ಭಂಡಾರಕೇರಿ ಮಠ,ಉಡುಪಿ


ಬ್ರಹ್ಮಸೂತ್ರಪ್ರಸ್ಥಾನ
ಶ್ರೀಮತ್ಕೃಷ್ಣದ್ವೈಪಾಯನಕೃತಬ್ರಹ್ಮಸೂತ್ರಾಣಿ
ಸಮನ್ವಯಾಧ್ಯಾಯ
ಪಾದ ಅಧಿಕರಣಗಳು ಸೂತ್ರಗಳು
ಅನ್ಯತ್ರಪ್ರಸಿದ್ಧನಾಮಪಾದ ೧೨ ೩೧
ಅನ್ಯತ್ರಪ್ರಸಿದ್ಧಲಿಂಗಪಾದ ೩೨
ಉಭಯತ್ರಪ್ರಸಿದ್ಧಪಾದ ೧೪ ೪೩
ಅನ್ಯತ್ರೈವ ಪ್ರಸಿದ್ಧನಾಮಲಿಂಗಪಾದ ೨೯
ಒಟ್ಟು ೪೦ ೧೩೫

ಅವಿರೋಧಾಧ್ಯಾಯ
ಪಾದ ಅಧಿಕರಣಗಳು ಸೂತ್ರಗಳು
ಯುಕ್ತಿಪಾದ ೧೧ ೩೮
ಸಮಯಪಾದ ೧೨ ೪೫
ಪರಸ್ಪರಶ್ರುತ್ಯವಿರೋಧಪಾದ ೧೯ ೫೩
ನ್ಯಾಯೋಪೇತಶ್ರುತ್ಯವಿರೋಧಪಾದ ೧೩ ೨೩
ಒಟ್ಟು ೫೫ ೧೫೯

ಸಾಧನಾಧ್ಯಾಯ
ಪಾದ ಅಧಿಕರಣಗಳು ಸೂತ್ರಗಳು
ವೈರಾಗ್ಯಪಾದ ೨೦ ೨೯
ಭಕ್ತಿಪಾದ ೨೦ ೪೨
ಉಪಾಸನಾಪಾದ ೪೨ ೬೮
ಜ್ಞಾನಪಾದ ೧೧ ೫೧
ಒಟ್ಟು ೫೩ ೧೯೦

ಫಲಾಧ್ಯಾಯ
ಪಾದ ಅಧಿಕರಣಗಳು ಸೂತ್ರಗಳು
ಕರ್ಮಕ್ಷಯಪಾದ ೧೯
ಉತ್ಕ್ರಾಂತಿಪಾದ  ೧೦ ೨೨
ಮಾರ್ಗಪಾದ ೧೬
ಭೋಗಪಾದ ೧೧ ೨೩
ಒಟ್ಟು ೩೫ ೮೦

ಸಮನ್ವಯಾಧ್ಯಾಯ


|| ಶ್ರೀಹರಿಃ ಓಂ ||
ಅನ್ಯತ್ರಪ್ರಸಿದ್ಧನಾಮಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಜಿಜ್ಞಾಸಾಧಿಕರಣಮ್ ಪ್ರಾಪ್ತಾಧಿಕಾರಿಗಳಿಗೆ ಮೋಕ್ಷಾರ್ಥವಾಗಿ ಬ್ರಹ್ಮವಿಚಾರವು ಅಗತ್ಯ ಕರ್ತವ್ಯವು, ಬ್ರಹ್ಮಪದ ವಾಚ್ಯನು ಗುಣಪರಿಪೂರ್ಣನಾದ ವಿಷ್ಣುವೇ ೧ ಓಂ ಅಥಾತೋ ಬ್ರಹ್ಮಜಿಜ್ಞಾಸಾ ಓಂ
ಜನ್ಮಾಧಿಕರಣಮ್ ಜಿಜ್ಞಾಸ್ಯ ಬ್ರಹ್ಮಸ್ವರೂಪ ಲಕ್ಷಣವು ಸೃಷ್ಟ್ಯಾದಿಕತೃತ್ವವು ೨ ಓಂ ಜನ್ಮಾದ್ಯಸ್ಯ ಯತಃ ಓಂ
ಶಾಸ್ತ್ರಯೋನಿತ್ವಾಧಿಕರಣಮ್ ಶ್ರೀಹರಿಯೇ ಜಗತ್ಕಾರಣನೆಂದು ಶಾಸ್ತ್ರೈಕ ಸಮಧಿಗಮ್ಯನು ೩ ಓಂ ಶಾಸ್ತ್ರಯೋನಿತ್ವಾತ್ ಓಂ
ಸಮನ್ವಯಾಧಿಕರಣ ಶಾಸ್ತ್ರವೆಲ್ಲವೂ ವಿಷ್ಣುಪರ - ಉಪಕ್ರಮಾದಿ ತಾತ್ಪರ್ಯ ಲಿಂಗಗಳಿಂದ ವಿಷ್ಣುವೇ ಬ್ರಹ್ಮನು ಜಗತ್ಕಾರಣನು ೪ ಓಂ ತತ್ತು ಸಮನ್ವಯಾತ್ ಓಂ
ಈಕ್ಷತ್ಯಧಿಕರಣಮ್ ಪರಬ್ರಹ್ಮನು ಶಬ್ದಗಳಿಂದ ವಾಚ್ಯ - ವಾಚ್ಯನೇ ಆದ ವಿಷ್ಣುವೇ ಜಗತ್ಕಾರಣತ್ವಾದಿ ಪೂರ್ಣಗುಣಗಳಿಂದ ಸಕಲ ವೇದಾದಿ ಸರ್ವಶಬ್ದ ಮುಖ್ಯ ಪ್ರತಿಪ್ರಾದ್ಯನು ೫ ಓಂ ಈಕ್ಷತೇರ್ನಾಶಬ್ದಮ್ ಓಂ
೬ ಓಂ ಗೌಣಶ್ಚೇನ್ನಾತ್ಮಶಬ್ದಾತ್ ಓಂ
೭ ಓಂ ತನ್ನಿಷ್ಠಸ್ಯ ಮೋಕ್ಷೋಪದೇಶಾತ್ ಓಂ
೮ ಓಂ ಹೇಯತ್ವಾವಚನಾಚ್ಚ ಓಂ
೯ ಓಂ ಸ್ವಾಪ್ಯಯಾತ್ ಓಂ
೧೦ ಓಂ ಗತಿಸಾಮಾನ್ಯಾತ್ ಓಂ
೧೧ ಓಂ ಶ್ರುತತ್ವಾಚ್ಚ ಓಂ
ಆನಂದಮಯಾಧಿಕರಣಮ್ ಆನಂದಮಯ ಪದವಾಚ್ಯನಾದ ವಿಷ್ಣುವು ಸ್ವಗತ ಭೇದ ವರ್ಜಿತನು. ತನ್ನ ಅವಯವ ಹಾಗೂ ಗುಣಗಳ ಭೇದದಿಂದಲೂ ರಹಿತನು ೧೨ ಓಂ ಆನಂದಮಯೋಭ್ಯಾಸಾತ್ ಓಂ
೧೩ ಓಂ ವಿಕಾರಶಬ್ದಾನ್ನೇತಿ ಚೇನ್ನಪ್ರಾಚುರ್ಯಾತ್ ಓಂ
೧೪ ಓಂ ತದ್ಧೇತುವ್ಯಪದೇಶಾಚ್ಚ ಓಂ
೧೫ ಓಂ ಮಾಂತ್ರವರ್ಣಿಕಮೇವ ಚ ಗೀಯತೇ ಓಂ
೧೬ ಓಂ ನೇತರೋನುಪಪತ್ತೇಃ ಓಂ
೧೭ ಓಂ ಭೇದವ್ಯಪದೇಶಾಚ್ಚ ಓಂ
೧೮ ಓಂ ಕಾಮಾಚ್ಚ ನಾನುಮಾನಾಪೇಕ್ಷಾ ಓಂ
೧೯ ಓಂ ಅಸ್ಮಿನ್ನಸ್ಯ ಚ ತದ್ಯೋಗಂ ಶಾಸ್ತಿ ಓಂ
ಅಂತಸ್ಧತ್ವಾಧಿಕರಣಮ್ ಅಂತರ್ಯಾಮಿಯು ವಿಷ್ಣುವೇ - ಇಂದ್ರಾದಿ ಸಕಲ ದೇವತಾ ಭಾಗ್ಯವು ಶ್ರೀವಿಷ್ಣು ಅಧೀನವು (ಅಧಿದೈವಗತ ಶಬ್ದ ಸಮನ್ವಯವು) ೨೦ ಓಂ ಅಂತಸ್ತದ್ಧರ್ಮೋಪದೇಶಾತ್ ಓಂ
೨೧ ಓಂ ಭೇದವ್ಯಪದೇಶಾಚ್ಚಾನ್ಯಃ ಓಂ
ಆಕಾಶಾಧಿಕರಣಮ್ ಸರ್ವಸ್ವಭಾವವೂ ಆಕಾಶ ಶಬ್ದ ವಾಚ್ಯನಾದ ವಿಷ್ಣು ಅಧೀನವೇ (ಅಧಿಭೊತಗತ ಶ್ಬ್ದ ಸಮನ್ವಯ) ೨೨ ಓಂ ಆಕಾಶಸ್ತಲ್ಲಿಂಗಾತ್ ಓಂ
ಪ್ರಾಣಾಧಿಕರಣಮ್ ಪ್ರಾಣಪದವಾಚ್ಯ ವಿಷ್ಣುವೇ ಸರ್ವಜೀವಗಳ ಜೀವನ ಮುಖ್ಯ ಕಾರಣನು (ಆಧ್ಯಾತ್ಮಗತ ಶಬ್ದ ಸಮನ್ವಯ) ೨೩ ಓಂ ಅತ ಏವ ಪ್ರಾಣಃ ಓಂ
೧೦ ಜ್ಯೋತಿರಧಿಕರಣಮ್ ಜ್ಯೋತಿಶಬ್ದ ವಾಚ್ಯನಾದ ವಿಷ್ಣುವೇ ರುದ್ರವಿಶ್ವಕರ್ಮ, ಅಗ್ನಿ, ಇಂದ್ರಾದಿ ಸರ್ವಸೂಕ್ತ ವಾಚ್ಯನು (ಅಧಿಸೂಕ್ತಗತ ಶಬ್ದ ಸಮನ್ವಯ ) ೨೪ ಓಂ ಜ್ಯೋತಿಶ್ಚರಣಾಭಿಧಾನಾತ್ ಓಂ
೧೧ ಗಾಯತ್ರ್ಯಧಿಕರಣಮ್  - ಛಂದೋಭಿಧಾನ ಅಧಿಕರಣ ಗಾಯತ್ರ್ಯಾದಿ ಶಬ್ದವಾಚ್ಯನು ವಿಷ್ಣುವೇ ಅನಾದಿ ನಿತ್ಯ ಪದಾರ್ಥಗಳು ಅವನ ಅಧೀನವಾದವುಗಳು (ಅಧಿವೇದಗತ ಶಬ್ದ ಸಮನ್ವಯ ) ೨೫ ಓಂ ಛಂದೋsಭಿಧಾನಾನ್ನೇತಿ ಚೇನ್ನ ತಥಾ ಚೇತೋsರ್ಪಣನಿಗದಾತ್ತಥಾ ಹಿ ದರ್ಶನಮ್ ಓಂ
೨೬ ಓಂ ಭೂತಾದಿಪಾದವ್ಯಪದೇಶೋಪಪತ್ತೇಶ್ಚೈವಮ್ ಓಂ
೨೭ ಓಂ ಉಪದೇಶಭೇದಾತ್ ನೇತಿ ಚೇನ್ನೋಭಯಸ್ಮಿನ್ನಪ್ಯ ವಿರೋಧಾತ್ ಓಂ
೧೨ ಉತ್ತರಪ್ರಾಣಾದಿಕರಣಮ್ - ಅಂತಿಮಪ್ರಾಣಾಧಿಕರಣ ಸರ್ವಶಬ್ದ ವಾಚ್ಯನಾದ ಶ್ರೀಮನ್ನಾರಯಣನೇ ಸರ್ವಾಂತಸ್ಥನು ಸರ್ವ ಪ್ರೇರಕನು ಸರ್ವಾಧಾರಕನು ೨೮ ಓಂ ಪ್ರಾಣಸ್ತಥಾನುಗಮಾತ್ ಓಂ
೨೯ ಓಂ ನ ವಕ್ತುರಾತ್ಮೋಪದೇಶಾದಿತಿ ಚೇದಧ್ಯಾತ್ಮಸಂಬಂಧ ಭೂಮಾಹ್ಯಸ್ಮಿನ್ ಓಂ
೩೦ ಓಂ ಶಾಸ್ತ್ರದೃಷ್ಟ್ಯಾತೂಪದೇಶೋ ವಾಮದೇವವತ್ ಓಂ
೩೧ ಓಂ ಜೀವಮುಖ್ಯಪ್ರಾಣಲಿಂಗಾನ್ನೇತಿ ಚೇನ್ನೋಪಾಸಾ ತ್ರೈವಿಧ್ಯಾದಾಶ್ರಿತತ್ವಾದಿಹ ತದ್ ಯೋಗಾತ್ ಓಂ

ಅನ್ಯತ್ರಪ್ರಸಿದ್ಧಲಿಂಗಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಸರ್ವಗತತ್ವಾಧಿ ಕರಣಮ್ ಎಲ್ಲೆಡೆಯೂ ಇರುವವನು - ಅತಿಸೂಕ್ಷ್ಮವೂ, ಅತಿಮಹತ್ತರವೂ ಆದ ಸ್ಥಾನಗಳಲ್ಲಿ ಸ್ಥಿತನಾದ ಶ್ರೀಹರಿಗೆ ಸರ್ವಶಕ್ತಿ ಪ್ರಬೋಧಕತೆ.(ಭಾವಲಿಂಗ ಸಮನ್ವಯ) ೧ ಓಂ ಸರ್ವತ್ರ ಪ್ರಸಿದ್ಧೋಪದೇಶಾತ್ ಓಂ
೨ ಓಂ ವಿವಕ್ಷಿತಗುಣೋಪಪತ್ತೇಶ್ಚ ಓಂ
೩ ಓಂ ಅನುಪಪತ್ತೇಸ್ತು ಚ ಶಾರೀರಃ ಓಂ
೪ ಓಂ ಕರ್ಮಕರ್ತೃವ್ಯಪದೇಶಾಚ್ಚ ಓಂ
೫ ಓಂ ಶಬ್ದವಿಶೇಷಾತ್ ಓಂ
೬ ಓಂ ಸ್ಮೃತೇಶ್ಚ ಓಂ
೭ ಓಂ ಅರ್ಭಕೌಕಸ್ತ್ವಾತ್ ತದ್ವ್ಯಪದೇಶಾಚ್ಚ ನೇತಿ ಚೇನ್ನ ನಿಚಾಯ್ಯತ್ವಾದೇವಂ ವ್ಯೋಮವಚ್ಚ ಓಂ
೮ ಓಂ ಸಂಭೋಗಪ್ರಾಪ್ತಿರಿತಿ ಚೇನ್ನ ವೈಶೇಷ್ಯಾತ್ ಓಂ
ಅತ್ತೃತ್ವಾಧಿಕರಣಮ್ ಸರ್ವಭಕ್ಷಕತ್ವಾದಿ ವಿಶಿಷ್ಠ ಶಕ್ತಿಯು ವಿಷ್ಣುವಿನಲ್ಲಿಯೇ (ಕ್ರಿಯಾಲಿಂಗ) ೯ ಓಂ ಅತ್ತಾ ಚರಾಚರಗ್ರಹಣಾತ್ ಓಂ
೧೦ ಓಂ ಪ್ರಕರಣಾಚ್ಚ ಓಂ
ಗುಹಾಧಿಕರಣಮ್ ಹೃದಯಗುಹಾನಿವಾಸಿಯು - ಏಕತೆ, ಅನೇಕತೆಯೇ ಮೊದಲಾದುವುಗಳೆಲ್ಲವೂ ಶ್ರೀವಿಷ್ಣುವಿನದೇ, ಅವನೇ ಸರ್ವಸಾರಭೋಕ್ತನು ೧೧ ಓಂ ಗುಹಾಂ ಪ್ರವಿಷ್ಟಾವಾತ್ಮಾನೌ ಹಿ ತದ್ದರ್ಶನಾತ್ ಓಂ
೧೨ ಓಂ ವಿಶೇಷಣಾಚ್ಚ ಓಂ
ಅಂತರಾಧಿಕರಣಮ್ ಕಣ್ಣಿನೊಳಗೂ ವಿಷ್ಣುವೇ - ಚತುರ್ಮುಖ ಬ್ರಹ್ಮಾದಿಗಳಿಗೆ ಸ್ವ ಅವರ ನಿಯಾಮಕತೆಯು ಚಕ್ಷುರಂತಸ್ಥನಾದ ಶ್ರೀ ವಿಷ್ಣುವಿನ ಅಂತರ್ಯಾಮಿತ್ವದಿಂದಲೇ ೧೩ ಓಂ ಅಂತರ ಉಪಪತ್ತೇಃ ಓಂ
೧೪ ಓಂ ಸ್ಥಾನಾದಿವ್ಯಪದೇಶಾಚ್ಚ ಓಂ
೧೫ ಓಂ ಸುಖವಿಶಿಷ್ಟಾಭಿಧಾನಾದೇವ ಚ ಓಂ
೧೬ ಓಂ ಶ್ರುತೋಪನಿಷತ್ಕಗತ್ಯಭಿಧಾನಾಚ್ಚ ಓಂ
೧೭ ಓಂ ಅನವಸ್ಥಿತೇರಸಂಭವಾಚ್ಚ ನೇತರಃ ಓಂ
ಆಂತರ್ಯಾಮ್ಯಧಿಕರಣಮ್ ಶ್ರೀಹರಿ ಸರ್ವಾತಸ್ಥನಾದರೂ ಜಗದವಿದಿತನೇ ಅಪ್ರಮೇಯನೆ ೧೮ ಓಂ ಅಂತರ್ಯಾಮ್ಯಧಿದೈವಾದಿಷು ತದ್ಧರ್ಮ ವ್ಯಪದೇಶಾತ್ ಓಂ
೧೯ ಓಂ ನಚ ಸ್ಮಾರ್ತಮತದ್ಧರ್ಮಾಭಿಲಾಪಾತ್ ಓಂ
೨೦ ಓಂ ಶಾರೀರಶ್ಚೋಭಯೇಪಿ ಹಿ ಭೇದೇನೈನಮಧೀಯತೇ ಓಂ
ಅದೃಶ್ಯತ್ವಾಧಿಕರಣಮ್ ಪರವಿದ್ಯಾ ವಿಷಯವಾದ ಗುಣ ಪೂರ್ಣನು ವಿಷ್ಣುವೇ ಅದೃಶ್ಯತ್ವಾದಿ ಧರ್ಮವುಳ್ಳವನು ೨೧ ಓಂ ಅದೃಶ್ಯತ್ವಾದಿಗುಣಕೋ ಧರ್ಮೋಕ್ತೇಃ ಓಂ
೨೨ ಓಂ ವಿಶೇಷಣಭೇದವ್ಯಪದೇಶಾಭ್ಯಾಂ ಚ ನೇತರೌ ಓಂ
೨೩ ಓಂ ರೂಪೋಪನ್ಯಾಸಾಚ್ಚ ಓಂ
ವೈಶ್ವಾನರಾಧಿಕರಣಮ್ ವೈಶ್ವಾನರಾದಿ ಶಬ್ದ ಮುಖ್ಯವಾಚ್ಯನು ವಿಷ್ಣುವೇ  ಅಗ್ನ್ಯಾದಿಗಳಾಗುವುದಿಲ್ಲ ೨೪ ಓಂ ವೈಶ್ವಾನರಃ ಸಾಧಾರಣಶಬ್ದವಿಶೇಷಾತ್ ಓಂ
೨೫ ಓಂ ಸ್ಮರ್ಯಮಾಣಮನುಮಾನಂ ಸ್ಯಾದಿತಿ ಓಂ
೨೬ ಓಂ ಶಬ್ದಾದಿಭ್ಯೋಂತಃ ಪ್ರತಿಷ್ಠಾನಾನ್ನೇತಿ ಚೇನ್ನ ತಥಾ ದೃಷ್ಟ್ಯುಪದೇಶಾದಸಂಭವಾತ್ ಪುರುಷವಿಧಮಪಿ ಚೈನಮಧೀಯತೇ ಓಂ
೨೭ ಓಂ ಅತ ಏವ ನ ದೇವತಾ ಭೂತಂ ಚ ಓಂ 
೨೮ ಓಂ ಸಾಕ್ಷಾದಪ್ಯವಿರೋಧಂ ಜೈಮಿನಿಃ ಓಂ
೨೯ ಓಂ ಅಭಿವ್ಯಕ್ತೇರಿತ್ಯಾಶ್ಮರಥ್ಯಃ ಓಂ
೩೦ ಓಂ ಅನುಸ್ಮೃತೇರ್ಬಾದರಿಃ ಓಂ
೩೧ ಓಂ ಸಂಪತ್ತೇರಿತಿ ಜೈಮಿನಿಸ್ತಥಾ ಹಿ ದರ್ಶಯತಿ ಓಂ
೩೨ ಓಂ ಆಮನಂತಿ ಚೈನಮಸ್ಮಿನ್ ಓಂ

ಉಭಯತ್ರಪ್ರಸಿದ್ಧಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ದ್ಯುಭ್ವಾದ್ಯಾಯತನಾಧಿಕರಣಮ್ ಆತ್ಮ ಶಬ್ದ ವಾಚ್ಯನು ಭೂ ಸ್ವರ್ಗಾದಿ ಆಶ್ರಯನು ಮುಕ್ತಾಶಯನು ವಿಷ್ಣುವೇ ೧ ಓಂ ದ್ಯುಭ್ವಾದ್ಯಾಯತನಂ ಸ್ವಶಬ್ದಾತ್ ಓಂ
೨ ಓಂ ಮುಕ್ತೋಪಸೃಪ್ಯವ್ಯಪದೇಶಾತ್ ಓಂ
೩ ಓಂ ನಾನುಮಾನಮತಚ್ಛಬ್ದಾತ್ ಓಂ
೪ ಓಂ ಪ್ರಾಣಭೃಚ್ಚ ಓಂ
೫ ಓಂ ಭೇದವ್ಯಪದೇಶತ ಓಂ
೬ ಓಂ ಪ್ರಕರಣಾತ್ ಓಂ
೭ ಓಂ ಸ್ಥಿತ್ಯದನಾಭ್ಯಾಂ ಚ ಓಂ
ಭೂಮಾಧಿಕರಣಮ್ ಗುಣಪೂರ್ಣನು ವಿಷ್ಣುವೇ - ಪೂರ್ಣ ಸುಖಾತ್ಮಕನಾಗಿ ಚರಿಸುವವನು ವಿಷ್ಣುವೇ ೮ ಓಂ ಭೂಮಾ ಸಂಪ್ರಸಾದಾದಧ್ಯುಪದೇಶಾತ್ ಓಂ
೯ ಓಂ ಧರ್ಮೋಪಪತ್ತೇಶ್ಚ ಓಂ
ಅಕ್ಷರಾಧಿಕರಣಮ್ ಚತುರ್ವಿದ ನಾಶರಹಿತನಾದ ವಿಷ್ಣುವೇ ಅಕ್ಷರ ಶಬ್ದ ವಾಚ್ಯನು ೧೦ ಓಂ ಅಕ್ಷರಮಂಬರಾಂತಧೃತೇಃ ಓಂ
೧೧ ಓಂ ಸಾ ಚ ಪ್ರಶಾಸನಾತ್ ಓಂ
೧೨ ಓಂ ಅನ್ಯಭಾವವ್ಯಾವೃತ್ತೇಶ್ಚ ಓಂ
ಸದಧಿಕರಣಮ್ ಲಯಕಾಲದಲ್ಲಿ 'ಸತ್'ವಿಷ್ಣುವೇ - ದೃಗ್ಗೋಚರತ್ವಾದಿ ಧರ್ಮಗಳಿಂದ ಸತ್ ಶಬ್ದ ವಾಚ್ಯನು ವಿಷ್ಣುವೇ ೧೩ ಓಂ ಈಕ್ಷತಿಕರ್ಮವ್ಯಪದೇಶಾತ್ ಸಃ ಓಂ
ದಹರಾಧಿಕರಣಮ್ ಹೃದಯಕಮಲದಲ್ಲಿ 'ಆಕಾಶ'ವ್ಷ್ಣುವೇ - ಹೃತ್ಪದ್ಮಸ್ಥ ವಿಷ್ಣುವೇ ನಿರ್ಗತ ಪ್ರಾಪ್ಯತ್ವಾದಿ ಜೀವಭಿನ್ನ ಸುಪ್ತಿ ಪ್ರಾಪ್ಯತ್ವಾದಿ ಅನೇಕ ಗುಣ ಪೂರ್ಣನು ೧೪ ಓಂ ದಹರ ಉತ್ತರೇಭ್ಯಃ ಓಂ
೧೫ ಓಂ ಗತಿಶಬ್ದಾಭ್ಯಾಂ ತಥಾಹಿ ದೃಷ್ಠಂ ಲಿಂಗಂ ಚ ಓಂ
೧೬ ಓಂ ಧೃತೇಶ್ಚ ಮಹಿಮ್ನೋಸ್ಯಾಸ್ಮಿನ್ ಉಪಲಭ್ಧೇಃ ಓಂ
೧೭ ಓಂ ಪ್ರಸಿದ್ಧೇಶ್ಚ ಓಂ
೧೮ ಓಂ ಇತರಪರಾಮರ್ಶಾತ್ ಸ ಇತಿ ಚೇನ್ನಾಸಂಭವಾತ್ ಓಂ
೧೯ ಓಂ ಉತ್ತರಾಚ್ಚೇದಾವಿರ್ಭೂತಸ್ವರೂಪಸ್ತು ಓಂ
೨೦ ಓಂ ಅನ್ಯಾರ್ಥಶ್ಚ ಪರಾನರ್ಶಃ ಓಂ
೨೧ ಓಂ ಅಲ್ಪಶ್ರುತೇರಿತಿ ಚೇತ್ ತದುಕ್ತಂ ಓಂ
ಅನುಕೃತ್ಯಧಿಕರಣಮ್ ಸ್ವಪ್ರಕಾಶತ್ವಾದಿ ಗುಣವುಳ್ಳವನಾದುದರಿಂದ ಸ್ವೇಚ್ಛೆಯಿಂದಲೇ ಸೂರ್ಯಾದಿ ಸಕಲ ಭಾಸಕನು ವಿಷ್ಣುವೇ ೨೨ ಓಂ ಅನುಕೃತೇಸ್ತಸ್ಯ ಚ ಓಂ
೨೩ ಓಂ ಅಪಿ ಸ್ಮರ್ಯತೇ ಓಂ
ವಾಮನಾಧಿಕರಣಮ್ ಹ್ದಯದಲ್ಲಿ 'ಈಶಾನ' ವಿಷ್ಣುವೇ  - ಸರ್ವದೇವೋಪಾಸ್ಯನಾದ ಬಹು ಸುಂದರನಾದ ವಿಷ್ಣುವೇ ಪ್ರಾಣಾದಿ ಪ್ರೇರಕನು ೨೪ ಓಂ ಶಬ್ದಾದೇವ ಪ್ರಮಿತಃ ಓಂ
೨೫ ಓಂ ಹೃದ್ಯಪೇಕ್ಷಯಾ ತು ಮನುಷ್ಯಾಧಿಕಾರತ್  ಓಂ
ದೇವತಾಧಿಕರಣಮ್ ದೇವತೆಗಳಿಗೂ ಋಷ್ಯಾದಿಗಳಿಗೂ ತತ್ತದ್ಯೋಗ್ಯ ವೇದಾಧಿಕಾರವುಂಟು ೨೬ ಓಂ ತದುಪರ್ಯಪಿ ಬಾದರಾಯಣಃ ಸಂಭವಾತ್ ಓಂ
೨೭ ಓಂ ವಿರೋಧಃ ಕರ್ಮಣೀತಿ  ಚೇನ್ನಾನೇಕಪ್ರತಿಪತ್ತೇರ್ದರ್ಶನಾತ್ ಓಂ
೨೮ ಓಂ ಶಬ್ದ ಇತಿ ಚೇನ್ನಾತಃ ಪ್ರಭವಾತ್ಪ್ರತ್ಯಕ್ಷಾನು ಮಾನಾಭ್ಯಾಂ ಓಂ
೨೯ ಓಂ ಅತ ಏವ ಚ ನಿತ್ಯತ್ವಂ ಓಂ
೩೦ ಓಂ ಸಮಾನನಾಮರೂಪತ್ವಾಚ್ಚಾವೃತ್ತಾವಪ್ಯ ವಿರೋಧೋ ದರ್ಶನಾತ್ ಸ್ಮೃತೇಶ್ಚ ಓಂ
೩೧ ಓಂ ಮಧ್ವಾದಿಷ್ವಸಂಭವಾದನಧಿಕಾರಂ ಜೈಮಿನಿಃ ಓಂ
೩೨ ಓಂ ಜ್ಯೋತಿಷಿ ಭಾವಾಚ್ಚ ಓಂ
೩೩ ಓಂ ಭಾವಂ ತು ಬಾದರಾಯಣೋಸ್ತಿ ಹಿ ಓಂ
ಅಪಶೂದ್ರಾಧಿಕರಣಮ್  ಶೂದ್ರಾದಿಗಳಿಗೆ ವೇದಾಧಿಕರಣವಿಲ್ಲ ೩೪ ಓಂ ಶುಗಸ್ಯ ತದನಾದರಶ್ರವಣಾತ್ ತದಾದ್ರವಣಾತ್ ಸೂಚ್ಯತೇ ಹಿ ಓಂ
೩೫ ಓಂ ಕ್ಷತ್ರಿಯತ್ವಾವಗತೇಶ್ಚೋತ್ತರತ್ರ ಚೈತ್ರರಥೇನ ಲಿಂಗಾತ್ ಓಂ
೩೬ ಓಂ ಸಂಸ್ಕಾರಪರಾಮರ್ಶಾತ್ ತದಭಾವಾಭಿಲಾಪಾಚ್ಚ ಓಂ
೩೭ ಓಂ ತದಭಾವನಿರ್ಧಾರಣೇ ಚ ಪ್ರವೃತೇಃ ಓಂ
೩೮ ಓಂ ಶ್ರವಣಾಧ್ಯಯನಾರ್ಥ ಪ್ರತಿಷೇಧಾತ್ ಸ್ಮೃತೇಶ್ಚ ಓಂ
೧೦ ಕಂಪನಾಧಿಕರಣಮ್ ಸರ್ವಚೇಷ್ಟಕನಾದ ವಿಷ್ಣುವೇ ವಜ್ರಾದಿ ಶಬ್ದ ವಾಚ್ಯನು ೩೯ ಓಂ ಕಂಪನಾತ್ ಓಂ
೧೧ ಜ್ಯೋತಿರಧಿಕರಣಮ್ ಹೃದಯದಲ್ಲಿ ಜ್ಯೋತಿ ವಿಷ್ಣುವೇ - ಜ್ಯೋತಿಃ ಶಬ್ದವಾಚ್ಯನಾದ ವಿಷ್ಣುವೇ ಸಕಲ ಜೀವಬಿಂಬನೆನಿಸಿ ಲೋಕಾಂತರ ಗಮನಾದಿ ಕ್ರಿಯಾನಿಯಾಮಕನು ೪೦ ಓಂ ಜ್ಯೋತಿರ್ದರ್ಶನಾತ್ ಓಂ
೧೨ ಆಕಾಶಾಧಿಕರಣಮ್ ಲೌಕಿಕ ನಾಮರಹಿತನಾದರೂ ಅಲೌಕಿಕ ನಾಮ ರೂಪವುಳ್ಳವನೇ ಆದುದರಿಂದಲೂ ಆಕಾಶಪದ ವಾಚ್ಯನು ವಿಷ್ಣುವೇ ೪೧ ಓಂ ಆಕಾಶೋರ್ಥಾಂತರಾದಿ ವ್ಯಪದೇಶಾತ್ ಓಂ
೧೩ ಸುಷುಪ್ತ್ಯ ಅಧಿಕರಣಮ್ ಸ್ವಪ್ನದ್ರಷ್ಟೃವೂ ಸರ್ವಜ್ಞ ಪರಮಾತ್ಮನೇ - ನಿದ್ರಾದಿ ಪ್ರೇರಕನು ನಿರ್ಲಿಪ್ತನೂ ವಿಷ್ಣುವೇ ೪೨ ಓಂ ಸುಷುಪ್ತ್ಯತ್ಕ್ರಾಂತ್ಯೋರ್ಭೇದೇನ ಓಂ
೧೪ ಬ್ರಾಹ್ಮಣಾಧಿಕರಣಮ್ ನಿತ್ಯಮಹಿಮ 'ಬ್ರಾಹ್ಮಣ' ನೂ ವಿಷ್ಣುವೇ  - ಬ್ರಾಹ್ಮಾಣಾದಿ ಶಬ್ದ ಮುಖ್ಯ ವಾಚ್ಯನು ಪರಬ್ರಹ್ಮನಾದ ವಿಷ್ಣುವೆ ೪೩ ಓಂ ಪತ್ಯಾದಿಶಬ್ದೇಭ್ಯಃ ಓಂ

ಅನ್ಯತ್ರೈವ ಪ್ರಸಿದ್ಧನಾಮಲಿಂಗಪಾದ

ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಅನುಮಾನಿಕಾಧಿ ಕರಣಮ್ 'ಅವ್ಯಕ್ತ' ವಿಷ್ಣುವೇ - ಷ್ರ್ವತಂತ್ರ ಸ್ವತಂತ್ರನಾದ ವಿಷ್ಣುವೇ ಸರ್ವಶಬ್ದ ಮುಖ್ಯವಾಚ್ಯನು. ಅವನೇ ಸರ್ವತ್ರದಲ್ಲಿದ್ದು ಸರ್ವಪ್ರೇರಕನಾಗಿರುವುದರಿಂದ ಅವನ ಶಬ್ದಗಳಿಂದಲೇ ವ್ಯವಹಾರ ಯೋಗ್ಯವಾಗುತ್ತದೆ. ೧ ಓಂ ಆನುಮಾನಿಕಮಪ್ಯೇಕೇಷಾಕೇಷಾಮಿತಿ ಚೇನ್ನ ಶರೀರರೂಪಕವಿನ್ಯಸ್ತಗೃಹೀತೇರ್ದರ್ಶಯತಿ ಚ ಓಂ
೨ ಓಂ ಸೂಕ್ಷ್ಮಂ ತು ತದರ್ಹತ್ವಾತ್ ಓಂ
೩ ಓಂ ತದಧೀನತ್ವಾ ದರ್ಥವತ್ ಓಂ
೪ ಓಂ ಜ್ಞೇಯತ್ವಾವಚನಾಚ್ಚ ಓಂ
೫ ಓಂ ವದತೀತಿ ಚೇನ್ನಪ್ರಾಜ್ಞೋ ಹಿ ಓಂ
೬ ಓಂ ಪ್ರಕರಣಾತ್ ಓಂ
೭ ಓಂ ತ್ರಯಾಣಾಮೇವ ಚೈವಮುಪನ್ಯಾಸಃ ಪ್ರಶ್ನಶ್ಚ ಓಂ
೮ ಓಂ ಮಹದ್ವಚ್ಚ ಓಂ
೯ ಓಂ ಚಮಸದವಿಶೇಷಾತ್ ಓಂ
ಜ್ಯೋತಿರುಪಕ್ರಮಾಧಿಕರಣಮ್ ಯಾಗ ನಾಮವೂ ವಿಷ್ಣುವಾಚಿ - ಜ್ಯೋತಿಷ್ಟೋಮಾಧಿ ಕರ್ಮಭೋಧಕ ಶಬ್ದಗಳು ಮಹಾಯೋಗ ವೃತ್ತಿಯಿಂದ ವಿಷ್ಣು ಬೋಧಕಗಳೇ ಆಗಿ ರೂಢಿಯಲ್ಲಿ ಇತರ ಬೋಧಕಗಳೂ ಆಗಿರುತ್ತವೆ. ೧೦ ಓಂ ಜ್ಯೋತಿರುಪಕ್ರಮಾತ್ತು ತಥಾ ಹ್ಯಧೀಯತೇ ಏಕೇ ಓಂ
೧೧ ಓಂ ಕಲ್ಪನೋಪದೇಶಾಚ್ಚ ಮಧ್ವಾದಿವದವಿರೋಧಃ ಓಂ
ನಸಂಖ್ಯೋಪಸಂಗ್ರಹಾಧಿಕರಣಮ್ ಪಂಚಜನ ವಿಷ್ಣುವೇ - ರೂಪ ಭೇದದಿಂದ ಆಧಾರನು ಅಧೇಯನು ಅವನೇ ಆಗಿರುವುದರಿಂದ ಸಂಖ್ಯಾದಿ ಶಬ್ದವಾಚ್ಯನು ವಿಷ್ಣುವೇ ೧೨ ಓಂ ನ ಸಂಖ್ಯೋಪಸಂಗ್ರಹಾದಪಿ ನಾನಾಭಾವಾದತಿರೇಕಾಚ್ಚ ಓಂ
೧೩ ಓಂ ಪ್ರಾಣಾದಯೋ ವಾಕ್ಯಶೇಷಾತ್ ಓಂ
೧೪ ಓಂ ಜ್ಯೋತಿಷೈಕೇಷಾಮಸತ್ಯನ್ನೇ ಓಂ
ಕಾರಣತ್ವೇನ ಆಕಾಶಾಧಿಕರಣಮ್ ಅಜ್ಞೇಯವಾದ ಆಕಾಶವೂ ವಿಷ್ಣುವೇ - ಆಕಾಶಾದ್ಯಂತಸ್ಥನಾಗಿ ಸರ್ವ ವ್ಯಂಗ್ಯ ವ್ಯಂಜಕನು ತಾನೇ ಆದ ವಿಷ್ಣುವೇ ಸರ್ವಕಾರ್ಯ ಕಾರಣನು ಅನಂತ ರೂಪಿಯು ೧೫ ಓಂ ಕಾರಣತ್ವೇನ ಚಾಕಾಶಾದಿಷು ಯಥಾವ್ಯಪದಿಷ್ಟೋಕ್ತೇಃ ಓಂ
ಸಮಾಕರ್ಷಾಧಿಕರಣಮ್ ಸರ್ವಶಬ್ದವಾಚ್ಯ ವಿಷ್ಣು - ಲೋಕ ವ್ಯವಹಾರ ಸಿದ್ದಿಗಾಗಿ ಭಗವದ್ವಾಚಕ ಶಬ್ದಗಳನ್ನೇ ಸೆಳೆದು ಲೋಕದಲ್ಲಿ ಸಂಕೇತಿಸಿ ಕೊಂಡಿರುತ್ತದೆ. ೧೬ ಓಂ ಸಮಾಕರ್ಷಾತ್ ಓಂ
೧೭ ಓಂ ಜಗದ್ವಾಚಿತ್ವಾತ್ ಓಂ
೧೮ ಓಂ ಜೀವಮುಖ್ಯಪ್ರಾಣಲಿಂಗಾದಿತಿ ಚೇತ್ ತದ್ವಾಖ್ಯಾತಂ ಓಂ
೧೯ ಓಂ ಅನ್ಯಾರ್ಥಂ ತು ಜೈಮಿನಿಃ ಪ್ರಶ್ನವ್ಯಾಖ್ಯಾನಾಭ್ಯಾ ಮಪಿಚೈವಮೇಕೇ ಓಂ
೨೦ ಓಂ ವಾಕ್ಯಾನ್ವಯಾತ್ ಓಂ
೨೧ ಓಂ ಪ್ರತಿಜ್ಞಾಸಿದ್ಧೇರ್ಲಿಂಗಮಾಶ್ಮರಥ್ಯಃ ಓಂ
೨೨ ಓಂ ಉತ್ಕ್ರಮಿಷ್ಯತ ಏವಂ ಭಾವಾದಿತ್ಯೌಡುಲೋಮಿಃ ಓಂ
೨೩ ಓಂ ಅವಸ್ಥಿತೇರಿತಿ  ಕಾಶಕೃತ್ಸ್ನ್ಯಃ  ಓಂ
ಪ್ರಕೃತ್ಯಧಿಕರಣಮ್ ಪುಂ, ಸ್ತ್ರೀ, ಉಭಯ ಲಿಂಗವೂ ಪರ ಮಾತ್ಮನಲ್ಲಿ ಅವಿರುದ್ಧಗಳೇ ಆಗಿ ಇರುವುದರಿಂದ  ಸಕಲ ಲಿಂಗ ಶಬ್ದವಾಚ್ಯನು ವಿಷ್ಣುವೇ. ೨೪ ಓಂ ಪ್ರಕೃತಿಶ್ಚ ಪ್ರತಿಜ್ಞಾದೃಷ್ಟಾಂತಾನು ಪರೋಧಾತ್ ಓಂ
೨೫ ಓಂ ಅಭಿಧ್ಯೋಪದೇಶಾಚ್ಚ ಓಂ
೨೬ ಓಂ ಸಾಕ್ಷಾಚ್ಚೋಭಯಾಮ್ನಾನಾತ್ ಓಂ
೨೭ ಓಂ ಆತ್ಮಕೃತೇಃ ಪರಿಣಾಮಾತ್ ಓಂ
೨೮ ಓಂ ಯೋನಿಶ್ಚ ಹಿ ಗೀಯತೇ ಓಂ
ಏತನಸರ್ವೇವ್ಯಾಖ್ಯಾತಾಧಿಕರಣಮ್ ನಿಷೇಧಾರ್ಥಕಶಬ್ದಗಳೂ ವಿಷ್ಣುವಾಚಿ - ಶೂನ್ಯ ಅಸದಾದಿ ಸಕಲ ಶಬ್ದವಾಚ್ಯನು ಅಶೇಷ ಸ್ವರ ವರ್ಣಪದ ವಾಕ್ಯಾತ್ಮಕ ಸಕಲ ಶಾಸ್ತ್ರೈಕ ಸಮಧಿ ಗಮ್ಯನು ಧನ್ಯಾದಿಶಬ್ದವಾಚ್ಯನು ಸಕಲ ಗುಣಪೂರ್ಣನು ಬ್ರಹ್ಮಾಖ್ಯ ವಿಷ್ಣುವೇ ಮೋಕ್ಷೇಚ್ಛುಗಳಿಂದ ಜಿಜ್ಞಾಸ್ಯನು. ೨೯ ಓ ಏತೇನ ಸರ್ವೇ ವ್ಯಾಖ್ಯಾತಾ ವ್ಯಾಖ್ಯಾತಾಃ ಓಂ

ಅವಿರೋಧಾದ್ಯಾಯ
ಯುಕ್ತಿಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಸ್ಮೃತ್ಯಧಿಕರಣಮ್ ಪಾಶುಪತಾದ್ ಸ್ಮೃತಿಗಳ್ ಪ್ರಮಾಣವಲ್ಲ - ಶ್ರುತಿವಿರುದ್ಧಸ್ಮೃತ್ಯ ಪ್ರಾಮಾಣ್ಯ ಸಾಧನೆಯು ೧ ಓಂ ಸ್ಮೃತ್ಯನವಕಾಶ ದೋಷ ಪ್ರಸಂಗ ಇತಿ ಚೇನ್ನಾನ್ಯ ಸ್ಮೃತ್ಯನವಕಾಶ ದೋಷ ಪ್ರಸಂಗಾತ್ ಓಂ
೨ ಓಂ ಇತರೇಷಾಂ ಚಾನುಪಲಬ್ಧೇಃ ಓಂ
೩ ಓಂ ಏತೇನ ಯೋಗಃ ಪ್ರತ್ಯುಕ್ತಃ ಓಂ
ನವಿಲಕ್ಷಣತ್ವಾಧಿ ಕರಣಮ್ ವೇದವು ಅಪೌರುಷೇಯ - ಶ್ರುತಿತತ್ಸಹಕಾರಿಸ್ಮೃತಿ ಪ್ರಾಮಾಣ್ಯವು ತತ್ಸ್ವತಸ್ತ್ವವು ೪ ಓಂ ನ ವಿಲಕ್ಷಣತ್ವಾದಸ್ಯ ತಥಾತ್ವಂ ಚ ಶಬ್ದಾತ್ ಓಂ
೫ ಓಂ ದೃಶ್ಯತೇ ತು ಓಂ
ಅಭಿಮಾನಧ್ಯಿಕರಣಮ್ ಅಚೇತನವಾಚಿಶಬ್ದ ಅಭಿಮಾನಿ ಪರ - ಅಭಿಮಾನಿದೇವತೆಗಳ ಅಂತರ್ಧಾನಾದಿ ನಿರೂಪಣವು ೬ ಓಂ ಅಭಿಮಾನಿವ್ಯಪದೇಶಸ್ತು ವಿಶೇಷಾನುಗತಿಭ್ಯಾಮ್ ಓಂ
೭ ಓಂ ದೃಶ್ಯತೇ ಚ ಓಂ
ಅಸದಧಿಕರಣಮ್ ಅಭಾವ ಜಗತ್ಕಾರಣವಲ್ಲ - ಭಾವಸತ್ವನಿರೂಪಣೆ ೮ ಓಂ ಅಸದಿತಿಚೇನ್ನ ಪ್ರತಿಷೇಧಮಾತ್ರತ್ವಾತ್ ಓಂ
೯ ಓಂ ಅಪೀತೌ ತದ್ವತ್ ಪ್ರಸಂಗಾದಸಮಲಜಸಂ ಓಂ
೧೦ ಓಂ ನ ತು ದೃಷ್ಟಾಂತಭಾವಾತ್ ಓಂ
೧೧ ಓಂ ಸ್ವಪಕ್ಶದೋಷಾಚ್ಚ ಓಂ
೧೨ ಓಂ ತರ್ಕಾಪ್ರತಿಷ್ಠಾನಾದನ್ಯಥಾನುಮೇಯ ಮಿತಿ ಚೇದೇವಮಪ್ಯ ನಿರ್ಮೋಕ್ಷ ಪ್ರಸಂಗಃ ಓಂ
೧೩ ಓಂ ಏತೇನ ಶಿಷ್ಟಾಃ ಅಪರಿಗ್ರಹಾ ಅಪಿ ವ್ಯಾಖ್ಯಾತಾಃ ಓಂ
ಭೋಕ್ತ್ರಾಪತ್ಯಧಿಕರಣಮ್ ಜೀವಬ್ರಹ್ಮೈಕ್ಯನಿರಸನೆಯು ೧೪ ಓಂ ಭೋಕ್ತ್ರಾಪತ್ತೇರವಿಭಾಗ ಶ್ಚೇತ್ ಸ್ಯಾಲ್ಲೋಕವತ್ ಓಂ
ಆರಂಭಣಾಧಿಕರಣಮ್ ವಿಷ್ಣು ಸ್ವತಂತ್ರಕರ್ತ - ಸೃಷ್ಟಿಸಾಧನಗಳಿಗೆ ಈಶ್ವರಾಧೀನತೆಯು ೧೫ ಓಂ ತದನನ್ಯತ್ವಮಾರಂಭಣಶಬ್ದಾದಿಭ್ಯಃ ಓಂ
೧೬ ಓಂ ಭಾವೇ ಚೋಪಲಬ್ಧೇಃ ಓಂ
೧೭ ಓಂ ಸತ್ವಾಚ್ಚಾವರಸ್ಯ ಓಂ
೧೮ ಓಂ ಅಸದ್ವ್ಯಪದೇಶಾನ್ನೇತಿ ಚೇನ್ನ ಧರ್ಮಾಂತರೇಣ ವಾಕ್ಯಶೇಷಾತ್ ಓಂ
೧೯ ಓಂ ಯುಕ್ತೇಃ ಶಬ್ದಾಂತರಾಚ್ಚ ಓಂ
೨೦ ಓಂ ಪಟವಚ್ಚ ಓಂ
೨೧ ಓಂ ಯಥಾ ಪ್ರಾಣಾದಿಃ ಓಂ
ಇತರವ್ಯಪದೇಶಾಧಿ ಕರಣಮ್ ಜೀವನು ಜಗತ್ಕರ್ತನಲ್ಲ -  ಜೀವನಿಗೆ ಅಸ್ವತಂತ್ರ ಕರ್ತೃತ್ವ (ಅನುಪಲಬ್ಧನಾನಿಯೇ ಶ್ರೀಹರಿ ಸ್ವತಂತ್ರಸರ್ವ ನಿಯಾಮನು) ೨೨ ಓಂ ಇತರವ್ಯಪದೇಶಾದ್ಧಿ ತಾಕರಣಾದಿದೋಷಪ್ರಸಕ್ತಿಃ ಓಂ
೨೩ ಓಂ ಅಧಿಕಂ ತು ಭೇದನಿರ್ದೇಶಾತ್ ಓಂ
೨೪ ಓಂ ಅಶ್ಮಾದಿವಚ್ಚ ತದನ್ಪಪತ್ತಿಃ ಓಂ
೨೫ ಓಂ ಉಪಸಂಹಾರದರ್ಶನಾನ್ನೇತಿ ಚೇನ್ನ ಕ್ಷೀರವದ್ಧಿ ಓಂ
೨೬ ಓಂ ದೇವಾದಿವದಪಿ ಲೋಕೇ ಓಂ 
೨೭ ಓಂ ಕೃತ್ಸ್ನಪ್ರಸಕ್ತಿರ್ನಿರವಯವತ್ವ ಶಬ್ದ ಕೋಪೋವಾಓಂ
ಶ್ರುತಿಶಬ್ದಮೂಲತ್ವಾಧಿಕರಣಮ್ ವಿ ಷ್ಣುವಿಗೆ ಜಗತ್ ಕರ್ತೃತ್ವ ಯುಕ್ತಿಇರುದ್ಧವಲ್ಲ - ಶ್ರೀಹರಿಗೆ ಅಘಟಿತ ಘಟನಾಶಕ್ತಿ ಮತ್ವವು ೨೮ ಓಂ ಶ್ರುತೇಸ್ತು ಶಬ್ದಮೂಲತ್ವಾತ್ ಓಂ
೨೯ ಓಂ ಆತ್ಮನಿ ಚೈವಂ ವಿಚಿತ್ರಾಶ್ಚ ಹಿ ಓಂ
೩೦ ಓಂ ಸ್ವಪಕ್ಷದೋಷಾಚ್ಚ ಓಂ
೩೧ ಓಂ ಸರ್ವೋಪೇತಾ ಚ ತದ್ದರ್ಶನಾತ್ ಓಂ
೩೨ ಓಂ ವಿಕರಣತ್ವಾನ್ನೇತಿ ಚೇತ್ತದುಕ್ತಮ್ ಓಂ
ನಪ್ರಯೋಜನತ್ವಾಧಿಕರಣಮ್ ಜಗತ್ ಸೃಷ್ಟಿಯಿಂದ ವಿಷ್ಣುವಿಗಗೆ ಪ್ರಯೋಜನವಿಲ್ಲ -  ಪ್ರಯೋಜನಾಪೇಕ್ಷಾ ಇಲ್ಲದೇ ಸ್ವಭಾವತಃ ಆನಂದೋದ್ರೇಕಾದಿಗಳಿಂದ ಶ್ರೀಹರಿಗೆ ಸೃಷ್ಟಿಕಾರಣತೆ ೩೩ ಓಂ ನ ಪ್ರಯೋಜನವತ್ತ್ವಾತ್ ಓಂ
೩೪ ಓಂ ಲೋಕವತ್ತು ಲೀಲಾಕೈವಲ್ಯಮ್ ಓಂ
೧೦ ವೈಷಮ್ಯನೈರ್ಘೃಣ್ಯಾಧಿಕರಣಮ್  ವಿಷ್ಣುವಿನಲ್ಲಿ ವೈಷಮ್ಯಾದಿದೋಷವಿಲ್ಲ - ಜೀವನ ಕರ್ಮಾನುಸಾರ ಫಲಪ್ರದನಾದರೂ ಸ್ವತಂತ್ರನೆ ೩೫ ಓಂ ವೈಷಮ್ಯನೈರ್ಘೃಣ್ಯೇ ನ ಸಾಪೇಕ್ಷತ್ವಾತ್ತಥಾ ಹಿ ದರ್ಶಯತಿ ಓಂ
೩೬ ಓಂ ನ ಕರ್ಮಾವಿಭಾಗಾದಿತಿ ಚೇನ್ನಾನಾದಿತ್ವಾತ್ ಓಂ
೩೭ ಓಂ ಉಪಪದ್ಯತೇ ಚಾಪ್ಯುಪಲಭ್ಯತೇ ಚ ಓಂ
೧೧ ಸರ್ವಧರ್ಮೋಪಪತ್ಯಧಿಕರಣಮ್ ವಿಷ್ಣುವಿನ ಗುಣ್ಪೂರ್ಣತ್ವ ಯುಕ್ತಿವಿರುದ್ಧವಲ್ಲ - ಶ್ರೀಹರಿಗೆ ಸರ್ವಗುಣ ಪರಿಪೂರ್ಣತೆ ೩೮ ಓಂ ಸರ್ವಧರ್ಮೋಪಪತ್ತೇಶ್ಚ ಓಂ

ಸಮಯಪಾದ

ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ರಚನಾ ಅನುಪಪತ್ಯಧಿಕರಣಮ್ (ರಚನಾಧಿಕರಣಮ್) ಪ್ರಪಂಚಸೃಷ್ಟಿಗೆ ಪ್ರಕೃತಿ ಸ್ವತಂತ್ರ ಕಾರಣವಲ್ಲ  - ನಿರೀಶ್ವರ ಸಾಂಖ್ಯಮತ ನಿರಾಸವು ೧ ಓಂ ರಚನಾನುಪಪತ್ತೇಶ್ಚ ನಾನುಮಾನಂ ಓಂ
೨ ಓಂ ಪ್ರವೃತ್ತೇಶ್ಚ ಓಂ
೩ ಓಂ ಪಯೋಂಬುವಚತ್ ತತ್ರಾಪಿ ಓಂ
೪ ಓಂ ವ್ಯತಿರೇಕಾನವಸ್ಠ ತೇಶ್ಚಾನಪೇಕ್ಷತ್ವಾತ್ ಓಂ
ಅನ್ಯತ್ರಾಭಾವಾಧಿಕರಣಮ್ ಪ್ರಪಂಚಸೃಷ್ಟಿಗೆ ಪ್ರಕೃತಿ ಮುಖ್ಯಕಾರಣನಲ್ಲಿ  - ಸೇಶ್ವರಸಾಂಖ್ಯ ಮತ ನಿರಾಸವು ೫ ಓಂ ಅನ್ಯತ್ರಾಭಾವಾಚ್ಚ ನ ತೃಣಾದಿವತ್ ಓಂ
ಅಭ್ಯುಪಗಮಾಧಿಕರಣಮ್ ಚಾರ್ವಾಕಮತಖಂಡನೆಯು ೬ ಓಂ ಅಭ್ಯುಪಗಮೇಪ್ಯರ್ಥಾಭಾವಾತ್ ಓಂ
ಪುರುಷಾಶ್ಮಾಧಿಕರಣಮ್ ಪ್ರಪಂಚಕ್ಕೆ ಪ್ರಕೃತಿ ಮುಖ್ಯಕಾರಣ ಅಲ್ಲ - ಸೇಶ್ವರೇಕದೇಶಪುರುಷೋಪಸರ್ಜಿತ ಪ್ರಕೃತಿ ಕರ್ತೃತ್ವ ನಿರಾಸವು ೭ ಓಂ ಪುರುಷಾಶ್ಮವದಿತಿ ಚೇತ್ತಥಾಪಿ ಓಂ
೮ ಓಂ ಅಂಗಿತ್ವಾನುಪಪತ್ತೇಃ ಓಂ
ಅನ್ಯಥಾನುಮಿತ್ಯಧಿಕರಣಮ್ ಪ್ರಪಂಚಕ್ಕೆ ಜೀವನು ಮುಖ್ಯಕಾರಣ ಅಲ್ಲ -ಸ್ವೇಶ್ವರಸಾಂಖ್ಯ ಮತೀಯ ಪ್ರಕೃತ್ಯುಪಸರ್ಜಿತ ಪುರುಷ ಕರ್ತೃತ್ವನಿರಾಸವು ೯ ಓಂ ಅನ್ಯಥಾನುಮಿತೌ ಚ ಜ್ಞಶಕ್ತಿ ವಿಯೋಗಾತ್ ಓಂ
೧೦ ಓಂ ವಿಪ್ರತಿಷೇಧಾಚ್ಚಾಸಮಂಜಸಮ್ ಓಂ
ವೈಶೇಷಿಕಾಧಿಕರಣಮ್ ವೈಶೇಷಿಕ ಮತನಿರಾಸವು ೧೧ ಓಂ ಮಹದ್ದೀರ್ಘವದ್ ವಾ ಹ್ರಸ್ವಪರಿಮಂಡಲಾಭ್ಯಾಮ್ ಓಂ
೧೨ ಓಂ ಉಭಯಥಾಪಿ ನ ಕರ್ಮಾತಸ್ತದಭಾವಃ ಓಂ
೧೩ ಓಂ ಸಮವಾಯಾಭ್ಯುಪಗಮಾಚ್ಚಸಾಮ್ಯಾದನವಸ್ಥಿತೇ ಓಂ
೧೪ ಓಂ ನಿತ್ಯಮೇವ ಚ ಭಾವಾತ್ ಓಂ
೧೫ ಓಂ ರೂಪಾದಿಮತ್ವಾಚ್ಚ ವಿಪರ್ಯಯೋದರ್ಶನಾತ್ ಓಂ
೧೬ ಓಂ ಉಭಯಥಾ ಚ ದೋಷಾತ್ ಓಂ
೧೭ ಓಂ ಅಪರಿಗ್ರಹಾಚ್ಚಾತ್ಯಂತಮನಪೇಕ್ಷಾ ಓಂ
ಸಮುದಾಯಾಧಿ ಕರಣಮ್ ಬೌದ್ಧಪ್ರಭೇದದ ವೈಭಾಷಿಕ, ಸೌತ್ರಾಂತಿಕಮತ ನಿರಾಸವು ೧೮ ಓಂ ಸಮುದಾಯ ಉಭಯಹೇತುಕೇಪಿ ತದಪ್ರಾಪ್ತಿಃ ಓಂ
೧೯ ಓಂ ಇತರೇತರಪ್ರತ್ಯಯತ್ವಾದಿತಿ ಚೇನ್ನೋತ್ಪತ್ತಿ ಮಾತ್ರನಿಮಿತ್ತತ್ವಾತ್ ಓಂ
೨೦ ಓಂ ಉತ್ತರೋತ್ಪಾದೇಚ ಪೂರ್ವನಿರೋಧಾತ್ ಓಂ
೨೧ ಓಂ ಅಸತಿ ಪ್ರತಿಜ್ಞೋಪರೋಧೋ  ಯೌಗಪದ್ಯಮನ್ಯಥಾ ಓಂ
೨೨ ಓಂ ಪ್ರತಿಸಂಖ್ಯಾಪ್ರತಿಸಂಖ್ಯಾನಿರೋಧಾ ಪ್ರಾಪ್ತಿರವಿಚ್ಛೇದಾತ್ ಓಂ
೨೩ ಓಂ ಉಅಭಯಥಾ ಚ ದೋಷಾತ್ ಓಂ
೨೪ ಓಂ ಆಕಾಶೇ ಚಾವಿಶೇಷಾತ್ ಓಂ
೨೫ ಓಂ ಅನುಸ್ಮೃತೇಶ್ಚ ಓಂ
ಅಸದ(ಶೂನ್ಯಾ)ಧಿಕರಣಮ್ ಶೂನ್ಯವು ಜಗತ್ಕಾರಣವಲ್ಲ - ಮಾಧ್ಯಮಿಕ (ಶೂನ್ಯ) ಮತ ನಿರಾಸವು ೨೬ ಓಂ ನಾಸತೋ ದೃಷ್ಟತ್ವಾತ್ ಓಂ
೨೭ ಓಂ ಉದಾಸೀನಾನಾಮಪಿ ಚೈವಂ ಸಿದ್ಧಿಃ ಓಂ
೨೮ ಓಂ ನಾಭಾವ ಉಪಲಬ್ಧೇಃ ಓಂ
೨೯ ಓಂ ವೈಧರ್ಮಾಚ್ಚ ನ ಸ್ವಪ್ನಾದಿವತ್ ಓಂ
ಅನುಪಲಬ್ಧ್ಯಧಿಕರಣಮ್ ಬೌದ್ಧಪ್ರಭೇದ  ವಿಜ್ಞಾನವಾದ ನಿರಾಸವು ೩೦ ಓಂ ನ ಭಾವೋನುಪಲಬ್ಧೇಃ ಓಂ
೩೧ ಓಂ ಕ್ಷಣಿಕತ್ವಾಚ್ಚ ಓಂ
೩೨ ಓಂ ಸರ್ವಥಾನುಪಪತ್ತೇಶ್ಚ ಓಂ
೧೦ ನೈಕಸ್ಮಿನ್ನಧಿಕರಣಮ್ ಜೈನಮತನಿರಾಸವು ೩೩ ಓಂ ನೈಕಸ್ಮಿನ್ನಸಂಭವಾತ್ ಓಂ
೩೪ ಓಂ ಏವಂಚಾತ್ಮಾಕಾರ್ತ್ಸ್ನ್ಯಮ್ ಓಂ
೩೫ ಓಂ ನ ಚ ಪರ್ಯಾಯಾದಪ್ಯವಿರೋಧೋ
ವಿಕಾರಾದಿಭ್ಯಃ ಓಂ
೩೬ ಓಂ ಅಂತ್ಯಾವಸ್ಥಿತೇಶ್ಚೋಭಯನಿತ್ಯತ್ವಾದವಿಶೇಷಾತ್ ಓಂ
೧೧ ಪತ್ಯುರಧಿಕರಣಮ್ ಪಾಶುಪತಮತನಿರಾಸವು ೩೭ ಓಂ ಪತ್ಯುರಸಾಮಂಜಸ್ಯಾತ್ ಓಂ
೩೮ ಓಂ ಸಂಬಂಧಾನುಪಪತ್ತೇಶ್ಚ ಓಂ
೩೯ ಓಂ ಅಧಿಷ್ಠಾನಾನುಪಪತ್ತೇಶ್ಚ ಓಂ
೪೦ ಓಂ ಕರಣವಚ್ಚೇನ್ನ ಭೋಗಾದಿಭ್ಯಃ ಓಂ
೪೧ ಓಂ ಅಂತವತ್ವಮಸರ್ವಜ್ಞ ತಾ ವಾ ಓಂ
೧೨ ಶಾಕ್ತಾ(ಉತ್ಪತ್ತ್ಯ)ಧಿಕರಣಮ್ ಶಕ್ತಿ ಕರ್ತೃತ್ವನಿರಾಸವು(ಮಹಾವಾಮನಮತ ನಿರಾಕರಣ) ೪೨ ಓಂ ಉತ್ಪತ್ತ್ಯಸಂಭವಾತ್ ಓಂ
೪೩ ಓಂ ನ ಚ ಕರ್ತುಃ ಕರಣಮ್ ಓಂ
೪೪ ಓಂ ವಿಜ್ಞಾನಾದಿಭಾವೇ ವಾ ತದಪ್ರತಿಷೇಧಃ ಓಂ
೪೫ ಓಂ ವಿಪ್ರತಿಷೇಧಾಚ್ಚ ಓಂ

ಪರಸ್ಪರಶ್ರುತ್ಯವಿರೋಧಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ವಿಯದಧಿಕರಣಮ್ ಆಕಾಶೋತ್ಪತ್ತಿ ಅನುತ್ಪತ್ತಿ ಶ್ರುತಿವಿರೋಢ ಪರಿಹಾರ ದ್ವಾರ ಆಕಾಶೋತ್ಪತ್ತಿ ಸಮರ್ಥನೆ ೧ ಓಂ ನ ವಿಯದಶ್ರುತೇಃ ಓಂ
೨ ಓಂ ಅಸ್ತಿತು ಓಂ
೩ ಓ ಗೌಣ್ಯಸಂಭವಾತ್ ಓಂ
೪ ಓಂ ಶಬ್ದಾಚ್ಚ ಓಂ
೫ ಓಂ ಸ್ಯಾಚ್ಚೈಕಸ್ಯ ಬ್ರಹ್ಮಶಬ್ದವತ್ ಓಂ
೬ ಓಂ ಪ್ರತಿಜ್ಞಾಹಾನಿರವ್ಯತಿರೇಕಾಚ್ಛಬ್ದೇಭ್ಯಃ ಓಂ
೭ ಓಂ ಯಾವದ್ ವಿಕಾರಂ ತು ವಿಭಾಗೋ ಲೋಕವತ್ ಓಂ
ಮಾತರಿಶ್ವಾಧಿಕರಣಮ್ ವಾಯ್ವನುತ್ಪತ್ತಿ ಶ್ರುತಿ ವಿರೋಧ ಪರಿಹಾರದ್ವಾರಾ ವಾಯೂತ್ಪತ್ತಿಯು ೮ ಓಂ ಏತೇನ ಮಾತರಿಶ್ವಾ ವ್ಯಾಖ್ಯಾತಃ ಓಂ
ಅಸಂಭವಾಧಿಕರಣಮ್ ಅಪಾರ್ಥಶ್ರುತಿವಿರೋಧ ಪರಿಹಾರದೊಂದಿಗೆ ಪರಬ್ರಹ್ಮಾನುತ್ಪತ್ತಿ ಸಾಧನೆಯು ೯ ಓಂ ಅಸಂಭವಸ್ತು ಸತೋನುಪಪತ್ತೆಃ ಓಂ
ತೇಜೋಧಿಕರಣಮ್ ತೇಜಸ್ಸಿಗೆ ಪರಬ್ರಹ್ಮನಿಂದಲೇ ಜನ್ಮನಿರೂಪಣವು ೧೦ ಓಂ ತೇಜೋತಸ್ತಥಾ ಹ್ಯಾಹ ಓಂ
ಅಬಧಿಕರಣಮ್ ಜಲಕ್ಕೆಹರಿಯಿಂದಲೇ ಉತ್ಪತ್ತಿಯು ೧೧ ಓಂ ಆಪಃ ಓಂ
ಪೃಥಿವ್ಯಧಿಕರಣಮ್ ಅನ್ನ ಶಬ್ದ ಪೃಥ್ವೀ ವಾಚ - ಪೃಥಿವೀದ್ವಾರಾ ಜಲಕ್ಕೆ ಆಹಾರ ಸೃಷ್ಟಿಕಾರಣತೆಯು ೧೨ ಓಂ ಪೃಥಿವ್ಯಧಿಕಾರರೂಪಶಬ್ದಾಂತರಾದಿಭ್ಯಃ ಓಂ
ತದಭಿಧ್ಯಾನಾಧಿಕರಣಮ್ ಸಕಲ ಶ್ರುತಿವಿರೋಧ ಪರಿಹಾರದ್ವಾರಾ ಪರಬ್ರಹ್ಮಗೆ ಆಧಿಭೂತಾದಿಲಯ ಕರ್ತೃತ್ವ ಸಾಧನೆಯು ೧೩ ಓಂ ತದಭಿಧ್ಯಾನಾದೇವ ತು ತಲ್ಲಿಂಗಾತ್ ಸಃ ಓಂ
ವಿಪರ್ಯಾಯಾಧಿಕರಣಮ್ ಸೃಷ್ಟಿಕ್ರಮಕ್ಕಿಂತ ವಿಪರೀತ ಲಯಕ್ರಮ - ಭೂತಲಯ ಕ್ರಮಶ್ರುತಿ ವಿರೋಧ ಪರಿಹಾರದ್ವಾರಾ ವಿಪರೀತಕ್ರಮ (ವ್ಯತ್ಕ್ರಮ) ಲಯಸಮರ್ಥನವು ೧೪ ಓಂ ವಿಪರ್ಯಯೇಣ ತು ಕ್ರಮೋತ ಉಪಪದ್ಯತೇ ಚ ಓಂ
ಅಂತರಾಧಿಕರಣಮ್ ಮನಸ್ತತ್ವದಿಂದ ವಿಜ್ಞಾನತತ್ವದ ಉತ್ಪತ್ತಿಯಿಲ್ಲ - ಸರ್ವಲಯ ಕ್ರಮಶ್ರುತಿ ವಿರೋಧ ಪರಿಹಾರದ್ವಾರಾ ಸರ್ವವ್ಯುತ್ಕ್ರಮಲಯ ಸಮರ್ಥನವು ೧೫ ಓಂ ಅಂತರಾ ವಿಜ್ಞಾನಮನಸೀ ಕ್ರಮೇಣ ತಲ್ಲಿಂಗಾದಿತಿ ಚೇನ್ನಾವಿಶೇಷಾತ್ ಓಂ
೧೬ ಓಂ ಚರಾಚರವ್ಯಪಾಶ್ರಯಸ್ತು ಸ್ಯಾತ್ತದ್ವ್ಯಪದೇಶೋ ಭಾಕ್ತಸ್ತದ್ಭಾವ ಭಾವಿತ್ವಾತ್ ಓಂ
೧೦ ನಾತ್ಮ ಶ್ರುತ್ಯ (ಆತ್ಮಾ) ಧಿಕರಣಮ್ ಶ್ರುತಿವಿರೋಧ ಪರಿಹಾರದ್ವಾರಾ ಪರಮಾತ್ಮ ಲಯಾಭಾವ ಸಮರ್ಥನೆಯು ೧೭ ಓಂ ನಾತ್ಮಾಶ್ರುತೇರ್ನಿತ್ಯತ್ವಾಚ್ಚ ತಾಭ್ಯಃ ಓಂ
೧೧ ಜ್ಞಾಧಿಕರಣಮ್ ಜೀವನಿಗೆ ಈಶ್ವರನಿಂದ ಉತ್ಪತ್ತಿ ಇದೆ. ಜೀವೌತ್ಪತ್ತಿಶ್ರುತಿವಿರೋಧ ಪರಿಹಾರದ್ವಾರಾ ಜೀವನಿಗೆ ಸ್ಥೂಲದೇಹ ಪ್ರಾಪ್ತಿನಾಶಗಳೇ ಜನ್ಮಮರಣಗಳೆಂದು ಸಾಧಿಸುವಿಕೆ ೧೮ ಓಂ ಜ್ಞೋತ ಏವ ಓಂ
೧೯ ಓಂ ಯುಕ್ತೇಶ್ಚ ಓಂ
೧೨ ಉತ್ಕ್ರಾಂತ್ಯಧಿಕರಣಮ್ ಜೀವನು ಅಣು - ಜೀವಪರಿಮಾಣಶ್ರುತ್ಯವಿರೋಧ ಜೀವಾಣುತ್ವ ಸಮರ್ಥನವು ೨೦ ಓಂ ಉತ್ಕ್ರಾಂತಿಗತ್ಯಾಗತೀನಾಮ ಓಂ
೨೧ ಓಂ ಸ್ವಾತ್ಮನಾ ಚೋತ್ತರಯೋಃ ಓಂ
೨೨ ಓಂ ನಾಣುರತಚ್ಛ್ರುತೇರಿತಿ ಚೇನ್ನೇತರಾಧಿಕಾರಾತ್ ಓಂ
೨೩ ಓಂ ಸ್ವಶಬ್ದೋನ್ಮಾನಾಭ್ಯಾಂಚ ಓಂ
೨೪ ಓಂ ಅವಿರೋಧಶ್ಚಂದನವತ್ ಓಂ
೨೫ ಓಂ ಅವಸ್ಥಿತಿವೈಶೇಷ್ಯಾದಿತಿ ಚೇನ್ನಾಭ್ಯುಪಗಮಾದ್ಧೃದಿಹಿ ಓಂ
೨೬ ಓಂ ಗುಣಾದ್ವಾಲೋಕವತ್ ಓಂ
೧೩ ವ್ಯತಿರೇಕಾಧಿಕರಣಮ್ ಜೀವರಿಗೆ ಅಂಶಗಳಿವೆ - ಏಕಾನೇಕ ಶ್ರುತಿವಿರೋಧ ಪರಿಹಾರದ್ವಾರ ಜೀವನಿಗೆ ಸ್ವರೂಪತಃ ಏಕರೂಪತಾ ಅಂತಶಃ ಅನೇಕರೂಪತ್ವ ಸಮರ್ಥನೆಯು ೨೭ ಓಂ ವ್ಯತಿರೇಕೋ ಗಂಧವತ್ತಥಾ ಚ ದರ್ಶಯತಿ ಓಂ
೧೪ ಪೃಥಗುಪದೇಶಾಧಿಕರಣ ಜೀವನು ಈಶ್ವರನಿಗಿಂತ ಭಿನ್ನ - ಅಪಾತಾರ್ಥ ಶ್ರುತಿವಿರೋಧ ಪರಿಹಾರಪೂರ್ವಕ ಸುಅತರಾಂ ಜೀವೇಶ ಭೇದಸಮರ್ಥನೆಯು ೨೮ ಓಂ ಪೃಥಗುಪದೇಶಾತ್ ಓಂ
೨೯ ಓಂ ತದ್ಗುಣಸಾರತ್ವಾತ್ತು ತದ್ವ್ಯಪದೇಶಃ ಪ್ರಾಜ್ಞವತ್ ಓಂ
೧೫ ಯಾವದಧಿಕರಣಮ್ ಜೀವನು ನಿತ್ಯ - ಈಶ್ವರನ ಪ್ರ್ತಿಬಿಂಬ -  ಜೀವಸ್ವರೂಪಾನುತ್ಪತ್ತಿ ತದುಪಾದ್ಯುತ್ತಿಶ್ರುತ್ಯ ವಿರೋಧವು ಜೀವನಾದಿತ್ವ ಸಮರ್ಥನವು  ೩೦ ಓಂ ಯಾವದಾತ್ಮ ಭಾವಿತ್ವಾಚ್ಚ ನ ದೋಷಸ್ತದ್ದರ್ಶನಾತ್ ಓಂ
೧೬ ಪುಂಸ್ತ್ವಾಧಿಕರಣಮ್ ಜೀವನಿಗೆ ಸುಖ ತದಭಾವ ಶ್ರುತಿವಿರೋಧ ಪರಿಹಾರ ಪೂರ್ವಕ ಜ್ಞಾನಾನಂದಾದಿ ರೂಪತ್ವ ಸಮರ್ಥನೆಯು ೩೧ ಓಂ ಪುಂಸ್ತ್ವಾದಿವತ್ತ್ವಸ್ಯ ಸತೋಭಿವ್ಯಕ್ತಿಯೋಗಾತ್ ಓಂ
೩೨ ಓಂ ನಿತ್ಯೋಪಲಬ್ಧ್ಯನುಪಲಬ್ಭಿ ಪ್ರಸಂಗೋನ್ಯತರ ನಿಯಮೋ ವಾನ್ಯಥಾ ಓಂ
೧೭ ಕರ್ತೃತ್ವಾಧಿಕರಣಮ್ ಜೀವನಿಗೆ ಕರ್ತೃತ್ವಾ ಕರ್ತೃತ್ವ ಶ್ರಿತಿವಿರೋಧಪರಿಹಾರದ್ವಾರಾ ಅಸ್ವತಂತ್ರ ಕರ್ತೃತ್ವ ಸಮರ್ಥನೆಯು ೩೩ ಓಂ ಕರ್ತಾ ಶಾಸ್ತ್ರಾರ್ಥವತ್ವಾತ್ ಓಂ
೩೪ ಓಂ ವಿಹಾರೋಪದೇಶಾತ್ ಓಂ
೩೫ ಓಂ ಉಪಾದಾನಾತ್ ಓಂ
೩೬ ಓಂ ವ್ಯಪದೇಶಾಚ್ಚ ಕ್ರಿಯಾಯಾಂ ನ ಚೇನ್ನಿರ್ದೇಶ
ವಿಪರ್ಯಯಃ ಓಂ
೩೭ ಓಂ ಉಪಲಬ್ಧಿವದನಿಯಮಃ ಓಂ
೩೮ ಓಂ ಶಕ್ತಿವಿಪರ್ಯಯಾತ್ ಓಂ
೩೯ ಓಂ ಸಮಾಧ್ಯಭಾವಾಚ್ಚ ಓಂ
೪೦ ಓಂ ಯಥಾ ಚ ತಕ್ಷೋಭಯಥಾ ಓಂ
೪೧ ಓಂ ಪರಾತ್ತು ತಚ್ಛ್ರುತೇಃ ಓಂ
೪೨ ಓಂ ಕೃತ ಪ್ರಯತ್ನಾಪೇಕ್ಷಸ್ತು ವಿಹಿತಪ್ರತಿಷೇಧಾವೈಯರ್ಥ್ಯಾದಿಭ್ಯಃ ಓಂ
೧೮ ಅಂಶಾಧಿಕರಣಮ್ ಈಶಾಂಶತ್ವ ಅನಂಶತ್ವ ವಿರೋಧ ಪರಿಹಾರದ್ವಾರಾ ಈಶ ಭಿನ್ನಾಂಶತ್ವ ಸಮರ್ಥನೆಯು ೪೩ ಓಂ ಅಂಶೋ ನಾನಾವ್ಯಪದೇಶಾದನ್ಯಥಾ ಚಾಪಿ ದಾಶಕಿತವಾದಿತ್ವ ಮಧೀಯತ ಏಕೇ ಓಂ
೪೪ ಓಂ ಮಂತ್ರವರ್ಣಾತ್ ಓಂ
೪೫ ಓಂ ಅಪಿ ಸ್ಮರ್ಯತೇ ಓಂ
೪೬ ಓಂ ಪ್ರಕಾಶಾದಿವನ್ನೈವಂ ಪರಃ ಓಂ
೪೭ ಓಂ ಸ್ಮರಂತಿ ಚ ಓಂ
೪೭ ಓಂ ಅನುಜ್ಞಾಪರಿಹಾರೌ ದೇಹಸಂಬಂಧಾಜ್ಯೋತಿ ರಾದಿವತ್ ಓಂ
೪೮ ಓಂ ಅಸಂತತೇಶ್ಚಾವ್ಯತಿಕರಃ ಓಂ
೫೦ ಓಂ ಆಭಾಸ ಏವ ಚ ಓಂ
೧೯ ಅದೃಷ್ಟಾಧಿಕರಣಮ್ ಜೀವರು ಪರಮಾತ್ಮಪ್ರತಿಬಿಂಬರಾದರೂ ತಾರತಮ್ಯ ಯುಕ್ತರೇ - ಜೀವನಿಗೆ ಶ್ರೀಶಪ್ರತಿಬಿಂಬತೆ ಆ ಭಾಸಾನಾಭಾಸಶ್ರುತಿ ವಿರೋಧ ಪರಿಹಾರವು ೫೧ ಓಂ ಅದೃಷ್ಟಾನಿಯಮಾತ್ ಓಂ
೫೨ ಓಂ ಅಭಿಸಂಧ್ಯಾದಿಷ್ವಪಿ ಚೈವಮ್ ಓಂ
೫೩ ಓಂ ಪ್ರದೇಶಾದಿತಿ ಚೇನ್ನಾಂತರ್ಭಾವಾತ್ ಓಂ

ನ್ಯಾಯೋಪೇತಶ್ರುತ್ಯವಿರೋಧಪಾದ

ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಪ್ರಾಣೋತ್ಪತ್ಯಧಿಕರಣಮ್ ಉತ್ಪತ್ಯನುತ್ಪತ್ತಿಶ್ರುತಿವಿರೋಧಪರಿಹಾರದ್ವಾರಾ ಇಂದ್ರಿಯೋತ್ಪತ್ತಿ ಸಮರ್ಥನೆಯು ೧ ಓಂ ತಥಾ ಪ್ರಾಣಾಃ ಓಂ
೨ ಓಂ ಗೌಣ್ಯಸಂಭವಾತ್ ಓಂ
೩ ಓಂ ಪ್ರತಿಜ್ಞಾನುಪರೋಧಾಚ್ಚ ಓಂ
ತತ್ಪ್ರಾಗಧಿಕರಣಮ್ ಜನ್ಮಾ ಜನ್ಮ ಶ್ರುತಿವಿರೋಧ ಪರಿಹಾರದ್ವಾರಾ ಮನೋತ್ಪತ್ತಿ ಸಮರ್ಥನೆಯು ೪ ಓಂ ತತ್ಪ್ರಾಕ್ ಶ್ರುತೇಶ್ಚ ಓಂ
ತತ್ಪೂರ್ವಕತ್ವಾಧಿಕರಣಮ್ ವಾಗುತ್ಪತ್ತಿ ಅನುತ್ಪತ್ತಿಶ್ರುತಿ ವಿರೋಧಪರಿಹಾರ ದ್ವಾರಾ ವಾಗುತ್ಪತ್ತಿ ಸಮರ್ಥನೆಯು ೫ ಓಂ ತತ್ಪೂರ್ವಕತ್ವಾದ್ವಾಚಃ ಓಂ
ಸಪ್ತಗತ್ಯಧಿಕರಣಮ್ ಇಂದ್ರಿಯಸಂಖ್ಯಾವಿರೋಧ ಪರಿಹಾರಾದ್ವಾರಾ ದ್ವಾದಶತ್ವ ಸಮರ್ಥನೆಯು ೬ ಓಂ ಸಪ್ತಗತೇರ್ವಿಶೇಷಿತತ್ವಾಚ್ಚ ಓಂ
೭ ಓಂ ಹಸ್ತಾದಯಸ್ತು ಸ್ಥಿತೇತೋ ನೈವಮ್ ಓಂ
ಅಣುತ್ವಾಧಿಕರಣಮ್ ಅಣುಸ್ಥೂಲತ್ವ ಶ್ರುತಿ ವಿರೋಧ ಪರಿಹಾರದ್ವಾರಾ ಪ್ರಾಣಾಣುತ್ವ ಸಮರ್ಥನೆಯು ೮ ಓಂ ಅಣವಶ್ಚ ಓಂ
ಶ್ರೇಷ್ಠಾಧಿಕರಣಮ್ ಜನ್ಮಾಜನ್ಮ ಶ್ರುತಿವಿರೋಧ ಪರಿಹಾರದ್ವಾರಾಮುಖ್ಯ ಪ್ರಾಣೋತ್ಪತ್ತಿ ಸಮರ್ಥನೆಯು ೯ ಓಂ ಶ್ರೇಷ್ಠಚ್ಚ ಓಂ
೧೦ ಓಂ ನ ವಾಯುಕ್ರಿಯೇ ಪೃಥಗುಪದೇಶಾತ್ ಓಂ
ಚಕ್ಷುರಾದ್ಯಧಿಕರಣಮ್ ಸ್ವಾತಂತ್ರ್ಯಾಸ್ವಾತಂತ್ರ್ಯ ಶ್ರುತಿವಿರೋಧ ಪರಿಹಾರದ್ವಾರಾ ಮುಖ್ಯಪ್ರಾಣನಿಗೆ ಭಗವದಧೀನ ಸ್ವಾತಂತ್ರ್ಯ ಸಮರ್ಥನೆಯು ೧೧ ಓಂ ಚಕ್ಷುರಾದಿವತ್ತು ತತ್ಸಹಶಿಷ್ಟ್ಯಾದಿಭ್ಯಃ ಓಂ
೧೨ ಓಂ ಅಕರಣತ್ವಾಚ್ಚ ನ ದೋಷಸ್ತಥಾಹಿ ದರ್ಶಯತಿ ಓಂ
ಪಂಚವೃತ್ತ್ಯಧಿಕರಣಮ್ ಮುಖ್ಯರಂದು ದಾಸರೆಂದು ಪಂಚಪ್ರಾಣ್ರು ಎರಡು ಬಗೆ - ಶ್ರುತಿವಿರೋಧ ಪರಿಹಾರ ಪೂರ್ವಕ ದಾಸಪ್ರಾಣಾದಿಗಳಿಗೆ ಮುಖ್ಯಪ್ರಾಣಾಧೀನತೆಯನ್ನು ಸಾಧಿಸುತ್ತಾರೆ. ೧೩ ಓಂ ಪಂಚವೃತ್ತಿರ್ಮನೋವದ್ವ್ಯಪದಿಶ್ಯತೇ ಓಂ
ಅಣ್ವಧಿಕರಣಮ್ ಅಣುತ್ವಾನಣುತ್ವಶ್ರುತಿ ವಿರೋಧ ಪರಿಹಾರದ್ವಾರಾ ಶ್ರೀಹರಿ ಅಂತಸ್ಥತ್ವೇನ ಅಣು, ಬಹಿಸ್ಥತ್ವೇನವ್ಯಾಪ್ತನೆಂದು ತಿಳಿಸುತ್ತಾರೆ ೧೪ ಓಂ ಅಣುಶ್ಚ ಓಂ
೧೦ ಜ್ಯೋತಿರಧಿಕರಣಮ್ ಚಕ್ಷುರಾದಿ ಇಂದ್ರಿಯಗಳಿಗೆ ಜೀವೇಶಕರಣತ್ವ ಶ್ರುತಿ ವಿರೋಧಪರಿಹಾರದ್ವಾರಾ ಈಶನಿಗೆ ಮುಖ್ಯಪ್ರೇರಕತೆಯು ಜೀವಸ್ವತಂತ್ರ್ಯಕರ್ತೃತೆಯು ೧೫ ಓಂ ಜ್ಯೋತಿರಾಧಿಷ್ಠಾನಂ ತು ತದಾಮನನಾತ್ ಓಂ
೧೬ ಓಂ ಪ್ರಾಣವತಾ ಶಬ್ದಾತ್ ಓಂ
೧೭ ಓಂ ತಸ್ಯ ಚ ನಿತ್ಯತ್ವಾತ್ ಓಂ
೧೨ ಇಂದ್ರಿಯಾಧಿಕರಣಮ್ ಮುಖ್ಯಪ್ರಾಣನ ಹೊರತಾಗಿ ಇತರ  ಪ್ರಾಣಗಳು ಇಂದ್ರಿಯಗಳಲ್ಲ -  ಇಂದ್ರಿಯತ್ವಾನಿಂದ್ರಿಯತ್ವ ಶ್ರುತಿ ವಿರೋಧ ಪರಿಹಾರದ್ವಾರಾ ಮುಖ್ಯಪ್ರಾಣಗೆ ಅನಿಂದ್ರಿಯತ್ವ ಸಮರ್ಥನೆಯು ೧೮ ಓಂ ತ ಇಂದ್ರಿಯಾಣಿ ತದ್ವ್ಯಪದೇಶಾದನ್ಯತ್ರ ಶ್ರೇಷ್ಠಾತ್ ಓಂ
೧೯ ಓಂ ಭೇದಶ್ರುತೇಃ ಓಂ
೨೦ ಓಂ ವೈಲಕ್ಷಣ್ಯಾಚ್ಚ ಓಂ
೧೩ ಸಂಜ್ಞಾಮೂರ್ತ್ಯಧಿಕರಣಮ್ ಶರೀರಸ್ಯ  ಮುಳ್ಯವಾಗಿ  ಪರಮಾತ್ಮನಿಂದಲೇ - ಬ್ರಹ್ಮಪರಬ್ರಹ್ಮಸೃಷ್ಟಿಶ್ರುತಿವಿರೋಧಪರಿಹಾರದ್ವಾರಾ ನಾಮರೂಪ ಇಂದ್ರಿಯ ಶರೀರಾದಿಗಳಿಗೆ ಮುಖ್ಯತಃ ಪರಬ್ರಹ್ಮಸೃಷ್ಟತ್ವ ಸಮರ್ಥನೆಯು ೨೧ ಓಂ ಸಂಜ್ಞಾಮೂರ್ತಿಕ್ಲೃಪ್ತಿಸ್ತು ತ್ರಿವೃತ್ಕುರ್ವತ ಉಪದೇಶಾತ್ ಓಂ
೧೩ ಮಾಂಸಾಧಿಕರಣಮ್ ಶರೀರವ್ ಭೂತತ್ರಯಾತ್ಮಕ - ದೇಹಕಾರಣಶ್ರುತ ವಿರೋಧಪೂರ್ವಕ ದೇಹಾದಿಪ್ರಪಂಚವು ಪಂಚಭೂತೋಪಾದಾನಕ ವಾಗಿರುವುದು ೨೨ ಓಂ ಮಾಂಸಾದಿ ಭೌಮಂ ಯಥಾಶಬ್ದಮಿತರಯೋಶ್ಚ ಓಂ
೨೩ ಓಂ ವೈಶೇಷ್ಯಾತ್ತು ತದ್ವಾದಸ್ತದ್ವಾದಃ ಓಂ

ಸಾಧನಾಧ್ಯಾಯ
ವೈರಾಗ್ಯಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ತದಂತರಾಧಿಕರಣ ಪಂಚಭೂತೋಪಾದಾನಕವಾದದೇಹ ನಾಶವಾದರೂ ಜೀವರಿಗೆ ಭೂತಸಂಬಂಧವಿದ್ದೇಇರುತ್ತದೆ ೧ ಓಂ ತದಂತರಪ್ರತಿಪತ್ತೌ ರಂಹತಿ ಸಂಪರಿಷ್ವಕ್ತಃ ಪ್ರಶ್ನನಿರೂಪಣಾಭ್ಯಾಮ್ ಓಂ
ತ್ರ್ಯಾತ್ಮಕತ್ವಾಧಿಕರಣ ಜೀವರು ಭೂತವಿಶಿಷ್ಟರಾಗಿಯೇ ಲೋಕಾಂತರಗಳಿಗೆ ಗಮನ ಮಾಡುತ್ತಾರೆ ೨ ಓಂ ತ್ರ್ಯಾತ್ಮಕತ್ವಾತ್ತು ಭೂಯಸ್ತ್ವಾತ್ ಓಂ
ಪ್ರಾಣಗತ್ಯಾಧಿಕರಣ ಲೀವನ ಜೊತೆಗೆ ಇಂದ್ರ್ಯಗಳೂ ಹೋಗಿತ್ತವೆ - ಭೂತವಿಶಿಷ್ಟತ್ವೇನ ಗತಿಯನ್ನು ಯುಕ್ತಿಯಿಂದ ತೋರುತ್ತಾರೆ ೩ ಓಂ ಪ್ರಾಣಗತೇಶ್ಚ ಓಂ
ಅಗ್ನ್ಯಾದ್ಯಧಿಕರಣ ಜೀವರೊಂದಿಗೆ ಇಂದ್ರಿಯಗಳು ಒಂದಂಶದಿಂದ ಸದಾ ಇರುತ್ತದೆ ೪ ಓಂ ಅಗ್ನ್ಯಾದಿಗತಿಶ್ರುತೇರಿತಿ ಚೇನ್ನ ಭಾಕ್ತತ್ವಾತ್ ಓಂ
ಪ್ರಥಮಶ್ರವಣಾಧಿಕರಣ ಭೂತಗಳು ಜೀವನ ಜೊತೆಗೆ ಹೋಗಲಾರವೆಂದು ಶ್ರುತಿ ಹೇಳಿತ್ತಿಲ್ಲ - ಪ್ರಾಗುಕ್ತ ಭೂತಗತಿಯು ಆಕ್ಷೇಪಪೂರ್ವಕ ಸಾಧಿಕವಾಗುತ್ತದೆ ೫ ಓಂ ಪ್ರಥಮೇಶ್ರವಣಾದಿತಿ ಚೇನ್ನ ತಾ ಏವ ಹ್ಯುಪಪತ್ತೇಃ ಓಂ
ಆಶ್ರುತತ್ವಾಧಿಕರಣ ಭೂತಗತಿ ವಿಷಯದಲ್ಲಿ ವೇದಾಭಾವಶಂಕಾ ಸಮಾಧಾನಿತವಾಗಿದೆ ೬ ಓಂ ಅಶ್ರುತತ್ವಾದಿತಿ ಚೇನ್ನೇಷ್ಟಾದಿಕಾರಿಣಾಂ ಪ್ರತೀತೇಃ ಓಂ
ಭಾಕ್ತಾಧಿಕರಣ ಜ್ಞಾನವೇ ಮೋಕ್ಷಸಾದನವಾದ್ದರಿಂದ ಜ್ಞಾನಕ್ಕಾಗಿ ವೈರಾಗ್ಯಾದಿಗಳನ್ನು ಸಂಪಾದಿಸಬೇಕು - ಗೌಣಮೋಕ್ಷಸ್ವರೂಪವು ನಿರೂಪಿತವಾಗಿದೆ ೭ ಓಂ ಭಾಕ್ತಂ ವಾನಾತ್ಮವಿತ್ತ್ವಾತ್ ತಥಾ ಹಿ ದರ್ಶಯತಿ ಓಂ
ಕೃತಾತ್ಯಯಾಧಿಕರಣ ಕರ್ಮಗಳಿಗೆ ಭೋಗದಿಂದ ಸಶೇಷನಾಶವು ಉಕ್ತವಾಗಿದೆ ೮ ಓಂ ಕೃತಾತ್ಯಯೇನುಶಯವಾನ್ ದೃಷ್ಟಸ್ಮೃತಿಭ್ಯಾಂ ಓಂ
ಯಥೇತಾಧಿಕರಣ ಜೀವರಿಗೆ ಸ್ವರ್ಗಾದಿ ಲೋಕಗಳಿಂದ ಆ ಗತಿ ಪ್ರಕಾರವು ಉಕ್ತವಾಗಿದೆ ೯ ಓಂ ಯಥೇತಮನೇವಂ ಚ ಓಂ
೧೦ ಚರಣಾಧಿಕರಣ ಲೋಕಾಂತರ ಗಮನಾಗಮನಾದಿಗಳು ಜೀವನ ಕರ್ಮ ಫಲವೆಂದು ಹೇಳಿದೆ ೧೦ ಓಂ ಚರಣಾದಿತಿ ಚೇನ್ನ ತದುಪಪಲಕ್ಷಣಾರ್ಥೇತಿ ಕಾರ್ಷ್ಣಾಜಿನಿಃ ಓಂ
೧೧ ಓಂ ಆನರ್ಥಕ್ಯಮಿತಿ ಚೇನ್ನ ತದಪೇಕ್ಷತ್ವಾತ್ ಓಂ
೧೨ ಓಂ ಸುಕೃತದುಷ್ಕೃತೇ ಏವೇತಿ ತು ಬಾದರಿಃ ಓಂ
೧೧ ಅನಿಷ್ಟಾಧಿಕರಣ ಜೀವರಿಗೆ ನರಕದಿಂದ ಆರೋಹಣಾ ಅವರೋಹಣವು ಹೇಳಲ್ಪಟ್ಟಿದೆ ೧೩ ಓಂ ಅನಿಷ್ಟಾದಿಕಾರಿಣಾಮಪಿ ಚ ಶ್ರುತಂ ಓಂ
೧೪ ಓಂ ಸಂಯಮನೇ ತ್ವನುಭೂಯೇತರೇಷಾಮಾರೋಹಾವರೋಹೌ ತದ್ಗತಿದರ್ಶನಾತ್ ಓಂ
೧೫ ಓಂ ಸ್ಮರಂತಿ ಚ ಓಂ
೧೨ ಅಪಿಸಪ್ತಾಧಿಕರಣ ಏಳು ನರಕಗಳ ಸ್ವರೂಪವು, ಹರಿದ್ವೇಷಿಗಳಿಗೆ ನಿತ್ಯ ನರಕವು ಹೇಳಿದೆ ೧೬ ಓಂ ಅಪಿ ಸಪ್ತ ಓಂ
೧೩ ತತ್ರಾಪ್ಯಧಿಕರಣ ನರಕದಲ್ಲಿ ಅತಿಉಃಖ ರೂಪತೆಯು ಪರಮಾತ್ಮನಿಗೆ ಅವುಗಳ ಅಸಂಭಾವಕತೆಯು ಉಕ್ತವಾಗಿದೆ ೧೭ ಓಂ ತತ್ರಾಪಿ ಚ ತದ್ ವ್ಯಾಪಾರಾದವಿರೋಧಃ ಓಂ
೧೪ ವಿದ್ಯಾಧಿಕರಣ ಜೀವರಿಗೆ ಗಮನದಲ್ಲಿ ಅಸ್ವಾತಂತ್ರ್ಯವು ಹೇಳಿದೆ ೧೮ ಓಂ ವಿದ್ಯಾಕರ್ಮಣೋರಿತಿ ತು ಪ್ರಕೃತತ್ವಾತ್ ಓಂ
೧೫ ನತೃತೀಯಾಧಿಕರಣ ಅಂಧಂತಮಸ್ಸಿನಲ್ಲಿ ಸುಖಲೇಶವೂ ಇಲ್ಲೆಂದು ಹೇಳಿದೆ ೧೯ ಓಂ ನ ತೃತೀಯೇ ತಥೋಪಲಬ್ಧೇಃ ಓಂ
೨೦ ಓಂ ಸ್ಮರ್ಯತೇಪಿ ಚ ಲೋಕೇ ಓಂ
೨೧ ಓಂ ದರ್ಶನಾಚ್ಚ ಓಂ
೨೨ ಓಂ ತೃತೀಯೇ ಶಬ್ದಾವರೋಧಃ ಸಂಶೋಕಜಸ್ಯ ಓಂ
೨೩ ಓಂ ಸ್ಮರಣಾಚ್ಚ ಓಂ
೧೬ ಸತ್ ಸ್ವಾಭಾವ್ಯಾದ್ಜಿಕರಣ ಧೂಮಾಧಿ ಮಾರ್ಗದಲ್ಲಿ ಜೀವರಿಗೆ ತತ್ ದೇವತಾ ಸ್ವರೂಪತೆಯು ಬರುವುದಿಲ್ಲವೆಂದು ಹೇಳಿದೆ ೨೪ ಓಂ ತತ್ಸ್ವಾಭಾವ್ಯಾಪತ್ತಿರುಪಪತ್ತೆಃ ಓಂ
೧೭ ನಾತಿಚಿರೇಣಾಧಿಕರಣ ಜೀವರಿಗೆ ಸಂತ್ಸರದಮೊದಲೇ ಮಾತೃದೇಹ ಪ್ರವೇಶವಾಗುವದೆಂದು ನಿರೂಪಿತವಾಗಿದೆ ೨೫ ಓಂ ನಾತಿಚಿರೇಣ ವಿಶೇಷಾತ್ ಓಂ
೧೮ ಅನ್ಯಾಧಿಕರಣ ಜೀವರುಗಳು ಸ್ವಕರ್ಮಾನು ಸಾರವಾಗಿ ಸ್ವರ್ಗಾದಿ ಲೋಕಗಳಿಂದ ಭೂಮಿಗೆ ಬರುವಾಗ ಧಾನ್ಯಾದಿ ಭಾವವು ಇಲ್ಲವೆಂದು ಹೇಳಿರುತ್ತದೆ ೨೬ ಓಂ ಅನ್ಯಾಧಿಷ್ಠಿತೇ ಪೂರ್ವವದಭಿಲಾಪಾತ್ ಓಂ
೨೭ ಓಂ ಅಶುದ್ಧಮಿತಿ ಚೇನ್ನ ಶಬ್ದಾತ್ ಓಂ
೧೯ ರೇತೋಧಿಕರಣ ಹುಟ್ಟುವ ಜೀವರಿಗೆ ಮೊದಲು ತಂದೆಯ ದೇಹ ಪ್ರವೇಶವೆಂದು ಹೇಳಿರುತ್ತದೆ ೨೮ ಓಂ ರೇತಃ ಸಿಗ್ಯೋಗೋಥ ಓಂ
೨೦ ಯೋನ್ಯಧಿಕರಣ ಮಾತೃವಿನಿಂದ ಸಾಮಾನ್ಯ ಜನನ ವಿಶೇಷ ಜನನಗಳು ಹೇಳಲ್ಪಡುತ್ತವೆ ೨೯ ಓಂ ಯೋನೇಃ ಶರೀರಂ ಓಂ

ಭಕ್ತಿಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಸಂಧ್ಯಾಧಿಕರಣ ಸತ್ಯವಾದ ಸ್ವಾಪ್ನಪದಾರ್ಥಸೃಷ್ಟಿ ಭಗವಂತನಿಂದಲೇ ಆಗುತ್ತದೆ - ಸ್ವಪ್ನಸ್ಥ ಪದಾರ್ಥಗಳು ತದ್ ಜ್ಞಾನಾದಿಗಳಿಗೆ ಈಶಾಧೀನತೆಯು ಹೇಳಿರುತ್ತದೆ ೧ ಓಂ ಸಂಧ್ಯೇ ಸೃಷ್ಟಿರಾಹ ಹಿ ಓಂ
೨ ಓಂ ನಿರ್ಮಾತಾರಂ ಚೈಕೇ ಪುತ್ರಾದಯಶ್ಚ ಓಂ
೩ ಓಂ ಮಾಯಾಮಾತ್ರಂ ತು ಕಾರ್ತ್ಸ್ನ್ಯನಾನಭಿವ್ಯಕ್ತ ಸ್ವರೂಪತ್ವಾತ್ ಓಂ
೪ ಓಂ ಸೂಚಕಶ್ಚ ಹಿ ಶ್ರುತೇರಾಚಕ್ಷತೇ ಚ ತದ್ವಿದಃ ಓಂ
ಪರಾಭಿಧ್ಯಾನಾಧಿಕರಣ ಸ್ವಪ್ನ ಪದಾರ್ಥಗಳ ತಿರೋಧಾನವು ಭಗವದಧೀನವೇ ೫ ಓಂ ಪರಾಭಿಧ್ಯಾನಾತ್ತು ತಿರೋಹಿತಂ ತತೋ ಹ್ಯಸ್ಯ ಬಂಧವಿಪರ್ಯಯೌ ಓಂ
ದೇಹಯೋಗಾಧಿಕರಣ ಜಾಗ್ರದವಸ್ಥಾ ಪ್ರವರ್ತಕನು ಪರಮಾತ್ಮನೇ ೬ ಓಂ ದೇಹಯೋಗಾದ್ವಾಸೋಪಿ ಓಂ
ತದಭಾವಾಧಿಕರಣ ಸುಪ್ತಪ್ರಾಪ್ಯತ್ವವೂ ಪರಮಾತ್ಮನ ಮಹಿಮೆಯೇ ೭ ಓಂ ತದಭಾವೋ ನಾಡಿಷು ತಚ್ಛ್ರುತೇರಾತ್ಮನಿ  ಓಂ
ಪ್ರಬೋಧಾಧಿಕರಣ ಎಚ್ಚರ ಕೊಡುವವನೂ ಪರಮಾತ್ಮನೇ ೮ ಓಂ ಅತಃ ಪ್ರಬೋಧೋಸ್ಮಾತ್ ಓಂ
ಕರ್ಮಾನು ಸ್ಮೃತ್ಯಧಿಕರಣ ಸರ್ವಾವಸ್ಥಾ ಪ್ರೇರಕನು ಪರಮಾತ್ಮನೇ ೯ ಓಂ ಸ ಏವ ಚ ಕರ್ಮಾನುಸ್ಮೃತಿಶಬ್ದವ್ಧಿಭ್ಯಃ ಓಂ
ಸಂಪತ್ಯಧಿಕರಣ(ಮುಗ್ಧಪ್ರಾಪ್ತ್ಯಧಿಕರಣ) ಜೀವರಿಗೆ ಮೂರ್ಚ್ಛಾವಸ್ಥಾಪ್ರದನೂ ಪರಮಾತ್ಮನೇ ೧೦ ಓಂ ಮುಗ್ಧೇರ್ಧಸಂಪತ್ತಿಃ ಪರಿಶೇಷಾತ್ ಓಂ
ನಸ್ಥಾನತ್ಯೋಪ್ಯಧಿಕರಣ ವಿಶ್ವತೈಜಸಪ್ರಾಜ್ಞರೂಪಿಭಗವಂತ ಒಬ್ಬನೇ ಆಗಿದ್ದಾನೆ - ಶ್ರೀಹರಿಗೆ ತನ್ನ ರೂಪಗಳಲ್ಲಿ ಭೇದಾಬಾವವು ದೋಷಗಂಧಾಭಾವವು ವರ್ಣಿತವಾಗಿದೆ ೧೧ ಓಮ್ ನ ಸ್ಥಾನತೋಪಿ ಪರಸ್ಯೋಭಯಲ್ಂಗಂ ಸರ್ವತ್ರ ಹಿ ಓಂ
೧೨ ಓಂ ಭೇದಾದಿತಿ ಚೇನ್ನ ಪ್ರತ್ಯೇಕಮತದ್ವಚನಾತ್ ಓಂ
೧೩ ಓಂ ಅಪಿ ಚೈವಮೇಕೇ ಓಂ
ಆರೂಪಾಧಿಕರಣ ಭಗವಂತನು ಅನಿತ್ಯನಲ್ಲ ಅವನಲ್ಲಿ ಅನಿತ್ಯವಾದದ್ದು ಯಾವುದೂ ಇಲ್ಲ - ಅಪ್ರಾಕೃತ ಜ್ಞಾನಾನಂದಾದಿ ರೂಪನೂ ಪ್ರಾಕೃತ ಸಂಬಂಧ ದೂರನೂ ಶ್ರೀಹರಿಯೇ ೧೪ ಓಂ ಅರೂಪವದೇವ ಹಿ ತತ್ಪ್ರದಾನತ್ವಾತ್ ಓಂ
೧೫ ಓಂ ಪ್ರಕಾಶವಚ್ಚಾವೈಯ್ಯರ್ಥ್ಯಯಮ್ ಓಂ
೧೬ ಓಂ ಆಹ ಚ  ತನ್ಮಾತ್ರಮ್ ಓಂ
೧೭ ಓಂ ದರ್ಶಯತಿ ಚಾಥೋ ಅಪಿ ಸ್ಮರ್ಯತೇ ಓಂ
೧೦ ಉಪಮಾಧಿಕರಣ ಪ್ರತಿಬಿಂಬನಾದ ಜೀವನು ಭಗವಂತನಿಂದ ಭಿನ್ನನಾಗಿದ್ದಾನೆ - ಜೀವರಿಗೆ ಈಶಭಿನ್ನಾಂಶತೆಯು ಸಮರ್ಥಿತವಾಗಿವೆ ೧೮ ಓಂ ಅತ ಏವ ಚೋಪಮಾ ಸೂರ್ಯಕಾದಿವತ್ ಓಂ
೧೧ ಅಂಬುವಧಿಕರಣ ಜೀವರ ಸ್ವರೂಪಸುಖಿ ಅಭಿವ್ಯಕ್ತಿಗೆ ಭಕ್ತಿಯು ಕಾರಣವು ೧೯ ಓಂ ಅಂಬುವದಗ್ರಹಣಾತ್ತು ನ ತಥಾತ್ವಮ್ ಓಂ
೧೨ ವೃದ್ಧಿ ಹ್ರಾಸಾಧಿಕರಣ ಆನಂದ ತಾರತಮ್ಯವು ಸಾಧನ ತಾರತಮ್ಯ ಅನುಗುಣವೆಂದು ಹೇಳಿದೆ ೨೦ ಓಂ ವೃದ್ಧಿಹ್ರಾಸಭಾಕ್ತ್ವಮಂತರ್ಭಾವಾದುಭಯ ಸಾಮಂಜಸ್ಯಾ ದೇವಮ್ ಓಂ
೨೧ ಓಂ ದರ್ಶನಾಚ್ಚ ಓಂ
೧೩ ಪ್ರಕೃತ್ಯಧಿಕರಣ(ಪ್ರಕೃತೈತಾವತ್ವಾಧ್ಕರಣ) ಸರ್ವಪಾಲಕತೆಯು ಈಶನಿಗೇ ಎಂದು ಸಾಧಿಸಿದೆ ೨೨ ಓಂ ಪ್ರಕೃತೈತಾವತ್ತ್ವಂಹಿ ಪ್ರತಿಷೇಧತಿ ತತೋ ಬ್ರವೀತಿ ಚ ಭೂಯಃ ಓಂ
೧೪ ಅವ್ಯಕ್ತಾಧಿಕರಣ ಅವ್ಯಕ್ತತೆ ಪರಮಾತ್ಮನ ಸ್ವಭಾವವು, ಪ್ರಸನ್ನನಾದರೆ ಮಾತ್ರವ್ಯಕ್ತನಾಗುತ್ತಾನೆ ೨೩ ಓಂ ತದವ್ಯಕ್ತಮಾಹ ಹಿ ಓಂ
೨೪ ಓಂ ಅಪಿ ಸಂರಾಧನೇ ಪ್ರತ್ಯಕ್ಷಾನುಮಾನಾಭ್ಯಾಮ್ ಓಂ
೨೫ ಓಂ ಪ್ರಕಾಶವಚ್ಚಾವೈಶೇಷ್ಯಮ್ ಓಂ
೨೬ ಓಂ ಪ್ರಕಾಶಶ್ಚ ಕರ್ಮಣ್ಯಭ್ಯಾಸಾತ್ ಓಂ
೨೭ ಓಂ ಅತೋನಂತೇನ ತಥಾ ಹಿ ಲಿಂಗಂ ಓಂ
೧೫ ಅಹಿಕುಂಡಲಾಧಿಕರಣ ಪರಮಾತ್ಮನು ಗುಣಿರೂಪನೂ, ಗುಣರೂಪನೂ ಹೌದು ೨೮ ಓಂ ಉಭಯವ್ಯಪದೇಶಾತ್ತ್ವಹಿಕುಂಡಲವತ್ ಓಂ
೨೯ ಓಂ ಪ್ರಕಾಶಾಶ್ರಯವದ್ವಾ ತೇಜಸ್ತ್ವಾತ್ ಓಂ
೩೦ ಓಂ ಪೂರ್ವವದ್ವಾ ಓಂ
೩೧ ಓಂ ಪ್ರತಿಷೇಧಾಚ್ಚ ಓಂ
೧೬ ಪರಮತಾಧಿಕರಣ ಪರಮಾತ್ಮನ ಆನಂದಾದಿಗಳು ಲೌಕಿಕಾನಂದಾದಿಗಳಿಂದ ಭಿನ್ನ ವಾದವುಗಳು ೩೨ ಓಂ ಪರಮತಃ ಸೇತೂನ್ಮಾನಸಂಬಂಧಭೇದವ್ಯಗದೇಶೇಭ್ಯಃ ಓಂ
೩೩ ಓಂ ದರ್ಶನಾತ್ತು ಓಂ
೩೪ ಓಂ ಬುದ್ಧ್ಯರ್ಥ್ಯಃ ಪಾದವತ್ ಓಂ
೧೭ ಸ್ಥಾನ ವಿಶೇಷಾಧಿಕರಣ ಚತುರ್ಮುಖ ಬ್ರಹ್ಮಾದಿಗಳ ಆನಂದವು ಪರಬ್ರಹ್ಮನ ಆನಂದ ಪ್ರತಿಬಿಂಬ ರೂಪಗಳೇ ೩೫ ಓಂ ಸ್ಥಾನವಿಶೇಷಾತ್ ಪ್ರಾಕಾಶಾದಿವತ್ ಓಂ
೩೬ ಓಂ ಉಪಪತ್ತೇಶ್ಚ ಓಂ
೧೮ ತಥಾನ್ಯತ್ವಾಧಿಕರಣ ಧ್ಯಾನಕಾಲಿಕ ವಾಸನಾ ಮಯರೂಪಗಳೇ ಪರಮಾತ್ಮನ ಸ್ವರೂಪಗಳಲ್ಲವೆಂದು ಹೇಳಿದೆ ೩೭ ಓಂ ತಥಾನ್ಯತ್ ಪ್ರತಿಷೇಧಾತ್ ಓಂ
೧೯ ಸರ್ವಗತತ್ವಾಧಿಕರಣ ಅನಾದ್ಯನಂತಕಾಲಗಳಲ್ಲೂ ಪರಮಾತ್ಮನೇ ಸರ್ವತ್ರಸರ್ವ ಸೃಷ್ಠ್ಯಾದಿ ವಿಶಿಷ್ಟ ಕರ್ತನು ೩೮ ಓಂ ಅನೇನ ಸರ್ವಗತತ್ವಮಾಯಾಮಯ ಶಬ್ದಾದಿಭ್ಯಃ ಓಂ
೨೦ ಫಲಾಧಿಕರಣ ಪರಬ್ರಹ್ಮನೇ ಸರ್ವ ಕರ್ಮ ಫಲದಾತನು ೩೯ ಓಂ ಫಲಮತ ಉಪಪತ್ತೇಃ ಓಂ
೪೦ ಓಂ ಶ್ರುತತ್ವಾಚ್ಚಓಂ
೪೧ ಓಂ ಧರ್ಮ ಜೈಮಿನಿರತ ಏವ ಓಂ
೪೨ ಓಂ ಪೂರ್ವಂ ತು ಬಾದರಾಯಣೋ ಹೇತುವ್ಯಪದೇ ಶಾತ್ ಓಂ

ಉಪಾಸನಾಪಾದ

ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಸರ್ವವೇದಾಧಿಕರಣ ಸರ್ವಶಸ್ತ್ರ ವಿಚಾರದಿಂದಲೇ ಪರಬ್ರಹ್ಮನು ಜ್ಞೇಯನಾಗುತ್ತಾನೆ ೧ ಓಂ ಸರ್ವವೇದಾಂತಪ್ರತ್ಯಯಂ ಚೋದನಾದ್ಯ ವಿಶೇಷಾತ್ ಓಂ
೨ ಓಂ ಭೇದಾನ್ನೇತಿ ಚೇದೇಕಸ್ಯಾಮಪಿ ಓಂ
೩ ಓಂ ಅಧ್ಯಯನಸ್ಯ (ಸ್ವಾದ್ಯಾಯಸ್ಯ) ತಥಾ ತ್ವೇನ ಹಿ ಸಮಾಚಾರೇಧಿಕಾರಾಚ್ಚ ಓಂ
೪ ಓಂ ಸಲಿಲವಚ್ಚ ತನ್ನಿಯಮಃ ಓಂ
೫ ಓಂ ದರ್ಶಯತಿ ಚ ಓಂ
ಉಪಸಂಹಾರಾಧಿಕರಣ ಪರಮಾತ್ಮನಲ್ಲಿ ಸರ್ವ ಗುಣೋಪಸಂಹಾರ ಪೂರ್ವಕವಾದ ಉಪಾಸನೆಯೇ ಕರ್ತವ್ಯವು ೬ ಓಂ ಉಪಸಂಹಾರೋರ್ಥಾಭೇದಾದ್ವಿಧಿಶೇಶವತ್ ಸ ಮಾನೇ ಚ ಓಂ
೭ ಓಂ ಅನ್ಯಥಾತ್ವಂ ಶಬ್ದಾದಿತಿ ಚೇನ್ನಾವಿಶೇಷಾತ್ ಓಂ
೮ ಓಂ ನವಾ ಪ್ರಕರಣಭೇದಾತ್ಪರೋವರೀಯಸ್ತ್ವಾದಿವತ್ ಓಂ
೯ ಓಂ ಸಂಜ್ಞಾತಶ್ಚೇತ್ತದುಕ್ತಸ್ತಿ ತು ತದಪಿ ಓಂ
ಪ್ರಾಪ್ತ್ಯಧಿಕರಣ ಉಪಾಸನೆಯಲ್ಲಿಯೂ ಯೋಗ್ಯತಾ ತಾರತಮ್ಯಗಳು ಇರುತ್ತವೆ ೧೦ ಓಂ ಪ್ರಾಪ್ತೇಶ್ಚ ಸಮಂಜಸಮ್ ಓಂ
ಸರ್ವಭೇದಾಧಿಕರಣ ಉಪಾಸನಾನುಸಾರವೇ ಫಲ ಅನುಭವವು ೧೧ ಓಂ ಸರ್ವಾಭೇದಾದನ್ಯತ್ರೇಮೇ ಓಂ
ಆನಂದಾಧಿಕರಣ ಮುಮುಕ್ಷುಮಾತ್ರರ ಉಪಾಸನೆಯು ಹೇಳಿರುತ್ತದೆ ೧೨ ಓಂ ಆನಂದಾದಯಃ ಪ್ರಧಾನಸ್ಯ ಓಂ
ಪ್ರಿಯಶಿರಸ್ತ್ವಾಧಿಕರಣ ಪ್ರಿಯಶಿರಸ್ತ್ವಾದಿಗುಣಗಳು ಸರ್ವೋಪಾಸ್ಯಗಳಾದವುಗಳಲ್ಲ ೧೩ ಓಂ ಪ್ರಿಯಶಿರಸ್ತ್ವಾದ್ಯಪ್ರಾಪ್ತಿರುಪಚಯಾಪಚಯೌ ಹಿ ಭೇದೇ ಓಂ
ಇತರಾಧಿಕರಣ(ಫಲಸಾಮ್ಯಾಧಿಕರಣ) ದೇವತೆಗಳಿಗೆ ಬಹುಗುಣೋಪಾಸಕತೆಯು ೧೪ ಓಂ ಇತರೇ ತ್ವರ್ಥಸಾಮಾನ್ಯಾತ್ ಓಂ
ಅಧ್ಯಾನಾಧಿಕರಣ ಬೇರೆ ಬೇರೆ ಶಾಖೆಗಳಲ್ಲಿ ಹೇಳಿರುವ ಗುಣಗಳನ್ನು ಸಂಗ್ರಹಿಸಿ ಉಪಾಸನೆ ಮಾಡಬೇಕು - ಗುಣೋಪಸಂಹಾರ ಅನುಪಸಂಹಾರ ವಿಷಯದಲ್ಲಿ ಇತ್ಥಂಭಾವವು ಉಕ್ತವಾಗಿದೆ ೧೫ ಓಂ ಆಧ್ಯಾನಾಯ ಪ್ರಯೋಜನಾಭಾವಾತ್ ಓಂ
೧೬ ಓಂ ಆತ್ಮಶಬ್ದಾಚ್ಚ ಓಂ
ಆತ್ಮಗೃಹೀತ್ಯಧಿಕರಣ ಮನುಷ್ಯೋತ್ತಮಾದಿಗಳಿಗೆ ಚತುರ್ಗುಣೋಪಾಸನೆಯು ೧೭ ಓಂ ಆತ್ಮಗೃಹೀತಿರಿತರವದುತ್ತರಾತ್ ಓಂ
೧೦ ಅನ್ವಯಾಧಿಕರಣ ಆತ್ಮಶಬ್ದವು ಭಗವಂತಾಲ್ಲಿ ಮಾತ್ರ ಸರ್ವಗುಣಪೂರ್ಣತ್ವವನ್ನು ಹೇಳುತ್ತಿದೆ - ಚತುರ್ಮುಖ ಬ್ರಹ್ಮದೇವರಿಗೆ ಆತ್ಮ ಶಬ್ದವೇ ಸರ್ವಗುಣ ಭೋಧಕವಾಗುತ್ತದೆ ೧೮ ಓಂ ಅನ್ವಯಾದಿತಿ ಚೇತ್ಸ್ಯಾದವಧಾರಣಾತ್ ಓಂ
೧೧ ಕಾರ್ಯಾಧಿಕರಣ ಉಪಾಸ್ಯ ಗುಣಗಳು ಲೋಕ ವಿಲಕ್ಷಣಗಳೇ ಆಗಿರಬೇಕೆಂದು ಹೇಳಿದೆ ೧೯ ಓಂ ಕಾರ್ಯಾಖ್ಯಾನಾದಪೂರ್ವಮ್ ಓಂ
೧೨ ಸಮನಾಧಿಕರಣ ಸರಸ್ವತೀದೇವಿಯು ಸರ್ವ ಗುಣೋಪಸಂಹಾರ ಮಾಡಿದರೂ ಹರಿಕ್ರಿಯೆಗಳ ಸಾಮಾನ್ಯೋಪಸಂಹಾರವೇ ಎಂದು ಹೇಳಿದೆ ೨೦ ಓಂ ಸಮಾನ ಏವಂ ಚಾಭೇದಾತ್ ಓಂ
೨೧ ಓಂ ಸಂಬಂಧಾದೇವಮನ್ಯತ್ರಾಪಿ ಓಂ
೧೩ ವಿಶೇಷಾಧಿಕರಣ(ನವಾಧಿಕರಣ) ಆತ್ಮ ಶಬ್ದವು ಆಯಾ ಜೀವರ ಯೋಗ್ಯತಾನುಸಾರವೇ ಗುಣಾಭಿದಾಯಕವಾಗುತ್ತದೆ ಎಂದು ಹೇಳಿರುತ್ತದೆ ೨೨ ಓಂ ನ ವಾ ವಿಶೇಷಾತ್  ಓಂ
೨೩ ಓಂ ದರ್ಶಯತಿ ಚ ಓಂ
೧೪ ಸಂಭೃತ್ಯಧಿಕರಣ ಪರಮಾತ್ಮನ ಅಂತರಿಕ್ಷಾದಿಲೋಕ ವ್ಯಾಪ್ತಿಯೂ ಸರ್ವ ಧಾರಕತೆಯೂ ದೇವತೆಗಳಿಂದಲೇ ಉಪಾಸ್ಯವಾದುದು ೨೪ ಓಂ ಸಂಭೃತಿದ್ಯುವ್ಯಾಪ್ತ್ಯಪಿ ಚಾತಃ ಓಂ
೧೫ ಪುರುಷಾಧಿಕರಣ ಪರಬ್ರಹ್ಮನು ವೇದೋಕ್ತ ಗುಣಗಳಿಂದಲೇ ಉಪಾಸ್ಯನು ೨೫ ಓಂ ಪುರುಷವಿದ್ಯಾಯಾಮಪಿ ಚೇತರೇಷಾಮನಾಮ್ನಾ ನಾತ್ ಓಂ
೧೬ ವೇಧಾದ್ಯಧಿಕರಣ ಛೇದನಾದಿ ಗುಣಗಳು ಸರ್ವರಿಂದಲೂ ಉಪಾಸನಾರ್ಹ ವಾದವುಗಳಲ್ಲ ೨೬ ಓಂ ವೇಧಾದ್ಯರ್ಥಭೇದಾತ್ ಓಂ
೧೭ ಮುಕ್ತೋಪಾಸನಾಧಿಕರಣ (ಹಾನ್ಯಧಿಕರಣ) ಮುಕ್ತಿಯಲ್ಲಿಯೂ ಉಪಾಸನೆಯುಂಟು. ಅದು ವಿಧಿಯಿಲ್ಲವಾದರೂ ಸ್ವೇಚ್ಚೆಯಿಂದಲೇ ೨೭ ಓಂ ಹಾನೌ ತೂಪಾಯನಶಬ್ದ ಶೇಷತ್ವಾತ್ಕುಶಾಛಂದಸ್ತು ತ್ಯುಪಗಾನವತ್ತದುಕ್ತಮ್ ಓಂ
೨೮ ಓಂ ಸಾಂಪರಾಯೇ ತರ್ತವ್ಯಾಭಾವಾತ್ತಥಾಹ್ಯನ್ಯೇ ಓಂ
೧೮ ಛಂದಾಧಿಕರಣ ಮುಕ್ತರು ಮೋಕ್ಷದಲ್ಲಿಯೂ ಸ್ವೇಚ್ಛೆಯಿಂದ ಕರ್ಮಮಾಡುತ್ತಾರೆ - ಮುಕ್ತಿಯಲ್ಲಿ ಕರ್ಮಬಂಧವಿಲ್ಲವಾದರೂ ಸ್ವೇಚ್ಛಾಕರಣವು ಉಂಟು ೨೯ ಓಂ ಛಂದತ ಉಭಯಾವಿರೋಧಾತ್ ಓಂ
೩೦ ಓಂ ಗತೇರರ್ಥವತ್ತ್ವ ಮುಭಯಥಾನ್ಯಥಾಹಿ ವಿರೋಧಃ ಓಂ
೩೧ ಓಂ ಉಪಪನ್ನಸ್ತಕ್ಷಣಾರ್ಥೋಪಲಬ್ದೇರ್ಲೋಕವತ್ ಓಂ
೧೯ ಅನಿಯಮಾಧಿಕರಣ ಭಗವದ್ ಜ್ಞಾನಿಗಳೆಲ್ಲರಿಗೂ ಮೋಕ್ಷವು ಉಂಟೇ ಉಂಟು ೩೨ ಓಂ ಅನಿಯಮಃ ಸರ್ವೇಷಾಮವಿರೋದಾಬ್ಧಾನು ಮಾನಾಭ್ಯಾಮ ಓಂ
೨೦ ಯಾವದಧಿಕರಣ ಮುಕ್ತರಾದವರಲ್ಲಿ ಆನಂದ ತಾರತಮ್ಯವು ಇದ್ದರೂ ಪರಸ್ಪರ ವೈಷಮ್ಯಾದಿಗಳಿರುವುದಿಲ್ಲ ೩೩ ಓಂ ಯಾವದಧಿಕಾರಮವಸ್ಥಿ ತಿರಾಧಿಕಾರಿಕಾಣಾಮ್ ಓಂ
೩೪ ಓಂ ಅಕ್ಷರಧಿಯಾಂ ತ್ವವಿರೋಧಃ ಸಾಮಾನ್ಯತದ್ಭಾವಾಭ್ಯಾಮೌಪಸದವತ್ತದುಕ್ತಮ್ ಓಂ
೨೧ ಇಯದಾಮನನಾಧಿಕರಣ ಮುಖ್ಯ ಪ್ರಾಣಪರ್ಯಂತರ ಅಹಿಕಾರಿಗಳು ೩೫ ಓಂ ಇಯದಾಮನನಾತ್ ಓಂ
೩೬ ಓಂ ಅಂತರಾ ಭೂತಗ್ರಾಮವದಿತಿ ಚೇತ್ತದುಕ್ತಮ್ ಓಂ
೩೭ ಓಂ ಅನ್ಯಥಾ ಭೇದಾನುಪಪತ್ತಿರಿತಿ ಚೇನ್ನೋಪದೇಶವತ್ ಓಂ
೨೨ ವ್ಯತೀಹಾರಾಧಿಕರಣ ಪರಬ್ರಹ್ಮನಿಗೆ ಮುಖ್ಯ ಪ್ರಾಣನಕಿಂತಲೂ ಉತ್ತಮತೆಯು ೩೮ ಓಂ ವ್ಯತಿಹಾರೋ ವಿಶಿಂಷತಿ ಹೀ ತರವತ್ ಓಂ
೨೩ ಸತ್ಯಾಧಿಕರಣ ಸತ್ಯಾದಿಧರ್ಮಗಳು ಭಗವತ್ ಸ್ವರೂಪಗಳೇ ಎಂದು ಹೇಳಿದೆ ೩೯ ಓಂ ಸೈವ ಹಿ ಸತ್ಯಾದಯಃ ಓಂ
೨೪ ಕಾಮಾಧಿಕರಣ ನಿತ್ಯಮುಕ್ತಳಾದ ಲಕ್ಷ್ಮೀದೇವಿಯು ಸ್ವಸಾಧನೆಗಾಗಿ ಉಪಾಸಿಸುವಳಲ್ಲ ೪೦ ಓಂ ಕಾಮಾದಿತರತ್ರ ತತ್ರ ಚಾಯತನಾದಿಭ್ಯ ಓಂ
೪೧ ಓಂ ಆದರಾದಲೋಪಃ ಓಂ
೪೨ ಓಂ ಉಪಸ್ಥಿತೇಸ್ತದ್ವಚನಾತ್ ಓಂ
೨೫ ನಿರ್ಧಾರಣಾಧಿಕರಣ ಶ್ರವಣಮನನ ಧ್ಯಾನ ಇವು ಮೂರೂ ಅಗತ್ಯ ಕರ್ತವ್ಯವು ೪೩ ಓಂ ತನ್ನಿರ್ಧಾರಣಾರ್ಥನಿಯಮಸ್ತದೃಷ್ಟೇಃ ಪೃಥಗ್ ಧ್ಯಪತಿಬಂಧಃ ಫಲಮ್ ಓಂ
೨೬ ಪ್ರದಾನಾಧಿಕರಣ ಗುರುಪ್ರಸಾದಪೂರ್ವಕ ಶ್ರವಣಾದಿಗಳೇ ಅಪರೋಕ್ಷಜ್ಞಾನಿ ಸಾಧನವು ೪೪ ಓಂ ಪ್ರದಾನವದೇವ ಹಿ ತದುಕ್ತಮ್ ಓಂ
೨೭ ಲಿಂಗಭೂಯಸ್ತ್ವಾಧಿಕರಣ (ಗುರುಪ್ರಸಾದಾದಿಕರಣ ) ಅಪರೋಕ್ಷಜ್ಞಾನಕ್ಕೆ ಎಲ್ಲಸಾಧನೆಗಳಿಕಿಂತಲೂ ಗುರುಪ್ರಸಾದಕ್ಕೆ ಆಧಿಕ್ಯತೆಯು ೪೫ ಓಂ ಲಿಂಗಭೂಯಸ್ತ್ವಾತ್ತದ್ಧಿ ಬಲೀಯಸ್ತದಪಿ ಓಂ
೨೮ ಪೂರ್ವ ವಿಕಲ್ಪಾಧಿಕರಣ ಪೂರ್ವ ಗುರುಗಳಕಿಂತಲೂ ಉತ್ತಮ ಗುರುಗಳ ಸ್ವೀಕಾರ ವಿಷಯದಲ್ಲಿ ಬಾಧಕಾಭಾವವು ೪೬ ಓಂ ಪೂರ್ವವಿಕಲ್ಪಃ ಪ್ರಕರಣಾತ್ ಸ್ಯಾತ್  ಕ್ರಿಯಾಮಾನಸ ವತ್ ಓಂ
೪೭ ಓಂ ಅತಿದೇಶಾಚ್ಚ ಓಂ
೨೯ ವಿದ್ಯಾಧಿಕರಣ ಭಗವದಪರೋಕ್ಷವೇ ಮೋಕ್ಷಕ್ಕೆ ಮುಖ್ಯ ಕಾರಣವು ೪೮ ಓಂ ವಿದ್ಯೈವತು ನಿರ್ದಾರಣಾತ್ ಓಂ
೪೯ ಓಂ ದರ್ಶನಾಚ್ಚ ಓಂ
೩೦ ಶ್ರುತ್ಯಧಿಕರಣ (ಅಬಾಧಾಧಿಕರಣ) ಜ್ಞಾನದಿಂದ ಮೋಕ್ಷವೆಂಬ ಶ್ರುತ್ಯುಕ್ತಿಯು ಕರ್ಮದಿಂದ ಮೋಕ್ಷವೆಂಬ ವಚನದಿಂದ ಬಾಧಿತವಾದುದಲ್ಲ ೫೦ ಓಂ ಶ್ರುತ್ಯಾದಿಬಲೀಯಸ್ತ್ವಾಚ್ಚ ನ ಬಾಧಃ ಓಂ
೩೧ ಅನುಬಂಧಾದ್ಯಧಿಕರಣ ಬ್ರಹ್ಮದರ್ಶನವು ಭಕ್ತಿಯಿಂದಲೇ ಸಾಧ್ಯವಾದುದು, ಕೇವಲ ಶ್ರವಣಸಾಧ್ಯವಾದುದಲ್ಲ ೫೧ ಓಂ ಅನುಬಂಧಾದಿಭ್ಯಶ್ಚ ಓಂ
೩೨ ಪ್ರಜ್ಞಾಂತರಾಧಿಕರಣ (ದರ್ಶನಭೇದಾಧಿಕರಣ) ಬ್ರಹ್ಮಾಪರೋಕ್ಷದಲ್ಲಿ ತಾರತಮ್ಯವಿರುತ್ತದೆ ೫೨ ಓಂ ಪ್ರಜ್ಞಾಂತರಪೃಥಕ್ತ್ವವದ್ ಧೃಷ್ಟಿಶ್ಚ ತದುಕ್ತಮ್ ಓಂ
೩೩ ನಸಾಮಾನ್ಯಾಧಿಕರಣ ಸ್ವಯೋಗ್ಯ ಸ್ವಬಿಂಬಜ್ಞಾನವೇ ಮುಕ್ತಿಸಾಧನ ಕಾರಣವಾದುದು ೫೩ ಓಂ ನ ಸಾಮಾನ್ಯಾದಪ್ಯುಪಲಬ್ಧೇರ್ಮೃತ್ಯುವನ್ನ ಹಿ ಲೋಕಾಪತ್ತಿಃ ಓಂ
೩೪ ಪರೇಣಾಧಿಕರಣ (ತಾದ್ವಿದ್ಯಾಧಿಕರಣ)  ಪರಮಾತ್ಮ ಪ್ರಸಾದದಿಂದಲೇ ಅಪರೋಕ್ಷ ಜ್ಞಾನಜನ್ಯ ಮೋಕ್ಷವು. ಭಕ್ತ್ಯಾಧಿಗಳಿಗೆ ಸ್ವಾತಂತ್ರೇಣ ಮೋಕ್ಷ ಸಾದಕತ್ವವಿರುವುದಿಲ್ಲ ೫೪ ಓಂ ಪರೇಣ ಚ ಶಬ್ದಸ್ಯ ತಾದ್ವಿಧ್ಯಂ ಭೂಯಸ್ತ್ವಾತ್ತ್ವನುಬಂದಃ ಓಂ
೩೫ ಏಕಾಧಿಕರಣ ಯೋಗ್ಯತೆಗೆ ಅನಾದಿತ್ವವು ಅಂಶಾಂಶಗಳಿಗೆ ಏಕರೂಪತೆಯ ಅಂಶ ಉಪಾಸನೆಯಿಂದ ಅಂಶಕ್ಕೂ ಆ ಫಲಾನುಸಂಧಾತೃತ್ವವು ೫೫ ಓಂ ಏಕಾ ಆತ್ಮನಃ ಶರೀರೇ ಭಾವಾತ್ ಓಂ
೫೬ ಓಂ ವ್ಯತಿರೇಕಸ್ತದ್ ಭಾವಭಾವಿತ್ವಾ ನ್ನ ತೂಪಲಬ್ಧಿವತ್ ಓಂ
೩೬ ಅಂಗಾವಬದ್ಧಾಧಿಕರಣ ಭಗವದನ್ಯದೇವತೋಪಾಸನೆಯು ಅಪ್ರಧಾನವಾಗಿಯೇ ಮಾಡಬೇಕು. ಅಧಮಗುಣಗಳನ್ನು ಉತ್ತಮರಲ್ಲಿ ಉಪಸಂಹರಿಸಿದರೂ ಉತ್ತಮ ಗುಣಗಳನ್ನು ಅಧಮರಲ್ಲಿ ಉಪಸಂಹರಿಸಬಾರದು ೫೭ ಓಂ ಅಂಗಾವಬದ್ಧಾಸ್ತು ನ ಶಾಖಾಸು ಹಿ ಪ್ರತಿ ವೇದಮ್ ಓಂ
೫೮ ಓಂ ಮಂತ್ರಾದಿವದ್ ವಾವಿರೋಧಃ ಓಂ
೩೭ ಭೂಮಾಧಿಕರಣ ಶ್ರೀಹರಿಯಲ್ಲಿ ಭೂಮ(ಪೂರ್ಣ)ಗುಣವು ಸರ್ವೋಪಾಸ್ಯವಾದದು ೫೯ ಓಂ ಭೂಮ್ನಃ ಕ್ರತುವಜ್ಜ್ಯಾಯಸ್ತ್ವಂ ತಥಾ ಚ ದರ್ಶಯತಿ ಓಂ
೩೮ ನಾನಾ ಶಬ್ದಾದಿಕರಣ ಜೀವರ ಯೋಗ್ಯತಾನುಸಾರವಾಗಿಯೇ ಭೂಮತ್ವ ಉಪಾಸನೆಯಾಗ್ರುತ್ತದೆ ೬೦ ಓಂ ನಾನಾ ಶಬ್ದಾದಿಭೇದಾತ್ ಓಂ
೩೯ ವಿಕಲ್ಪಾಧಿಕರಣ ನೃಸಿಂಹಾದಿರೂಪಗಳು ಐಚ್ಛಿಕವಾದವುಗಳು, ಸ್ವಯೋಗ್ಯತಾನುಸಾರವಾದ ಬಿಂಬರೂಪ ಉಪಾಸನೆಯು ಮೋಕ್ಷ ಸಾಧನವಾದುದು ೬೧ ಓಂ ವಿಕಲ್ಪೋ ವಿಶಿಷ್ಟಫಲತ್ವಾತ್ ಓಂ
೪೦ ಕಾಮ್ಯಾಧಿಕರಣ ಮುಮುಕ್ಷುವಿನ ಇತರ ಕಾಮಿಗಳ ಉಪಾಸನಾ ಪ್ರಭೇದವು ನಿರೂಪಿತವಾಗಿದೆ ೬೨ ಓಂ ಕಾಮ್ಯಾಸ್ತು ಯಥಾಕಾಮಂ ಸಮುಚ್ಚೀಯೇರನ್ನ ವಾ ಪೂರ್ವಹೇತ್ವಭಾವಾತ್ ಓಂ
೪೧ ಅಂಗಾಧಿಕರಣ (ಯಥಾಶ್ರಯಭಾವಾಧಿಕರಣ ) ತತ್ತ್ವಾಭಿಮಾನಿ ದೇವತೆಗಳು ಸ್ವೋತ್ಪತ್ತಿ ಅಂಗತ್ವೇನವೇ ಪರಮಾತ್ಮನ ಉಪಾಸನೆಯನ್ನು ಮಾಡಬೇಕಾದುದು ೬೩ ಓಂ ಅಂಗೇಷು ಯಥಾಶ್ರಯಭಾವಃ ಓಂ
೬೪ ಓಂ ಶಿಷ್ಟೇಶ್ಚ ಓಂ
೬೫ ಓಂ ಸಮಾಹಾರಾತ್ ಓಂ
೬೬ ಓಂ ಗುಣಸಾಧಾರಣ್ಯಶ್ರ್ರುತೇಶ್ಚ ಓಂ
೪೨ ನವಾಧಿಕರಣ ಭಗವದುಪಾಸನೆಯು ದೇವತಾ ಮಾತ್ರಾಧಿಕಾರಿಕವಾದುದು ೬೭ ಓಂ ನ ವಾತತ್ಸಹಭಾವಶ್ರುತೇಃ ಓಂ
೬೮ ಓಂ ದರ್ಶನಾಚ್ಚ ಓಂ

ಜ್ಞಾನಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಪುರುಷಾರ್ಥಾಧಿಕರಣಮ್ ಭಗವತಪರೋಕ್ಷ ಜ್ಞಾನದಿಂದಲೇ  ಸರ್ವಪುರುಷಾರ್ಥಗಳು ೧ ಓಂ ಪುರುಷಾರ್ಥೋತಃ ಶಬ್ದಾದಿತಿ ಬಾದರಾಯಣಃ ಓಂ
೨ ಓಂ ಶೇಷತ್ವತ್ ಪುರುಷಾರ್ಥವಾದೋ ಯಥಾನ್ಯೇಷ್ವಿತಿ ಜೈಮಿನಿಃ ಓಂ
೩ ಓಂ ಆಚಾರದರ್ಶನಾತ್ ಓಂ
೪ ಓಂ ತಚ್ಛ್ರುತೇಃ ಓಂ
೫ ಓಂ ಸಮನ್ವಾರಂಭಣಾತ್ ಓಂ
೬ ಓಂ ತದ್ವತೋ ವಿಧಾನಾತ್ ಓಂ
೭ ಓಂ ನಿಯಮಾಚ್ಚ ಓಂ
೮ ಓಂ ಅಧಿಕೋಪದೇಶಾತ್ತು ಬಾದರಾಯಣಸ್ಯೈವಂ ತದ್ದರ್ಶನಾತ್ ಓಂ
೯ ಓಂ ತ್ಯ್ಲ್ಯಂ ತು ದರ್ಶನಮ್ ಓಂ
ಅಧಿಕಾರಾಧಿಕರಣಮ್ (ಅಸಾರ್ವತ್ರಿಕಾಧಿಕರಣ) ಭಗವದಪರೋಕ್ಷವು ಸರ್ವಾಧಿಕಾರಿಕವಲ್ಲ ೧೦ ಓಂ ಅಸಾರ್ವತ್ರಿಕೀ ಓಂ
೧೧ ಓಂ ವಿಭಾಗಃ ಶತವತ್ ಓಂ
೧೨ ಓಂ ಅಧ್ಯಯನ ಮಾತ್ರವತಃ ಓಂ
ಅಧಿಕಾರವಿಶೇಷಾಧಿಕರಣಮ್ (ಅವಿಶೇಷಾಧಿಕರಣ) ಸ್ವಸ್ವಯೋಗ್ಯತಾನುಸಾರವಾಗಿಯೇ ಜ್ಞಾನಾಧಿಕಾರ ತಾರತಮ್ಯವು ೧೩ ಓಂ ನಾವಿಶೇಷಾತ್ ಓಂ
ಕಾಮಾಚಾರಾಧಿಕರಣಮ್ (ಸ್ತುತ್ಯಧಿಕರಣ) ಜ್ಞಾನಿಯಪ್ರವೃತ್ತಿಕ್ರಮ - ಮೋಕ್ಷಸುಖದಲ್ಲಿ ವೃದ್ಧಿಹ್ರಾಸಗಳ ವಿಚಾರವು. ವಿಧಿನಿಯತಾ, ಅನಿಯತಾ, ಸ್ವೇಚ್ಛಾನಿಯತಾ, ಇವರ ವಿಚಾರವು ೧೪ ಓಂ ಸ್ತುತಯೇನುಮತಿರ್ವಾ ಓಂ
೧೫ ಓಂ ಕಾಮಕಾರೇಣ ಚೈಕೇ ಓಂ
೧೬ ಓಂ ಉಪಮರ್ದಂ ಚ ಓಂ
೧೭ ಓಂ ಊರ್ಧ್ವರೇತಸ್ಸು ಚ ಶಬ್ದೇ ಹಿ ಓಂ
೧೮ ಓಂ ಪರಾಮರ್ಶಂ ಜೈಮಿನಿರಚೋದನಾ ಚಾಪವದತಿ ಹಿ ಓಂ
೧೯ ಓಂ ಅನುಷ್ಠೇಯಂ ಬಾದರಾಯಣಃ ಸಾಮ್ಯಶ್ರುತೇ ಓಂ
೨೦ ಓಂ ವಿಧಿರ್ವಾ ಧಾರಣವತ್ ಓಂ
೨೧ ಓಂ ಸ್ತುತಿಮಾತ್ರಮುಪಾದಾನಾದಿತಿ ಚೇನ್ನಾಪೂರ್ವತ್ವಾತ್ ಓಂ
೨೨ ಓಂ ಭಾವ ಶಬ್ದಾಚ್ಚ ಓಂ
೨೩ ಓಂ ಪಾರಿಪ್ಲವಾರ್ಥ ಇತಿ ಚೇನ್ನ ವಿಶೇಷಿತತ್ವಾತ್ ಓಂ
೨೪ ಓಂ ತಥಾ ಚೈಕವಾಕ್ಯೋಪಬಂದಾತ್ ಓಂ
೨೫ ಓಂ ಅತ ಏವ ಚಾಗ್ನೀಂಧನಾದ್ಯನಪೇಕ್ಷಾ ಓಂ
೨೬ ಓಂ ಸರ್ವಾಪೇಕ್ಷಾ ಚ ಯಜ್ಞಾದಿಶ್ರುತೇಶ್ವವತ್ ಓಂ
೨೭ ಓಂ ಶಮದಮಾದ್ಯುಪೇತಃ ಸ್ಯಾತ್ ತಥಾಪಿ ತು ತದ್ವಿಧೇಸ್ತದಂಗತಯಾ ತೇಷಾಮವಶ್ಯಾನುಷ್ಠೇಯತ್ವಾತ್ ಓಂ
೨೮ ಓಂ ಸರ್ವಾನ್ನಾನುಮತಿಶ್ಚ ಪ್ರಾಣಾತ್ಯಯೇ ತದ್ದರ್ಶನಾತ್ ಓಂ
೨೯ ಓಂ ಅಬಾಧಾಚ್ಚ ಓಂ
೩೦ ಓಂ ಅಪಿ ಸ್ಮರ್ಯತೇ ಓಂ
೩೧ ಓಂ ಶಬ್ದಾಶ್ಚಾತೋಕಾಮಕಾರೇ ಓಂ
೩೨ ಓಂ ವಿಹಿತತ್ವಾಚ್ಚಾಶ್ರಮಕರ್ಮಾಪಿ ಓಂ
೩೩ ಓಂ ಸಹಕಾರಿತ್ವೇನ ಚ ಓಂ
ಉಭಯಲಿಂಗಾಧಿಕರಣಮ್ ಯೋಗ್ಯರಿಗೇ ಮಾತ್ರ ಜ್ಞಾನ ಹಾಗೂ ಮೋಕ್ಷಗಳು - ಮೋಕ್ಷಾಧಿಕಾರಿಗಳಿಗೇ ಜ್ಞಾನಪ್ರಾಪ್ತಿ ಆಗುವುದು ನಿಯತವು ೩೪ ಓಂ ಸರ್ವಥಾಪಿ ತು ತ ಏವೋಭಯಲಿಂಗಾತ್ ಓಂ
೩೫ ಓಂ ಅನಭಿಭವಂ ಚ ದರ್ಶಯತಿ ಓಂ
೩೬ ಓಂ ಅಂತರಾ ಚಾಪಿ ತು ತದ್ದೃಷ್ಟೇಃ ಓಂ
೩೭ ಓಂ ಅಪಿ ಸ್ಮರ್ಯತೇ ಓಂ
೩೮ ಓಂ ವಿಶೇಷಾನುಗ್ರಹಂ ಚ ಓಂ
೩೯ ಓಂ ಅತಸ್ತ್ವಿತರಜ್ವ್ಯಾಯೋ ಲಿಂಗಾಚ್ಚ ಓಂ
೪೦ ಓಂ ತದ್ಭೂತಸ್ಯ ತು ತದ್ಬಾವೋ ಚೈಮಿನೇರಪಿ ನಿಯಮಾತ್ತದ್ರೂಪಾಭಾವೇಭ್ಯಃ ಓಂ
ಅಧಿಕಾರಿಕಾಧಿಕರಣಮ್ ಅಧಮಾಧಿಕಾರಿಗಳು ಸ್ವೋತ್ತಮಾಧಿಕಾರವನ್ನು ಅಪೇಕ್ಷಿಸಬಾರದು ೪೧ ಓಂ ನಚಾಧಿಕಾರಿಕಮಪಿ ಪತನಾನುಮಾನತ್ ತದಯೋಗಾತ್ ಓಂ
೪೨ ಓಂ ಉಪಪೂರ್ವಮಪೀತ್ಯೇಕೇ ಭಾವಶಮನುವತ್ ತಮಕ್ತಮ್ ಓಂ
೪೩ ಓಂ ಬಹಿಸ್ತೂಭಯಥಾಪಿ ಸ್ಮೃತೇರಾಚಾರಾಚ್ಚ ಓಂ
ಫಲಶ್ರುತ್ಯಧಿಕರಣಮ್ ಫಲವಿಶೇಷವು ತತ್ತ್ವಾದ್ಯಭಿಮಾನಿ ದೇವತೆಗಳಿಗೆ ಮುಖ್ಯವಾದುದು. ಮನುಷ್ಯೋತ್ತಮಾದಿಗಳಿಗೆ ಅಮುಖ್ಯವಾದುದು ೪೪ ಓಂ ಸ್ವಾಮಿನಃ ಫಲಶ್ರುತೇರಿತ್ಯಾತ್ರೇಯಃ ಓಂ
೪೫ ಓಂ ಆರ್ತ್ವಿಜ್ಯಮಿತ್ಯೌಡುಲೋಮಿಸ್ತಸ್ಮೈ ಹಿ ಪರಿ ಕ್ರಿಯತೇ ಓಂ
೪೬ ಓಂ ಸಹಕಾರ್ಯಂತರವಿಧಿಃ ಪಕ್ಷೇಣ ತೃತೀಯಂ ತದ್ವ ತೋ ವಿಧ್ಯಾದಿವತ್ ಓಂ
ಕೃತ್ಸ್ನಭಾವಾಧಿಕರಣಮ್ ಜ್ಞಾನಾಧಿಕಾರಿಗಳಲ್ಲಿ ಯತಿಗಳಿಗೆ ಮಿಕ್ಕ ಆಶ್ರಮಿಗಳಕಿಂತಲೂ ಆಧಿಕ್ಯವುಂಟು ೪೭ ಓಂ ಕೃತ್ಸ್ನಭಾವಾತ್ತು ಗೃಹಿಣೋಪಸಂಹಾರಃ ಓಂ
೪೮ ಓಂ ಮೌನವದಿತರೇಷಾಮಪ್ಯುಪದೇಶಾತ್ ಓಂ
ಅನಾವಿಷ್ಕಾರಾಧಿಕರಣಮ್ ಬಹಿರಂಗಸಭೆಯಲ್ಲಿ ತತ್ವೋಪದೇಶಮಾಡಬಾರದು - ಅಯೋಗ್ಯರಿಗೆ ಉಪದೇಶವು ನಿಷೇಧಿಸಿದೆ ೪೯ ಓಂ ಅನಾವಿಷ್ಕುರ್ವನ್ನನ್ವಯಾತ್ ಓಂ
೧೦ ಐಹಿಕಾಧಿಕರಣಮ್ ಪ್ರತಿಬಂಧಕವಿಲ್ಲದಿದ್ದಲ್ಲಿ ಶ್ರವಣಾದಿಗಳಿಂದ ಒಂದೇ ಜನ್ಮದಲ್ಲಿಯೇ ಅಪರೋಕ್ಷವಾಗುತ್ತದೆ - ಸಾಧನಸಂಪೂರ್ತಿಯಾದ ಜನ್ಮದಲ್ಲಿ ಪ್ರಾರಬ್ಧಕರ್ಮ ನಶಿಸಿದ್ದರೇ ಭಗವದಪರೋಕ್ಷವು ೫೦ ಓಂ ಐಹಿಕಮಪ್ರಸ್ತುಪ್ರತಿಬಂಧೇ ತದ್ದರ್ಶನಾತ್ ಓಂ
೧೧ ಮುಕ್ತಿಫಲಾಧಿಕರಣಮ್ ಪ್ರಾರಬ್ಧಕರ್ಮರೂಪ ಪ್ರತಿಬಂಧಕ ನಶಿಸಿದ್ದರೆ ಜ್ಞಾನೋತ್ಪನ್ನವಾದ, ಶರೀರ ಪಾತಾನಂತರವೇ ಮೋಕ್ಷವು ೫೧ ಓಂ ಏವಂ ಮುಕ್ತಿಫಲಾನಿಯಮಸ್ತದವಸ್ಥಾವಧೃತೇಸ್ತದವಸ್ಥಾವಧೃತೇಃ ಓಂ

ಫಲಾಧ್ಯಾಯ
ಕರ್ಮಕ್ಷಯಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಆವೃತ್ತ್ಯಧಿಕರಣ ಶ್ರವಣಾದಿಗಳ ಆವರ್ತನೆಯು ಅಗತ್ಯವಾದುದು ೧ ಓಂ ಆವೃತ್ತಿರಸಕೃದುಪದೇಶಾತ್ ಓಂ
೨ ಓಂ ಲಿಂಗಾಚ್ಚ ಓಂ
ಆತ್ಮೋಪಾಗಮಾಧಿಕರಣಮ್ ಆತ್ಮತ್ವೋಪಾಸನೆ (ಶ್ರೀಹರಿಸದಾ ನನ್ನ ಸ್ವಾಮಿ)ಯು ಅಗತ್ಯ ಕರ್ತವ್ಯವಾದುದು ೩ ಓಂ ಆತ್ಮೇತಿ ತೂಪಗಚ್ಛಂತಿ ಗ್ರಾಹಯಂತಿ ಚ ಓಂ
ನ ಪ್ರತೀಕಾಧಿಕರಣಮ್ ಲೋಹಾದಿ ಪ್ರತಿಮೆಗಳೇ ಪರಮಾತ್ಮನ ಸ್ವರೂಪಗಳಲ್ಲ ತದಭೇದೋಪಾಸನೆ ಮಾದಬಾರದು ೪ ಓಂ ನ ಪ್ರತೀಕೇ ನ ಹಿ ಸಃ ಓಂ
ಬ್ರಹ್ಮದೃಷ್ಟ್ಯಧಿಕರಣಮ್ ಪರಮಾತ್ಮನನ್ನು ಬ್ರಹ್ಮನೆಂದು (ಪೂರ್ಣ)ಉಪಾಸನೆ ಮಾಡಬೇಕು ೫ ಓಂ ಬ್ರಹ್ಮದೃಷ್ಟಿರುತ್ಕರ್ಷಾತ್ ಓಂ
ಆದಿತ್ಯಾಧಿಕರಣಮ್ ಪರಮಾತ್ಮನ ಅವಯವಗಳಲ್ಲಿ ಸ್ವಜನಕತ್ವೋಪಾಸನೆ ದೇವತೆಗಳೇ ಮಾಡತಕ್ಕದು ೬ ಓಂ ಆದಿತ್ಯಾದಿಮತಯಶ್ಚಾಂಗ ಉಪಪತ್ತೇಃ ಓಂ
ಆಸೀನಾಧಿಕರಣ ಮ್ ಧ್ಯಾನದಲ್ಲಿ ಆಸನಾದಿಕ್ರಮಗಳು ಅಗತ್ಯವೆಂದಿದೆ ೭ ಓಂ ಆಸೀನಸ್ಸಂಭವಾತ್ ಓಂ
೮ ಓಂ ಧ್ಯಾನಾಚ್ಚ ಓಂ
೯ ಓಂ ಅಚಲತ್ವಂ ಚಾಪೇಕ್ಷ್ಯ ಓಂ
೧೦ ಓಂ ಸ್ಮರಂತಿ ಚ ಓಂ
೧೧ ಓಂ ಯತ್ರೈಕಾಗ್ರತಾ ತತ್ರಾವಿಶೇಷಾತ್ ಓಂ
ಅಪ್ರಯಾಣಾಧಿಕರಣಮ್ ಮೋಕ್ಷಪರ್ಯಂತವೂ ಉಪಾಸನೆ ಮಾಡಬೇಕು. ಮೋಕ್ಷದಲ್ಲಿಯೂ ಮಾಡುವುದುಂಟು ೧೨ ಓಂ ಆ ಪ್ರಾಯಣಾತ್ತತ್ರಾಪಿ ಹಿ ದೃಷ್ಟಮ್ ಓಂ
ತದಧಿಗಮಾಧಿಕರಣಮ್ ಜ್ಞಾನಿಗಳಿಗೆ ಭಗವದಪರೋಕ್ಷವಾಗುತ್ತಿರಲು ಹಿಂದಿನ ಅನಾರಬ್ಧಕರ್ಮಗಳು ಅನಭೀಷ್ಟ ಪಾಪಪುಣ್ಯಗಳು ನಾಶವಾಗುತ್ತವೆ. ಮುಂದಿನಕರ್ಮಗಳೂ ಲೇಪಿಸುವುದಿಲ್ಲ. ಇದರಂತೆ ಭಗವದ್ದ್ವೇಷಿಗಳಿಗೆ ತಮಸ್ಸುಂಟಾಗುತ್ತಿರಲು ಪುಣ್ಯದ ಸಂಬಂಧವೂ ಇರುವುದಿಲ್ಲ. ಅಪರೋಕ್ಷಾನಂತರದಲ್ಲಿ ಜ್ಞಾನಿಯ ಪುಣ್ಯಕರ್ಮವು ಮೋಕ್ಷದಲ್ಲಿ ಆನಂದ ಉದ್ರೇಕವು ಆಗುತ್ತದೆ. ೧೩ ಓಂ ತದಧಿಗಮ ಉತ್ತರಪೂರ್ವಾಘಯೋರಶ್ಲೇಷವಿನಾಶೌ ತದ್ವ್ಯಪದೇಶಾತ್ ಓಂ
೧೪ ಓಂ ಇತರಸ್ಯಾಪ್ಯೇವಮಸಂಶ್ಲೇಷಃ ಪಾತೇತು ಓಂ
೧೫ ಓಂ ಅನಾರಬ್ಧಕಾರ್ಯೇ ಏವ ತು ಪೂರ್ವೇ ತದವಧೇಃ ಓಂ
೧೬ ಓಂ ಅಗ್ನಿಹೋತ್ರಾದಿ ತು ತತ್ಕಾರ್ಯಾಯೈವ ತದ್ದರ್ಶನಾತ್ ಓಂ
೧೭ ಓಂ ಅತೋನ್ಯದಪೀತ್ಯೇಕೇಷಾಮುಭಯೋಃ ಓಂ
೧೮ ಓಂ ಯದೇವ ವಿದ್ಯಯೇತಿ ಹಿ ಓಂ
೧೯ ಓಂ ಭೋಗೇನ ತ್ವಿತರೇ ಕ್ಷಯಿತ್ವಾಥ ಸಂಪತ್ಸ್ಯತೇ ಓಂ

ಮಾರ್ಗಪಾದ

ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ವಾಙ್ಮನಸಾದಿಕರಣಮ್ ನಿಯಮ್ಯ ನಿಯಾಮಕಾನುಭಾವಾನುಸಾರವಾಗಿ ದೇವತೆಗಳ ಲಯವು ವಾಗಭಿಮಾನಿ ದೇವತೆಗೆ ಮನೋಭಿಮಾನಿ ದೇವತೆಯಲ್ಲಿ ಲಯವು ೧ ಓಂ ವಾಜ್ಞ್ಮನಸಿ ದರ್ಶನಾಚ್ಛಬ್ದಾಚ್ಚ ಓಂ
೨ ಓಂ ಅತ ಏವ ಚ ಸರ್ವಾಣ್ಯನು ಓಂ
ಮನಃಪ್ರಾಣಾಧಿಕರಣಮ್ ಮನೋಭಿಮಾನಿ ರುದ್ರದೇವತೆಗೆ ಮುಖ್ಯಪ್ರಾಣನಲ್ಲಿ ಲಯವು ೩ ಓಂ ತನ್ಮನಃ ಪ್ರಾಣ ಉತ್ತರಾತ್ ಓಂ
ಅಧ್ಯಕ್ಷಾಧಿಕರಣ (ಅಕ್ಷಾರಾಧಿಕರಣಮ್ ) ಮುಖ್ಯಪ್ರಾಣನಿಗೆ (ಚತುರ್ಮುಖಬ್ರಹ್ಮನಿಗೆ) ಪರಮಾತ್ಮನಲ್ಲಿ ಲಯವು ೪ ಓಂ ಸೋಧ್ಯಕ್ಷೇ ತದುಪಗಮಾದಿಭ್ಯಃ ಓಂ
ಭೂತಾಧಿಕರಣಮ್ ಅಧಮ ದೇವತೆಗಳಿಗೆ ಭೂತಾಭಿಮಾನಿ ದೇವತೆಗಳಲ್ಲಿ ಲಯವು ೫ ಓಂ ಭೂತೇಷು ತಚ್ಛ್ರುತೇಃ ಓಂ
ನೈಕಸ್ಮಿನ್ ಅಧ್ಕರಣಮ್(ಅನೇಕ ಲಯಾಧಿಕರಣಮ್ ) ಅಗ್ನಿಯಲ್ಲಿ ಎಲ್ಲರೂ ವಿಲೀನರಾಗುವುದಿಲ್ಲ - ಸರ್ವ ದೇವತೆಗಳಿಗೆ ಅಗ್ನಿಯಲ್ಲಿ ಲಯವನ್ನು ಹೇಳುತ್ತಾರೆ ೬ ಓಂ ನೈಕಸ್ಮಿನ್ ದರ್ಶಯತೋ ಹಿ ಓಂ
ಸಮನಾಧಿಕರಣಮ್ ಲಕ್ಷ್ಮೀದೇವಿಗೆ ಲಯವಿಲ್ಲ - ಲಕ್ಷ್ಮೀದೇವಿಗೆ ಪರಮಾತ್ಮನಲ್ಲಿ ಲಯವು ೭ ಓಂ ಸಮನಾ ಚಾಸೃತ್ಯುಪಕ್ರಮಾದಮೃತತ್ವಂ ಚಾನುಪೋಷ್ಯ ಓಂ
೮ ಓಂ ತದಪೀತೇಃ ಸಂಸಾರವ್ಯಪದೇಶಾತ್ ಓಂ
೯ ಓಂ ಸೂಕ್ಷ್ಮಂ ಪ್ರಮಾಣತಶ್ಚ ತಥೋಪಲಬ್ಧೇಃ ಓಂ
೧೦ ಓಂ ನೋಪಮರ್ದೇನಾತಃ ಓಂ
೧೧ ಓಂ ಅಸ್ಯೈವ ಚೋಪಪತ್ತೇರೂಷ್ಮಾ ಓಂ
೧೨ ಓಂ ಪ್ರತಿಷೇಧಾದಿತಿ ಚೇನ್ನ ಶಾರೀರಾತ್ ಓಂ
೧೩ ಓಂ ಸ್ಪಷ್ಟೋ ಹ್ಯೇಕೇಷಾಂ ಓಂ
೧೪ ಓಂ ಸ್ಮರ್ಯತೇ ಚ ಓಂ
ಪರಾ(ಲಯಾ)ಧಿಕರಣಮ್ ಸರ್ವದೇವತೆಗಳಿಗೆ ಚತುರ್ಮುಖನ ದ್ವಾರಾ ಪರಮಾತ್ಮನಲ್ಲಿ ಲಯವು ೧೫ ಓಂ ತಾನಿ ಪರೇ ತಥಾ ಹ್ಯಾಹ ಓಂ
ಅವಿಭಾಗಾಧಿಕರಣಮ್ ಮುಕ್ತರ ಇಚ್ಛಾದಿಗಳು ಭಗವದಿಚ್ಛಾದ್ಯನುಸಾರವೇ ಆಗಿರುತ್ತದೆ ೧೬ ಓಂ ಅವಿಭಾಗೋ ವಚನಾತ್ ಓಂ
ಹೃದಯಾಗ್ರಜ್ವಲನಾಧಿಕರಣಮ್ (ತದೋಕೋಧಿಕರಣ) ಮುಕ್ತಯೋಗ್ಯರಿಗೆ ಬ್ರಹ್ಮನಾಡಿಯಿಂದಲೇ ಉತ್ಕ್ರಮಣವು ೧೭ ಓಂ ತದೋಕೋಗ್ರಜ್ವಲನಂ ತತ್ ಪ್ರಕಾಶಿತದ್ವಾರೋ ವಿದ್ಯಾ ಸಾಮರ್ಥ್ಯಾತ್ ತಚ್ಛೇಷಗತ್ಯನುಸ್ಮೃತಿಯೋಗಾಚ್ಚ ಹಾರ್ದಾನು ಗೃಹೀತಃ ಶತಾಧಿಕಯಾ ಓಂ
೧೮ ಓಂ ರಶ್ಮ್ಯನುಸಾರೀ ಓಂ
೧೯ ಓಂ ನಿಶಿ ನ್ತಿ ಚೇನ್ನ ಸಂಬಂಧಾತ್ ಓಂ
೨೦ ಓಂ ಯಾವದ್ ದೇಹಭಾವಿತ್ವಾತ್ ದರ್ಶ ಯತಿ  ಚ ಓಂ
೨೧ ಓಂ ಅತಶ್ಚಾಯನೇಪಿ ಹಿ ದಕ್ಷಿಣೇ ಓಂ
೧೦ ಪ್ರತ್ಸ್ಮರಣಾಧಿಕರಣಮ್ (ಯೋಗ್ಯಧಿಕರಣ) ಜ್ಞಾನಯೋಗಿಗಳಿಗೆ ಬ್ರಹ್ಮಪ್ರಾಪ್ತಿಯು ಕರ್ಮಯೋಗಿಗಳಿಗೆ ಚಂದ್ರಗತ್ಯನುಸ್ಮರಣಪೂರ್ವಕವಾಗಿ ಇರುತ್ತದೆ ೨೨ ಓಂ  ಯೋಗಿನಃ ಪ್ರತಿ ಸ್ಮರ್ಯೇತೇ ಸ್ಮಾರ್ತೇ ಚೈತೇ ಓಂ

ಉತ್ಕ್ರಾಂತಿಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಅರ್ಚಿರಾದ್ಯಧಿಕರಣಮ್ ಬ್ರಹ್ಮರಂದ್ರದಿಂದ ಉತ್ಕ್ರಾಂತನಾದ ಸಚ್ಚೇತನನಿಗೆ ಪ್ರಥಮತಃ ಅರ್ಚಿಲೋಕ ಪ್ರಾಪ್ತಿಯು ೧ ಓಂ ಅರ್ಚಿರಾದಿನಾ ತತ್ಪ್ರಥಿತೇಃ ಓಂ
ವಾಯುಗತ್ಯಧಿಕರಣಮ್ (ವಾಯು ಶಬ್ದಾಧಿಕರಣಮ್) ಅರ್ಚಿಲೋಕದಿಂದ ಎರಡನೆಯದಾಗಿ ವಾಯುಲೋಕ ಪ್ರಾಪ್ತಿಯು ಅಹರಾದಿ ಲೋಕಗಳಿಂದ ತಟಿಲ್ಲೋಕಪ್ರಾಪ್ತಿಯು ಹಾಗೇ ವರುಣಾದಿ ಲೋಕ ಪ್ರಾಪ್ತಿಯು ೨ ಓಂ ವಾಯುಶಬ್ದಾದವಿಶೇಷವಿಶೇಷಾಭ್ಯಾಮ ಓಂ
ತಟಿದಧಿಕರಣಮ್ ಸಂವತ್ಸರಲೋಕನಂತರ ತಟಿಲ್ಲೋಕ: ನಂತರ ವರುಣಲೋಕಪ್ರಾಪ್ತಿ - ತಟಿದ್ವರುಣಾದಿ ಲೋಕದ್ವಾರಾ ಗಮನ ೩ ಓಂ ತಟಿತೋಧಿ ವರುಣಃ ಸಂಬಂಧಾತ್ ಓಂ
ಅತಿವಾಹಿಕಾಧಿಕರಣಮ್ ಪೂರ್ವೋಕ್ತ ವಾಯುಲೋಕವು ಅತಿವಾಹಕವಾಯುಲೋಕ: ಮುಖ್ಯವಾಯುವಿನದಲ್ಲ -  ಹಿಂದೆ ಹೇಳಿದ ವಾಯುಲೋಕವು ಅತಿವಾಹಿಕ ವಾಯುಲೋಕವೆಂದು ತಿಳಿಯಬೇಕು ೪ ಓಂ ಆತಿವಾಹಿಕಸ್ತಲ್ಲಿಂಗಾತ್ ಓಂ
೫ ಓಂ ಉಭಯವ್ಯಾಮೋಹಾತ್ ತತ್ಸಿದ್ಧೇಃ ಓಂ
ವೈದ್ಯುತಾಧಿಕರಣಮ್ ಬ್ರಹ್ಮಪ್ರಾಪ್ತಿಗೆ ಮುಖ್ಯ ವಾಯುಲೋಕವೇ ಕೊನೆಯದಾದುದು ೬ ಓಂ ವೈದ್ಯುತೇನೈವ ತತಸ್ತಚ್ಛ್ರುತೇಃ ಓಂ
ಕಾರ್ಯಾಧಿಕರಣಮ್ ಮುಖ್ಯ ವಾಯುವು ವ್ಯಾಪ್ತೋಪಾಸಕರು ಪರಬ್ರಹ್ಮನಲ್ಲಿ ಸೇರಿಸುತ್ತಾನೆ. ಇತರರನ್ನು ಕಾರ್ಯಬ್ರಹ್ಮರಲ್ಲಿ ಸೇರಿಸುತ್ತಾನೆ ೭ ಓಂ ಕಾರ್ಯಂ ಬಾದರಿರಸ್ಯ ಗತ್ಯುಪಪತ್ತೇಃ ಓಂ
೮ ಓಂ ವಿಶೇಷಿತತ್ವಾಚ್ಚ ಓಂ
೯ ಓಂ ಸಾಮೀಪ್ಯಾತ್ತು ತದ್ವ್ಯಪದೇಶಃ ಓಂ
೧೦ ಓಂ ಕಾರ್ಯಾತ್ಯಯೇ ತದಧ್ಯಕ್ಷೇಣ ಸಹಾತಃ ಪರಮಭಿಧಾನಾತ್ ಓಂ
೧೧ ಓಂ ಸ್ಮೃತೇಶ್ಚ ಓಂ
೧೨ ಓಂ ಪರಂ ಜೈಮಿನಿರ್ಮುಖ್ಯತ್ವಾತ್ ಓಂ
೧೩ ಓಂ ದರ್ಶನಾಚ್ಚ ಓಂ
೧೪ ಓಂ ನ ಚ ಕಾರ್ಯೇಪ್ರತಿಪತ್ತ್ಯಭಿಸಂಧಿಃ ಓಂ
೧೫ ಓಂ ಅಪ್ರತೀಕಾಲಂಬನಾನ್ನಯತೀತಿ ಬಾದರಾಯಣ ಉಭಯಥಾ ಚ ದೋಷಾತ್ತತ್ಕ್ರತುಶ್ಚ ಓಂ
೧೬ ಓಂ ವಿಶೇಷಂ ಚ ದರ್ಶಯತಿ ಓಂ

ಭೋಗಪಾದ
ಅಧಿಕರಣ ಸಂಖ್ಯೆ ಅಧಿಕರಣ ಅಧಿಕರಣ ವಿಷಯ ಬ್ರಹ್ಮಸೂತ್ರ
ಸಂಪದ್ಯಾಧಿಕರಣಮ್ ಜೀವನು ಪರಮಾತ್ಮನನ್ನು ಹೊಂದಿ ಪರಮಾತ್ಮನನ್ನು ಅತಿಕ್ರಮಿಸದೇ ತನ್ನ ಸ್ವರೂಪದಿಂದಲೇ ಎಲ್ಲ ಭೋಗವನ್ನು ಅನ್ಭವಿಸುತ್ತಾನೆ ೧ ಓಂ  ಸಂಪದ್ಯಾವಿಹಾಯ ಸ್ವೇನ ಶಬ್ದಾತ್ ಓಂ
ಮುಕ್ತಾಧಿಕರಣಮ್ ಪರಬ್ರಹ್ಮನನ್ನು ಹೊಂದಿದ ನಂತರ ಬಿಡದೆ ಸಕಲ ಭೋಗಾನುಭವವು ೨ ಓಂ ಮುಕ್ತಃ ಪ್ರತಿಜ್ಞಾನಾತ್ ಓಂ
ಆತ್ಮಾಧಿಕರಣಮ್ ಅಮುಕ್ತಿ ಪ್ರಾಪ್ಯನಾದ ಪರಂಜ್ಯೋತಿಯೇ ಪರಬ್ರಹ್ಮನು ೩ ಓಂ ಆತ್ಮಾ ಪ್ರಕರಣಾತ್ ಓಂ
ಅವಿಭಾಗಾಧಿಕರಣಮ್ ಪರಮಾತ್ಮನನ್ನು ಪ್ರವೇಶಿಸಿದ ಜೀವನು ಪರಮಾತ್ಮ ಅನುಭವಿಸಿದ ಬೋಗಗಳನ್ನೇ ಅನುಭವಿಸುತ್ತಾನೆ - ಸಾಯುಜ್ಯ ಮುಕ್ತಿ ಅರ್ಹರಿಗೆ ಈಶಭುಕ್ತ ಶೇಷ ಭೋಗವು ೪ ಓಂ ಅವಿಭಾಗೇನ ದೃಷ್ಟತ್ವಾತ್ ಓಂ
ಬ್ರಾಹ್ಮಾಧಿಕರಣಮ್ (ಚಿತ್ಮಾತ್ರಾಧಿಕರಣಮ್) ಮುಕ್ತರುಗಳು ಸ್ವರೂಪ ದೇಹದಿಂದಾಗಲೀ ಪರಮಾತ್ಮನ ದೇಹದಿಂದಾಗಲೀ ಭೋಗಗಳನ್ನು ಅನುಭವಿಸುತ್ತಾರೆ ೫ ಓಂ ಬ್ರಾಹ್ಮೇಣ ಜೈಮಿನಿರುಪನ್ಯಾಸಾದಿಭ್ಯಃ ಓಂ
೬ ಓಂ ಚಿತಿಮಾತ್ರೇಣ ತದಾತ್ಮಕತ್ವಾದಿತ್ಯೌಡುಲೋಮಿಃ ಓಂ
೭ ಓಂ ಏವಮಪ್ಯಪನ್ಯಾಸಾತ್ಪೂರ್ವಭಾವಾದವಿರೋಧಂ ಬಾದರಾಯಣಃ ಓಂ
ಸಂಕಲ್ಪಾಧಿಕರಣಮ್ ಮುಕ್ತರು ಸ್ವೇಚ್ಛೆಯಿಂದ ಸ್ವಸಂಕಲ್ಪಿತ ಭೋಗಗಳನ್ನು ಅನುಭವಿಸುತ್ತಾರೆ ೮ ಓಂ ಸಂಕಲ್ಪಾದೇವ ಚ ತಚ್ಛ್ರುತೇಃ ಓಂ
ಅನನ್ಯಾಧಿಪತಿತ್ವಾಧಿಕರಣಮ್ ಮುಕ್ತರುಗಳಿಗೆ ಶ್ರೀಹರಿಯ ವಿನಃ ಬೇರೆ ಅಧಿಪತಿಗಳಿರುವುದಿಲ್ಲ ೯ ಓಂ ಅತ ಏವ ಚಾನನ್ಯಾಧಿಪತಿಃ ಓಂ
ಉಭಯವಿಧಬೋಗಾದಿಕರಣಮ್(ಅಭಾವಾಧಿಕರಣಮ್) ಮುಕ್ತರು ಶುದ್ಧ ಸತ್ವಾತ್ಮಕ ದೇಹದಿಂದಲೂ, ಚಿದ್ರೂಪದೇಹದಿಂದಲೂ ವಿಹರಿಸುತ್ತಾರೆ ೧೦ ಓಂ ಅಭಾವಂ ಬಾದರಿರಾಹ ಹ್ಯೇವಮ್ ಓಂ
೧೧ ಓಂ ಭಾವಂ ಜೈಮಿನಿರ್ವಿಕಲ್ಪಾಮ್ನಾನಾತ್ ಓಂ
೧೨ ಓಂ ದ್ವಾದಶಾಹವದುಭಯಚಿಧಂ ಬಾದರಾಯಣೋತಃ ಓಂ
೧೩ ಓಂ ತನ್ವಭಾವೇ ಸಂಧ್ಯವದುಪಪತ್ತೇಃ ಓಂ
೧೪ ಓಂ ಭಾವೇ ಜಾಗ್ರದ್ವತ್ ಓಂ
೧೫ ಓಂ ಪ್ರದೀಪವದಾವೇಶಸ್ತಥಾ ಹಿ ದರ್ಶಯತಿ ಓಂ
೧೬ ಓಂ ಸ್ವಾಪ್ಯಯಸಂಪತ್ತ್ಯೋರನ್ಯತರಾಪೇಕ್ಷಮಾವಿಶ್ಗ್ಕೃತಂ ಓಂ
ಜಗದ್ವ್ಯಾಪಾರಾಧಿಕರಣ (ಸರ್ವಕಾಮಾಧಿಕರಣಮ್ ) ಮುಕ್ತರಿಗೆ ಜಗತ್ ಸೃಷ್ಟ್ಯಾದಿ ಕಾಮನಾದಿಗಳಿರುವುದಿಲ್ಲ ೧೭ ಓಂ ಜಗದ್ವ್ಯಾಪಾರವರ್ಜಿಮ್ ಓಂ
೧೮ ಓಂ ಪ್ರಕರಣಾದಸನ್ನಿಹಿತತ್ವಾಚ್ಚ ಓಂ
೧೯ ಓಂ ಪ್ರತ್ಯಕ್ಷೋಪದೇಶಾದಿತಿ ಚೇನ್ನಾಧಿಕಾರಿಕ ಮಂಡಲಸ್ಥೋಕ್ತೇಃ ಓಂ
೨೦ ಓಂ ವಿಕಾರಾವರ್ತಿ ಚ ತಥಾ ಹಿ ದರ್ಶಯತಿ ಓಂ
೧೦ ಸ್ಥಿತ್ಯಧಿಕರಣಮ್ (ಏಕರೂಪ) ಮುಕ್ತರಾನಂದದಲ್ಲಿ  ವೃದ್ಧಿಹ್ರಾಸಗಳಿರುವದಿಲ್ಲ ೨೧ ಓಂ ಸ್ಥಿತಿಮಾಹ ದರ್ಶಯತಶ್ಚೈವಂ ಪ್ರತ್ಯಕ್ಷಾನಿಮಾನೇ ಓಂ
೨೨ ಓಂ ಭೋಗಮಾತ್ರಸಾಮ್ಯಲಿಂಗಾಚ್ಚ ಓಂ
೧೧ ಅನಾವೃತ್ಯಧಿಕರಣಮ್ ಮುಕ್ತರಾದನಂತರ ಎಂದೆಂದ್ಗೂ ಸಂಸಾರದಲ್ಲಿ ಪುನರಾವರ್ತನೆಯಿರುವುದಿಲ್ಲ ೨೩ ಓಂ ಅನಾವೃತ್ತಿಶ್ಯಬ್ದಾದನಾವೃತ್ತಿಶ್ಯಬ್ದಾತ್ ಓಂ