ಹೆಚ್ಚೆಹೆಚ್ಚೆಗೆ ಪರಮಾತ್ಮನನ್ನು ಜೀವಾತ್ಮರಿಗಿಂತ
ಭಿನ್ನನಾಗಿರುವವನೆಂದು ಉಪಪಾದಿಸುವವನು ಭಗವಂತನಿಗೆ ಅತ್ಯಂತ ಪ್ರಿಯ.
ಆದುದರಿಂದ ಭಗವಂತನು ಎಲ್ಲ ಜೀವರಿಗಿಂತ
ಭಿನ್ನ ಎಂದು ತಿಳಿದುಕೊಳ್ಳುವುದೇ ಅವನ ಪ್ರೀತಿಗೆ ಪ್ರಯೋಜಕವಾಗಿದ್ದು ಅವನ ಪೂಜೆ
ಎನಿಸುವುದು.
'ಕ್ಷೇತ್ರಜ್ಞಂ ಸರ್ವಭೂತೇಷು ಸಮತ್ವೇನ
ಯಜೇತ ಮಾಮ್' - ಎಂದು ಉದ್ಧವಗೀತೆಯಲ್ಲಿ (ಭಾಗ. ೧೧-೧೧-೪೪) ಶ್ರೀಕೃಷ್ಣ
ಸಂದೇಶಿಸಿರುವಂತೆ ಎಲ್ಲ ಭೂತಗಳಲ್ಲಿ ಭಗವಂತನು ಕ್ಷೇತ್ರಜ್ಞನಾಮಕನಾಗಿ ಸಮನಾಗಿ ಇರುವನು
ಎಂದು ತಿಳಿಯುವುದೂ ಒಂದು ಪೂಜೆ.
ಹೀಗೆ ಪ್ರತ್ಯೇಕತೆಯು ಸರ್ಶನರೂಪದ
ಪೂಜೆಯನ್ನಾಗಲೀ, ಸಮತ್ವದರ್ಶನ ರೂಪದ ಪೂಜೆಯನ್ನಾಗಲೀ ನಡೆಸುವಾಗ 'ಮಾಂ ನಮಸ್ಕುರು' -
ನಮಸ್ಕಾರವನ್ನು ನಡೆಸಲು ಮರ್‍ಎಯಬೇಡ ಎಂದು ಸಂದೇಶಿಸಲಾಗಿದೆ. ಮಾನಸಿಕ ಪ್ರವಣತೆಯೇ
ನಮಸ್ಕಾರ. ಇದೇ ಜಿಜ್ಞಾಸೆ. ಆದುದರಿಂದ ಜಿಜ್ಞಾಸಾಪೂರ್ವಕವಾಗಿ ತನ್ನನ್ನು ಪೂಜಿಸಲು
ಸಂದೇಶಿಸಿದಂತಾಗುವುದು. ಹೀಗೆ ಗೀತಾಚಾರ್ಯನು 'ಮನ್ಮನಾ ಭವ...' ಇತ್ಯಾದಿ ಮಾತಿನಲ್ಲಿ
ಭಗವನ್ಮನಸ್ಕತ್ವವೇ ಮುಂತಾದ ತನ್ನನ್ನು ಹೊಂದಲು ಬೇಕಾದ ಸಾಧನೆಗಳನ್ನು ತಿಳಿಸುವಾಗ,
ಅವುಗಳ ಸ್ವರೂಪದ ಮೇಲೆ ಬೆಳಕುಚೆಲ್ಲುವಂತೆ ಕ್ರಮವಾಗಿ ಅವುಗಳನ್ನು
ಉಲ್ಲೇಖಿಸಿರುವನೆಂಬುದನ್ನು ವಿಶ್ಲೇಷಿಸಿಕೊಳ್ಳಬಹುದಾಗಿದೆ.
(ರಾಯಚೂರಿನಲ್ಲಿ ನಡೆದ ಅಖಿಲಭಾರತ ಮಾಧ್ವಮಹಾಮಂಡಲದ ೧೮ನೇ ಸಮ್ಮೇಳನದಲ್ಲಿ ಪಾಲ್ಗೊಂಡು.....)