ಪ್ರಾಣಪಾರಮ್ಯಸಂದೇಶ
''ಸೂತ್ರ ಎನಿಸುವ ಮುಖ್ಯಪ್ರಾಣನು ತತ್ತ್ವಾಭಿಮಾನಿದೇವತೆಗಳಿಗೆ ಆಧಾರನಾಗಿರುವನೆಂಬುದು ಉಪನಿಷತ್ತುಗಳಲ್ಲಿ ಪ್ರಸಿದ್ಧವಾಗಿದ್ದು, ಅದೂ ದೃಷ್ಟಾಂತವಾಗಿ ಸೂಚಿತವಾಗುವಂತೆ, ಸೂತ್ರನಾಮಕ ಮುಖ್ಯಪ್ರಾಣನಲ್ಲಿಮ್ಹೇಗೆ ತತ್ತ್ವಾಭಿಮಾನಿ ದೇವತೆಗಳು ಹೆಣೆಯಲ್ಪಟ್ಟಿರುವರೋ ಹಾಗೆ ಅಂತಹ ಮುಖ್ಯಪ್ರಾಣನಿಂದಲೂ ಸಹಿತವಾದ ಜಗತ್ತು ತನ್ನಲ್ಲಿ ಆಶ್ರಿತವಾಗಿದೆ ಎಂದು ಗೀತಾಚಾರ್ಯನು 'ಸೂತ್ರೇ ಮಣಿಗಾಣಾ ಇವ' ಎಂಬ ಮಾತಿನಲ್ಲಿ ಸಂದೇಶ ನೀಡಿರುವನು"

                                        ಪವಮಾನಮಂಡಲ ನೀರಾಜನ
                                ಪವಮಾನ ಸಮಿದ್ಧ
                                ಸರಸ್ವತಿಯಾಗಿರುವುದರಿಂದಲೇ 'ಇಳಾಮಹೀ'
                                ಪವನಃ ಪವತಾಮಸ್ಮಿ
                                'ಸ್ವಾಮಿನ್' ಸಂಬೋಧನೆಯ ಔಚಿತ್ಯ
                                'ಗುರುಗಣ' ಸಂಬೋಧನೆಯ ಔಚಿತ್ಯ
                                ಕೂಸಿನ ಕಂಡಿರಾ ?
                                ಮಹಾಜನೋ ಯೇನ ಗತಃ ಸ ಪಂಥಾಃ
                                ವ್ಯಾಸರಿಗೆ ಆನಂದಪ್ರದರಾದುದರಿಂದಲೂ ಆನಂದತೀರ್ಥರು
                               ಸೂತ್ರೇ ಮಣಿಗಣಾ ಇವ

ಪವಮಾನಮಂಡಲ ನೀರಾಜನ
        ಋಗ್ವೇದದ ಪವಮಾನಮಂಡಲದಲವು ಭಗವಂತನಿಗೆ ವಿಶೇಷವಾಗಿ ರಂಜಕವಾಗಿರುವದರಿಂದ , 'ನೀರಾಜನ' ಎಂದೇ ಭಾಗವತದಲ್ಲಿ (೧೧-೨೭-೩೦) ಉಲ್ಲೇಖಗೊಂಡಿದೆ.
ನಿತರಾ ರಂಜಯೇದ್ ಯಸ್ಮಾತ್ ಪಾವಮಾನಂ ತು ಮಂಡಲಮ್ |
ವಿಷ್ಣುನೀರಾಜನಂ ತಸ್ಮಾದ್ ವಿದ್ವದ್ಭಿಃ ಸಮುದಾಹೃತಮ್ ||
ಸರ್ವಮೂಲದ ಸೌರಭ:
        ಪವಮಾನಮಂಡಲ ಭಗವಂತನಿಗೆ ಯಾಕೆ ವಿಶೇಷವಾಗಿ ರಂಜಕ ಎನಿಸಿದೆ? ಅದರಲ್ಲಿ ಪ್ರತಿಪಾದ್ಯವಾಗಿರುವ ವಿಷಯದಿಂದಾಗಿ ಅದು ಭಗವಂತನಿಗೆ ವಿಶೇಷ ರಂಜಕ. ಪವಮಾನ ಮಂಡಲದಲ್ಲಿ ಭಗವಂತನ ಗುಣಗಳಲ್ಲದೆ, ವಾಯುದೇವನ ಗುಣಗಳೂ ಪ್ರತಿಪಾದ್ಯಗಳಾಗಿವೆ. ವಾಯುದೇವನ ಗುಣಗಳ ಪ್ರತಿಪಾದನೆಯಿಂದ ಅವನಿ ದೇವೋತ್ತಮನೆಂಬ ಜ್ಞಾನ ಉಂಟಾಗುವುದಂತಾಗಿದೆ.
        ವಾಯುದೇವನು ದೇವೋತ್ತಮನೆಂಬ ಜ್ಞಾನ ಭಗವಂತನಿಗೆ ಅತ್ಯಂತ ಪ್ರಿಯ ವಾದುದು -
ಸರ್ವದೇವೋತ್ತಮೋ ವಾಯುರಿತಿ ಜ್ಞಾನಾನ್ನ ಚಾಪರಮ್ |
ಪ್ರಿಯಮಸ್ತಿ ಹರೇಃ ಕಿಂಚಿತ್ ತಥಾ ವಾಯೋರ್ಹರೇರ್ವಿದಃ |
- ಮಹಾತ್ಮೆ (ಭಾ.ತಾ.ನಿ ೧೧-೧೨-೪೩)
        ಹೀಗೆ ಭಗವಂತನಿಗೆ ಅತ್ಯಂತ ಪ್ರಿಯವಾದ ವಾಯುವಿನ ಜೀವೋತ್ತಮತ್ವದ ತಿಳಿವಳಿಕೆಗೆ ಕಾರಣವಾಗಿರುವುದರಿಂದಲೇ ಪವಮಾನಮಂಡಲ ಅವನಿಗೆ ರಂಜಕವಾಗಿ ' ನಿರಾಜನ' ಎನಿಸಿದೆ.
ವಾಯುದೇವ ಭಗವಂತನಿಗೆ ಅತ್ಯಂತ ಪ್ರಿಯ
        'ಮಾಹಾತ್ಮ್ಯೆ' - ಎಂಬ ಗ್ರಂಥ ಸಾರುತ್ತಿರುವಂತೆ ವಾಯುದೇವೋತ್ತಮತ್ವಜ್ಞಾನವು ಭಗವಂತನಿಗೆ ಅತ್ಯಂತ ಪ್ರಿಯ ಎನಿಸಬೇಕಾದರೆ, ವಾಯುದೇವನು ಅವನಿಗೆ ಅತ್ಯಂತ ಪ್ರಿಯನಾಗಿದ್ದಿರಲೇ ಬೇಕು.
ಸರ್ವಮೂಲ ಸೌರಭ:
        ವಾಯುದೇವನಾದರೂ ಭಗವಂತನಿಗೆ ಯಾಕೆ ಅತ್ಯಂತ ಪ್ರಿಯ ?
        ಭಗವಂತನಿಗೆ ಅತ್ಯಂತ ಪ್ರಿಯನೆನಿಸುವನಾದರೂ ಯಾರು ?
        'ವಿಷ್ಣುತತ್ತ್ವವಿನಿರ್ಣಯ' ದಲ್ಲಿ ಉದಾಹರಿಸಿರುವ ಪ್ರಮಾಣವೊಂದು ಹೀಗೆ ಸಾರುತ್ತಿದೆ -
        'ನ ತಾದೃಶೀ ಪ್ರೀತಿರೀಡ್ಯಸ್ಯ ವಿಷ್ಣೋಃ ಗುಣೋತ್ಕರ್ಷಜ್ಞಾತರಿಯಾದೃಶೀ ಸ್ಯಾತ್ ....'
        ಶ್ರೀವಿಷ್ಣುವಿಗೆ ತನ್ನ ಗುಣಾಧಿಕ್ಯವನ್ನು ಅರುತವನಲ್ಲಿ ಎಷ್ಟು ಪ್ರೀತಿಯೋ ಅಷ್ಟು ಪ್ರೀತಿ ಇನ್ನಾರಲ್ಲೂ ಇರುವುದಿಲ್ಲ.
        ಹಾಗಾದರೆ ವಾಯುದೇವ ಭಗವಂತನಿಗೆ ಅತ್ಯಂತ ಪ್ರಿಯನೆನಿಸಿರುವುದಕ್ಕೆ ಅವನ ಗುಣಾಧಿಕ್ಯದ ತಿಳಿವಳಿಕೆಯೇ ಕಾರಣವೆಂಬುದು ಸ್ಪಷ್ಟ.
(ಪಲಿಮಾರುಮಠದಲ್ಲಿ ನಡೆದ ಪವಮಾನ ಮಂಗಲೋತ್ಸವದಲ್ಲಿ ಪಾಲ್ಗೊಂಡು...)