 |
ಮೂರನೇ ಕವಚ ಪುಟದಲ್ಲಿ : ೨೧-೪-೧೯೮೦ ರಂದು
ಬಾರ್ಕೂರಿನ ಭಂಡಾರಕೇರಿ ಮಠದಲ್ಲಿ ಶ್ರೀ ವಿದ್ಯೇಶ ತೀರ್ಥರಿಗೆ ಸಂನ್ಯಾಸ ದೀಕ್ಷೆಯನ್ನು
ಅನುಗ್ರಹಿಸಿದ ಶ್ರೀ ವಿದ್ಯಾಮಾನ್ಯತೀರ್ಥರು, ಸಂನ್ಯಾಸ ದೀಕ್ಷೆಯ ಅಂಗವಾಗಿ, ವೈಷ್ಣವ
ದೀಕ್ಷೆಯನ್ನೂ ತೊಡಿಸಿರುವರು. ಶ್ರೀ ಮಧ್ವರ ಓಂ ತತ್ಸತ್ ಪ್ರಣವಕಲ್ಪದಲ್ಲಿ (೧೬...೨೫)
ಸುಮಾರು ಹತ್ತು ಶ್ಲೋಕಗಳಲ್ಲಿ ವೈಷ್ಣವ ದೀಕ್ಷೆಯ ಅಂಗವಾಗಿ ಕೆಳಗೆ ತಿಳಿಸಿರುವ
ವಿಧಿನಿಷೇಧಗಳನ್ನು ಬೋಧಿಸಿರುವರು -
''ಸಂಸಾರಸಾಗರವನ್ನು ದಾಟಿ ಅಮೃತತ್ವದೆಡೆಗೆ ಸಾಗು. ಪರಮಾತ್ಮನಿಗೆ ಪ್ರಿಯನಾಗು. ಎಲ್ಲಾ
ವಿಧ ದುಃಖಗಳಿಂದ ಮುಕ್ತಿ ಹೊಂದಿ ನಿನ್ನದೇ ಆದ ನಿತ್ಯಾನಂದ ಸ್ವರೂಪದಿಂದ ಪರಮಾತ್ಮನ
ಸಾಮೀಪ್ಯರೂಪವಾದ ಮೋಕ್ಷವನ್ನು ಪಡೆದು ಅಲ್ಲಿಯೂ ಹರಿಭಕ್ತನಾಗಿರು. ಬ್ರಹ್ಮಾದಿ
ದೇವತೆಗಳಲ್ಲಿ ಭಕ್ತಿ ಮಾಡುವುದರ ಜೊತೆಗೆ ದೇವತೆಗಳಲ್ಲಿರುವ ತಾರತಮ್ಯವನ್ನು
ಸ್ಮರಿಸುತ್ತಾ ಎಲ್ಲಾ ದೇವತೆಗಳಲ್ಲಿ ಸರ್ವೋತ್ತಮನು ಶ್ರೀ ಹರಿಯೆಂದು ನಿರಂತರ
ಚಿಂತಿಸುತ್ತಾ ಸುಖಿಯಾಗಿರು. ಇದಲ್ಲದೇ ಮುಕ್ತಿದೆಶೆಯಲ್ಲಿಯೂ ಕೊಡ ವಿಷ್ಣುವಿನಿಂದ
ಇತರರಿಗೆ ಐಕ್ಯವನ್ನು ಅಥವಾ ಸಾಮ್ಯವನ್ನು ಯಾವತ್ತೂ ಚಿಂತಿಸಬೇಡ''.
ಪ್ರತಿದಿನವೂ ವಿಚ್ಛಿತ್ತಿ ಇಲ್ಲದೇ ಪರಮಾತ್ಮನ ಪೂಜಾ ಪ್ರಣವ ಮಂತ್ರಾದಿ ಜಪ ಧ್ಯಾನ
ಮತ್ತು ಸರ್ವಕರ್ಮ ಸಮರ್ಪಣೆ ಮಾಡಬೇಕು. ಯತಿಗಳಿಗೆ ಮೂರು ಸಹಸ್ರ ಪ್ರಣವ ಜಪವು
ಮದ್ಯಮವೆನಿಸಿದೆ. ಒಂದು ಸಾವಿರ ಕನಿಷ್ಠ, ಮೂರು ಸಹಸ್ರಕ್ಕಿಂತ ಹೆಚ್ಚು ಜಪಿಸುವುದು
ಉತ್ತಮ ಜಪವಾಗಿದೆ.
ತಾನು ಶ್ರೀಹರಿಯ ಪ್ರತಿಬಿಂಬನೆಂದೂ ತನಗೆ ಬಿಂಬ ಶ್ರೀಹರಿಯೆಂದೂ, ನಿರಂತರ ಬಿಂಬರೂಪೀ
ಪರಮಾತ್ಮನ ಧ್ಯಾನ ನಡೆಸು. ಸದಾಕಾಲ ಪ್ರಣವ ಮಂತ್ರಪೂರ್ವಕವಾಗಿ ಪರಮಾತ್ಮನಲ್ಲಿ ಮನಸ್ಸು
ಸರ್ವೇಂದ್ರಿಯಗಳನ್ನು ನೆಲೆಗೊಳಿಸಿ ಅಹಿಂಸೆಯೇ ಮೊದಲಾದ ಮಾನಸ ಪುಶ್ಪಗಳಿಂದ ಮತ್ತು
ಪಾರಿಜಾತ ಮಲ್ಲಿಗೆ ಸಂಪಿಗೆ ಮೊದಲಾದ ಪುಶ್ಪಗಳಿಂದ ಬಗವಂತನನ್ನು ಪೂಜಿಸುತ್ತಿರು.
ಹಯಗ್ರೀವ, ವೇದವ್ಯಾಸ, ವರಾಹ ಮುಂತಾದ ವೈಶ್ಣವ ಮಂತ್ರಗಳನ್ನು ಬಕ್ತಿಪೂರ್ವಕವಾಗಿ ಜಪಿಸು. |