದ ಪಾಠಪ್ರವಚನಗಳನ್ನು ನಡೆಸಿದುದರ ಫಲವಾಗಿಯೇ ಭಗವಂತ ನಮಗೆ ಉಡುಪಿ ಶ್ರೀಕೃಷ್ಣನ ಪೂಜೆಯ ಸೌಭಾಗ್ಯವನ್ನು ಅನುಗ್ರಹಿಸಿದ. ಆದ್ದರಿಂದ ಮಧ್ವಶಾಸ್ತ್ರದ ಪಾಠಪ್ರವಚನಗಳಿಂದ ಭಗವಂತ ಎಷ್ಟುಬೇಗ ಒಲಿಯುವನೆಂಬುದಕ್ಕೆ 'ವಯಮೇವ ಸಾಕ್ಷಿಣಃ' - ನಾವೇ ಉತ್ತಮ ಸಾಕ್ಷಿಗಳಾಗಿದ್ದೇವೆ ಎಂದು
- ಶ್ರೀ ವಿದ್ಯಾಧೀಶತೀರ್ಥರು, ಪಲಿಮಾರಿಮಠ
(ಶ್ರೀರಂಗಕ್ಷೇತ್ರದಲ್ಲಿ ನಡೆದ ಶ್ರೀಪಾದರ ಸಹಸ್ರಚಂದ್ರದರ್ಶನಶಾಂತಿಯ ಸಂದರ್ಭದಲ್ಲಿ)
ಭೀಷ್ಮ
'ಅನ್ನಂ ನ ನಿಂದ್ಯಾತ್ ತದ್ ವ್ರತಮ್', 'ಅನ್ನಂ ಬಹು ಕುರ್ವೀತ ತದ್ ವ್ರತಮ್' ಎಂಬ ಉಪನಿಷತ್ತು ವಿಧಿಸಿರುವ ಈ ಎರಡೂ ವ್ರತಗಳನ್ನು ಕಟ್ಟುನಿಟ್ಟಾಗಿ ಜೀವನದುದ್ದಕ್ಕೂ ಪಾಲಿಸಿಕೊಂಡುಬಂದು, ಅಂತಹ ಭಯಂಕರ ವ್ರತಗಳಿಗಾಗಿ ಭೀಷ್ಮ ಎಂದೇ ಕರೆಸಿಕೊಳ್ಳಲು ಯೋಗ್ಯ ರಾದವರು ನಮ್ಮ ಗುರುಗಳು
- ಶ್ರೀ ವಿದ್ಯೇಶತೀರ್ಥರು, ಭಂಡಾರಕೇರಿಮಠ
(ಪೀಠಾರೋಹಣ ಅಮೃತೋತ್ಸವದ ಸಂದರ್ಭದಲ್ಲಿ)
ವಿದ್ಯೆಯಿಂದ ಮಾನ್ಯರು
ವಿದ್ಯಾರ್ಥಿಗಳಿಗೆ ವಿದ್ವಾಂಸರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಿದ್ದ ವಿದ್ಯಾಮಾನ್ಯರು ತಾವು ವಿದ್ಯೆಯಿಂದಾಗಿ ಮಾನ್ಯರಾಗಿದ್ದುದಲ್ಲದೆ, ವಿದ್ಯೆಗೆ ಮಾನ್ಯತೆಯನ್ನು ಸಲ್ಲಿಸಿತ್ತಿದ್ದರು
- ಶ್ರೀ ವಿಶ್ವಪ್ರಸನ್ನತೀರ್ಥರು, ಪೇಜಾವರಮಠ
(ಶ್ರೀಪಾದರ ಆರಾಧನಾ ಮಹೋತ್ಸವದಲ್ಲಿ)
ಅಕ್ಷಯ ಜ್ಞಾನಮೂರ್ತಿಗಳು
ಮಧ್ವಸಿದ್ಧಾಂತದ ಪ್ರಚಾರದಲ್ಲಿ ಸದಾ ನಿರತರಾಗಿದ್ದ ಶ್ರೀ ವಿದ್ಯಾಮಾನ್ಯರು ಅಕ್ಷಯ ಜ್ಞಾನಮೂರ್ತಿಗಳು
- ಶ್ರೀ ಲಕ್ಷ್ಮೀವರತೀರ್ಥರು, ಶೀರೂರುಮಠ
(ಶ್ರೀಪಾದರ ಆರಾಧನಾ ಮಹೋತ್ಸವದಲ್ಲಿ)
ಶ್ರೀರಾಮನ ಆದರ್ಶ
ಪಲಿಮಾರುಮಠದ ಶ್ರೀರಾಮಚಂದ್ರನ ಆರಾಧಕರಾಗಿದ್ದ ಶ್ರೀಪಾದರು ಶ್ರೀರಾಮಚಂದ್ರನ ಆದರ್ಶಗಳನ್ನು ಪಾಲಿಸುತ್ತಿದ್ದ ಯತಿಗಳು
- ಶ್ರೀ ರಘುಮಾನ್ಯತೀರ್ಥರು, ಭೀಮನಕಟ್ಟೆಮಠ
(ಶ್ರೀಪಾದರ ಆರಾಧನಾ ಮಹೋತ್ಸವದಲ್ಲಿ)
ಸದಾಚಾರನಿಷ್ಠೆ
ಆ ಮಾಗಿದ ವಯಸ್ಸಿನಲ್ಲಿ ಶ್ರೀಪಾದರು ಬೆಳಗಿನ ಜಾವ ಬೆಂಗಳೂರಿನ ಚಳಿಯಲ್ಲಿ ಮಠದ ಸರೋವರದಲ್ಲಿ ಸ್ನಾನಮಾಡುತ್ತಿದ್ದರು. ಶ್ರೀಪಾದರ ಸದಾಚಾರ ನಿಷ್ಟೆಯನ್ನು ಕಂಡು ಆಶ್ಚರ್ಯಚಕಿತನಾಗಿದ್ದೆ
- ಶ್ರೀ ವಿದ್ಯಾವಲ್ಲಭತೀರ್ಥರು, ಕಾಣಿಯೂರುಮಠ
(ಶ್ರೀಪಾದರಿಗೆ ಚರಮಾಂಜಲಿಯನ್ನು ಅರ್ಪಿಸಿತ್ತ)
ಸಾರ್ಥಕಜೀವನ
ಪಾಠಪ್ರವಚನ, ಜಪಪೂಜಾನುಷ್ಠಾನ, ವಿದ್ಯಾರ್ಥಿಗಳ-ವಿದ್ವಾಂಸರ ಸನ್ಮಾನ, ಪರೀಕ್ಷೆ - ಮುಂತಾದ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳಿಂದ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಂಡವರು ಶ್ರೀ ವಿದ್ಯಾಮಾನ್ಯತೀರ್ಥರು
- ಶ್ರೀ ವಿಜ್ಞಾನನಿಧಿತೀರ್ಥರು, ಮುಳಬಾಗಿಲುಮಠ
(ಪೀಠಾರೋಹಣ ಅಮೃತೋತ್ಸವದಲ್ಲಿ)
ಹರಿಗುರುಗಳ ಸೇವೆ
ಶ್ರೀಹರಿಗುರುಗಳ ಸೇವೆಮಾಡಿ ಜೀವನವನ್ನು ಸಾರ್ಥಕಪಡಿಸಿಕೊಂಡಿರುವವರು ಶ್ರೀ ವಿದ್ಯಾಮಾನ್ಯತೀರ್ಥರು
- ಶ್ರೀ ಸುಶಮೀಂದ್ರತೀರ್ಥರು, ರಾಘವೇಂದ್ರಮಠ
(ಪೀಠಾರೋಹಣ ಅಮೃತೋತ್ಸವ ಸಂದರ್ಭದಲ್ಲಿ)
ಏತೇ ಮಹಾಪ್ರಾಜ್ಞಾಃ
ಏತೇ ಮಹಾಪ್ರಾಜ್ಞಾ ಇತಿ ಕರ್ಣಾಕರ್ಣಿಕತಯಾ ಪೂರ್ವಂ ಶ್ರುತಮಾಸೀತ್ | ಸಂಪ್ರತಿ ತಥ್ಯಮೇವೇದಮ್ ಇತಿ ವಯಂ ಅನ್ವಭವಾಮ |
- ಕಾಮಕೋಟಿ ಪೀಠಾಧೀಶ್ವರಾಃ ಶ್ರೀ ಶಂಕರಾಚಾರ್ಯಾಃ
(೧೯೫೯ರಲ್ಲಿ ಕಾಂಚಿಯಲ್ಲಿ ಕಾಮಕೋಟಿ ಶ್ರೀ ಶಂಕರಾಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ವಿದ್ವತ್ ಸಭೆಯಲ್ಲಿ ಜಯಿಸಿದ ಸಂದರ್ಭದಲ್ಲಿ)
ದಾರಿದೀಪ
ಶ್ರೀಪಾದರಲ್ಲಿದ್ದ ಅಗಾಧವಾದ ಶಕ್ತಿಯ ಕೇಂದ್ರ ಅನೇಕರಿಗೆ ದಾರಿದೀಪ ವಾಗಿತ್ತು
- ಶ್ರೀ ಬನ್ನಂಜೆ ರಾಘವೇಂದ್ರತೀರ್ಥರು
(ಆರಾಧನೆಯ ಸಂದರ್ಭ್ದಲ್ಲಿ)
ಮೇರುವ್ಯಕ್ತಿತ್ವ
ಪಾಂಡಿತ್ಯದಿಂದ ಮೇರುವ್ಯಕ್ತಿತ್ವ ಹೊಂದಿ ಅಪಾರ ಶಿಷ್ಯಸಂಪತ್ತನ್ನು ಪಡೆದವರು ಶ್ರೀಪಾದರು
-ಶ್ರೀ ವಿದ್ಯಾಪ್ರಸನ್ನತೀರ್ಥರು, ಸುಬ್ರಹ್ಮಣ್ಯಮಠ
(ಚರಮಾಂಜಲಿಯನ್ನು ಅರ್ಪಿಸುತ್ತ)
ಸಾಹಿತ್ಯಸೇವೆಯ ಕೈಂಕರ್ಯ
ಪೂಜ್ಯರು ಕನ್ನಡ ಶಾಸ್ತ್ರೀಯ ಹಾಗೂ ಸಾಧನೆಗಳಿಗೆ ಸಂಬಂಧಿಸಿದ ಅನೇಕ ವಿದ್ವತ್ ಪೂರ್ಣ ಕೃತಿಗಳನ್ನು ರಚಿಸಿ ಸಾಹಿತ್ಯಸೇವೆಯ ಕೈಂಕರ್ಯದಲ್ಲಿ  ತಮ್ಮನ್ನು ತೊಡಗಿಸಿಕೊಂಡಿದ್ದರು
-ಶ್ರೀ ಬಾಲಗಂಗಾಧರಸ್ವಾಮಿಗಳು, ಆದಿಚುಂಚನಗಿರಿ
(ಚರಮಾಂಜಲಿಯನ್ನು ಅರ್ಪಿಸುತ್ತ)
ಒಲಸಿಕೊಂಡವರು
ಪೂಜ್ಯ ಪಲಿಮಾರು ಶ್ರೀಗಳವರು ೩೦ನೇ ಶತಮಾನದಲ್ಲಿ ಶ್ರೇಷ್ಠ ಜ್ಞಾನಿಗಳಾಗಿದ್ದು ತಮ್ಮ ತಪಸ್ಸಿನಿಂದ ಭಗವಂತನನ್ನು ಒಲಿಸಿಕೊಂಡವರು
-ಶ್ರೀ ವೀರೇಂದ್ರ ಹೆಗ್ಗಡೆ, ಧರ್ಮಸ್ಠಳ
(ಚರಮಾಂಜಲಿಯನ್ನು ಅರ್ಪಿಸಿತ್ತ)
ನಾವೇ ಸಾಕ್ಷಿ

ಪಲಿಮಾರು-ಭಂಡಾರಕೆರೆ ಉಭಯ ಮಠಾದೀಶ
ರಾದ ಸದ್ವಿದ್ಯೆಯಿಂದ ಮಾನ್ಯರಾದ ಶ್ರೀ ವಿದ್ಯಾಮಾನ್ಯತೀರ್ಥರು ನಮ್ಮ ಸ್ವಾಮಿಗಳಿಗೆ (ಶ್ರೀ ಸತ್ಯಧ್ಯಾನತೀರ್ಥರಿಗೆ) ವಿದ್ಯಾ,ಬುದ್ಧಿ, ಮೇಧಾಶಕ್ತಿ, ಧಾರಣ, ವಾದಪಾಟವ ಇತ್ಯಾದಿಗಳಿಂದ ಅತ್ಯಂತ ಮೆಚ್ಚುಗೆಯ ಶಿಷ್ಯರಾಗಿದ್ದರು. ಇದಕ್ಕೆ ನಾನು, ನನ್ನಂತೆ ಅನೇಕ ಜನರು ಸಾಕ್ಷಿಯಾಗಿದ್ದೆವೆ.
- ಮಾಹುಲಿ ಗೋಪಾಲಾಚರ್ಯ
(ಶ್ರೀಪಾದರ ೧೨ನೇ ಸುಧಾಮಂಗಳದ ಸ್ಮರಣಸಂಚಿಕೆಯಲ್ಲಿ)
ಹರಿದುಬಂದಿವೆ
ಔದಾರ್ಯ, ಪಾಂಡಿತ್ಯ, ತಪಸ್ಸು, ವೈರಾಗ್ಯ ಮೊದಲಾದ ಗುಣಗಳು ವಿದ್ಯಾ ಗುರುಗಳಾದ ಶ್ರೀ ಸತ್ಯಧ್ಯಾನತೀರ್ಥರಿಂದ ಶ್ರೀ ವಿದ್ಯಾಮಾನ್ಯರಲ್ಲಿ ಹರಿದುಬಂದಿದೆ ಎಂದು ಹೇಳುವಲ್ಲಿ ಏನೂ ಅತಿಶಯೋಕ್ತಿ ಇರಲಾರದು
- ಬೈಲೂರು ಸೀತಾರಾಮ ಉಡುಪರು
(ಶ್ರೀಪಾದರ ವಜ್ರಮಹೋತ್ಸವದ ಸ್ಮರಣಸಂಚಿಕೆಯಲ್ಲಿ)
ಶ್ರೀ ವಿಬುಧಪ್ರಿಯರ ಪ್ರಸಾದ
ಆಶ್ರಮದೀಕ್ಷೆಯನ್ನಿತ್ತು, ವಿದ್ಯಾಮಾನ್ಯತೀರ್ಥರೆಂದು ನಾಮಕರಣಮಾಡಿದ ಶ್ರೀ ವಿಬುಧಪ್ರಿಯತೀರ್ಥರು ತಮ್ಮ ಸನಿಹದಲ್ಲೇ ಇರಿಸಿಕೊಂಡು ಆಶ್ರಮದ ಸದಾಚಾರಕ್ರಮಗಳನ್ನು , ಪೂಜಾಕ್ರಮಗಳನ್ನು, ವಿದ್ಯೆಯನ್ನು ಬೋಧಿಸಿ ಆದರ್ಶ ಯತಿಗಳನ್ನಾಗಿ ಮಾಡಿದರು. ಭಂಡಾರಕೇರಿ ಮತ್ತು ಪಲಿಮಾರುಮಠದ ಒಡೆಯರಾದ ಶ್ರೀ ವಿದ್ಯಾಮಾನ್ಯತೀರ್ಥರ ಆಚಾರದಲ್ಲಿ ಅವರ ಉಪದೇಶದ ಕ್ರಮಗಳು ಇವೆ. ಪೂಜಾಕ್ರಮವಾಗಲೀ ಆಹ್ನೀಕದ ಕ್ರಮವಾಗಲೀ, ವಾಕ್ ಸರಣಿಯಾಗಲೀ, ಪಾಠಪ್ರವಚನವಾಗಲೀ ಎಲ್ಲವೂ ಆ ಗುರುಗಳ ಪ್ರಸಾದ
- ಅಡ್ಡೆ ವ್ಯಾಸಾಚಾರ್ಯರು
(ಶ್ರೀಪಾದರ ೧೨ನೇ ಸುಧಾಮಂಗಳದ ಸ್ಮೃತಿಸಂಚಿಕೆಯಲ್ಲಿ)
ಬಾಭಾತ್ಯಯಮ್
ಸತ್ಯಧ್ಯಾನಮುನೀಶಮೌಲಿಮುಕುಟಾಲ್ಲೋಕೇ ಗುರೂಣಾಂ ಗುರೋಃ | ವಿದ್ಯಾಭಾಗ್ಯಮುದಾರತಾಂ ವಿಭವಮಪ್ಯಾಸಾದ್ಯ ಬಾಭಾತ್ಯಯಮ್ ||
- ಗಲಗಲಿ ರಾಮಾಚಾರ್ಯ
(ತತ್ವವಾದ ಮಾಸಿಕದಲ್ಲಿ)
ವಿಷ್ಣುತೀರ್ಥರೇ ಮರಳಿ ಬಂದಂತೆ
ಆಚಾರ್ಯರ ಕಾಲದಲ್ಲಿ ನಡೆದ ಕತೆ. ಭಾಗವತಸಂಪ್ರದಾಯದ ಸುಬ್ರಹ್ಮಣ್ಯಮಠ ಆಚಾರ್ಯರ ವಶಬಂದಾಗ ಅವರು ಅದನ್ನು ವಿಷ್ಣುತೀರ್ಥರ ಕೈಗೆ ಒಪ್ಪಿಸಿದರು. ಅಲ್ಲಿಂದ ಕೃಷ್ಣಪೂಜೆಗೆ ಅಷ್ಟಯತಿಗಳನ್ನು ನಿಯಮಿಸುವಾಗ ಈ ಚತುರ್ದ್ವಂದ್ವಮಾಲಿಕೆಯಲ್ಲಿ ಅವರನ್ನು ಸೇರಿಸಿದರು. ಭಂಡಾರಕೇರಿ ಮಠಾದೀಶರಾದ ಶ್ರೀ ವಿದ್ಯಾಮಾನ್ಯತೀರ್ಥರು ಪಲಿಮಾರುಮಠದ ಪೀಠವನ್ನೇರಿದ ಸಂದರ್ಭದಲ್ಲಿ ಸಂಪ್ರದಾಯಜ್ಞರಾದ ವಿದ್ವಾಂಸರು, ಹಿರಿಯರು ಸುಬ್ರಹ್ಮಣ್ಯಮಠಾಧೀಶರಾದ ವಿಷ್ಣುತೀರ್ಥರು ಸೋದೆಮಠದ ಮೂಲಯತಿಗಳಾದ ಸಂದರ್ಭವನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
- ಬನ್ನಂಜೆ ಗೋವಿಂದಾಚಾರ್ಯರು
(ಶ್ರೀಪಾದರು ಪಲಿಮಾರು ಮಠಾಧೀಶರಾದ ಸಂದರ್ಭದಲ್ಲಿಯ ಸ್ಮರಣಸಂಚಿಕೆಯಲ್ಲಿ)
ಜಯತಾತ್ ಮಧ್ವರಾದ್ಧಾಂತಸಂವರ್ಧಿನೀ
ವಿದ್ಯಾಮಾನ್ಯಯತೀಂದ್ರಸ್ಯ ಹೃದಯಾವಾಲಸಂಭವಾ | ಜಯತಾನ್ಮಧ್ವರಾದ್ಧಾಂತಸಂವರ್ಧನ್ಯಭಿಧಾ ಸಭಾ ||
- ಪಿ.ಕೆ. ಹರಿದಾಸಾಚಾರ್ಯ
(ಸಭೆಯ ಅಧಿವೇಶನಗಳ ವರದಿಯ ಕೊನೆಯಲ್ಲಿ)
ಎರಡು ದಾಖಲೆಗಳು
ಶ್ರೀಮದಾಚಾರ್ಯರ ಸಾಕ್ಷಾದನುಜರಾದ ಶ್ರೀ ವಿಷ್ಣುತೀರ್ಥರ ಆನಂತರ ಉಭಯ ಪೀಠಾಧೀಶರೆನ್ನಿಸಿರುವ ಅಸಮಾನ್ಯ ಹಿರಿಮೆ ವಿದ್ಯಾಮಾನ್ಯ ತೀರ್ಥರದು . ಇದರೊಂದಿಗೆ ಪ್ರಯಾಗ ಶ್ರೀ ಮಾಧ್ವಪೀಠವೆಂಬ ನೂತನ ಪೀಠವನ್ನು ಸ್ಠಾಪಿಸಿರುವ ದಾಖಲೆಯೂ ಇವರದ್ದಾಗಿದೆ
- ಡಾ| ವ್ಯಾಸನಕೆರೆ ಪ್ರಭಂಜನಾಚಾರ್ಯ
(ವಜ್ರಮಹೋತ್ಸವದ ಸ್ಮರಣಸಂಚಿಕೆಯಲ್ಲಿ)
ನಿಚ್ಚಳ ದೃಷ್ಟಾಂತ
ಭಂಡಾರಕೇರಿ ಶ್ರೀಗಳವರು ಎಂದೇ ಪ್ರಸಿದ್ಧರಾಗಿದ್ದ ಶ್ರೀ ವಿದ್ಯಾಮಾನ್ಯ ಶ್ರೀಗಳವರು ಶ್ರೀ ಪಲಿಮಾರುಮಠಕ್ಕೆ ಸ್ವಾಮಿಗಳಾಗಿ ಬಂದುದು ಭಗವಂತನ ಅಚಿಂತ್ಯ ಅಘಟಿತ ಘಟನಾಶಕ್ತಿಗೆ ಮತ್ತು 'ಕಿಮಲಭ್ಯಂ ಭಗವತಿ ಪ್ರಸನ್ನೇ ಶ್ರೀನಿಕೇತನೇ' ಎಂಬ ಮಾತಿಗೆ ನಿಚ್ಚಳ ದೃಷ್ಟಾಂತವಾಗಿದೆ
- ನರಸಿಂಹಾಚಾರ್ಯ ಕೊರಲಹಳ್ಳಿ
(ದ್ವಿತೀಯ ಪರ್ಯಾಯದ ಕೊನೆಯಲ್ಲಿ ಪ್ರಕಟಗೊಂಡ 'ಪರಮ ಗೌರವ' ದಲ್ಲಿ
ಪಾಠಕ್ರಮ

ಶ್ರೀಪಾದರು ಮಣಿಮಂಜರೀ, ತೀರ್ಥಪ್ರಬಂಧಗಳಿಂದ ಆರಂಭಿಸಿ ತರ್ಕತಾಂಡವದ ವರೆಗೂ ಪಾಠ ಹೇಳುತ್ತಾರೆ. ತರ್ಕತಾಂಡವ ಪಾಠವನ್ನು ಹೇಳುವುದರಲ್ಲಿ ಎಷ್ಟು ಅಚ್ಚುಕಟ್ಟು ಇರುತ್ತದೆಯೋ ತೀರ್ಥಪ್ರಭಂಧವನ್ನು ಹೇಳುವುದರಲ್ಲಿಯೂ ಅಷ್ಟೇ ಇರುತ್ತದೆ
- ಶೇಷಗಿರಿ ಆಚಾರ್ಯ
('ತಾಪಸ' ಸ್ಮರಣಸಂಚಿಕೆಯಲ್ಲಿ)
ಪ್ರಭಾವ
ಎಂತಹ ನಾಸ್ತಿಕನೂ ಇವರೆದುರಿನಲ್ಲಿ ಇರುವಷ್ಟು ಕಾಲವಾದರೂ ಆಸ್ತಿಕ್ಯ ಬುದ್ಧಿಯುಳ್ಳವನಾಗುತ್ತಾನೆ
- ಎಂ. ರಾಜಗೋಪಾಲಾಚಾರ್ಯ
(ಆದರ್ಶ ಗುರುಕುಲದ ಪರಿಚಯಾತ್ಮಕ ಕೃತಿಯಲ್ಲಿ)
ಉಜ್ಜಹಾರ ಹರಿಃ ಸ್ವಯಮ್
ಅಚ್ಛಿದ್ರಸೇವನಾದ್ಯಸ್ಯ ಸಂತುಷ್ಟೋ ದೇವಕೀಸುತಃ | ಸ್ವೀಯಾಂ ಸಪರ್ಯಾಮ್ ದತ್ವಾಸ್ಮೈ ಉಜ್ಜಹಾರ ಹರಿಃ ಸ್ವಯಮ್ ||
- ಕೇಕುಡ ರಾಮಕೃಷ್ಣಾಚಾರ್ಯ
(ಶ್ರೀ ವಿಶ್ವೇಶ ಗುರುಗುಣಸ್ತವನದಲ್ಲಿ)
ಔದಾರ್ಯ
ತೀರ್ಥಕ್ಷೇತ್ರದಲ್ಲೊಂದು ಮಂದಿರವಿತ್ತು. ವಿಸ್ತಾರವಾದ, ಸುಸಜ್ಜಿತವಾದ ಯಾತ್ರಿನಿವಾಸ ಅದು. ಆದರೆ ನಿರ್ಮಿಸಿದವರು ನಿಷ್ಕಿಂಚನರು. ಸಾಲ ಪಡೆದು ನಿರ್ಮಿಸಿದ್ದರು. ತೀರಿಸಲಾಗಲಿಲ್ಲ . ವಿದ್ಯಾಮಾನ್ಯರಿಗೆ ತಿಳಿಸಿದರು. 'ಎಷ್ಟು ಬೇಕು?' ಎಂದು ಕೇಳಿದರು ಶ್ರೀಗಳವರು. 'ಏಳುಲಕ್ಷ' ಎಂದರು. ಕೂಡಲೆ ಹಣ ಮಂಜೂರು. ತಾನು ಮತ್ತೆ ಅಲ್ಲಿಗೆ ಹೋಗಿ ನೋಡಬಹುದೆಂಬ ನಿರೀಕ್ಷೆ ಶ್ರೀಗಳವರಿಗಿದ್ದಿರಲಿಕ್ಕಿಲ್ಲ. 'ಧಾರ್ಮಿಕ ಸಮಾಜಕ್ಕೆ ಉಪಯೋಗವಾಗಲಿ ' ಎಂಬ ಔದಾರ್ಯ ಬಿಟ್ಟರೆ ಸ್ವಾರ್ಥದ ಸೋಂಕೂ ಇಲ್ಲಿಲ್ಲ
- ಎ. ಹರದಾಸ ಭಟ್ಟ
('ತಾಪಸ'ದಲ್ಲಿ)
ಪ್ರಸಿದ್ಧಿ ಮಾಡಿದವರು
'ತಾತ್ಪರ್ಯನಿರ್ಣಯಪ್ರಶ್ನೆ' ಯೆಂದೇ ಹಿಂದಿನಿಂದಲೂ ನಮ್ಮಲ್ಲಿ ಪ್ರಸಿದ್ಧಿ ಇದೆ. ಆದರೆ ಅದರ ಪುಣ್ಯ ಬಳಕೆಯಾಗಬೇಕಾದರೆ ಸಾಧಕರಲ್ಲಿ ದೇವರ, ಆಚಾರ್ಯ ಮಧ್ವರ ವಿಶೇಷ ಅನುಗ್ರಹವಿರಬೇಕು. ಪ್ರಚಲಿತ ವರ್ತಮಾನದಲ್ಲಿ ಇದನ್ನು ಸಮರ್ಥವಾಗಿ ಬಳಸಿ ಲೋಕಕ್ಕೆ ತಾತ್ಪರ್ಯನಿರ್ಣಯ ಪ್ರಶ್ನೆಯನ್ನು ಪ್ರಸಿದ್ಧಿ ಮಾಡಿದವರು ನಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರು
- ಬಲರಾಮ ಭಟ್
('ತಾಪಸ'ದಲ್ಲಿ)

ತೊಡಗಿಸಿಕೊಂಡವರು
'ಯಾ ವಿದ್ಯಾ ಸಾ ವಿಮುಕ್ತಯೇ...' ಎಂದಂತೆ ಅಧ್ಯಾತ್ಮವಿದ್ಯೆಗಾಗಿಯೇ ತನ್ನನ್ನು ತೊಡಗಿಸಿಕೊಂಡವರು ಶ್ರೀ ವಿದ್ಯಾಮಾನ್ಯತೀರ್ಥರು
- ರಾಮನಾಥ ಆಚಾರ್ಯ
('ತಾಪಸ'ದಲ್ಲಿ)
ಕಣ್ಣು ಹಾಯಿಸಬೇಕು
ಸಾಧನಾದೇಹದಿಂದ ಹೇಗೆ ಸಾಧನೆ ನಡೆಸಬೇಕೆಂಬುದಕ್ಕೆ ಉತ್ತರದೊರಕಬೇಕಾದರೆ  ಶ್ರೀ ವಿದ್ಯಾಮಾನ್ಯತೀರ್ಥರ ಜೀವನದೆಡೆಗೊಮ್ಮೆ ಕಣ್ಣು ಹಾಯಿಸಬೇಕು
- ಅನಂತಕೃಷ್ಣಾಚರ್ಯ
('ತಾಪಸ' ದಲ್ಲಿ)
ದೀಪಸ್ತಂಭ
ಶ್ರೀಪಾದರ ಅನುಭಾವದ ಬದುಕು ಆದರ್ಶಗಳತವರಾಗಿದೆ. ಕರ್ತವ್ಯನಿಷ್ಠೆ , ಪೂರ್ಣತೆಗಳಿಂದ ಕಂಗೊಳಿಸಿತ್ತಿದೆ. ಆದರ್ಶಗಳ ಕಡಲ ಪಯಣಿಗನಿಗೆ ಅದೊಂದು ದೀಪಸ್ತಂಭ
- ಎಂ.ವಿ.ಆನಂದತೀರ್ಥ  ನಾಗಸಂಪಿಗೆ
('ತಾಪಸ' ದಲ್ಲಿ)
ಸನ್ನಿಧಾನ
ಯದಾಯದಾ ಹಿ ಧರ್ಮಸ್ಯೇತ್ಯುಕ್ತವಾನ್ ಯಾದವೇಶ್ವರಃ | ತೇಜಸಾ ಸಂಸ್ಠಿತೋ ಯೇಷು ತಾನ್ನಮಸ್ಯೇ ಗುರೂನ್ ಮಮ ||
- ಜಿ. ಗುರುವೇಂಕಟಾಚಾರ್ಯ
('ತಾಪಸ' ದಲ್ಲಿ)
ಅಲ್ಲಿ ಪಂಡಿತರು
ಶ್ರೀ ವಿದ್ಯಾಮಾನ್ಯತೀರ್ಥರಿದ್ದಾರೆಂದರೆ ಅವರ ಸುತ್ತು ಪಂಡಿತರು ಇದ್ದೇ ಇರುತ್ತಾರೆ. ಮಾಧ್ವಪಂಡಿತರೇ ಆಗಬೇಕಿಲ್ಲ
-ಕಡಿಯಾಳಿ ವಾದಿರಾಜ ಉಪಾಧ್ಯಾಯ
('ಸುವರ್ಣಸಭಾ' ದಲ್ಲಿ)
ಅನ್ಯಾದೃಶ
ಮಾಧ್ವಶಾಸ್ತ್ರದ ಸಂರಕ್ಷಣೆಗಾಗಿ ಶ್ರೀಗಳವರ ಪ್ರಯತ್ನ ಅನ್ಯಾದೃಶವಾಗಿದೆ
- ಹರಿದಾಸ ಉಪಾಧ್ಯಾಯ
(ವಜ್ರಮಹೋತ್ಸವ ಸ್ಮರಣಸಂಚಿಕೆಯಲ್ಲಿ)
ನಿಷ್ಠೆ ಹೆಚ್ಚುತ್ತಿತ್ತು
ಕೆಲವೊಮ್ಮೆ ಶ್ರೀಗಳವರು ತಮ್ಮ ವಿರಾಮದ ವೇಳೆಯಲ್ಲಿ ''ನಿಮ್ಮ ವೈದಿಕವೇಷವನ್ನು ಕಂಡರೆ ನಮಗೆ ಬಹಳ ಆನಂದವಾಗುತ್ತದೆ'' ಎನ್ನುತ್ತಿದ್ದರು. ಅದನ್ನು ಕೇಳಿ ನಮ್ಮ ನಿಷ್ಠೆ ಇನ್ನೂ ಹೆಚ್ಚುತ್ತಿತ್ತು

- ಭದ್ರಗಿರಿ ಅಚ್ಯುತದಾಸರು
(ವಜ್ರಮಹೋತ್ಸವ ಸ್ಮರಣಸಂಚಿಕೆಯಲ್ಲಿ)

ಅಸ್ಮತ್ಪಿತರಃ ದಿವಂಗತಾಃ
ಅಹಂ ಧನ್ಯೋಸ್ಮಿ | ಅಸ್ಮತ್ಪಿತರಃ ಸರ್ವೇ ದಿವಂಗತಾಃ ಅತ್ರಭವತಾಂ ಸಮಾಗಮೇನ |
- ಕಾವೇರಿ ಸುಬ್ರಹ್ಮಣ್ಯ ಶಾಸ್ತ್ರಿಗಳು
( ೪.೬.೧೯೬೯ ರಂದು ಮದ್ರಾಸಿನಲ್ಲಿ ಶ್ರೀಪಾದರ ಭವಿಷ್ಯವನ್ನು ನುಡಿದ ಸಂದರ್ಭದಲ್ಲಿ )
ಮಾಧ್ವಸಮಾಜಕ್ಕೆ ಹೊಸ ಚೈತನ್ಯ
ಪಲಿಮಾರು ಶ್ರೀಪಾದರು ಮಾಧ್ವರಷ್ಟೇ ಅಲ್ಲ ಭಾರತದ ಇತರ ಪಂಡಿತರೂ ವಿದ್ವಾಂಸರೆಂದು ಪರಿಗಣಿಸಿದವರು. ಇವರು ಪರ್ಯಾಯ ಸ್ವಾಮಿಯಾದರೆ ರೂಢಿ ಅಥವಾ ಸಂಪ್ರದಾಯ ಅಡ್ಡಿಯಾಗಲಾರದು. ಬದಲಾಗಿ ಇದರಿಂದ ಮಾಧ್ವಸಮಾಜಕ್ಕೆ ಹೊಸ ಚೈತನ್ಯ, ಸತ್ವ ಉಂಟಾಗಿದೆ
- ನ್ಯಾಯಮೂರ್ತಿ ಎನ್.  ಎಸ್. ಸಂಗೊಳ್ಳಿ
( ೩೧.೧೦.೧೯೮೦ ರಂದು ಘೋಷಿಸಿದ ಶ್ರೀಪಾದರ ಪಲಿಮಾರು ಮಠಾಧಿಪತ್ಯ ಕಾನೂನುಸಮ್ಮತ ಎಂದು  ಸಿವಿಲ್  ಜಡ್ಜ್  ಕೋರ್ಟಿನ ತೀರ್ಪಿನಲ್ಲಿ)
ಅಸಾಮಾನ್ಯ ಹಾಗೂ ಸರ್ವಮಾನ್ಯ
ಶ್ರೀ ವಿದ್ಯಾಮಾನ್ಯತೀರ್ಥರ ಪಾಂಡಿತ್ಯ, ವೈಷ್ಣವದೀಕ್ಷೆ, ಮಾಧ್ವಪ್ರಸಾರಾಕಾಂಕ್ಷೆ, ಧರ್ಮನಿಷ್ಠೆ, ಸೌಜನ್ಯ, ಪರಿಶುದ್ಧತೆಗಳು ಅಸಾಮಾನ್ಯ ಹಾಗೂ ಸರ್ವಮಾನ್ಯ ಚರಿತಾರ್ಹ
- ವೈ. ಉಮಾನಾಥ ಶಣೈ
('ಪರಮಗೌರವ' ದಲ್ಲಿ)
ಕಠೋರರಾದ ಶ್ರೀಗಳ್ವರು ಸಹೃದಯರೂ ಹೌದು
ಶ್ರೀಪಾದರು ಲಕ್ಷ ರೂಪಾಯಿಯ ಕೊಡುಗೆಯ ಸವಾಲುಗಳನ್ನೂ ಪ್ರತಿವಾದಿಗಳಿಗೆ ನೀಡಿದಂಥ ಧೀಮಂತ ಧೀರರು. ವಾಕ್ಯಾರ್ಥದಲ್ಲಿ ಕಠೋರರಾದ ಶ್ರೀಗಳವರು ಪರಮತೀಯ ವಿದ್ವಾಂಸರನ್ನು ಪ್ರೀತಿಯಿಂದ ಮಾತನಾಡಿಸಿ, ಸಂಭಾವಿಸಿ, ಆದರಿಸುವ ಸಹೃದಯರೂ ಆಗಿದ್ದರು
- ರಾಮವಿಟ್ಠಲಾಚಾರ್ಯ
('ತಾಪಸ' ದಲ್ಲಿ)
ತಪಸ್ಸಿನ ಲಕ್ಷಣಗಳ ಸಮನ್ವಯ
ತಪಸ್ಸೆಂಬುದಕ್ಕೆ ಏನೇನು ಲಕ್ಷಣಗಳಿವೆಯೋ ಅದನ್ನೆಲ್ಲಾ ಶ್ರೀ ವಿದ್ಯಾಮಾನ್ಯತೀರ್ಥರಲ್ಲಿ ಸಮನ್ವಯಮಾಡಲು ಸಾಧ್ಯವೆಂಬುದಷ್ಟೇ ಅಲ್ಲ, ಆ ಶಬ್ಧಕ್ಕೆ ಏನಾದರೂ ಹೊಸ ವ್ಯಾಖ್ಯೆಯನ್ನು ಮಾಡಬೇಕೆಂದಿರುವವರು ಶ್ರೀ ವಿದ್ಯಾಮಾನ್ಯತೀರ್ಥರ ಬದುಕನ್ನು ವಿಶ್ಲೇಷಿಸಿ ನೋಡಬೇಕು
- ಡಾ|| ಭಾರತೀರಮಣಾಚಾರ್ಯ
(ವಜ್ರಮಹೋತ್ಸವ ಸ್ಮರಣಸಂಚಿಕೆಯಲ್ಲಿ)
Sage of the age
Sage of the age and saint of the millennium
- Arulumallige Parthasarathy
('ತಾಪಸಿ' ದಲ್ಲಿ )
Vibhutipurusha
Vidyamanya Tirta Swamiji belongs to illustrious line of vibhutipurushas who have indefatigably sweated for the yogakshema of satvik souls
- Prof. G.V.Nadagouda
('ತಾಪಸ' ದಲ್ಲಿ)
Overwhelmed by his honesty
I am astounded by his great intelligence delighted by his innocent heart, wonderstruck by the depth of his knowledge overwhelmed by his honesty
- K.S. Venkatesh
('ತಾಪಸ' ದಲ್ಲಿ )
Venerable Guru
Sri Vidyamanya Tirtha is the most venerable Guru of our times true to his name Sri Vidyamanya
- V.R. Panchamukhi
('ತಾಪಸ' ದಲ್ಲಿ)

Much appreciated
The swamiji erudition and brilliance of exposition were much appreciated by the scholors assembled
- A Correspondent
(೧೯೫೬ ರಲ್ಲಿ ಕಾಂಚಿಯಲ್ಲಿ ವಿದ್ವತ್ ಸಭೆಯಲ್ಲಿ ಗೆದ್ದ ಸಂದರ್ಭದಲ್ಲಿ ಮದ್ರಾಸ್ ಪ್ರಕಟಣೆಯ ೨೯.೩.೫೬ ನೇ ಹಿದೂಪತ್ರಿಕೆಯಲ್ಲಿ )
Highly advanced spiritual life
He has been known through out Inda for leading a highly advaced spiritual life for inculcating the elevating doctrines of Hindu Religion and Philosophy amongest one and all
- The Times of India, 5.8.1961
Divine Powers
The Swami is also started to be endowed with divine powers
- Indian Express, 28.12.1961
ಸ್ವಾಚಾರ್ಯತೀರ್ಥಂ ತ್ವಿಹ ಸನ್ನಮಾಮಿ
ಸದ್ ದ್ವೈತವೀಥೀಪಥಿಕಾನ್ ಸಮರ್ಥಾನ್ ಸಂಭಾವಯಂತಂ ಶುಭಸಾಧುಭಾವೈಃ | ಧರ್ಮಾಥತತ್ತ್ವಂ ಸುಸಮಾದಿಶಂತಂ ಸ್ವಾಚಾರ್ಯತೀರ್ಥಂ ತ್ವಿಹ ಸನ್ನಮಾಮಿ ||
- ಅಖಿಲಭಾರತವರ್ಷೀಯ ಧರ್ಮಸಂಘಸದಸ್ಯಾಃ |
( ವಾರಾಣಸೀ , ೮.೧೨.೧೯೫೮)
ಅದ್ಭುತಂ ವೈದುಷ್ಯಮ್
ಭವತಾಮಾದರ್ಶಭೂತಮದ್ಭುತಂ ವೈದುಷ್ಯಂ ಶ್ರಾವಂ ಶ್ರಾವಂ ತದೇವ ಪುನರದ್ಯ ಪ್ರತ್ಯಕ್ಷಂ ದರ್ಶಂ ದರ್ಶಂ ಚಾಸ್ಮಾಕಂ ಸ್ವಾಂತಮಮಂದಾನಂದ ಸಂದೋಹಮಹೋದಧಾವುನ್ಮಜ್ಜನನಿಮಜ್ಜನಮನುಭವತೀತ್ಯತ್ರ ನಾಸ್ತಿ ಸಂಶೀತಿಲವೋಪಿ |
- ಕಾಶೀಪಂಡಿತಸಭಾಸದಸ್ಯಾಃ , ವಾರಾಣಸೀ
ಸಭಾಪ್ರತಿಷ್ಠಯಾ ಧನ್ಯವಾದಾರ್ಹಾಃ
ದ್ವೈತಸಿದ್ಧಾಂತಾಚಾರ್ಯಶ್ರೀಮನ್ಮಧ್ವಸ್ವಾಮಿಪಾದಾನಾಮಾವಿರ್ಭಾವ-ಸ್ಠಲ್ಯಾಂ ಉಡುಪೀನಗರ್ಯಾಂ 'ಮಾಧ್ವರಾದ್ಧಾಂತ ಸಂವರ್ಧಿನೀ ' ಸಭಾ ಪ್ರತಿಷ್ಠಯಾ ಸವಿಶೇಷಂ ಧನ್ಯವಾದಾರ್ಹಾ ಭವಂ ತಃ |
- ಶ್ರೀ ಚೈತನ್ಯಮಠಸ್ಯ ಸೇವಕಾಃ, ಕಲ್ಕತ್ತಾ
(ಕಲ್ಕತ್ತಕ್ಕೆ ಶ್ರೀಪಾದರು ಸಂಚಾರ ಕೈಗೊಂಡ ಸಂದರ್ಭದಲ್ಲಿ)
ಹಮ್ ವಿದ್ವಾನೋಂ ಕೇ ಆಶ್ರಯ
ಉಪಸ್ಠಿತ ವಿದ್ವಾನ್ ಸಮುದಾಯನೆ ಮಹಾರಾಜಶ್ರೀ ಕೇ ಅದ್ಭುತ ಧಾರಣಾಶಕ್ತಿ, ಸತತ ವಿದ್ಯಾ ಕಾ ಸಂಗ್, ಕಲ್ಪಕತಾ ಔರ್ ತಪೋನಿಷ್ಠಾ ಕೇ ಭೂರಿಭೂರಿ ಪ್ರಶಂಸಾ ಕರ್ ಕೇ ಹುಯಿ ಕಹಾಕಿ ಆಜ್ ಕಿ ವಷಣ್ಣ ಪರಿಸ್ಠಿತಿ ಮೇ ಭೀ ಆಪ್ ಜೈಸೆ ಆಚಾರ್ಯ ಹೀ ಹಮ್ ವಿದ್ವಾನೋಂಕೇ ಆಶ್ರಯ  ಆದರ್ಶ ಹೈ
- ಕಾಶಿ ಹಿಂದಿ ಪತ್ರಿಕೆಯಲ್ಲಿ
ಪರಮಾತ್ಮ ವಿಭೂತಿಭೂತಾಃ
ಯದ್ ಯದ್ ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ | ತತ್ತದೇವಾವಗಚ್ಚ ತ್ವಂ ಮಮ ತೇಜೋಂಶಸಂಭವಮ್ |
ಇತಿ ಭಾಗವತಂ ವಚನಮನುಸ್ಮೃತ್ಯ ಪರಮಾತ್ಮ ವಿಭೂತಿಭೂತಾನಾಂ ಯುಷ್ಮಾಕಮಭಿನಂದನಂ ತಸ್ಯೈವ ಶಕ್ತಿಮತೋ ಮಹೇಶ್ವರಸ್ಯ ಸಮರ್ಚನಮಿತಿ ಮನ್ಯ್ಮಾನ್ಯೈಃ ಯತ್ ಕಿಂಚಿತ್ ಪತ್ರಪುಷ್ಪಾದಿಕಮರ್ಪ್ಯತೇ |
-ಕಾಶೀ ಪಂಡಿತಸಭಾಸದಸ್ಯಾಃ, ವಾರಾಣಸೀ
ತೀರ್ಥೇ ಸ್ವಬಿಂಬಪ್ರದಃ
ಭಕ್ತ್ಯಾ ತುಷ್ಯತಿ ಮಾಧವೋ ನ ತು ಗುಣೈರ್ಭಕ್ತಿಶ್ಚ ಭೇದೇ ಸ್ಥಿತಾ | ಚಿಂತಂ ಚಿಂತಮಿದಂ ಚಿರಂ ಸ ಭಗವಾನ್ ಪ್ರಾಕಟ್ಯಮಾಸೇದಿವಾನ್ | ಸ ಏವ ಪ್ರದದ ನ್ಮಧೋತ್ತಮಮಧುಶ್ರೀಮಧ್ವನಾಮಾ ಯತಿಃ | ವಿದ್ಯಾಮಾನ್ಯಪದದ್ವಯೀಮಯತಟೇ ತೀರ್ಥೇ ಸ್ವಬಿಂಬಪ್ರದಃ |
- ಶ್ರೀ ನವಲ ಪ್ರೇಮಸಭಾ, ದೆಹಲಿ
(ದೆಹಲಿ ಸಂರಕ್ಷಕಾಃ)
ಸದ್ಧರ್ಮ ಸಂಚಾಲಕಾಃ
ಗುರ್ವರ್ಥಾಶ್ರಯ ವೈಷ್ಣವಾಗ್ರತಿಲಕಪ್ರಖ್ಯಾತಿಸಂಸ್ಠಾಪಕಾಃ | ಈಶಾವಾಸ್ಯಮಿದಂ ವಿಚಾರವಿಭವಾಃ ಸದ್ಧರ್ಮಸಂಚಾಲಕಾಃ ||
- ಕಲ್ಕತ್ತಾ ಬ್ರಾಹ್ಮಣಸಭಾದವರು
(೧೯೮೯ ರಲ್ಲಿ )




ಶ್ರೀ ವಿದ್ಯೇಶತೀರ್ಥರು  
ಶ್ರೀ ವಿದ್ಯಾಮಾನ್ಯರಿಂದ ಮಾನಿತರಾದ ಶ್ರೀವಿದ್ಯೇಶತೀರ್ಥರು
ಡಾ. ಎ.ವಿ. ನಾಗಸಂಪಿಗೆ
ಪೂರ್ವಾಶ್ರಮ

ಶ್ರೀಮತಿ ವೇದವತಿ ಹಾಗೂ ಶ್ರೀ ಪೂರ್ಣಭಟ್ಟರ ಎರಡನೆಯ ಕುಮಾರನಾಗಿ ಉಡುಪಿಯ ಹತ್ತಿರದ ಕಲ್ಯಾಣಪುರದಲ್ಲಿ ೧೯೫೬ ರಲ್ಲಿ ಒಂದು ಗಂಡುಮಗು ಸೂರ್ಯನಂತೆ ಉದಿಸಿತು. ವೈದಿಕ ಸಂಸ್ಕಾರ ಸದಾಚಾರಗಳ ಪ್ರತಿಷ್ಠಿತ ಮನೆತನದಲ್ಲಿ ಜ್ಞಾನದ ಜ್ಯೋತಿಯೊಂದು ಜನ್ಮ ತಾಳಿದ್ದು ಮನೆಮಂದಿಗೆಲ್ಲ ಸಂತಸ ತಂದಿತು. ಹುಟ್ಟಿದ ಮಗುವಿಗೆ ಹರಿಕೃಷ್ಣ ಎಂಬುದಾಗಿ ನಾಮಕರಣಮಾಡಿದರು. ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯ ವರೆಗೆ ಅಭ್ಯಾಸ ಮಾಡಿದ ಈ ಮಗುವನ್ನು ಪೇಜಾವರ ಶ್ರೀಪಾದರ ಎರಡೆನೆಯ ಪರ್ಯಾಯದಲ್ಲಿ ವೇದಾಭ್ಯಾಸ ಹಾಗೂ ಸಂಸ್ಕೃತಾಭ್ಯಾಸಕ್ಕಾಗಿ ಅವರ ಸನಿಹದಲ್ಲಿ ಸಮರ್ಪಿಸಲಾಯತು. ೧೯೭೦ ರ ವೇಳೆಗೆ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿದ ಶ್ರೀಯುತರು ಒಂಭತ್ತು ವರ್ಷಗಳ ಕಾಲ ಕಾವ್ಯ, ವ್ಯಾಕರಣ, ತರ್ಕಶಾಸ್ತ್ರ, ವೇದಾಂತ ಗ್ರಂಥಗಳ ತೌಲನಿಕ ಅಧ್ಯಯನವನ್ನು ನಡೆಸಿ ಪೇಜಾವರ ಶ್ರೀಪಾದರ ಪ್ರೀತಿ - ಅಭಿಮಾನಗಳಿಗೆ ಪಾತ್ರರಾದರು.

ಅಧ್ಯಯನಶೀಲತೆ ಹಾಗೂ ಪದವಿಗಳು
ವಿದ್ಯಾಪೀಠದ ಜೀವನದುದ್ದಕ್ಕೂ ನಿರಂತರ ಅಧ್ಯಯನಶೀಲ ಹಾಗೂ ಪ್ರತಿಭಾವಂತ ಎಂಬ ಹೆಸರು ಗಳಿಸಿದ ಇವರು ೧೯೭೮ರಲ್ಲಿ ಮಹೀಶೂರ ಪೌಢ ವಿದ್ಯಾಭ್ಯಾಸ ಪರೀಕ್ಷಾ ಮಹಾಸಭಾನಡೆಸಿದ ಧರ್ಮಶಾಸ್ತ್ರ ವಿದ್ವನ್ಮಧ್ಯಮಾ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ೧೯೭೯ ರಲ್ಲಿ ಮೇಲ್ಕಂಡ ಸಂಸ್ಥೆಯ ಆಶ್ರಯದಲ್ಲಿ ನವೀನ ನ್ಯಾಯ ವಿದ್ವನ್ಮಧ್ಯಮಾ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ೧೯೮೦ ರಲ್ಲಿ ಮೇಲೆ ತಿಳಿಸಿದ ಸಂಸ್ಥೆಯ ಆಶ್ರಯದಲ್ಲಿ ದ್ವೈತ ವೇದಾಂತ ವಿದ್ವದುತ್ತಮಾ ಪರೀಕ್ಷೆಯಲ್ಲಿ ವೈಶಿಷ್ಟ್ಯ ಶ್ರೇಣಿಯಲ್ಲಿ ತೇರ್ಗಡೆಗೊಂಡು ಪುರಸ್ಕಾರ ಭಾಜನರಾದರು.

ಭಾರತ ಸರಕಾರವು ಶಿಕ್ಷಾ,ಸಮಾಜ ಕಲ್ಯಾಣ ಮಂತ್ರಾಲಯದಿಂದ ನಡೆಸುವ ಅಖಿಲ ಭಾರತ ಸಂಸ್ಕೃತ ಭಾಷಣ ಸ್ಪರ್ಧೆಯಲ್ಲಿ ೧೯೭೮ ರಲ್ಲಿ ಮೀಮಾಂಸಾಶಾಸ್ತ್ರದಲ್ಲಿ ತೃತೀಯ ಬಹುಮಾನವನ್ನು ೧೯೮೦ ರಲ್ಲಿ ಧರ್ಮಶಾಸ್ತ್ರ ವಿಭಾಗದಲ್ಲಿ ಸುವರ್ಣಪದಕವನ್ನೂ ಗಳಿಸಿದ ಇವರ ಪ್ರತಿಭೆ ಸಾಧನೆಗಳನ್ನು ಪರಮಪೂಜ್ಯ ಗುರುಗಳಾದ ಶ್ರೀಪೇಜಾವರ ಶ್ರೀಪಾದರು ತುಂಬು ಹೃದಯದಿಂದ ಅಭಿನಂದಿಸಿದರು.

ಸನ್ಯಾಸಸ್ವೀಕಾರ
ಪ್ರಾತಃಸ್ಮರಣೀಯರಾದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು ಭಂಡಾರಕೇರಿ ಮಠಕ್ಕೆ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಸಂಕಲ್ಪವನ್ನು ಮಾಡಿದರು. ತಮ್ಮ ವಿರಕ್ತ ವಿಜ್ಞಾನಪೀಠಕ್ಕೆ ಶ್ರೇಷ್ಠ ಉತ್ತರಾಧಿಕಾರಿಯನ್ನು ಸೂಚಿಸಲು ಪ್ರಿಯಶಿಷ್ಯರಾದ ಪೇಜಾವರ ಶ್ರೀಪಾದರಿಗೆ ಆದೇಶಿಸಿದರು. ಆಗ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹರೀಕೃಷ್ಣಾಚಾರ್ಯರನ್ನು ತೋರಿಸಿ ಇವರು ತಮ್ಮ ಪಾಂಡಿತ್ಯ, ಸದಾಚಾರ, ವಿದ್ವದ್ವಾತ್ಸಲ್ಯ, ಗ್ರಂಥರಚನೆ ಮೊದಲಾದ ಗುಣಗಳನ್ನು ರೂಢಿಸಿಕೊಂಡು ಉತ್ತಮ ಪ್ರತಿಬಿಂಬರಾಗಬಲ್ಲರೆಂದು ಸೂಚಿಸಿದರು. ಗುರುಗಳ ಪ್ರಶಂಸೆಗೆ ಪಾತ್ರರಾದ ಇವರನ್ನು ೧೯೮೦ ರಲ್ಲಿ ಶ್ರೀವಿದ್ಯೇಶತೀರ್ಥರೆಂದು ನಾಮಕರಣ ಮಾಡಿ ಭಂಡಾರಕೇರಿ ಮಠದ ಉತ್ತರಾಧಿಕಾರಿಗಳೆಂದು ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರು ಘೋಷಿಸಿದರು. ಪಾಠ, ಪ್ರವಚನ, ಗ್ರಂಥಲೇಖನ, ಕಠಿಣ ವ್ರತನಿಯಮಗಳಿಂದ ಅಲ್ಪಕಾಲದಲ್ಲಿಯೇ ಶ್ರೀ ವಿದ್ಯೇಶತೀರ್ಥತ ಶ್ರೀಪಾದರು ಗುರುಗಳ ಸಂಪೂರ್ಣ ಅಭಿಮಾನಪಾತ್ರರಾದರು.

ಸುಧಾಮಂಗಳ, ಗ್ರಂಥರಚನೆ
ಸನ್ಯಾಸಾಶ್ರಮವನ್ನು ಸ್ವೀಕಾರ ಮಾಡಿದ ಎರಡನೇ ವರ್ಷದಲ್ಲಿ ಸಮಗ್ರ ನ್ಯಾಯಸುಧಾ ಗ್ರಂಥವನ್ನು ವಿದ್ಯಾರ್ಥಿಗಳಿಗೆ ಪಾಠಹೇಳಿ ಮಂಗಳ ನಡೆಸಿದ ಶ್ರೀ ಶ್ರೀಪಾದರನ್ನು ವಿದ್ಯಾಮಾನ್ಯತೀರ್ಥರು ತುಂಬು ಹೃದಯದಿಂದ ಅಭಿನಂದಿಸಿದರು. ಪಾಠ ಹೇಳುವುದರ ಜೊತೆಗೆ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರಲ್ಲಿ ನ್ಯಾಯಶಾಸ್ತ್ರದ ಉದ್ಗ್ರಂಥಗಳು, ನ್ಯಾಯಾಮೃತ, ತಾತ್ಪರ್ಯಚಂದ್ರಿಕಾ, ತರ್ಕತಾಂಡವ ಗ್ರಂಥಗಳನ್ನು ಶ್ರೀ ವಿದ್ಯೇಶತೀರ್ಥರು ಅಧ್ಯಯನಮಾಡಿ ಅಸಾಧಾರಣ ಪಾಂಡಿತ್ಯದಿಂದ ಗುರುಕೃಪೆಯನ್ನು ಸಂಪಾದಿಸಿದರು. ಜ್ಞಾನಪಿಪಾಸುಗಳಾದಶ್ರೀ ಶ್ರೀಪಾದರು ಕಾಶಿಗೆ ತೆರಳಿ ಅಲ್ಲಿ ಎರಡು ವರ್ಷಗಳ ಕಾಲ ನೆಲೆಸಿ ಅಲ್ಲಿನ ವಿದ್ವನ್ಮೂರ್ಧನ್ಯರಾದ ಪ್ರಕಾಂಡ ಪಂಡಿತರ ಸನಿಹದಲ್ಲಿ ವಿಶೇಷವಾಗಿ ಮೀಮಾಂಸಾಶಾಸ್ತ್ರಹಾಗೂ ನ್ಯಾಯಶಾಸ್ತ್ರಗಳ ಕೋಟಿಕ್ರಮ ಪದ್ಧತಿಯನ್ನು ಅಭ್ಯಾಸ ಮಾಡಿದರು. ನಿರಂತರ ಪಾಠ-ಪ್ರವಚನಶೀಲರಾದ ಶ್ರೀ ಶ್ರೀಪಾದರ ಗ್ರಾಂಥಿಕ ಕೊಡುಗೆ ವಿದ್ವನ್ಮಾನ್ಯವಾದುದು. ಈವರೆಗೆ ಶ್ರೀ ಶ್ರೀಪಾದರು ಈ ಕೆಳಕಂಡ ಅಪೂರ್ವ ಕೃತಿಗಳನ್ನು ರಚಿಸಿದ್ದಾರೆ.
  • ಹರಿತತ್ವ ಚೂಡಾಮಣಿ
  • ಗೀತೆಯಲ್ಲಿ ಪ್ರಾಣತತ್ವ ಮಹಿಮೆ
  • ಭಾಗವತವು ಬೆಳಗಿದ ವೇದಾಂತ ದೀಪಾವಳಿ
  • ಅಹಂ ಬ್ರಹ್ಮಾಸ್ಮಿ
  • ಗುರಿ ಇಲ್ಲದ ದಾರಿ
  • ಭಗವಂತನ ನೈರ್ಗುಣ್ಯ ನಿರಾಕರಣೆ
  • ಶಿವರಾತ್ರಿ ರಹಸ್ಯ
  • ವಾಸುದೇವನಲ್ಲಿ ಗೀತಾಕಟಾಕ್ಷ
  • ಗೀತಾಸಾರ ಸೌರಭ
  • ಗೀತಾರ್ಥವೈಭವ
  • ಗಾಯತ್ರಿ ಹೃದಯ
  • ಗಾಯತ್ರಿಯಲ್ಲಿ ಅಧ್ಯಾತ್ಮದೀಪ
  • ಗಾಯತ್ರೀಭಾವ ತಿಲಕಂ (ಸಂಸ್ಕೃತ)
  • ಗಾಯತ್ರಿ ಕಂಡ ರಾಮಾಯಣ
  • ಕಠತತ್ತ್ವ ಕೌಸ್ತುಭ
  • ಕಾಠಕತತ್ತ್ವಮಾಲಾ
  • ಗಾಯತ್ರಿಯಲ್ಲಿ ವ್ಯಾಸಚಿಂತನ
  • ಭಾಗವತ ರಸಸಂದೇಶ

ಶ್ರೀ ಶ್ರೀಪಾದರ ಪ್ರವಚನ ಶೈಲಿ
ಭಾಗವತ, ಗೀತೆ, ವೈದಿಕಸಾಹಿತ್ಯ ಮೊದಲಾದ ಯಾವುದೇ ವಿಷಯಗಳ ಬಗ್ಗೆ ಶ್ರೀ ಶ್ರೀಪಾದರ ಪ್ರವಚನ ಅಸಾಧಾರಣ ವೈಶಿಷ್ಟ್ಯವನ್ನು ಪಡೆದಿದೆ. ಒಂದು ಶ್ಲೋಕವನ್ನು ವಿವರಿಸ ಹೊರಟರೆ ಪಾಮರರನ್ನು ಆರಂಭಿಸಿ ಪಂಡಿತರ ತನಕ ತಲೆದೂಗುವಂತೆ ಸೂಕ್ಷ್ಮ ಗಂಭೀರ ವಿಷಯಗಳನ್ನು ವಿಶ್ಲೇಷಿಸುವ ಶ್ರೀಪಾದರ ಪ್ರತಿಭೆ ಅಸಾಧಾರಣವಾದುದು. ಆರ್ಷ ಗ್ರಂಥಗಳಲ್ಲಿ ಶ್ರೀಹರಿಯ ಮಹಿಮೆ ಓತಪ್ರೋತವಾಗಿರುವಂತೆ ಮುಖ್ಯಪ್ರಾಣದೇವರ ಮಹಿಮೆಯೂ ಅಡಗಿದೆ ಎಂಬ ಸತ್ಯವನ್ನು ಅತ್ಯಂತ ಮನೋಜ್ಞವಾಗಿ ಪ್ರತಿಪಾದಿಸುವುದು ಶ್ರೀಪಾದರ ಪ್ರವಚನ ಅಪೂರ್ವತೆಯಾಗಿದೆ.
ಸಮಗ್ರ ಸರ್ವಮೂಲಗ್ರಂಥಗಳ ಉಪಸ್ಥಿತಿಯ ಆಧಾರದಿಂದ ಒಂದೊಂದು ಪದಕ್ಕೆ ಅವರು ನೀಡುವ ಬಹುಮುಖ ಪ್ರತಿಭೆಯ ವ್ಯಾಖ್ಯೆ , ಬುದ್ಧಿ ಜೀವಿಗಳನ್ನೂ ಆನಂದ ಸಾಗರದಲ್ಲಿ ತೇಲಾಡಿಸುವಂತಹದು.

ಸಾಧನೆಗಳು
  • ೧೯೯೩ ರಲ್ಲಿ ಶ್ರೀ ಶ್ರೀಪಾದರು 'ಭಾಗವತ ಪ್ರತಿಷ್ಠಾನ' ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ತತ್ತ್ವ ಜ್ಞಾನಪ್ರಸಾರವನ್ನು ಪ್ರಾರಂಭಿಸಿದರು.
  • ೧೯೯೪ ರಲ್ಲಿ ಭಾಗವತಾಶ್ರಮಕ್ಕಾಗಿ, ಗಿರಿನಗರದಲ್ಲಿ ನಿವೇಶನವನ್ನು ಕೊಂಡರು.
  • ೧೯೯೫ ಜೂನ್ ತಿಂಗಳಲ್ಲಿ ೧೦ ಲಕ್ಷ ರೂ. ಗಳ ವೆಚ್ಚದಿಂದ ನಿರ್ಮಾಣಗೊಂಡ 'ಭಾಗವತ ನಿಕೇತನ' ದ ಉದ್ಘಾಟನೆಯನ್ನು ಶ್ರೀ ಶ್ರೀವಿದ್ಯಾಮಾನ್ಯತೀರ್ಥರು ಹಾಗೂ ಶ್ರೀ ಶ್ರೀ ವಿಶ್ವೇಶತೀರ್ಥರು ನೆರವೇರಿಸಿದರು.
  • ೧೯೯೫ ರ ಜುಲೈ ತಿಂಗಳಲ್ಲಿ ವಿದ್ವಾಂಸರಿಂದ ತಾಲೂಕು ಹಾಗೂ ಜಿಲ್ಲಾಮಟ್ಟಗಳಲ್ಲಿ ತತ್ತ್ವಜ್ಞಾನ ಪ್ರಸಾರವನ್ನು ನಡೆಸಲು 'ಪೂರ್ಣಪ್ರಜ್ಞ ಜ್ಞಾನಸೇವಾ ನಿಧಿ' ಸ್ಥಾಪಿಸಿದರು. ಈ ನಿಧಿಯಿಂದ ಮದ್ರಾಸ್ , ಹೈದರಾಬಾದ್ , ಬೆಂಗಳೂರು ಹಾಗೂ ಬೆಂಗಳೂರಿನ ವಿವಿಧ ಬಡಾವಣೆಗಳು, ಮೈಸೂರು, ಹುಬ್ಬಳ್ಳಿ, ಕೊಯಮತ್ತೂರು, ಶ್ರೀರಂಗ ಮೊದಲಾದ ಕ್ಷೇತ್ರಗಳಲ್ಲಿ ಶ್ರೇಷ್ಠ ವಿದ್ವಾಂಸರಿಂದ ಪಾಠ-ಪ್ರವಚನವನ್ನು ಏರ್ಪಡಿಸಿ ಕೈತುಂಬ ಸಂಭಾವನೆ ನೀಡಿ ವಿದ್ವಾಂಸರನ್ನು ಪುರಸ್ಕರಿಸುತ್ತಿದ್ದಾರೆ. 
  • ೧೯೯೬ ರಲ್ಲಿ ಶ್ರೀ ವೇದವ್ಯಾಸ ಜಯಂತಿಯನ್ನು  ಉನ್ನತ ಮಟ್ಟದಲ್ಲಿ ಆಚರಿಸಲು ಪ್ರಾರಂಭಿಸಿದ ಶ್ರೀ ಶ್ರೀಪಾದರು ವಾಕ್ಯಾರ್ಥಗೋಷ್ಠಿ ಪ್ರವಚನಗಳ ಮೂಲಕ ಶ್ರೀ ವೇದವ್ಯಾಸದೇವರ ಪರಮಾನುಗ್ರಹಕ್ಕೆ ಪಾತ್ರರಾಗಿದ್ದಾರೆ.
  • ೧೯೯೭ ರಲ್ಲಿ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಭಾಗವತಾಶ್ರಮದ ಶಾಖೆಯೊಂದರ ಸ್ಥಾಪನೆ ಶ್ರೀಪಾದರ ಗಣನೀಯ ಸಾಧನೆ.
  • ೨೦೦೧ ರಲ್ಲಿ ಶ್ರೀ ಶ್ರೀಪಾದರು ತಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರ ಕನಸಾದ, ಶ್ರೀ ಸುರೋತ್ತಮತೀರ್ಥರ ( ಶ್ರೀವಾದಿರಾಜರ ಪೂರ್ವಾಶ್ರಮದ ಸಹೋದರರು) ವೃಂದಾವನ ಕಟ್ಟಡದ ನವೀಕರಣ ಹಾಗೂ ಶ್ರೀ ವಿದ್ಯಾಮಾನ್ಯತೀರ್ಥರ ಮೃತ್ತಿಕಾ ವೃಂದಾವನ ಪ್ರತಿಷ್ಠೆಯನ್ನು ಭಂಡಾರಕೇರಿಯಲ್ಲಿ ನೆರವೇರಿಸಿದರು.
  • ೨೦೦೨ ರಲ್ಲಿ ಉಡುಪಿಯಲ್ಲಿ ಅಚ್ಯುತಪ್ರಜ್ಞರ ವಾಸಭೂಮಿಯಾದ ರಥಬೀದಿಯ ಭಂಡಾರಕೇರಿ ಮಠದ ನಿವೇಶನದಲ್ಲಿ ಮಾಧ್ವ ರಾದ್ಧಾಂತ ಸಂವರ್ಧಕ ಸಭೆಯ ವಜ್ರಮಹೋತ್ಸವ ಸ್ಮಾರಕ ಭವ್ಯ ಭವನವನ್ನು ೫೦ ಲಕ್ಷ ರೂ. ಗಳ ವೆಚ್ಚದಿಂದ ನಿರ್ಮಿಸಿದರು. ಅಲ್ಲಿ ನಿರಂತರ ಪಾಠ-ಪ್ರವಚನ ಮೊದಲಾದ ಸತ್ಕಾರ್ಯಗಳಿಂದ ಶ್ರೀಕೃಷ್ಣನ ಆರಾಧನೆಯನ್ನು ನಡೆಸುತ್ತಿದ್ದಾರೆ.
  • ೨೦೦೩ ರಲ್ಲಿ ವಜ್ರ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಭಂಡಾರಕೇರಿ ಮಠಾದೀಶರಾದ ಶ್ರೀ ವಿದ್ಯೇಶತೀರ್ಥರು ೬೦ ವಿದ್ವಾಂಸರನ್ನು
    ಸನ್ಮಾನಸಿ ಪ್ರಶಸ್ತಿ ಗಳನ್ನು ನೀಡಿ ಪ್ರೋತ್ಸಾಹಿಸಿದ್ದಾರೆ.
ವಿದ್ಯಾಮಾನ್ಯವಿಜ್ಞಾನ ಭಾಸ್ಕರ, ಭಂಡಾರಕೇರಿ ರಾಜಹಂಸ ಪ್ರಶಸ್ತಿ ಪ್ರದಾನ
ಶ್ರೀ ಶ್ರೀಪಾದರು ೨೦೦೧ ರಿಂದ ಶ್ರೀ ಸರ್ವಜ್ಞಾಚಾರ್ಯರ ಗ್ರಂಥಗಳ ಪಾಠಪ್ರವಚನ, ಗ್ರಂಥಲೇಖನ ಮುಂತಾದ ಕಾರ್ಯಗಳಿಂದ ೩-೪ ದಶಕಗಳ ಕಾಲ ಸಾರ್ಥಕವಾಗಿ ತಮ್ಮ ಬದುಕನ್ನು ನಡೆಸಿದ ಶ್ರೇಷ್ಠರಾದ ಇಬ್ಬರು ವಿದ್ವಾಂಸರಿಗೆ
'ವಿದ್ಯಾಮಾನ್ಯವಿಜ್ಞಾನ ಭಾಸ್ಕರ' ಮತ್ತು 'ಭಂಡಾರಕೇರಿ ರಾಜಹಂಸ' ಪ್ರಶಸ್ತಿಗಳನ್ನು ನೀಡಿ, ಅಪಾರ ಆರ್ಥಿಕ ನೆರವಿನೊಂದಿಗೆ ಕೆಳಕಂಡ ಪಂಡಿತರನ್ನು ಪುರಸ್ಕರಿಸಿ ಅನುಗ್ರಹಿಸುತ್ತಿದ್ದಾರೆ.
ವರ್ಷ ಸ್ಥಳ ವಿದ್ಯಾಮಾನ್ಯವಿಜ್ಞಾನ ಭಾಸ್ಕರ ಭಂಡಾರಕೇರಿ ರಾಜಹಂಸ
೨೦೦೧ ಭಂಡಾರಕೇರಿ ಶ್ರೀ ಹಯವದನ ಪುರಾಣಿಕರು -----------
೨೦೦೨ ಉಡುಪಿ  ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯರು
೨೦೦೩ ಬೆಂಗಳೂರು ಶ್ರೀ ಡಿ.ಪ್ರಹ್ಲಾದಾಚಾರ್ಯರು ಶ್ರೀ ಶೇಷಗಿರಿಆಚಾರ್ಯರು
೨೦೦೪ ಅನಂತಪುರ ಶ್ರೀ ಬಿ.ಎನ್.ಕೆ. ಶರ್ಮ ಶ್ರೀ ಕೆ.ಟಿ. ಪಾಂಡುರಂಗಿ
೨೦೦೫ ರಾಯಚೂರು ಶ್ರೀ ಪಂಡರೀನಾಥಾಚಾರ್ಯ ಗಲಿಗಲಿ ಶ್ರೀ ಹುಣಸಿಗಿರಾಮಾಚಾರ್ಯರು

ಹರಿಭಕ್ತಿ - ವಿಷಯವೈರಾಗ್ಯ - ಸಂತತಪಾಠಪ್ರವಚನ - ಗ್ರಂಥನಿರ್ಮಾಣಗಳಿಂದ ಸಮಗ್ರ ಮಾದ್ವ ಸಮಾಜದ ಪ್ರೀತಿ ಗೌರವಗಳಿಗೆ ಪಾತ್ರರಾದ ಶ್ರೀ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಈ ಶತಮಾನದ ಶ್ರೇಷ್ಠಮಾರ್ಗದರ್ಶೀ ಮಹರ್ಷಿಗಳಾಗಿ ಸುಜನ ಸಮುದಾಯವನ್ನು ಅನುಗ್ರಹಿಸುತ್ತರಲೆಂದು ನಾವೆಲ್ಲರೂ ಪ್ರಾರ್ಥಿಸೋಣ.



ಶ್ರೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭಾ ವಜ್ರಮಹೋತ್ಸವ - ೨೦೦೩

- ಸಗ್ರಿ ರಾಘವೇಂದ್ರ ಉಪಾದ್ಯಾಯ

ಮೂಲತಃ ಭಂಡಾರಕೇರಿ ಮಠದ ಅಧಿಪತಿಗಳಾಗಿದ್ದು ತಮ್ಮ ಜ್ಞಾನ-ಭಕ್ತಿ-ವಿರಕ್ತಿಗಳಿಂದ ಶ್ರೀ ಕೃಷ್ಣಪರಮಾತ್ಮನನ್ನು ಒಲಿಸಿಕೊಂಡೋ ಎಂಬಂತೆ ಪವಾಡ ಸದೃಶವಾಗಿ ಉಡುಪಿ ಶ್ರೀ ಪಲಿಮಾರು ಮಠದ ಅಧಿಪತಿಗಳಾಗಿ ಉಡುಪಿ ಶ್ರೀ ಕೃಷ್ಣನನ್ನು ಆರಾಧಿಸುವ ಸೌಭಾಗ್ಯವನ್ನು ಪಡೆದುಕೊಂಡಿರುವ ಶ್ರೀವಿದ್ಯಾಮಾನ್ಯತೀರ್ಥ ಶ್ರೀಪಾದರಿಂದ ಭಗವಂತ ಸ್ವೀಕರಿಸಿರುವ ಸೇವೆಗಳು ನಾನಾ ಬಗೆಯವು.
ಮಹತ್ವದ ಸೇವೆ
ಅವರು ನಿರಂತರ ಪಾಠಪ್ರವಚನಗಳ ಮೂಲಕವಲ್ಲದೆ , ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಅದಮಾರು ಮಠದ (ಕಿರಿಯ ಪಟ್ಟ) ಶ್ರೀ ವಿಶ್ವಪ್ರಿಯ ತೀರ್ಥರು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು, ಪಲಿಮಾರು ಮಠದ (ಕಿರಿಯಪಟ್ಟ) ಶ್ರೀ ವಿದ್ಯಾಧೀಶತೀರ್ಥರು , ಭಂಡಾರಕೇರಿ ಮಠದ (ಕಿರಿಯ ಪಟ್ಟ) ಶ್ರೀವಿದ್ಯೇಶತೀರ್ಥರು ಹೀಗೆ ಅನೇಕ ಯತಿಗಳಿಗೆ ವಿದ್ಯಾದಾನ ಮಾಡಿ ಅರ್ಹ ಸನ್ಯಾಸಿಗಳನ್ನು ಸಮಾಜಕ್ಕೆ ನೀಡಿದ್ದಾರೆ. ಹತ್ತಾರು ಗೃಹಸ್ಥರನ್ನೂ ವಿದ್ವಾಂಸರನ್ನಾಗಿ ಮಾಡಿರುತ್ತಾರೆ. ಹೀಗೆ ಆಧ್ಯಾತ್ಮಿಕ  ಕ್ಷೇತ್ರಕ್ಕೆ ಅವಿಸ್ಮರಣೀಯ ಸೇವೆ ಅವರಿಂದ ಸಂದಾಯವಾಗಿದ್ದರೆ, ಉಡುಪಿ ಶ್ರೀಕೃಷ್ಣನಿಗೆ ೬೦೦ ತೋಲೆ ಚಿನ್ನದ ತೊಟ್ಟಿಲು, ಒಂದು ಕೋಟಿ ರೂಪಾಯಿ ವೆಚ್ಚದ ಸುವರ್ಣ ರಥ, ವಜ್ರದ ಕಿರೀಟ ಮುಂತಾದವುಗಳ ಸಮರ್ಪಣೆಯಿಂದಾಗಿ ಭಾವುಕತನಕ್ಕೆ ಗಾಢವಾಗಿ ಪುಷ್ಟಿ ನೀಡಬಲ್ಲ ಅಮೋಘ ಸೇವೆಗಳೂ ಸಂದಿವೆ.
ಶ್ರೀಪಾದರು ಐವತ್ತು ವರ್ಷಗಳಿಂದ ನಿರಂತರವಾಗಿ ಪೋಷಿಸಿಕೊಂಡು ಬಂದ ' ಶ್ರೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭಾ' ಆಧ್ಯಾತ್ಮಿಕಕ್ಷೇತ್ರಕ್ಕೂ, ವೈಚಾರಿಕಕ್ಷೇತ್ರಕ್ಕೂ ಸಂದ ಮಹತ್ವದ ಸೇವೆ ಎನಿಸಬಲ್ಲದು.
ಶುಭಾರಂಭ
ಅರವತ್ತನೇ ವರ್ಷಕ್ಕೆ ಕಾಲಿಡುತ್ತಿರುವ ' ಶ್ರೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭಾ' ರೂಪುಗೊಂಡದ್ದು ಸುಭಾನು ಸಂವತ್ಸರದ ಮಾಘ ಶುದ್ಧ ನವಮಿ ಯಂದು, (೧೯೪೩,ಫೆಬ್ರವರಿ) ದಕ್ಷಿಣ ಕನ್ನಡ ಜಿಲ್ಲೆಯ ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ. ಆಗಿನ್ನೂ ಸುಮಾರು ೧೩ ವರ್ಷ ವಯಸ್ಸಿನ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರೇ ಸಭೆಯ ಪ್ರಪ್ರಥಮ ಅಧಿವೇಶನದ ಅಧ್ಯಕ್ಷರು. ವಿದ್ಯಾರ್ಥಿಗಳ ಪರೀಕ್ಷೆ, ವಿದ್ವಾಂಸರ ಉಪನ್ಯಾಸಗಳು, ಶ್ರೀಪಾದರುಗಳ ಪ್ರವಚನಗಳು- ಮುಂತಾದ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳು ನಡೆದ ಆ ಮೊದಲ ಅಧಿವೇಶನದಂತೆಯೇ ಮುಂದಿನ ವರ್ಷಗಳಲ್ಲೂ- ರಥಸಪ್ತಮಿ, ಭೀಷ್ಮಾಷ್ಟಮಿ ಹಾಗೂ ಮದ್ವನವಮಿ ಈ ಮೂರು ದಿನಗಳ ಅವಧಿಯಲ್ಲಿ ಸಭೆಯ ಅಧಿವೇಶನ ನಿರಂತರವಾಗಿ, ಯಶಸ್ವಿಯಾಗಿ ನಡೆಯುತ್ತಾ ಬಂದಿವೆ.
ಎಲ್ಲೆಲ್ಲಿ ಅಧಿವೇಶನಗಳು ?
ಬಾರ್ಕೂರಿನಲ್ಲಿ : ಪ್ರಾರಂಬದ ಎಂಟು ವರ್ಷಗಳಲ್ಲಿ ಪ್ರತಿ ವರ್ಷವೂ ಭಂಡಾರಿಕೇರಿ ಮಠದಲ್ಲಿಯೇ ಈ ಸಭೆಯ ಅಧಿವೇಶನಗಳು ನಡೆದವು.
ಶ್ರೀಕೃಷ್ಣನ ಸನ್ನಿಧಾನಗಳಲ್ಲಿ: ಆನಂತರದ ಆರು ಅಧಿವೇಶನಗಳು ಉಡುಪಿಯಲ್ಲಿ ನಡೆದವು.
ಆ ಆರು ವರ್ಷಗಳು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು , ಪಲಿಮಾರು ಮಠದ ಶ್ರೀ ರಘುವಲ್ಲಭತೀರ್ಥರು ಅದಮಾರು ಮಠದ ಶ್ರೀ ವಿಬುಧೇಶತೀರ್ಥರು ಇವರುಗಳ ಪ್ರಥಮ ಪರ್ಯಾಯ (೧೯೫೬-೫೮)ಗಳ ಅವಧಿ ಆಗಿತ್ತು.
ಕಾಣಿಯೂರು ಮಠದ ಶ್ರೀ ವಿದ್ಯಾವಾರಿನಿಧಿ ತೀರ್ಥರ ಪರ್ಯಾಯಅವಧಿಯಲ್ಲಿ (೧೯೬೭) ಇಪ್ಪತ್ತನಾಲ್ಕನೆಯ ಅಧಿವೇಶನವೂ ಉಡುಪಿಯಲ್ಲೇ ಜರಗಿತ್ತು.
ಶ್ರೀ ವಿಶ್ವೇಶತೀರ್ಥರ ಎರಡನೇ ಪರ್ಯಾಯಾವಧಿಯಲ್ಲಿ (೧೯೬೮-೬೯) ಇಪ್ಪತ್ತಾರನೆಯ ಹಾಗೂ ಇಪ್ಪತ್ತೇಳನೆಯ ಅಧಿವೇಶನಗಳೂ, ಆಗ ತಾನೇ ಪಲಿಮಾರು ಮಠದ ಆಧಿಪತ್ಯವನ್ನಲಂಕರಿಸಿದ ಶ್ರೀ ವಿದ್ಯಾಮಾನ್ಯತೀರ್ಥರ ಮೊದಲ ಪರ್ಯಾಯಾವಧಿಯಲ್ಲಿ (೧೯೭೦-೭೧) ಇಪ್ಪತ್ತೆಂಟನೆಯ ಹಾಗೂ ಇಪ್ಪತ್ತೊಂಭತ್ತನೆಯ ಅಧಿವೇಶನಗಳೂ, ಶ್ರೀ ವಿಬುಧೇಶತೀರ್ಥರ ಎರಡನೇ ಪರ್ಯಾಯಾವಧಿಯಲ್ಲಿ (೧೯೭೨-೭೩) ಮೂವತ್ತನೆಯ ಹಾಗೂ ಮೂವತ್ತೊಂದನೆಯ ಅಧಿವೇಶನಗಳೂ ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲೇ ನಡೆದವು. ಸಭೆಯ ೩೪ನೆಯ ಹಾಗೂ ೩೫ನೆಯ ಅಧಿವೇಶನಗಳೂ ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲೇ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರ ಮೊದಲ ಪರ್ಯಾಯಾವಧಿಯಲ್ಲಿ (೧೯೭೬-೭೭) ನಡೆದವು.
ಶ್ರೀ ವಿಶ್ವೇಶತೀರ್ಥರ ಮೂರನೆ ಪರ್ಯಾಯಾವಧಿಯಲ್ಲಿ (೧೯೮೪-೮೫) ೪೧ನೇಯ ಹಾಗೂ ೪೨ನೆಯ ಅಧಿವೇಶನಗಳೂ, ಶ್ರೀವಿದ್ಯಾಮಾನ್ಯತೀರ್ಥರ ಎರಡನೇ ಪರ್ಯಾಯಾವಧಿಯಲ್ಲಿ (೧೯೮೬-೮೭) ೪೩ನೆಯ ಹಾಗೂ ೪೪ನೆಯ ಅಧಿವೇಶನಗಳೂ, ಅದಮಾರು ಮಠದ ಕಿರಿಯ ಶ್ರೀಪಾದರಾದ ಶ್ರೀ ವಿಶ್ವಪ್ರಿಯತೀರ್ಥರ ಮೊದಲ ಪರ್ಯಾಯಾವಧಿಯಲ್ಲಿ (೧೯೮೮-೮೯) ೫೪ನೆಯ ಹಾಗೂ ೪೬ನೆಯ ಅಧಿವೇಶನಗಳು ಉಡುಪಿ ಶ್ರೀ ಕೃಷ್ಣನ ಸನ್ನಿಧಿ ಯಲ್ಲೇ ನಡೆದವು. ೪೭ನೆಯ ಮತ್ತು ೪೮ನೆಯ ಅಧಿವೇಶನಗಳು ಉಡುಪಿ ಅನಂತಾಸನನ ಸನ್ನಿದಿಯಲ್ಲಿ ನಡೆದಿದ್ದು, ೪೯ನೆಯ ಅಧಿವೇಶ ಶ್ರೀಸುಗುಣೇಂದ್ರತೀರ್ಥರ ಎರಡನೇ ಪರ್ಯಾಯಾವಧಿಯಲ್ಲಿ (೧೯೯೨) ಉಡುಪಿ ಶ್ರೀಕೃಷ್ಣನ ಸನ್ನಿಧಿಯಲ್ಲೇ ಜರುಗಿತು.
ಹೀಗೆ ಸಭೆಯ ಇಪ್ಪತ್ತನಾಲ್ಕು ಅಧಿವೇಶನಗಳು ಉಡಿಪಿಯಲ್ಲೇ ನಡೆದಿರುವವಾದರೂ ಪರವೂರುಗಳಲ್ಲೂ ಅನೇಕ ಅಧಿವೇಶನಗಳು ನಡೆದ್ದದಿದೆ.
ಹದಿನೇಳನಯ ಹಾಗೂ ಹದಿನೆಂಟನೆಯ ಅಧಿವೇಶಗಳು (೧೯೬೦ ಮತ್ತು ೬೧) ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ನಡೆದಿದ್ದರೆ, ಇಪ್ಪತ್ತನೆಯ ಅಧಿವೇಶನ (೧೯೬೩) ಮಾನವಿಯಿಂದ ೭-೮ ಮೈಲು ದೂರದಲ್ಲಿರುವ ಚಿಕಲಪರವಿ ಕ್ಷೇತ್ರದಲ್ಲಿ ನಡೆದಿತ್ತು. ಇಪ್ಪತ್ತೊಂದನೆಯ ಅಧಿವೇಶನ (೧೯೬೪) ಮುಗುಟಖಾನ ಹುಬ್ಬಳ್ಳಿಯಲ್ಲಿ, ೨೩ನೆಯ ಅಧಿವೇಶನ (೧೯೬೬) ಆಂಧ್ರಪ್ರದೇಶದ ಆಲಂಪೂರ ತಾಲ್ಲೂಕಿನ ವೇಣೀ ಸೋಮಪುರದಲ್ಲಿ ಜರುಗಿತ್ತು. ಹುಬ್ಬಳ್ಳಿಯಲ್ಲಿ ೩೬ನೆಯ
ಅಧಿವೇಶನ (೧೯೭೯) ಕೇರಳದ ಎರ್ನಾಕುಲಂ ನಗರದಲ್ಲಿ ೩೭ನೆಯ ಅಧಿವೇಶನ (೧೯೮೦) ದಕ್ಷಿಣ ಕನ್ನಡ ಜಿಲ್ಲೆಯ ಕೋಟೇಶ್ವರದಲ್ಲಿ ೩೮ನೆಯ ಅಧಿವೇಶನ (೧೯೮೧) ಪ್ರಯಾಗದಲ್ಲಿ ೩೯ನೆಯ ಅಧಿವೇಶನ (೧೯೮೨) ಗದ್ವಾಲದಿಂದ ೧೫ ಕಿ.ಮೀ. ದೂರದಲ್ಲಿ ಇರುವ ಚಿಂತರವೇಲಿ ಕ್ಷೇತ್ರದಲ್ಲಿ ೪೦ನೆಯ ಅಧಿವೇಶನ (೧೯೮೩) ನಡೆದಿತ್ತು.
ಉದ್ದೇಶ ಮತ್ತು ಸಾಧನೆಗಳು
'ಮಾಧ್ವರಾಧಾಂತ ಸಂವರ್ಧಕ ಸಭಾ' - ಎಂಬ ಹೆಸರೇ ಸೂಚಿಸುವಂತೆ ಈ ಸಭೆಯ ಮುಖ್ಯ ಉದ್ದೇಶ ಮಾಧ್ವಸಿದ್ಧಾಂತವನ್ನು ಪ್ರಚುರಪಡಿಸುವುದು.
ಈ ಉದ್ದೇಶದ ಸಾಧನೆಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು.

೧. ವಿದ್ಯಾರ್ಥಿಗಳ ಪರೀಕ್ಷೆ

ಶಾಸ್ತ್ರದ ಅಧ್ಯಯನ ಅಧ್ಯಾಪನಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಹಾಗೂ ವಿದ್ವಾಂಸರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಬೇರೆ ಬೇರೆ ಶಾಸ್ತ್ರಗ್ರಂಥದ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಆಯಾಯ ಗ್ರಂಥಕ್ಕನುಗುಣವಾಗಿ ವಿದ್ಯಾರ್ಥಿಗಳಿಗೆ, ಅವರಿಗೆ ಪಾಠ ಹೇಳಿದ ವಿದ್ವಾಂಸರಿಗೆ ಸಂಭಾವನೆಯನ್ನು ನೀಡುವುದು.
ನ್ಯಾಯಾಸುಧಾ, ತಾತ್ಪರ್ಯಚಂದ್ರಿಕಾ, ನ್ಯಾಯಾಮೃತ, ತತ್ತ್ವಪ್ರಕಾಶಿಕಾ, ತತ್ತ್ವನಿರ್ಣಯ - ಮುಂತಾದ ಉದ್ಗ್ರಂಥಗಳಲ್ಲೂ, ತತ್ತ್ವೊದ್ಯೋತ, ಭೇದೋಜ್ಜೀವನ, ಪ್ರಮಾಣ ಪದ್ಧತಿ, ಪ್ರಮಾಣ ಚಂದ್ರಿಕಾ, ತಾತ್ಪರ್ಯ ನಿರ್ಣಯ, ಸುಮದ್ವವಿಜಯ ಮುಂತಾದ ಗ್ರಂಥಗಳಲ್ಲೂ, ಯಜುರ್ವೇದ, ಋಗ್ವೇದ, ಪವಮಾನ, ಪಂಚಸ್ತುತಿ, ಸಂಧ್ಯಾವಂದನೆ -ಇತ್ಯಾದಿಗಳಲ್ಲೂ ಪರೀಕ್ಷೆ ಕೊಟ್ಟು ಆಯಾಯ ಗ್ರಂಥಗಳಿಗೆ ತಕ್ಕಂತೆ ಸಂಭಾವನೆ ಪಡೆದ, ಆಗ ವಿದ್ಯಾರ್ಥಿಗಳಾಗಿದ್ದು ಈಗ ದೊಡ್ಡ ದೊಡ್ಡ ವಿದ್ವಾಂಸರೆಂದು ಸಮಾಜದಿಂದ ಮಾನ್ಯರಾಗಿರುವ ಮಹನೀಯರ ಹೆಸರನ್ನೂ, ಅವರು ಆ ಕಾಲಕ್ಕೆತಕ್ಕಂತೆ ಪಡೆದಿರುವ ಸಂಭಾವನೆಯ ಮೊತ್ತವನ್ನೂ ಉಲ್ಲೇಖಿಸಿರುವ ಸಭೆಯ ವರದಿಗಳು ಸಭೆ ನಡೆಸುತ್ತಿದ್ದ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಎಷ್ಟು ಆಕರ್ಷಕಗಳಾಗಿದ್ದವೆಂಬುದಕ್ಕೆ ಸೂಚಕವಾಗಬಲ್ಲವು. ಕೆಲವು ಅಧಿವೇಶನಗಳಲ್ಲಿ ಭಾಗವಹಿಸಲಾಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಆಯಾಯ ಊರುಗಳಲ್ಲೇ ಪರೀಕ್ಷೆಯ ಏರ್ಪಾಟನ್ನು ನಡೆಸಿ, ಸಂಬಾವನಾ ವಿತರಣೆಯ ವ್ಯವಸ್ಥೆಯನ್ನು ಮಾಡಲಾಗಿತ್ತು.
೨. ಸ್ಪರ್ಧೆಗಳು ಹಾಗೂ ಪಾರಿತೋಷಕಗಳು
ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲದೆ, ಬೇರೆ ಬೇರೆ ಗ್ರಂಥಗಳ ಬಗ್ಗೆ, ಸ್ಪರ್ಧೆಗಳನ್ನೂ ಏರ್ಪಡಿಸಲಾಗುತ್ತಿತ್ತು. ಶ್ರೀಮದಾನಂದತೀರ್ಥ ಪಾರಿತೋಷಕ, ಶ್ರೀಜಯತೀರ್ಥ ಪಾರಿತೋಷಕ, ಶ್ರೀಸುಧೀಂದ್ರತೀ
ರ್ಥ ಪಾರಿತೋಷಕ, ಶ್ರೀಮದ್ಭಾಗವತ ಪಾರಿತೋಷಕ, ತ್ರೈಕಾಲಿಕ ಸಂಧ್ಯಾವಂದನ ಪಾರಿತೋಷಕ ಮುತಾಂದ ಪಾರಿತೋಷಕಗಳು ಚಿತ್ತಾಕರ್ಷಕಗಳಾಗಿದ್ದವಲ್ಲದೆ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ಪ್ರೋತ್ಸಾಹಿಸುತ್ತಿದ್ದವು.
ಇತ್ತೀಚಿಗಿನ ಅಧಿವೇಶನಗಳಲ್ಲಿ ಸ್ತೋತ್ರಗಳ ಬಗ್ಗೆ, ದಾಸಸಾಹಿತ್ಯ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಿ, ಬಾಲಕರೂ, ಮಹಿಳೆಯರೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗುತ್ತಿದೆ.
೩. ಪ್ರಶಸ್ತಿಪ್ರದಾನ
ಸಚ್ಚಾಸ್ತ್ರದ ಪಾಠಪ್ರವಚನಗಳಲ್ಲಿ ತೊಡಗಿರುವ ವಿದ್ವಾಂಸರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವುದಕ್ಕಾಗಿ ಅವರ ವಿದ್ವತ್ತೆಯನ್ನು ಗುರುತಿಸಿ, ಬೇರೆ ಬೇರೆ ಪ್ರಶಸ್ತಿಯನ್ನು ನೀಡುವ ಮೂಲಕ ಗೌರವಿಸಲಾಗುತ್ತಿತ್ತು. ಬರೇ ಮಾದ್ವ ವಿದ್ವಾಂಸರಿಗಷ್ಟೇ ಅಲ್ಲದೆ ಅದ್ವೈತ, ವಿಶಿಷ್ಟಾದ್ವೈತ ಮತಗಳ ವಿದ್ವಾಂಸರಿಗೂ ವಿಶೇಷ ಸಂಭಾವನೆಗಳ ಜೊತೆಗೆ ಪ್ರಶಸ್ತಿಗಳನ್ನೂ ನೀಡಿ ಪ್ರೋತ್ಸಾಹಿಸಲಾಗಿತ್ತಿತ್ತು.
೪. ಚರ್ಚಾಗೋಷ್ಠಿ
ಸಭೆಯ ಅಧಿವೇಶನಗಳಿಗೆ ಅದ್ವೈತ ಹಾಗೂ ವಿಶಿಷ್ಟಾದ್ವೈತದ ವಿದ್ವಾಂಸರನ್ನೂ ಆಹ್ವಾನಿಸಲಾಗುತ್ತಿತ್ತು. ಬೇರೆ ಬೇರೆ ಮತದ ವಿದ್ವಾಂಸರು ಕಲೆತು ಸೌಹಾರ್ದದಿಂದ ದ್ವೈತಾದ್ವೈತ ಪ್ರಮೇಯಗಳಬಗ್ಗೆ ಚರ್ಚೆ ನಡೆಸಲಾಗುತ್ತಿತ್ತು. ಬೆಂಗಳೂರಿನಲ್ಲಿ ಶ್ರೀ ವ್ಯಾಸರಾಜ ಮಠಾಧೀಶರ ಅಧ್ಯಕ್ಷತೆಯಲ್ಲಿ ನಡೆದ ೧೭ನೇ ಅಧಿವೇಶನದಲ್ಲಿ ಆಸ್ಥಾನವಿದ್ವಾನ್ ಕೆ.ಪಿ. ಶಂಕರ ಶಾಸ್ತ್ರಿಗಳು, ವೇದಾಂತ ವಿದ್ವಾನ್ ಶ್ರೀಕೃಷ್ಣ ತಾತಾಚಾರ್ಯರು, ಶ್ರೀ ಬಿ. ವೆಂಕಟೇಶಾಚಾರ್ಯರು ಸೇರಿ ''ತತ್ವಮಸಿ'' ವಾಕ್ಯದ ವಿಮರ್ಶೆ ನಡೆಸಿದ್ದರು. ಉಡುಪಿಯಲ್ಲಿ ನಡೆದ ೨೪ನೆಯ ಅಧಿವೇಶನದಲ್ಲಿ ವೈಯ್ಯಾಕರಣ ಶ್ರೀನಿವಾಸವರದಾಚಾರ್ಯ, ಪೂರ್ವ ಮೀಮಾಂಸಾ ಪಂಡಿತರಾದ ಇ.ಎಸ್. ವರದಾಚಾರ್ಯ ಮುಂತಾದ ೧೦-೧೨ ಜನ ವಿಶಿಷ್ಟಾದ್ವೈತದ ವಿದ್ವಾಂಸರೂ, ಮೈಸೂರಿನ ಶ್ರೀ ರಾಮಚಂದ್ರ ಶಾಸ್ತ್ರಿ ಸೋಮಯಾಜಿಗಳು ಮುಂತಾದ ೧೦-೧೨ ಅದ್ವೈತದ ವಿದ್ವಾಂಸರೂ, ಪಾಂಡುರಂಗಿ ಗುರುರಾಜಾಚಾರ್ಯ, ಬನ್ನಂಜೆ ಅನಂತಕೃಷ್ಣಾಚಾರ್ಯ, ಮಾಗಡಿ ರಂಗನಾತಾಚಾರ್ಯ, ಸಗ್ರಿ ಹಯಗ್ರೀವಾಚಾರ್ಯ, ಗಲಗಲಿ ಪಂಡರೀನಾಥಾಚಾರ್ಯ, ಕಾಪು ಹಯಗ್ರೀವಾವಾರ್ಯ, ಪಾದಿಗಾರು ಕೇಶವಾಚಾರ್ಯ ಮುಂತಾದ ದ್ವೈತ ವಿದ್ವಾಂಸರೂ ಸೇರಿ ದ್ವೈತ, ಅದ್ವೈತ ಹಾಗೂ ವಿಶಿಷ್ಟಾದ್ವೈತ ಮತಗಳ ವೈಶಿಷ್ಟ್ಯ ಹಾಗೂ ಪರಸ್ಪರ ಬೇದದ ಕುರಿತು ಚರ್ಚೆ ನಡೆದಿತ್ತು. ಆ ಅದಿವೇಶನದಲ್ಲಿ ಶ್ರೀಗಳವರೂ, ಶ್ರೀರಾಮಚಂದ್ರ ಶಾಸ್ತ್ರಿ ಸೋಮಯಾಜಿಯವರು ಮುಕ್ತಿಸಾದನ ಕುರಿತು ಚರ್ಚೆ ನಡೆಸಿದ್ದರು. ೨೭ನೆಯ ಅದಿವೇಶನದಲ್ಲೂ ಹೀಗೆಯೇ ದ್ವೈತಾದ್ವೈತ ವಿಶಿಷ್ಟಾದ್ವೈತದ ವಿದ್ವಾಂಸರ ನಡುವೆ ಚರ್ಚೆ ನಡೆದಿತ್ತು. ಮುಗಟಖಾನ ಹುಬ್ಬಳ್ಳಿಯಲ್ಲಿ ನಡೆದ ೨೧ನೇ ಅದಿವೇಶಾನದಲ್ಲಿ ಶ್ರೀವಿದ್ಯಾಮಾನ್ಯತೀರ್ಥರು ಅದ್ವೈತವನ್ನು ಸಮರ್ತಿಸಿ, ವಾದಿಸಿದ್ದರೆ ಶ್ರೀವಿಶ್ವೇಶತೀ
ರ್ಥ ಶ್ರೀಪಾದರು ದ್ವೈತವನ್ನು ಪ್ರತಿಪಾದಿಸಿ ಸಾದಿಸಿದ್ದರು. ಹೀಗೆ ಗುರು-ಶಿಷ್ಯರೊಳಗೆ ದ್ವೈತಾದ್ವೈತ ಚರ್ಚೆ ಶ್ರೀ ಭೀಮನಕಟ್ಟೆ ಶ್ರೀರಘುತಿಲಕತೀರ್ಥರ ಅಧ್ಯಕ್ಶತೆಯಲ್ಲಿ ನಡೆದಿದ್ದು ಜನಮನಕ್ಕೆ ಮುದನೀಡಿತ್ತು. 
೫. ಪ್ರವಚನಗಳೂ, ಉಪನ್ಯಾಸಗಳೂ
ನಲ್ವತ್ತೊಂಭತ್ತು ಅಧಿವೇಶನಗಳಲ್ಲೂ ನಿಯತವಾಗಿನೆಡೆಯುತ್ತ ಬಂದ ಕಾರ್ಯಕ್ರಮವೆಂದರೆ ಶ್ರೀಪಾದರುಗಳ ಪ್ರವಚನಗಳು ಹಾಗೂ ವಿದ್ವಾಂಸರುಗಳ ಉಪನ್ಯಾಸಗಳು.
ಶ್ರೀಪಾದಂಗಳವರು ಬ್ರಹ್ಮಸೂತ್ರ, ಭಗವದ್ಗೀತಾ, ಗಾಯತ್ರಿ, ಯುಕ್ತಮಲ್ಲಿಕಾ ಮುಂತಾದ ಗ್ರಂಥಗಳ ಕುರಿತೂ, ಸದ್ಗ್ರಂಥಗಳ ಬೇರೆಬೇರೆ ಸಂದೇಶಗಳ ಕುರಿತೂ, ಪರಮತಸಹಿಷ್ಣುತೆ ಮುತಾಂದ ಸಾಮಾನ್ಯ ವಿಷಯಗಳ ಕುರಿತೂ ಉದ್ಬೋಧಕ ಹಾಗೂ ವೈಚಾರಿಕ ಪ್ರವಚನಗಳನ್ನು ನೀಡಿದ್ದಾರೆ. ಈ ಪ್ರವಚನಗಳ ಸಂದೇಶ ಅಧಿವೇಶನದಲ್ಲಿ ಭಾಗವಹಿಸಲಾಗದ, ಬೇರೆ ಬೇರೆ ಸ್ಥಳಗಳಲ್ಲಿರುವ ಜಿಜ್ಞಾಸುಗಳಿಗೂ ತಲುಪುವಂತಾಗಬೇಕೆಂಬ ಉದ್ದೇಶದಿಂದ ಸಭೆಯ ಅಧಿವೇಶನಗಳ ವರದಿಯನ್ನು ನಿವೇದಿಸುವ ಕಿರುಹೊತ್ತಿಗೆಗಳಲ್ಲಿ ಪ್ರಕಟಿಸಲಾಗುತ್ತಿತ್ತು.
ಪ್ರಸಿದ್ಧ ವಿದ್ವಾಂಸರ ಉಪನ್ಯಾಸಗಳನ್ನೂ ಸಂಯೋಜಿಸಲಾಗುತ್ತಿದೆ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಪ್ರಥಮ ಪರ್ಯಾಯಾವಧಿಯಲ್ಲಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಸಭೆಯ ಹತ್ತನೇ ಅಧಿವೇಶನ ಮಾಘ ಶುದ್ಧ ದ್ವಿತೀಯಾದಿಂದ ಆರಂಭಿಸಿ ಮಧ್ವನವನಿಯವರೆಗೆ ಸಪ್ತಾಹ ಅವಧಿಯಲ್ಲಿ ನಡೆದಿದ್ದು, ಅದರಲ್ಲಿ ಎಂಭತ್ತು ವಿದ್ವಾಂಸರು ಶ್ರೀವಾದಿರಾಜ ತೀರ್ಥರ 'ಯುಕ್ತಮಲ್ಲಿಕಾ' ಗ್ರಂಥದ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದರು. ಮುಗುಟಖಾನ ಹುಬ್ಬಳ್ಳಿಯಲ್ಲಿ ನಡೆದ ಅಧಿವೇಶನದಲ್ಲಿ ''ಮಧ್ವಮತದ ವೈಶಿಷ್ಟ್ಯ'' ಎಂಬ ವಿಷಯದಲ್ಲಿ ಉಪನ್ಯಾಸ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಅದರಲ್ಲಿ ಪಾಂಡುರಂಗಿ ಗುರುರಾಜಾಚಾರ್ಯ, ಗುರುರಾಜಾಚಾರ್ಯ ಜೋಶಿ ಹಾಗೂ ಕಾಪು ಹಯಗ್ರೀವಾಚಾರ್ಯರು -ಕ್ರಮೇಣ ಬಹುಮಾನಗಳನ್ನು ಗಳಿಸಿದ್ದರು.
ಅನಂತರದ ಅಧಿವೇಶನಗಳಲ್ಲಿ ರಾಮಾಯಣ, ಮಹಾಭಾರತ ತಾತ್ಪರ್ಯನಿರ್ಣಯ, ಸುಮಧ್ವವಿಜಯ, ಹರಿಕಥಾಮೃತಸಾರ-ಮುಂತಾದ ಗ್ರಂಥಗಳ ಬಗ್ಗೆ ವಿದ್ವಾಂಸರ ವಿಚಾರ ಸಂಕಿರಣಗಳನ್ನೂ ಏರ್ಪಡಿಸಲಾಗುತ್ತಿದೆ. ಹಾಗೆಯೇ ಪುರೋಹಿತ ಸಮ್ಮೇಳನಗಳನ್ನು ನಡೆಸಿ ಉಪನಯನ, ಶ್ರಾದ್ಧ ಮುಂತಾದ ಪ್ರಮೇಯಗಳಬಗ್ಗೆ ಪುರೋಹಿತರೊಳಗೆ ವಿಮರ್ಶೆಯನ್ನು ನಡೆಸಲಾಗಿತ್ತಿತ್ತು.
ಪಾಠಾದಿಗಳ ವ್ಯವಸ್ಥೆ
ಮಾಧ್ವರಾದ್ಧಾಂತ ಸಂವರ್ಧಕ ಸಭೆ ಪ್ರತಿವರ್ಷ ಅಧಿವೇಶನದ ಮೂಲಕ ಪರೀಕ್ಷೆ , ಪ್ರವಚನ ಮುಂತಾದವುಗಳನ್ನು ನಡೆಸುವುದಲ್ಲದೆ, ಭಂಡಾರಕೇರಿ ಮಠದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಅನ್ನವಸ್ತ್ರಾದಿಗಳನ್ನು ಕೊಟ್ಟು ಸಚ್ಛಾಸ್ತ್ರ ಅಧ್ಯಯನ ಮಾಡಿಸುತ್ತಿತ್ತು. ಉಡುಪಿಯಲ್ಲಿ ವೇದಾಂತ ವಿದ್ಯಾಸೌಕರ್ಯಕ್ಕಾಗಿ ಪಾಠಶಾಲೆಯೊಂದನ್ನು ನಡೆಸುತ್ತಿತ್ತು. ಕೊಯಮತ್ತೂರು ಮತ್ತು ಧಾರಾವಾಡಗಳಲ್ಲಿ ವಿದ್ವಾಂಸರ ಮೂಲಕ ನ್ಯಾಯಸುಧಾದಿ ಗ್ರಂಥಗಳ ಪ್ರವಚನವನ್ನು ನಡೆಸುತ್ತಿತ್ತು. ಉಡುಪಿ ಸಂಸ್ಕೃತ ಪಾಠಶಾಲೆಯ ನ್ಯಾಯ , ವೇದಾಂತ ಕಕ್ಷೆಯ ವಿದ್ಯಾರ್ಥಿಗಳಿಬ್ಬರಿಗೆ ಮಾಸಿಕ ವೇತನ ರೂ. ೬ ರಂತೆ ಸಹಾಯವನ್ನೀಯುತ್ತಿತ್ತು.
ಗ್ರಂಥ ಪ್ರಕಾಶನ
ಪ್ರತಿ ವರ್ಷದ ಅಧಿವೇಶನದ ವರದಿಯನ್ನು ಮುದ್ರಿಸುವಾಗ ಅದರಲ್ಲಿ ಶ್ರೀಪಾದಂಗಳವರ ಪ್ರವಚನಗಳ ಸಂಗ್ರಹವನ್ನೂ, ಚರ್ಚಾಗೋಷ್ಠಿಯ ಸಾರವನ್ನೂ ಪ್ರಕಟಿಸಲಾಗುತ್ತಿತ್ತು. 'ಅದ್ವೈತಸ್ಯೈವ ಅಪೂರ್ವತ್ವಂ' ಎಂಬ ಗ್ರಂಥಕ್ಕೆ ಖಂಡನಾತ್ಮಕವಾಗಿ ದ್ವೈತಸ್ಯೈವಾಪೂರ್ವತ್ವಂ' ಎಂಬ ಗ್ರಂಥವನ್ನು ಪ್ರಕಟಿಸಲಾಗಿದೆ. 'ಗಾಯತ್ರೀ ಗಾಂಭೀರ್ಯ' ಎಂಬುದಾಗಿ ಗಾಯತ್ರಿ ಮಂತ್ರದ ಗಾಂಭೀರ್ಯವನ್ನು ವಿವರಿಸುವ ಕೃತಿಯನ್ನು ಪ್ರಕಟಿಸಲಾಗಿದೆ. ಕನ್ನಡ ಅನುವಾದ ಸಹಿತವಾಗಿ ತತ್ತ್ವಸಂಖ್ಯಾನ, ತತ್ವವಿವೇಕ, ಉಪಾಧಿಖಂಡನ, ಮಾಯಾವಾದ ಖಂಡನಗಳನ್ನು ಪ್ರಕಾಶಿಸಲಾಗಿದೆ. ಹಾಗೆಯೇ ಇನ್ನೂ ಸತ್ಸಿದ್ದಾಂತದ ಪ್ರಮೇಯಗಳ ಕುರಿತ ಕಿರು ಹೊತ್ತಿಗೆಗಳನ್ನು ಪ್ರಕಟಿಸಲಾಗಿದೆ.
ಸುಮಾರು ಮೂರು ಸಾವಿರ ಪುಟಗಳಷ್ಟು ಬೃಹದ್ಗ್ರಂಥಗಳಾದ ಶ್ರೀಮದಾಚಾರ್ಯರ ದಶ ಪ್ರಕರಣಗಳನ್ನು ಟೀಕಾಟಿಪ್ಪಣಿ ಸಹಿತವಾಗಿ ಪ್ರಕಟಿಸಲಾಗಿದೆ.
ಶ್ರೀಪ್ರಭಂಜನಾಚಾರ್ಯರು ಪ್ರಕಟಿಸಿದ್ದ ಕನ್ನಡ ಅನುವಾದ ಸಹಿತ ತೀರ್ಥಪ್ರಬಂಧದ ಪ್ರಕಟಣೆಗೆ ಆರ್ಥಿಕ ನೆರವನ್ನೂ ಸಭೆಯಿಂದ ನೀಡಲಾಗಿದೆ.
ಆರ್ಥಿಕ ವ್ಯವಸ್ಥೆ
ಈ ರೀತಿಯಾಗಿ ಪ್ರತಿವರ್ಷ ಅಧಿವೇಶನವನ್ನು ನಡೆಸುವುದು, ಅದರಲ್ಲಿ ನೂರಾರು ವಿದ್ಯಾರ್ಥಿಗಳಿಗೂ, ವಿದ್ವಾಂಸರಿಗೂ ಸಂಭಾವನೆಯನ್ನು ವಿತರಿಸುವುದು, ಪ್ರಶಸ್ತಿ ಪ್ರದಾನ, ಬೇರೆ ಬೇರೆ ಕಡೆ ಪಾಠ ಪ್ರವಚನಾದಿಗಳ ಏರ್ಪಾಟು, ಗ್ರಂಥಪ್ರಕಾಶನ-ಮುಂತಾದ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡು, ನಡೆಸುತ್ತ ಬಂದ ಮಾಧ್ವರಾದ್ದಾಂತ ಸಂವರ್ಧಕ ಸಭೆಯ ಆರ್ಥಿಕ ವ್ಯವದ್ಥೆ ಆಕರ್ಷಕವಾದದ್ದು.
ಆಶ್ತಿಕದಾನಿಗಳಿಂದ ಸಂಗೃಹೀತವಾದ ಹಣವೇ ಈ ಸಭೆಗೆ ಮುಖ್ಯಾಧಾರ, ಮಠದ ಕಾರ್ಯಕರ್ತರು ಅಭಿಮಾನಿಗಳು ಬೇರೆಬೇರೆ ಊರಿಗೆ ಹೋಗಿ ಅಲ್ಲಿ ಯ ಆಸ್ತಿಕರಿಂದ ಪ್ರತಿ ವರ್ಷ ಸಭೆಯ ಹೆಸರಲ್ಲಿ ದೇಣಿಗೆಯನ್ನು ಸ್ವೀಕರಿಸುವರು. ಆದೇಣಿಗೆ ಸಾವಿರಗಟ್ಟಲೆ ರೂ. ಆಗಿದ್ದರಬಹುದು ಅಥವಾ ಐವತ್ತು ರೂ ಕೂಡಾ ಆಗಿದ್ದರಬಹುದು. ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದಲ್ಲದೆ, ಸ್ವೀಕೃತವಾದ ದೇಣಿಗೆಗೆ ತಪ್ಪದೆ ರಸೀದಿಯನ್ನು ನೀಡಲಾಗುವುದು. ಪ್ರಾರಂಭದ ವರ್ಷಗಳಲ್ಲಿ ಒಂದೆರಡು ರೂ. ದೇಣಿಗೆಯನ್ನೂ ಸ್ವೀಕರಿಸಲಾಗುತ್ತಿತ್ತು. ಬರೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲ, ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಂಗಳೂರು ಮುಂತಾದ ಬೇರೆ ಬೇರೆ ನಗರಗಳಲ್ಲೂ ಆಂಧ್ರ, ತಮಿಳ್ನಾಡು ಮುಂತಾದ ಇತರ ರಾಜ್ಯಗಳ ನಗರಗಳಲ್ಲೂ ಈ ಸಭೆಗಾಗಿ ದೇಣಿಗೆ ವಸೂಲಿ ನಡೆಸಲಾಗುವುದು. ಸಭೆಯ ಸಾತ್ತ್ವಿಕ ಕಾರ್ಯಕ್ರಮಗಳನ್ನು ಪರಿಶೀಲಿಸುವ ಯಾವ ಸಾತ್ತ್ವಿಕನೂ ತನ್ನ ಪಾಲಿನ ದೇಣಿಗೆಯನ್ನು ಸಲ್ಲಿಸಲು ಹಿಂಜರಿಯುವುದಿಲ್ಲ. ಅಲ್ಲದೆ, ಪ್ರತಿಯೊಂದು ದೇಣಿಗೆಯ ಮಾಹಿತಿಯನ್ನೂ ದಾನಿಗಳ ನಾಮೋಲ್ಲೇಖ ಪೂರ್ವಕವಾಗಿ ಪ್ರಕಟಿಸಿ, ಹಾಗೆ ಒಟ್ಟು ಸಂಗೃಹೀತವಾದ ಹಣದ ಮೊತ್ತವನ್ನೂ ಅದನ್ನು ಸಂಭಾವನೆಯೇ ಮುಂತಾದುವುಗಳಿಗಾಗಿ ವಿನಿಯೋಗಿಸಿದ್ದನ್ನೂ ಸ್ಪಷ್ಟವಾಗಿ ಪ್ರತಿವರ್ಷ ವರದಿಯನ್ನು ಒಪ್ಪಿಸುವ ಸಭೆಯ ಪ್ರಾಮಾಣಿಕತೆಯೂ ದಾನಿಗಳಿಗೆ ತಮ್ಮ ದೇಣಿಗೆಯನ್ನು ಮುಂದುವರಿಸುವಂತೆ ತೃಪ್ತಿಯನ್ನು ನೀಡಬಲ್ಲದಾಗಿದೆ.

ಸುಮಾರು ಐದಾರು ಸಾವಿರ ರೂ. ಮೊತ್ತದಲ್ಲಿ ಪ್ರಾರಂಭವಾದ ಸಭೆ, ಮೂರುಲಕ್ಷದವರೆಗೆ ಸಂಭಾವನೆಯನ್ನು ವಿತರಿಸುವ ಸ್ಥಿತಿಗೆ ತಲುಪಿರುವ ಇಂದಿನದಿನಗಳಲ್ಲೂ ಮುಖ್ಯವಾಗಿ ದಾನಿಗಳ ದೇಣಿಗೆಯನ್ನೇ ಅವಲಂಬಿಸಿರುವುದು. ಬೇರೆ ಬೇರೆ ಊರುಗಳಲ್ಲಿ ಅಧಿವೇಶನ ನಡೆದಾಗ ಊಟ, ವಸತಿ ಮುಂತಾದ ವ್ಯವಸ್ಠಯನ್ನು ಮಾತ್ರ ಸ್ಥಳೀಯರಿಂದಲೇ ನಡೆಸಲಾಗುವುದು.
ಆಸ್ತಿಕರ ಪೂರ್ಣ ಬೆಂಬಲ
ಹೀಗೆ ಆಸ್ತಿಕರು ತಮ್ಮ ತನು, ಮನ, ಧನಗಳಿಂದ ಈ ಸಭೆಯ ಬಗ್ಗೆ ಆತ್ಮೀಯತೆ ತೋರಿಸಿಕೊಂಡು ಬಂದಿರುವುದರಿಂದಲೇ ಇದು ನಿರಂತರವಾಗಿ ತನ್ನ ಚಟುವಟಿಕೆಗಳನ್ನು ನಡೆಸುತ್ತ ಬಂದಿದೆ.
      ಶ್ರೀವಿದ್ಯಾಮಾನ್ಯ ತೀರ್ಥರ ಶಿಷ್ಯರೂ, ಅಭಿಮಾನಿಗಳೂ ಆಗಿರುವ ಆನೇಕ ಕಾರ್ಯಕರ್ತರ ಸೇವೆ ಉಲ್ಲೇಖಾರ್ಹ. ಸರ್ವಶ್ರೀ ಪಿ.ಕೆ. ಹರಿದಾಸಾಚಾರ್ಯರು, ಸಗ್ರಿಲಕ್ಷ್ಮೀನಾರಾಯಣಾಚಾರ್ಯರು, ಅರ್ಚಕ ವೆಂಕಣ್ಣಾಚಾರ್ಯರು , ಬದರೀ ನಾರಾಯಣಾಚಾರ್ಯರು , ರಾಜಪುರೋಹಿತ ಮಾಧವಾಚಾರ್ಯರು, ಉಂಡಾರು ಶ್ರೀನಿವಾಸಮೂರ್ತ್ಯಾಚಾರ್ಯರು, ಕಾಕಿನಾಡು ರಾಮಚಂದ್ರರಾವ್, ಚಿತ್ರದುರ್ಗ ಪ್ರಾಣೇಶಾಚಾರ್ಯರು, ಪಾಡಿಗಾರ ಕೇಶವಾಚಾರ್ಯ, ಎ.ವಿ. ಕೊಡಂಚರು, ಹೆಬ್ರಿ ಶ್ರೀನಿವಾಸಾಚಾರ್ಯರು, ಮಹಿಶಿ ವೆಂಕಣ್ಣಾಚಾರ್ಯರು, ಅನಂತಕೃಷ್ಣ ಅಡಿಗ, ಕೃಷ್ಣಮೂರ್ತಿ ತೆಂಕಿಲ್ಲಾಯ, ಇನ್ನ ನರಸಿಂಹಾಚಾರ್ಯರು, ಅಲೆವೂರು ಗೋಪಾಲಕೃಷ್ಣಾಚಾರ್ಯ, ಹೈದರಾಬಾದ್ ಪಿ. ರಾಮಕೃಷ್ಣಾಚಾರ್ಯರು, ಶ್ರೀ ವೆಂಕಟರಮಣಾಚಾರ್ಯರು, ಅನಂತತಡಸರು, ನಾರಾಯಣಾಚಾರ್ಯ ಗೋಟೂರು, ಉಮರ್ಜಿ ಮಧ್ವಾಚಾರ್ಯ, ರಾಮಕೃಷ್ಣ ಕೇಕುಡರು ಮುಂತಾದವರೆಲ್ಲ ಸಭೆಗೆ ಹಣ ಸಂಗ್ರಹದಲ್ಲಿ ಸಹಕರಿಸುತ್ತಿದ್ದರು. ಇವರಲ್ಲಿ ಇನ್ನೂ ಕೆಲವರು ತಮ್ಮ ಸೇವೆಯನ್ನು ಮುಂದುವರಿಸುತ್ತಿರುವರು. ಶ್ರೀ ಮಟ್ಟಾಡಿ ದಾಸಾಚಾರ್ಯರು ಸಭೆಯ ಕಾರ್ಯನಿರ್ವಾಹಕ ಮಂಡಲದ ಅಧ್ಯಕ್ಷರಾಗಿಯೂ ಕೆ. ಸುಬ್ರಾಯ ಪುರಾಣಿಕರು ಉಪಾಧ್ಯಕ್ಷರಾಗಿಯೂ ಪಿ.ಕೆ. ಹರಿದಾಸಾಚಾರ್ಯರು ಕಾರ್ಯದರ್ಶಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದರು. ದಿ.ಪಿ.ಕೆ. ಹರಿದಾಸಾಚಾರ್ಯರು ಅಧಿವೇಶನಗಳ ವರದಿನಗಳನ್ನಲ್ಲದೆ ಅಧಿವೇಶನಗಳಲ್ಲಿ ಮೂಡುಬರುತ್ತಿದ್ದ ಶ್ರೀಪಾದಂಗಳವರ ಪ್ರವಚನಗಳಲ್ಲಿ ಮೂಡಿಬರುತ್ತಿದ್ದ ವಾಕ್ಯಾರ್ಥಗಳನ್ನು, ಚರ್ಚಾಗೋಷ್ಠಿಯ ಪ್ರಮೇಯಗಳನ್ನು ಸೆರೆಹಿಡಿದು ವರದಿ ಪುಸ್ತಕಗಳಲ್ಲಿ ದಾಖಲಾಗಿರಿಸಿರುವಂತಹದ್ದು ತುಂಬ ಅಭಿನಂದನೀಯವಾದುದು.
ಧರ್ಮಭೂಷಣ ಸೀತಾರಾಮರಾಯರ ಸ್ಮರಣಾರ್ಹ ಕೊಡುಗೆ
ಮದ್ರಾಸಿನ ಧರ್ಮಭೂಷಣ ಕೆ. ಸೀತಾರಾಮರಾಯರು ಸಭೆಗೆ ತನು-ಮನು-ಧನಗಳಿಂದ ನೀಡಿದ ಕೊಡುಗೆ ವಿಶೇಷಹವಾಗಿ ಸ್ಮರಣಾರ್ಹ. ಹೆಚ್ಚಿನ ಅಧಿವೇಶನಗಳಿಗೆಲ್ಲ ಐನೂರಕ್ಕಿಂತಲೂ ಕಮ್ಮಿ ಇಲ್ಲದ ದೇಣಿಗೆಯನ್ನು ನೀಡುತ್ತಿದ್ದರಲ್ಲದೆ, ಸಭೆ ನಿರಂತರವಾಗಿ ನಡೆಯುವಂತೆ 'ಟ್ರಸ್ಟ್' ನ್ನು ರಚಿಸುವಲ್ಲಿ ದೊಡ್ಡ ಪಾತ್ರವಹಿಸಿದ್ದರು. '' ಆನಂದತೀರ್ಥ ಪಾರಿತೋಷಕದ ನಿಧಿ'' ಗೆ ದೊಡ್ಡ ದೊಡ್ಡ ಮೊತ್ತವನ್ನು ಸಂಗ್ರಹಿಸಿ
ಕೊಟ್ಟದ್ದಿದೆ. ಸಭೆಯ ಅಧಿವೇಶನ ಮದ್ರಾಸಿನಲ್ಲಿ ಯಶಸ್ವಿಯಾಗಿ ನಡೆಯುವಂತೆ ಸರ್ವವಿಧಧ ವ್ಯವಸ್ಥೆಯನ್ನು ಏರ್ಪಡಿಸಿದ್ದರಲ್ಲದೆ ಆ ಅಧಿವೇಶನದಲ್ಲಿ ಪಾಲ್ಗೊಂಡ ೧೦೮  ಶ್ರೋತ್ರಿಯರಿಗೆ ಚಿನ್ನದ ಪವನ್, ಬೆಳ್ಳಿಯ ತಂಬಿಗೆ, ಉದ್ದರಣೆ, ಥಾಲಿ, ಜೋಡು ಪಂಚೆ ಇವನ್ನೆಲ್ಲ ಕೊಟ್ಟು ಸನ್ಮಾನಿಸಿದ್ದರು.
ಮಠಾಧಿಪತಿಗಳ ಪಾತ್ರ
ಅನೇಕ ಪೀಠಾಧಿಪತಿಗಳು ಅಧಿವೇಶನಗಳಲ್ಲಿ ಪಾಲ್ಗೊಳ್ಳುವ ಮೂಲಕವೂ, ತಮ್ಮ ಪಾಲಿನ ದೇಣಿಗೆ ನೀಡುವ ಮೂಲಕವೂ ಸಭೆಯ ಅಧಿವೇಶಗಳಲ್ಲಿ ಪಾತ್ರ ವಹಿಸಿದ್ದಿದೆ. ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಸುಬ್ರಹ್ಮಣ್ಯ ಮಠದ ಶ್ರೀವಿಶ್ವಜ್ಞತೀರ್ಥರು, ಪುತ್ತಿಗೆ ಮಠದ ಶ್ರೀಸುಧೀಂದ್ರ ತೀರ್ಥರು, ಅದಮಾರು ಮಠದ ಶ್ರೀವಿಬುಧೇಶತೀರ್ಥರು, ಭೀಮನಕಟೆ ಮಠದ ಶ್ರೀ ರಘುತಿಲಕತೀರ್ಥರು, ಶ್ರೀರಾಘವೇಂದ್ರ ಮಠದ ಶ್ರೀ ಸುಯಮೀಂದ್ರ ತೀರ್ಥರು, ಬಾಳಿಗಾರು ಮಠದ ಶ್ರೀ ರಘುಮಾನ್ಯತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾಸಮುದ್ರತೀರ್ಥರು, ಸೋದಾ ಮಠದ ಶ್ರೀ ವಿಶ್ವೋತ್ತಮತೀರ್ಥರು, ಉತ್ತರಾದಿ ಮಠದ ಶ್ರೀ ಸತ್ಯಪ್ರಮೋದತೀರ್ಥರು, ಚಿತ್ರಾಪುರ ಮಠದ ಶ್ರೀವಿದ್ಯಾಪೂರ್ಣತೀರ್ಥರು, ಕಾಶೀಮಠದ ಶ್ರೀ ಸುಧೀಂದ್ರತೀರ್ಥರು, ಗೋಕರ್ಣಪರ್ತಗಾಳಿ ಮಠದ ಶ್ರೀದ್ವಾರಕಾನಾಥ ತೀರ್ಥರು, ಪುತ್ತಿಗೆ ಮಠದ ಶ್ರೀ ಸುಜ್ಞಾನೇಂದ್ರತೀರ್ಥರು , ಕಾಣಿಯೂರುಮಠದ ಶ್ರೀ ವಿದ್ಯಾವಾರಿನಿಧಿತೀರ್ಥರು ಈ ಎಲ್ಲ ಮಠಾಧೀಶರು ಸಭೆಗೆ ಆರ್ಥಿಕವಾಗಿ ಸಹಕರಿಸಿದ್ದಿದೆ. ಇವರಲ್ಲಿ ಕೆಲವರು ಪ್ರತಿಯೊಂದು ಅಧಿವೇಶನಕ್ಕೂ ಆರ್ಥಿಕ ನೆರವು ನೀಡಿದ್ದರೆ ಮತ್ತೆ ಕೆಲವರು ಹೆಚ್ಚಿನ ಅಧಿವೇಶನಗಳಿಗೆ ಆ
ರ್ಥಿಕ ಸಹಕಾರ ನೀಡಿದ್ದಿದೆ. ಇನ್ನು ಕೆಲವರು ಒಂದೆರಡು ಅಧಿವೇಶನಗಳಿಗಷ್ಟೇ ತಮ್ಮ ದೇಣಿಗೆಯನ್ನು ನೀಡಿದ್ದಿದೆ. ಆದರೂ ಈ ದೇಣಿಗೆಯ ಹಿನ್ನೆಲೆಯಾಗಿ ಅವರಿಗೆ ಸಭೆಯ ಕುರಿತು ಇರುವ ಸದ್ಭಾವನೆ ಸ್ಪಷ್ಟವಾಗದಿರದು.
ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ ಸಭೆಯ ಅಧಿವೇಶನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕವೂ ಕೆಲವು ಮಠಾಧಿಪತಿಗಳು ಸಭೆಗೆ ಗೌರವವನ್ನು ಹೆಚ್ಚಿಸಿದ್ದಿದೆ.
ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರತೀರ್ಥರು, ಕಾಣಿಯೂರು ಮಠದ ಶ್ರೀ ವಿದ್ಯಾಸಮುದ್ರತೀರ್ಥರು, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು, ಅದಮಾರುಮಠದ ಶ್ರೀ ವಿಬುಧೇಶತೀರ್ಥರು, ಭೀಮನಕಟ್ಟೆಮಠದ ಶ್ರೀ ರಘುತಿಲಕತೀರ್ಥರು, ಸೋದಾಮಠದ ಶ್ರೀ ವಿಶ್ವೋತ್ತಮ ತೀರ್ಥರು, ಶೀರೂರುಮಠದ ಶ್ರೀ 
ಲಕ್ಷ್ಮೀಂದ್ರತೀರ್ಥರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಪೂರ್ಣತೀರ್ಥರು, ಸುಬ್ರಹ್ಮಣ್ಯ ಮಠದ ಶ್ರೀ ವಿಶ್ವಜ್ಞತೀರ್ಥರು, ಬಾಳಗಾರು ಮಠದ ಶ್ರೀ ರಘುಮಾನ್ಯ ತೀರ್ಥರೂ ಸಭೆಯ ಅಧಿವೇಶನಗಳಲ್ಲಿ ಅಧ್ಯಕ್ಷರಾಗಿ, ಉದ್ಘಾಟಕರಾಗಿ, ಅನುಗ್ರಾಹಕರಾಗಿ ಪಾಲ್ಗೊಂಡದ್ದಿದೆ.
ಶ್ರೀ ಸುಧೀಂದ್ರ ತೀರ್ಥರ ಅನುಗ್ರಹ
ಸಭೆಯ ೧೩ನೇ ಅಧಿವೇಶನ (೧೯೫೬) ಉಡುಪಿ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ನಡೆದಿದ್ದು. ಆಗ ಶ್ರೀ ಪುತ್ತಿಗೆಮಠದ ಶ್ರೀ ಸುಧೀಂದ್ರತೀರ್ಥ ಶ್ರೀಪಾದಂಗಳವರಿಗೆ ಅವರ ಶತಮಾನೋತ್ಸವದ ಅಂಗವಾಗಿ ಅಭಿನಂದನ ಪತ್ರ ಸಹಿತವಾಗಿ ಸಾವಿರದ ನೂರ ಒಂದು ರೂ. ನಿಧಿಯನ್ನು ಕಾಣಿಕೆ ರೂಪದಿಂದ ಸಮರ್ಪಿಸಲಾಗಿತ್ತು. ಆದರೆ ಶ್ರೀಪಾದಂಗಳವರು ಆ ಹಣವನ್ನು ಸಭೆಗೇ ಒಪ್ಪಿಸಿ, ಅದರಿಂದ ಪ್ರತಿವರ್ಷ ಪಾರಿತೋಷಕ ನೀಡುವಂತೆ ತಿಳಿಸಿದರು. ' ಶ್ರೀ ಸುಧೀಂದ್ರ ಪಾರಿತೋಷಕ' ಎಂದೇ ಆ ಪಾರಿತೋಷಕಕ್ಕೆ ಹೆಸರಿಡಲಾಯಿತು.
ಸಭೆಯ ಆರನೇ ಅಧಿವೇಶನಕ್ಕೆ ಅಧ್ಯಕ್ಷರಾಗಿದ್ದ ಶ್ರೀ ಸುಧೀಂದ್ರತೀರ್ಥರು ಶ್ರೀ ಮಾಧ್ವರಾದ್ಧಾಂತ ಸಂವರ್ಧಕ ಸಭೆಯನ್ನು ನಡೆಸುವ ಶ್ರೀ ವಿದ್ಯಾಮಾನ್ಯತೀರ್ಥರ ಸೇವೆಯನ್ನು ಅಭಿನಂದಿಸಿ, ಶ್ರೀಗಳವರಿಗೆ ಆಯುರಾರೋಗ್ಯಾದಿ ಸಂಪತ್ತನ್ನು ಭಗವಂತನು ಅನುಗ್ರಹಿಸಲೆಂದು ಹಾರೈಸಿದ್ದಲ್ಲದೆ , ಸಭೆಗೆ ಸಹಕಾರ ನೀಡಲು ಧಾರ್ಮಿಕರಿಗೆ ಕರೆ ನೀಡಿದ್ದರು.
ಮಹಾತಪಸ್ವಿಗಳೂ, ಜ್ಞಾನವಯೋವೃದ್ಧರೂ ಆಗಿದ್ದ ಅಂತಹ ಮಹಾತ್ಮರ ತುಂಬುಹೃದಯದ ಹಾರೈಕೆಗಳೂ ಸುವರ್ಣ ಮಹೋತ್ಸವವನ್ನು ಕಾಣುವಷ್ಟು ಅಭಿವೃದ್ಧಿ ಹೊಂದಿರುವ ಸಭೆಯ ಯಶಸ್ಸಿಗೆ, ಅಭಿವೃದ್ಧಿಗೆ ಕಾರಣವೆಂಬುದನ್ನು ಮರೆಯುವಂತಿಲ್ಲ.
ಸಭೆಯ ಸಹೋದರ ಶ್ರೀ ವಿಶ್ವೇಶ ತೀರ್ಥರು
ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರಿಗೂ ಮಾಧ್ವರಾದ್ಧಾಂತ ಸಂವರ್ಧಕ ಸಭೆಗೂ ಇರುವ ನಂಟು ಉಲ್ಲೇಖಾರ್ಹವಾದುದು. ಶ್ರೀ ವಿಶ್ವೇಶ ತೀರ್ಥರು ಶ್ರೀವಿದ್ಯಾಮಾನ್ಯ ತೀರ್ಥರಲ್ಲಿ ಶಿಷ್ಯತ್ವವನ್ನು ಹೊಂದಿದ ಆ ಸುವರ್ಣ ಸಂದರ್ಭದಲ್ಲೇ ಶ್ರೀವಿದ್ಯಾಮಾನ್ಯತೀರ್ಥರಿಂದ ರೂಪುಗೊಂಡದ್ದು ಮಾದ್ವರಾದ್ಧಾಂತ ಸಂವರ್ಧಕ ಸಭೆ. ಆದುದರಿಂದ ಆ ಸಭೆ ತನ್ನ ನೆಚ್ಚಿನ ಸಹೋದರಿಯಂತೆ ಇರುವಂತಹದ್ದೆಂದು ಶ್ರೀ ವಿಶ್ವೇಶತೀರ್ಥರು ಅಭಿಮಾನ ಪೂರ್ವಕವಾಗಿ ಉಲ್ಲೇಖಿಸುತ್ತಿರುವುದುಂಟು.
ಸಭೆಯ ಮೊದಲ ಅಧಿವೇಶನಕ್ಕೆ ಶ್ರೀ ವಿಶ್ವೇಶತೀರ್ಥರೇ ಅಧ್ಯಕ್ಷರಾಗಿದ್ದರು. ಅಲ್ಲದೆ, ಮುಂದೆ ನಡೆದ ಐವತ್ತೆಂಟು ಅಧಿವೇಶನಗಳಲ್ಲೂ ಶ್ರೀಪಾದರು ಸ್ಥಾಯಿ ಅಧ್ಯಕ್ಷರಾಗಿದ್ದುಕೊಂಡು ಸಕ್ರಿಯವಾಗಿ ಭಾಗವಹಿಸಿರುವರು. ಸಭೆಯ ಅನೇಕ ಅಧಿವೇಶನಗಳ ಜೊತೆಗೆ ಶ್ರೀ ಪೇಜಾವರ ಶ್ರೀಗಳವರ ನೇತೃತ್ವದ ಅಖಿಲ ಭಾರತ ಮಾಧ್ವಮಹಾಮಂಡಲದ ಸಮ್ಮೇಳನಗಳೂ ನಡೆದಿದ್ದು, ಅದರಿಂದಾಗಿ ಸಭೆಗೆ ಸಾಕಷ್ಟು ಮೆರಗು ಬಂದದ್ದುಂಟು.
ಧರ್ಮಬೋಧದಲ್ಲಿ ವರದಿ
'' ಮಾಧ್ವರಾದ್ಧಾಂತ ಸಂವರ್ಧಕ ಸಭೆ '' ಎಷ್ಟು ಜನಪ್ರಯವಾಗಿತ್ತೆಂಬುದಕ್ಕೆ ಆಗ ಪ್ರಸಿದ್ಧವಾಗಿದ್ದ ''ದರ್ಮಬೋಧ'' ಎಂಬ ಪತ್ರಿಕೆಯ ವರದಿ ಸಾಕ್ಷಿಯಾಗಬಲ್ಲದು. ಉಡುಪಿಯಿಂದ ಹೊರಡುತ್ತಿದ್ದ ಆ ಪತ್ರಿಕೆಯ ಎರಡನೇ ಸಂಪುಟದ ಮೂರನೇ ಸಂಚಿಕೆಯಲ್ಲಿ ಸಭೆಯ ಆರನೇ ಅಧಿವೇಶನದ ಪೂರ್ಣ ಮಾಹಿತಿಯನ್ನು ನೀಡಲಾಗಿತ್ತು.
ಆ ಪತ್ರಿಕೆಯ ಸಂಪಾದಕರಾಗಿದ್ದ ಶ್ರೀ ಉ. ವೆಂಕಟರಮಣಾಚಾರ್ಯ ಇವರು ತಮ್ಮ ಸಂಪಾದಕೀಯದಲ್ಲಿ '' ಈಗಲೀಗ ಕೆಲ ವರ್ಷಗಳಿಂದ ಶ್ರೀ ಮನ್ಮಧ್ವಾಚಾರ್ಯರ ಆಶ್ರಮ ಗುರುಗಳೆಂದೆನಿಸಿಕೊಡ ಶ್ರೀಮದಚ್ಯುತಪ್ರೇಕ್ಷಾಚಾರ್ಯರ ಪೀಠಸ್ಥರಾದ ಶ್ರೀ ಭಂಡಾರಕೇರಿ ಮಠಾಧಿಪತಿಗಳಾದ ಶ್ರೀವಿದ್ಯಾಮಾನ್ಯತೀರ್ಥ ಶ್ರೀಗಳವರು ಸಮಾಜಕ್ಕೂ, ಧರ್ಮಪೀಠಕ್ಕೂ ಇರುವ ಆಂತರಿಕ ಬಾಂಧವ್ಯವನ್ನು ಬೆಳೆಸುವ ಉದ್ದೇಶವನ್ನಿಟ್ಟುಕೊಂಡು ಭಿಕ್ಷುಗಳಾದ ತಮಗೆ ಭಿಕ್ಷೆ ವಿಹಿತವೆಂದೂ ಎಲ್ಲಾ ಸಮಾಜವು ತಪ್ಪದೆ ಯತ್ಕಿಂಚಿತ್ತಾದರೂ ಭಿಕ್ಷೆಯನ್ನುಅವಶ್ಯಕೊಟ್ಟು ಆ ಮೂಲಕ ತಾವು ನಡಿಸತಕ್ಕ ಸಂಘಟನೆ ಕಾರ್ಯವು ತಮ್ಮದೇ ಎಂಬ ಅಭಿಮಾನವೂ ಎಲ್ಲರಲ್ಲಿಯೂ ಮೂಡುವಂತಾಗಬೇಕೆಂದು ಬಯಸಿ ಸಾರ್ವತ್ರಿಕ ಧಾರ್ಮಿಕ ಭಿಕ್ಷೆಯನ್ನು ಆಚರಿಸಿ 'ಶೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭೆಯನ್ನು ನಡೆಸುವುದು ಕಾಲೋಚಿತವೂ ಪೀಠೋಚಿತವೂ ಆಗಿದೆ ಎನ್ನದಿರಲಾರೆವು'' ಎಂಬುದಾಗಿ ಸಭೆಯ ಉಪಕ್ರಮವನ್ನು ಅಭಿನಂದಿಸಿದ್ದರು. ಅಲ್ಲದೆ ಸಭೆಗೆ ಯಾರುಯಾರು ಎಷ್ಟೆಷ್ಟು ದ್ರವ್ಯ ಸಹಕಾರ ಮಾಡಿರುವರೆಂದೂ, ಸಭೆಯಲ್ಲಿ ಪಾಲ್ಗೊಂಡ ಧರ್ಮಾಧಿಕಾರಿಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಎಷ್ಟೆಷ್ಟು ಸಂಭಾವನೆ ಪಡೆದಿದ್ದರೆಂದೂ ವಿವರಣೆಯನ್ನು 'ಧರ್ಮಬೋಧ' ದ ಆ ಸಂಚಿಕೆಯಲ್ಲಿ ನೀಡಿದ್ದರು. ಆಗಿನ ಎಲ್ಲ ವಿದ್ವಾಂಸರೂ, ವಿದ್ಯಾರ್ಥಿಗಳೂ ಯಾವುದೇ ಬಗೆಯ ಪೂರ್ವಾಗ್ರಹಕ್ಕೆ ಒಳಗಾಗದೆ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರೆಂದು ಆ ವರದಿಯಿಂದ ಸೂಚಿತವಾಗುವುದು.
ಸುವರ್ಣ ಮಹೋತ್ಸವ
ಹೀಗೆ ಶ್ರೀ ವಿದ್ಯಾಮಾನ್ಯತೀರ್ಥರು ಸದುದ್ದೇಶದಿಂದ ಪ್ರಾರಂಭಿಸಿ, ಯಶಸ್ವಿಯಾಗಿ ನಡೆಸಿಕೊಂಡು ಬಂದ ಶ್ರೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭೆ ಶ್ರೀ ವಿದ್ಯಾಮಾನ್ಯ ತೀರ್ಥರಿಗೆ (೨೭.೭.೧೯೧೩) ಎಂಭತ್ತು ತುಂಬುವ ಶುಭ ಸಂದರ್ಭದಲ್ಲಿಯೇ ತನ್ನ ಸುವರ್ಣ ಮಹೋತ್ಸವವನ್ನು ಕಾಣುತ್ತಿರುವುದು ಶ್ರೀಪಾದರಿಗೂ ಸಭೆಗೂ ಇರುವ ಗಾಢವಾದ ನಂಟಿಗೆ ಜ್ಞಾಪಕವೆನಿಸಬಲ್ಲದು. ಶ್ರೀಪಾದರು ಎಂಭತ್ತು ವಸಂತಗಳನ್ನು ಕಂಡ ತಮ್ಮ ಬದುಕಿನ ಈ ಸಂದರ್ಭದಲ್ಲಿ ಜ್ಞಾಪಕಾರ್ಥವಾಗಿ ಯಾವುದೇ ಸಮಾರಂಭವನ್ನು ನಡೆಸದೆ, ಐವತ್ತು ವಸಂತಗಳನ್ನು ಕಂಡ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ಸುವರ್ಣೋತ್ಸವವನ್ನೇ ಅದಮ್ಯ ವೈಭವೋಪೇತವಾಗಿ, ಅರ್ಥಪೂರ್ಣವಾಗಿ ನಡೆಸಬೇಕೆಂದು ಸಂಕಲ್ಪಿಸಿ, ಅದಕ್ಕೆ ತಕ್ಕಂತೆ ನಡೆದುಕೊಂಡಿರುವುದು, ಅವರು ಸಭೆಯಮೇಲೆ ಎಷ್ಟು ತಾದಾತ್ಮ್ಯಭಾವವನ್ನು ತಳೆದಿರುವರೆಂಬುದನ್ನು ಸ್ಪಷ್ಟೀಕರಿಸಬಲ್ಲದು.
ಸಭೆಯ ಸುವರ್ಣೋತ್ಸವ ಪ್ರಯುಕ್ತ ಉಡುಪಿಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರ ಸನ್ನಿಧಾನದಲ್ಲಿ ಐವತ್ತನೇ ಅಧಿವೇಶನವನ್ನು ವೈಭವೋಪೇತವಾಗಿ ಆಚರಿಸುವುದು, ವಿದ್ವಾಂಸರನ್ನೂ, ಪುರೋಹಿತರನ್ನೂ, ಅಭಿಮಾನಿಗಳನ್ನೂ ಸಮ್ಮಾನಿಸುವುದು, ವರ್ಷವಿಡೀ ಬೇರೆ ಬೇರೆ ಊರುಗಳಲ್ಲಿ ಪ್ರಸಿದ್ಧ ವಿದ್ವಾಂಸರ ಮೂಲಕ ಪ್ರವಚನಗಳನ್ನು ನಡೆಸುವುದು, ಶ್ರೀಮನ್ ನ್ಯಾಯಸುಧಾ ಮುಂತಾದ ಉದ್ಗ್ರಂಥಗಳಲ್ಲಿ ತಲಸ್ಪರ್ಶಿ ಪಾಂಡಿತ್ಯ ಪಡೆದ ವಿದ್ವಾಂಸರೊಬ್ಬರ ಹೆಸರಿನಲ್ಲಿ ಎರಡು ಲಕ್ಷ ರೂ. ಮೂಲನಿಧಿ ಇಟ್ಟು ಅದರ ಬಡ್ಡಿರೂಪದಲ್ಲಿ ಪ್ರತಿ ತಿಂಗಳು ಅವರಿಗೆ ನಾಲ್ಕು ಸಾವಿರ ರೂ. ದೊರಕುವಂತೆ ವ್ಯವಸ್ಥೆಗೊಳಿಸುವುದು. ಶ್ರೀಮನ್ ನ್ಯಾಯಸುಧಾ ಜಿಜ್ಞಾಸಾಧಿಕರಣದ ಭಾಗವನ್ನು ಮೂವತ್ತು ಭಾಗಗಳನ್ನಾಗಿಸಿ, ಅವುಗಳನ್ನು ವಿದ್ವಾಂಸರಿಂದ ಕನ್ನಡದಲ್ಲಿ ಅನುವಾದಿಸಿ ಮುದ್ರಿಸುವುದು, ಸೌರಪುರಾಣದ ಕೆಲವು ಪ್ರತಿಗಳಲ್ಲಿ ಶ್ರೀಮಧ್ವಾಚಾರ್ಯರನ್ನು ನಿಂದಿಸುವ ಅಧ್ಯಾಯಗಳನ್ನೇ ತುರಿಕಿಸಿ ಪ್ರಕಟಿಸಲಾಗಿದ್ದು, ಜರ್ಮನ್ ಲೈಬ್ರರಿ ಹಾಗೂ ಇತರ ಪ್ರಾಚೀನ ಗ್ರಂಥಾಲಯಗಳ ಪ್ರತಿಗಳಲ್ಲಿ ಇಲ್ಲದ ಹಾಗೂ ಮೂಲಕ್ಕೆ ಒಗ್ಗದ ಆ ಭಾಗವನ್ನು ಹೊರತುಪಡಿಸಿ ತ್ರಿಮತಸ್ಥ ವಿದ್ವಾಂಸರ ಅಭಿಪ್ರಾಯಸಹಿತವಾಗಿ ಪರಿಷ್ಕೃತವಾಗಿ ಸೌರಪುರಾಣವನ್ನು ಮುದ್ರಿಸುವುದು, ಮಹಾಭಾರತ ತಾತ್ಪರ್ಯದ ನಾಲ್ಕನೇ ಅಧ್ಯಾಯದಿಂದ ಒಂಭತ್ತನೇ ಅಧ್ಯಾಯದವರೆಗಿನ ಅಧ್ಯಾಯಗಳಲ್ಲಿ ಪ್ರಸ್ತುತವಾದ ರಾಮಾಯಣವನ್ನು ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಕನ್ನಡಕ್ಕೆ ಅನುವಾದಿಸಿದ್ದು, ಅದರ ಮರು ಮುದ್ರಣವನ್ನು ಈ ಸಮಾರಂಭ ಪ್ರಯುಕ್ತ ನಡೆಸುವುದು, ಮುಂತಾದ ಅನೇಕ ಬಗೆಯ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದ್ದು, ಅವುಗಳಲ್ಲಿ ಹೆಚ್ಚಿನವು ನಿರೀ
ಕ್ಷೆಗಿಂತಲೂ ಹೆಚ್ಚಾಗಿಯೇ ಯಶಸ್ವಿಗಳಾಗಿವೆ.
ಸಮರ್ಪಣೆ ಮತ್ತು ಹರಕೆ
ಸಭೆಯ ಸುವರ್ಣ ಮಹೋತ್ಸವವನ್ನು ಆಚರಿಸಿ ಅದುವರೆಗೆ ಆ ಸಭೆಯ ಮೂಲಕ ತಮ್ಮಿಂದ ನಡೆದ ವಾಙ್ಮಯ ಸೇವೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿ, ಮುಂದೆ ಸಭೆಯನ್ನು ನಡೆಸುವ ಹೊಣೆಗಾರಿಕೆಯನ್ನು ಭಂಡಾರಕೇರಿ ಮಠದ ಕಿರಿಯ ಶ್ರೀಪಾದರಾದ ಶ್ರೀ ವಿದ್ಯೇಶತೀರ್ಥರಿಗೆ ವಹಿಸಿಕೊಡುವುದೆಂದು ಸಂಕಲ್ಪಿಸಿದ್ದ ಶ್ರೀಪಾದರು ತಮ್ಮ ಸಂಕಲ್ಪದಂತೆಯೇ ತಮ್ಮಿಂದ ಪಡೆದ ಜ್ಞಾನದಸೇವೆಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿ, ಮುಂದೆ ಶ್ರೀ ವಿದ್ಯೇಶತೀರ್ಥರಿಂದ ಆ ಸಭೆ ಇನ್ನಷ್ಟು ವ್ಯಾಪಕವಾಗಿ ವ್ಯವಸ್ಥಿತವಾಗಿ ನಡೆಯುವಂತಾಗಲೆಂದು ಹೃತ್ಪೂರ್ವಕವಾಗಿ ಹರಿಸಿದರು.
ಶತಮಾನಂ ಭವತು
ಶ್ರೀಪಾದರ ಸೂಕ್ತ ಮಾರ್ಗದರ್ಶನದಲ್ಲೇ ಶ್ರೀಮನ್ಮಾಧ್ವರಾದ್ದಾಂತ ಸಂವರ್ಧಕ ಸಭೆ ಶತಮಾನೋತ್ಸವವನ್ನು ಕಾಣುವಂತಾಗಲೆಂದು ಶಿಷ್ಯವರ್ಗದ, ಅಭಿಮಾನಿವೃಂದದ ಮಹದಾಸೆ.
ಶ್ರೀಮದಾಚಾರ್ಯರು ಬೆಳಗಿಸಿದ ತತ್ವಜ್ಞಾನದ ಪಂಜನ್ನು ನಿರಂತರ ಬೆಳಗುವಂತೆ ಮಾಡಿದ ಕೀರ್ತಿ ಮದ್ವಕರ ಕಮಲ ಸಂಜಾತರಾದ ಸಕಲ ಯತಿಗಳಿಗೆ ಸಲ್ಲುತ್ತದೆ. ಅದೇ ಪೀಠದಲ್ಲಿಯೇ ಬಂದ ಇಂದಿನ ಸಮಾಜವು ಕಂಡ ಧೀರ ಯತಿಗಳಾದ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರೂ , ಶ್ರೀಮದಾಚಾರ್ಯರು ಹೊತ್ತಿಸಿದ ಸಂವರ್ಧಕ ಸಭೆಯ ಮೂಲಕ ಮಧ್ವರ ತತ್ವಜ್ಯೋತಿಯನ್ನು ಜಗತ್ತಿನಾದ್ಯಂತ ಬೆಳಗಿಸಿದರು. ಐದು ದಶಕಗಳಿಂದ ನಡೆದುಬಂದ ಸಭೆಯ ಸುವರ್ಣ ಮಹೋತ್ಸವವನ್ನು ಅದೃಶ್ಯರಾಗಿ ಅನಂತೇಶ್ವರನ ಬಳಿ ಕುಳಿತ ಆಚಾರ್ಯ ಸನ್ನಿಧಿಯಲ್ಲಿ, ಗೀತಾಚಾರ್ಯನ ಕ್ಷೇತ್ರದಲ್ಲಿ ,ವಿಜೃಂಭಣೆಯಿಂದ ನಡೆಸಿದರು.
ಸ್ವರ್ಣ ಮಹೋತ್ಸವದ ತರುವಾಯ ......
ತತ್ವಸುಧೆಯ ಕಂಪನ್ನು ಐವತ್ತು ವರ್ಷಗಳ ಕಾಲ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ಮೂಲಕ ಜಗತ್ತಿಗೆ ನೀಡಿದ್ದರೂ, ಎಂಭತ್ತರ ಗಡುವನ್ನು ಮುಟ್ಟಿದ ಶ್ರೀ ಶ್ರೀವಿದ್ಯಾಮಾನ್ಯರ ಉತ್ಸಾಹ ಕುಂದಲಿಲ್ಲ. ನಂತರದ ಏಳು ವರ್ಷಗಳ ಕಾಲ ಸಭೆಯನ್ನು ಬಹಳ ವಿಜೃಂಭಣೆಯಿಂದ ನಡೆಸಿದರು. ಶ್ರೀ ವಿದ್ಯಾಮಾನ್ಯರ ಕೃತಿಗಳಿಂದ ತೃಪ್ತರಾಗದ ಸಜ್ಜನರಿಲ್ಲ. ನೂರಾರು ಪವಮಾನ ಹೋಮ, ಪುರುಷ ಸೂಕ್ತ ಹೋಮಗಳಮೂಲಕ ದೇವತೆಗಳನ್ನು ತೃಪ್ತಿಪಡಿಸಿದರು. ಅನ್ನಾರಾಧನೆಯ ಮೂಲಕ ಸಕಲ ಸಜ್ಜನರನ್ನು ತೃಪ್ತಿಪಡಿಸಿದರು. ಅನೇಕ ದಾನಿಗಳ ಮೂಲಕ ವಿದ್ವಾಂಸರನ್ನು ತೃಪ್ತಿಪಡಿಸಿದರು. ವಿದ್ವಾಂಸರಿಗೆ ದಾನ ಮಾಡುವುದೆಂದರೆ ಶ್ರೀಗಳಿಗೆ ಎಲ್ಲಿಲ್ಲದ ಉತ್ಸಾಹ. ರಜತ ಕಲಶಗಳು, ರಜತ ಸಂಪುಷ್ಟಗಳು, ಬೆಳ್ಳಿಯಲ್ಲಿ ಕಟ್ಟಿದ ಶ್ರೀ ತಿಳಸೀ ಹಾರಗಳು, ಬಂಗಾರದ ಮಿಶ್ರಿಗಳು, ಸುವರ್ಣ ಅಂಗುಲೀಯಕಗಳು, ಬೆಳ್ಳಿಯಲ್ಲಿ ಮಾಡಿಸಿದ ಶಂಖಗಳು- ಹೀಗೆ ಬಗೆಬಗೆಯ ದಾನಗಳಿಂದ ವಿದ್ವಾಂಸರನ್ನು ತೃಪ್ತಿಪಡಿಸುತ್ತಿದ್ದರು. ಇತರ ಮತೀಯ ವಿದ್ವಾಂಸರೂ ಈ ದಾನಗಳಿಗೆ ಪಾತ್ರರಾಗಿದ್ದರೆಂದ ಬಳಿಕ ಸ್ವಸಿದ್ಧಾಂತದ ವಿದ್ವಾಂಸರನ್ನು ತೃಪ್ತಿಪಡಿಸಿದ್ದಾರೆಂಬುದರಲ್ಲಿ ಎರಡುಮಾತಿಲ್ಲ. ಅನೇಕ ಸಭೆಗಳು ಶ್ರೀ ಶ್ರೀವಿಶ್ವೇಶತೀರ್ಥರು ನಡೆಸುತ್ತಿರುವ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನದ ಒಟ್ಟಿಗೆನಡೆದಿವೆ. ರಾಯಚೂರು, ಬೆಂಗಳೂರು, ಘಟಿಕಾಚಲ, ಪಾಜಕ, ಉಡುಪಿ, ಭಂಡಾರಕೇರಿ, ಮುಗಟಖಾನ, ಹುಬ್ಬಳ್ಳಿ, ವೇಣೀಸೋಮಪುರ ಮುಂತಾದ ಅನೇಕ ಊರುಗಳಲ್ಲಿ ಸಭೆಯನ್ನು ನಡೆಸಿದ್ದಾರೆ. ಶ್ರೀಪಾದರು ನಡೆಸುತ್ತಿರುವ ಸಭೆಯಲ್ಲಿ, ತತ್ವಜ್ಞಾನ ಸರೋವರದಲ್ಲಿ ಮಿಂದು ಪುನೀತರಾಗದ ಸಜ್ಜನ ವೃಂದವೇ ಇಲ್ಲ. ಎಲ್ಲ ಮಠದ ಪೀಠಾಧಿಪತಿಗಳು, ಪ್ರತಿಭೆಯಿಂದ ಬೆಳಗುವ ತರುಣ ವಿದ್ವಾಂಸರು, ತತ್ವರಹಸ್ಯಗಳನ್ನು ಬಲ್ಲ ಮೇದಾವಿ ಹಿರಿಯ ವಿದ್ವಾಂಸರು, ಬಾವುಕರಾಗಿ ತತ್ವ ಕೇಳಬಯಸುವ ಸಜ್ಜನಿಕೆಯ ಶ್ರೋತೃವೃಂದ . ಹೀಗೆಸಕಲರಿಗೂ ಮುದ ನೀಡುವ ಕೃತಿಗಳು ಶ್ರೀ ಶ್ರೀ ವಿದ್ಯಾಮಾನ್ಯರಿಂದ ನಡೆದವು.
ಸಭೆಯಲ್ಲಿ ಭಾಗವಹಿಸಿದ ಪರಮತೀಯ ವಿದ್ವಾಂಸರು
ಸುಜನರಿಗೆಲ್ಲ ಶ್ರೀಮಧ್ವರ ತತ್ವದ ಮಹತ್ವವನ್ನು
ತಿಳಿಸಲೋಸಗ ಇತರ ಮತೀಯ ವಿದ್ವಾಂಸರು ದೇಶದ ಯಾವ ಮೂಲೆಯಲ್ಲಿಇದ್ದರೂ ಅವರನ್ನು ಕರೆಸಿ ಆಚಾರ್ಯರ ಯುಕ್ತಿ ಯುಕ್ತ ವಚನಗಳಿಂದ ಸಕಲಮತದ ನ್ಯೂನತೆಗಳನ್ನು ತೋರಿಸುತ್ತಿದ್ದರು. ಸ್ವಸಿದ್ಧಾಂತದಲ್ಲಿ ಘನಪಾಡಿತ್ಯಗಳಿಸಿದ ಇತರ ಮತೀಯ ವಿದ್ವಾಂಸರು ವಿದ್ಯಾಮಾನ್ಯರ ಘನಪಾಂಡಿತ್ಯಕ್ಕೆ, ಆಚಾರ್ಯರ ವಿಚಾರಸರಿಣಿಗೆ ತಲೆದೂಗುತ್ತಿದ್ದರು. ಕಾಶಿಯ ವಿದ್ವಾಂಸರಾದ ಶ್ರೀನಿವಾಸತಾತಾಚಾರ್ಯರು, ಕಾಶಿಯ ವಿದ್ವಾನ್ ಮಣಿದ್ರಾವಿಡ, ಮದ್ರಾಸಿನ ವಿದ್ವಾನ್ ಗೋಪಾಲಕೃಷ್ಣ ಶಾಸ್ತ್ರಿ, ವಿದ್ವಾನ್ ಕೃಷ್ಣಮೂರ್ತಿ ಶಾಸ್ತ್ರಿ, ಗೋಡಾ ವೆಂಕಟೇಶ್ವರ ಶಾಸ್ತ್ರಿ, ರಾಮಾನುಜ ತಾತಾಚಾರ್ಯ, ದೇವನಾಥಾಚಾರ್ಯ ಮುಂತಾದ ಅನೇಕ ಪಂಡಿತರು ಪ್ರತಿವರ್ಷವೂ ಸಭೆಗೆ ಆಗಮಿಸಿತ್ತಿದ್ದರು.
ಐವತ್ತೇಳನೇ ಅಧಿವೇಶನ
ಶ್ರೀ
  ಪೇಜಾವರ ಸ್ವಾಮಿಗಳ ನಾಲ್ಕನೇ ಪರ್ಯಾಯಾವಧಿಯಲ್ಲಿ ೯.೨.೨೦೦೦ ರಿಂದ ೧೪.೨.೨೦೦೦ ದವರೆಗೆ ಉಡುಪಿ ಶ್ರೀ ಕೃಷ್ಣ, ಮುಖ್ಯ ಪ್ರಾಣರ
ಸನ್ನಿಧಿಯಲ್ಲಿ ಸಭೆಯ ೫೭ನೇ ಅಧಿವೇಶನಜರುಗಿತ್ತು. ಶ್ರೀ ವಿದ್ಯಾಮಾನ್ಯ ತೀರ್ಥರು ನಡೆಸಿದ ಸಭೆಯ ಕೊನೆಯ ಅಧಿವೇಶನ ಇದಾಗಿತ್ತು.

ಪರ್ಯಾಯ ಮಠದ ವತಿಯಿಂದ ಮಧ್ವನವಮಿ ಸಮಾರಂಭ ಪ್ರಯುಕ್ತ ನಡೆಯುತ್ತಿದ್ದ ಪ್ರವಚನಗಳ ಜೊತೆಗೆ ಬ್ರಹ್ಮಸೂತ್ರದ 'ಇಂದ್ರಿಯಾಧಿಕರಣ' ದ ಶಾಂಕರಭಾಷ್ಯದ ಬಗ್ಗೆ ವಿದ್ವಾಂಸರ ಜೊತೆಗೆ ಚರ್ಚೆ ನಡೆದಿತ್ತು.
ಚಿಕ್ಕ ಪುಸ್ತಕ ರೂಪದಲ್ಲೂ ಈ ಚರ್ಚೆಯನ್ನು ಪ್ರಕಟಗೊಳಿಸಲಾಗಿದೆ. ಸ್ವಲ್ಪ ದೈಹಿಕ ಅಸ್ವಾಥ್ಯಕ್ಕೆ ಒಳಗಾಗಿದ್ದರೂ ಶ್ರೀ ವಿದ್ಯಾಮಾನ್ಯ ತೀರ್ಥರು ಶ್ರೀಮಠದ ಬಡಗುಮಾಳಿಗೆಯಲ್ಲಿ ನಡೆದ ಈ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಚರ್ಚೆಯಲ್ಲಿ ದ್ವೈತಾದ್ವೈತದ ವಿವಾದಕ್ಕೆ ಸಂಬಂಧಪಡದಂತೆ ಇಂದ್ರಿಯಾಧಿ ಕರಣದ ಶಾಂಕರಭಾಷ್ಯದ ಅಸ್ವಾರಸ್ಯದ ಮೇಲೆ ಬೆಳಕು ಚೆಲ್ಲಲಾಗಿತ್ತು. ಜೊತೆಗೆ ಶ್ರೀಮದಾಚಾರ್ಯರು 'ತತ್ವಮಸಿ' ವಾಕ್ಯಕ್ಕೆ ನೀಡಿರುವ ವ್ಯಾಖ್ಯಾನಕ್ಕೆ ಪೋಷಕವಾಗುವಂತೆ ವಾಕ್ಯಾರ್ಥವನ್ನು ಉಪಸಂಹಾರಗೊಳಿಸಲಾಗಿತ್ತು.
ಇದರಿಂದಾಗಿ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ 'ವಿದ್ವದ್ಗೋಷ್ಠಿ' ಯನ್ನು ಅದರ ಪರಮತನಿರಾಕರಣೆ, ಸ್ವಮತ ಸ್ಥಾಪನೆ ಉದ್ದೇಶಗಳೊಂದಿಗೆ ಶ್ರೀಕೃಷ್ಣ ಮುಖ್ಯಪ್ರಾಣರ ಪಾದಾರವಿಂದಕ್ಕೆ ಅರ್ಪಿಸಿದಂತಾಗಿದೆ. ಶಾಂಕರಭಾಷ್ಯದ ಈ ದೋಷವನ್ನು ವ್ಯಾಸತೀರ್ಥರ ತಾತ್ಪರ್ಯಚಂದ್ರಿಕಾದಲ್ಲಿ ಉಲ್ಲೇಖಿಸಲಾಗಿದ್ದು, ಅದನ್ನು ಬೆಳಗಿಸುವ ಮೂಲಕ ಶ್ರೀ ವ್ಯಾಸತೀರ್ಥರ ಅಂತರ್ಯಾಮಿ ಶ್ರೀ ವೇದವ್ಯಾಸರ ಸೇವೆಯನ್ನೂ ಸಮರ್ಪಿಸಿದಂತಾಗಿದೆ.
ಈ ಅಧಿವೇಶನದ ಅಂಗವಾಗಿ ೧೫೦ ಕ್ಕಿಂತಲೂ ಅಧಿಕ ವಿದ್ವಾಂಸರಿಗೆ ಸಂಭಾವನೆಯಲ್ಲಿ ಹರಿದ್ವಾರದಿಂದ ತರಲಾಗಿದ್ದ ಉಲ್ಲನ್ ಶಾಲ್ , ಗಯಾ ಕ್ಷೇತ್ರದಿಂದ ಗದಾಧರನ ಪಾದಸ್ಪರ್ಶಕ್ಕೊಳಪಡಿಸಿ ತರಿಸಲಾಗಿದ್ದ ಬೆಳ್ಳಿಯ ವಿಷ್ಣುಪಾದವನ್ನು ನೀಡಲಾಗಿತ್ತು.
ಈ ಮೂಲಕ ಶ್ರೀ ವಿದ್ಯಾಮಾನ್ಯ ತೀರ್ಥರ ನೇತೃತ್ವದಲ್ಲಿ ನಡೆದ ಸಭೆಯ ೫೭ ಅಧಿವೇಶನಗಳು ಶ್ರೀ ವಿಷ್ಣುಪಾದಕ್ಕೆ ಸಮರ್ಪಿತವಾಗಿದ್ದವು.
ಸಮರ್ಥ ಶಿಷ್ಯ ಶ್ರೀ ವಿದ್ಯೇಶ ತೀರ್ಥರು
ಮಧ್ವರಾದ್ಧಾಂತ ಸಂವರ್ಧಕ ಸಭೆಯನ್ನು ಅದರ ಸುವರ್ಣೋತ್ಸವದ ಸಂದರ್ಭದಲ್ಲಿಯೇ ಶ್ರೀ ವಿದ್ಯಾಮಾನ್ಯ ತೀರ್ಥರು ತಮ್ಮ ಭಂಡಾರಕೇರಿ ಮಠದ ಉತ್ತರಾಧಿಕಾರಿಗಳಾಗಿರುವ ಶ್ರೀ ವಿದ್ಯೇಶತೀರ್ಥ ಶ್ರೀಪಾದರಿಗೆ ಧಾರೆಯೆರೆದಿದ್ದರು. ಆದರೆ ಆ ನಿಟ್ಟಿನ ವಾಙ್ಮಯ ಸೇವೆಯನ್ನು ಅಲ್ಲಿಗೇ ಮುಗಿಸಲು ಮನಸ್ಸಿಲ್ಲದೆ, ಪುನಃ ಏಳು ಅಧಿವೇಶನಗಳನ್ನು ಪೂರೈಸಿ ೫೭ ಅಧಿವೇಶನಗಳಿಂದ ಅಲಂಕೃತವಾಗಿರುವ ಮಾಧ್ವರಾದ್ಧಾಂತ ಸಂವರ್ಧಕ ಸಭೆಯನ್ನು ಶ್ರೀ ವಿದ್ಯೇಶತೀರ್ಥರಿಗೆ ತಾತ್ಪರ್ಯ ಪೂರ್ವಕವಾಗಿ ಅನುಗ್ರಹಿಸಿದರು. ಸಭೆಯ ಹಿಂದೆ ಶ್ರೀ ವಿದ್ಯಾಮಾನ್ಯ ತೀರ್ಥರ ಅನುಗ್ರಹದ ಬೆಟ್ಟ ತುಂಬಿರುವುದರಿಂದಲೇ ಶ್ರೀ ವಿದ್ಯೇಶ ತೀರ್ಥರಿಂದ ಸಭೆ ನಡೆಸಲ್ಪಡುತ್ತಿದೆ. ಬಾರಕೂರಿನ ಭಂಡಾರಕೇರಿ ಮಠದಲ್ಲಿ ನಡೆದ ೫೮ನೇ (೨೦೦೧) ಅಧಿವೇಶನವಾಗಲೀ, ಉಡುಪಿ ಭಂಡಾರಿಕೇರಿ ಮಠದಲ್ಲಿ ನಡೆದ ೫೯ನೇ (೨೦೦೨)ಅಧಿವೇಶನವಾಗಲೀ ಶ್ರೀ ವಿದ್ಯಾಮಾನ್ಯ ತೀರ್ಥರ ನೇತೃತ್ವದಲ್ಲೇ ನಡೆಯುತ್ತಿದೆಯೇನೋ ಎನ್ನುವಷ್ಟು ಯಶಸ್ವಿಯಾಗಿದ್ದವು. ಅನೇಕ ವಿದ್ವಾಂಸರನ್ನು ೨೫ ಸಾವಿರ ರೂ. ಗಳೊಂದಿಗೆ ಸಮ್ಮಾನಿಸಿದ್ದರು.
  • ೨೦೦೧ ರಲ್ಲಿ ಶ್ರೀ ಶ್ರೀಪಾದರು ತಮ್ಮ ಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರ ಕನಸಾದ ಶ್ರೀ ಸುರೋತ್ತಮತೀರ್ಥರ ( ಶ್ರೀವಾದಿರಾಜರ ಪೂರ್ವಾಶ್ರಮದ ಸಹೋದರರು) ವೃಂದಾವನ ಕಟ್ಟಡದ ನವೀಕರಣ ಹಾಗೂ ಶ್ರೀ ವಿದ್ಯಾಮಾನ್ಯತೀರ್ಥರ ಮೃತ್ತಿಕಾ ವೃಂದಾವನ ಪ್ರತಿಷ್ಠೆಯನ್ನು ಭಂಡಾರಕೇರಿಯಲ್ಲಿ ನೆರವೇರಿಸಿದರು.
  • ೨೦೦೨ ರಲ್ಲಿ ಉಡುಪಿಯಲ್ಲಿ ಅಚ್ಯುತಪ್ರಜ್ಞರ ವಾಸಭೂಮಿಯಾದ ರಥಬೀದಿಯ ಭಂಡಾರಕೇರಿ ಮಠದ ನಿವೇಶನದಲ್ಲಿ ಮಾಧ್ವ ರಾದ್ಧಾಂತ ಸಂವರ್ಧಕ ಸಭೆಯ ವಜ್ರಮಹೋತ್ಸವ ಸ್ಮಾರಕ ಭವ್ಯ ಭವನವನ್ನು ೫೦ ಲಕ್ಷ ರೂ. ಗಳ ವೆಚ್ಚದಿಂದ ನಿರ್ಮಿಸಿದರು. ಅಲ್ಲಿ ನಿರಂತರ ಪಾಠ-ಪ್ರವಚನ ಮೊದಲಾದ ಸತ್ಕಾರ್ಯಗಳಿಂದ ಶ್ರೀಕೃಷ್ಣನ ಆರಾಧನೆಯನ್ನು ನಡೆಸುತ್ತಿದ್ದಾರೆ.
ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ, ಭಂಡಾರಕೇರಿ ರಾಜಹಂಸ ಪ್ರಶಸ್ತಿ ಪ್ರದಾನ
ಶ್ರೀ ಶ್ರೀಪಾದರು ೨೦೦೧ ರಿಂದ ಶ್ರೀ ಸರ್ವಜ್ಞಾಚಾರ್ಯರ ಗ್ರಂಥಗಳ ಪಾಠಪ್ರವಚನ, ಗ್ರಂಥಲೇಖನ ಮುಂತಾದ ಕಾರ್ಯಗಳಿಂದ ೩-೪ ದಶಕಗಳ ಕಾಲ ಸಾರ್ಥಕವಾಗಿ ತಮ್ಮ ಬದುಕನ್ನು ನಡೆಸಿದ ಶ್ರೇಷ್ಠರಾದ ಇಬ್ಬರು ವಿದ್ವಾಂಸರಿಗೆ
'ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ' ಮತ್ತು 'ಭಂಡಾರಕೇರಿ ರಾಜಹಂಸ'ಪ್ರಶಸ್ತಿಗಳನ್ನು ನೀಡಿ, ಅಪಾರ ಆರ್ಥಿಕ ನೆರವಿನೊಂದಿಗೆ ಕೆಳಕಂಡ ಪಂಡಿತರನ್ನು ಪುರಸ್ಕರಿಸಿ ಅನುಗ್ರಹಿಸುತ್ತಿದ್ದಾರೆ.
ವರ್ಷ ಸ್ಥಳ ವಿದ್ಯಾಮಾನ್ಯವಿಜ್ಞಾನ ಭಾಸ್ಕರ ಭಂಡಾರಕೇರಿ ರಾಜಹಂಸ
೨೦೦೧ ಭಂಡಾರಕೇರಿ ಶ್ರೀ ಹಯವದನ ಪುರಾಣಿಕರು -----------
೨೦೦೨ ಉಡುಪಿ  ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯರು
೨೦೦೩ ಬೆಂಗಳೂರು ಶ್ರೀ ಡಿ.ಪ್ರಹ್ಲಾದಾಚಾರ್ಯರು ಶ್ರೀ ಶೇಷಗಿರಿಆಚಾರ್ಯರು
೨೦೦೪ ಅನಂತಪುರ ಶ್ರೀ ಬಿ.ಎನ್.ಕೆ. ಶರ್ಮ ಶ್ರೀ ಕೆ.ಟಿ. ಪಾಂಡುರಂಗಿ
೨೦೦೫ ರಾಯಚೂರು ಶ್ರೀ ಪಂಡರೀನಾಥಾಚಾರ್ಯ ಗಲಗಲಿ ಶ್ರೀ ಹುಣಸಿಗಿ ರಾಮಾಚಾರ್ಯರು

೨೦೦೩ ರಲ್ಲಿ ವಜ್ರ ಮಹೋತ್ಸವದ ಸಂದರ್ಭದಲ್ಲಿ ಶ್ರೀ ಭಂಡಾರಕೇರಿ ಮಠಾದೀಶರಾದ ಶ್ರೀ ವಿದ್ಯೇಶತೀರ್ಥರಿಂದ
ಸನ್ಮಾನಿತರಾದ ವಿದ್ವಾಂಸರು ಮತ್ತು ಪ್ರಶಸ್ತಿ
ವಿದ್ವಾಂಸರು ಪ್ರಶಸ್ತಿ ವಿದ್ವಾಂಸರು ಪ್ರಶಸ್ತಿ
ಶ್ರೀ ಡಿ.ಪ್ರಹ್ಲಾದಾಚಾರ್ಯರು ವಿದ್ಯಾಮಾನ್ಯವಿಜ್ಞಾನ ಭಾಸ್ಕರ ೩೧ ಕೊರ್ಲಹಳ್ಳಿ ನರಸಿಂಹಾಚಾರ್ಯ ಗುರುವಿದ್ಯಾಮಾನ್ಯ
ಶ್ರೀ ಶೇಷಗಿರಿ ಆಚಾರ್ಯರು ಭಂಡಾರಕೇರಿ ರಾಜಹಂಸ ೩೨ ಗುರುರಾಜ ಮಠದ ಗುರುವಿದ್ಯಾಮಾನ್ಯ
ಗಂಗೂರು ರಾಘವೇಂದ್ರಾಚಾರ್ಯ ಗುರು ವಿದ್ಯಾಮಾನ್ಯ ೩೩ ಅನಂತ ತತ್ರಿ ಪ್ರತಿಭಾಮಾನ್ಯ
ಉಳ್ಳೂರು ಗೋಪಾಲಾಚಾರ್ಯ ಆಚಾರ್ಯ ರತ್ನ ೩೪ ಖಗವರಧ್ವಜ ವಿಠಲದಾಸರು ಕೀರ್ತನಮಾನ್ಯ
ಪದ್ಮನಾಭಾಚಾರ್ಯ ಪ್ರವಚನ ಮಾನ್ಯ ೩೫ ವೆಂಕಣ್ಣಾಚಾರ್ಯ ಮಹಿಷಿ ಸಭಾಮಾನ್ಯ
ಕೌಲಗಿ ಶೇಷಾಚರ್ಯ ಗುರು ಚಂದ್ರಿಕಾಮಾನ್ಯ ೩೬ ಪದ್ಮನಾಭಾಚಾರ್ಯರು ಆಚಾರ್ಯತಿಲಕ
ನಾಗರಾಜ ಶರ್ಮ ದರ್ಶನಮಾನ್ಯ ೩೭ ಗುರುರಾಜ ಗುಡಿ ವ್ಯಾಖ್ಯಾನ ಮಾನ್ಯ
ಗುರುಗುಂಡಿ ವಾಸುದೇವಾಚಾರ್ಯ ವ್ಯಾಖ್ಯಾನಮಾನ್ಯ ೩೮ ಮಾಳಗಿ ರಾಮಾಚಾರ್ಯರು ದ್ವೈತ ವಿದ್ಯಾಮಾನ್ಯ
ಆನಂದತೀರ್ಥ ನಾಗಸಂಪಿಗೆ ಅಚ್ಯುತ ವಿದ್ಯಾಮಾನ್ಯ ೩೯ ಪಂಡರೀನಾಥಾಚಾರ್ಯ ಗಲಗಲಿ ಪುರಾಣ ತೀರ್ಥ
೧೦ ರಘೋತ್ತಮ ನಾಗಸಂಪಿಗೆ ಸತ್ಯಮಾನ್ಯ ೪೦ ಗುತ್ತಲ ಹಯಗ್ರೀವಾಚಾರ್ಯ ಪರವಿದ್ಯಾಮಾನ್ಯ
೧೧ ರಾಮವಿಠಾಲಾಚಾರ್ಯ ತೀರ್ಥಮಾನ್ಯ ೪೧ ಪ್ರಭಂಜನ ಆಚಾರ್ಯ ವಿಶ್ವಮೂಲಮಾನ್ಯ
೧೨ ವೆಂಕಟೇಶ ಬಾಯರಿ ಶಿಕ್ಷಣಮಾನ್ಯ ೪೨ ಸತ್ಯಧ್ಯಾನ ಕಟ್ಟಿ ಶ್ರೀಮನ್ನ್ಯಾಯಸುಧಾತೀರ್ಥ
೧೩ ಬಿ.ಎನ್.ಸೀತಾರಾಮ ಶುಕ ವಿದ್ಯಾವಿಶಾರದ ೪೩ ಬಲರಾಮ ಭಟ್ಟ ಗುರು ವಿದ್ಯಾಮಾನ್ಯ
೧೪ ಸುರೇಶಾಚಾರ್ಯ ರಾಜ ವಿದ್ಯಾಮಾನ್ಯ ೪೪ ನಾಗೇಂದ್ರಪ್ರಸಾದ ಆಚಾರ್ಯ ಶುಕ ವಿದ್ಯಾಮಾನ್ಯ
೧೫ ಅಂಬರೀಷಾಚಾರ್ಯ ವಿದ್ಯಾವಂದ್ಯ ೪೫ ಪವಮಾನಾಚಾರ್ಯ ಮಾದನೂರು ಗುರು ವಿದ್ಯಾಮಾನ್ಯ
೧೬ ಬಿ.ರಾಮಚಂದ್ರ ಆಚಾರ್ಯ ತರ್ಕಮಾನ್ಯ ೪೬ ರಾಮನಾಥಾಚಾರ್ಯ ಶೋಧನತೀರ್ಥ
೧೭ ಹೆಚ್. ಪಿ. ನಾಗರಾಜ ಗುರುವಿದ್ಯಾಮಾನ್ಯ ೪೭ ಸತ್ಯನಾರಾಯಣಾಚಾರ್ಯ ಆಚಾರ್ಯ ರತ್ನ
೧೮ ಸಿ.ಹೆಚ್.ಶ್ರೀನಿವಾಸಮೂರ್ತಿ ಪರವಿದ್ಯಾಮಾನ್ಯ ೪೮ ನಾಗರಹಳ್ಳಿ ಪ್ರಹ್ಲಾದಾಚಾರ್ಯ ಮಾನ್ಯ ವಿದ್ಯಾಪ್ರಕಾಶ
೧೯ ತಿರುಮಲ ಕುಲಕರ್ಣಿ ವ್ಯಾಖ್ಯಾನಮಾನ್ಯ ೪೯ ಕೆ.ಟಿ. ಪಾಂಡುರಂಗಿ ಪ್ರಕಾಶ ತೀರ್ಥ
೨೦ ಎನ್. ವೆಂಕಟೇಶಾಚಾರ್ಯ ಶ್ರೀ ಸುಧಾಮಾನ್ಯ ೫೦ ಹಯವದನ ಪುರಾಣಿಕರು ವ್ಯಾಖ್ಯಾನ ತೀರ್ಥ
೨೧ ಕಾಪು ಹಯಗ್ರೀವಾಚಾರ್ಯ ವಿಶ್ವ ವಿದ್ಯಾಮಾನ್ಯ ೫೧ ಅಪ್ಪಣ್ಣಾಚಾರ್ಯರು ನಾದಯಜ್ಞಧುರಂಧರ
೨೨ ಕೇಶವ ಬಾಯರಿ ಶಿಕ್ಷಣ ಮಾನ್ಯ ೫೨ ಸುಶೀಲೇಂದ್ರಾಚಾರ್ಯ ಪ್ರಶಾಂತತೀರ್ಥ
೨೩ ವಿಠ್ಠಲದಾಸ ಭಟ್ಟರು ರಾಜ ವಿದ್ಯಾಮಾನ್ಯ ೫೩ ಮಳಗಿ ಜಯತೀರ್ಥ ಆಚಾರ್ಯ ವಾಗ್ ವೈಖರೀಮಾನ್ಯ
೨೪ ಡಿ. ರಾಮಚಂದ್ರಾಚಾರ್ಯ ರಾಜ ವಿದ್ಯಾವಂದ್ಯ ೫೪ ವಿ. ಆರ್. ಪಂಚಮುಖಿ ವಿಶ್ವವಿದ್ಯಾಕುಲಪತಿ
೨೫ ಹರದಾಸ ಭಟ್ಟರು ತರ್ಕ ತೀರ್ಥ ೫೫ ಅರಳು ಮಲ್ಲಿಗೆ ಪಾರ್ಥಸಾರಥಿ ವಿಶ್ವ ದಾಸದೂತ
೨೬ ವಟ್ಟಂಗಾಡ್ ಹಯಗ್ರೀವಾಚಾರ್ಯರು ತೀರ್ಥ ಮಾನ್ಯ ೫೬ ಖೇಡಾ ಕೃಷ್ಣಾಚಾರ್ಯರು ಪ್ರವಚನ ಮಾನ್ಯ
೨೭ ವೆಂಕಟರಮಣ ಐತಾಳರು ರಾಜ ವಿದ್ಯಾವಂದ್ಯ ೫೭ ಸತ್ತೀಗೇರಿ ದೀರೇಂದ್ರಚಾರ್ಯ ತರ್ಕ ಮಾನ್ಯ
೨೮ ಬಿದರಹಳ್ಳಿ ಶ್ರೀನಿವಾಸಾಚಾರ್ಯರು ಗುರುವಿದ್ಯಾಮಾನ್ಯ ೫೮ ಎಸ್. ಕೆ. ರಾಮಚಂದ್ರರಾವ್ ಮಾನ್ಯ ವಿದ್ಯಾವಿಚಕ್ಷಣ
೨೯ ಜಿ.ಪಿ. ನಾಗರಾಜಾಚಾರ್ಯ ಪರವಿದ್ಯಾ ರಮಣ ೫೯ ಗುರುರಾಜ ಜೋಷಿ ಗುರು ವಿದ್ಯಾಮಾನ್ಯ
೩೦ ಸಗ್ರಿ ರಾಘವೇಂದ್ರ ಉಪಾಧ್ಯಾಯ ಸಂಗ್ರಹ ತೀರ್ಥ ೬೦ ಬನ್ನಂಜೆ ಗೋವಿಂದಾಚಾರ್ಯ ವ್ಯಾಖ್ಯಾನ ತೀರ್ಥ

 ಹೀಗೆ ಜಗಮೆಚ್ಚುವ ಘನಕಾರ್ಯಗಳನ್ನು ಸಾಧಿಸಿದ ಶ್ರೀಮನ್ಮಾಧ್ವರಾದ್ಧಾಂತ ಸಂವರ್ಧಕ ಸಭೆಯು ಶ್ರೀ ಶ್ರೀವಿದ್ಯಾಮಾನ್ಯರ ಮಾನಸ ಸಂಜಾತಕುವರನಂತೆ ಶೋಭಿಸುತ್ತಿದೆ. ಧೀಮಂತ ಧೀಮಣಿಗಳಿಗೆ ಜ್ಞಾನದ ಖಣಿಯಾಗಿ ತೋರುತ್ತಿದೆ. ಇಂತಹ ಸಭೆಯು ಶ್ರೀ ವಿದ್ಯಾಮಾನ್ಯರ ಯೋಗ್ಯ ಶಿಷ್ಯರಾದ ಶ್ರೀ ಶ್ರೀ ವಿದ್ಯೇಶತೀರ್ಥರಿಂದ ನೂತನ ಚೈತನ್ಯವನ್ನು ಪಡೆಯಲಿ. ಜಗತ್ತಿನಾದ್ಯಂತ ತ್ರಿಲೋಕಗುರು ಸಾರಿದ ಪಿರಿದಾದ ತತ್ತ್ವವನ್ನು ಸಮರ್ಥ ರೀತಿಯಿಂದ ಸಾರಲಿ. ಜಗತ್ತಿಗೆಲ್ಲ ಶ್ರೀ ಹರಿ-ವಾಯು ಗುರುಗಳ ಅನುಗ್ರಹವೆಂಬ ರಕ್ಷಾಕವಚ ಒದಗಿ ಬರಲೆಂದು ನಾವೆಲ್ಲರೂ ಆಶಿಸೋಣ.