ಪುಟಕ್ಕೆ ಹಾಕಿದ ಸುವರ್ಣದಂತೆ ಪರಿಶುದ್ಧವಾಗಿವೆ ಹಾಗು ಮೆರೆಯುತ್ತಿವೆ.
ಸರ್ವಮೂಲಗ್ರಂಥಗಳಿಗೆ ಸಂಬಂಧಿಸುವ ಒಂದೊಂದು ವರ್ಣವೂ ನೇರವಾಗಿಯಾಗಲೀ ಪರೋಕ್ಷವಾಗಿಯಾಗಲೀ ಭಗವಂತನನ್ನೇ ವರ್ಣಿಸಿತ್ತಿವೆ.
ಇಂತಹ ಸರ್ವಮೂಲದ ಸ್ಪರ್ಶವಿಳ್ಳ ಸಂದೇಶಗಳೇ ಶ್ರೀ
ವಿದ್ಯೇಶತೀರ್ಥರ ಗ್ರಂಥ, ಲೇಖನ, ಪ್ರವಚನಗಳಲ್ಲಿ ಪ್ರಸ್ತುತಗಳಾದ
ಸಂದೇಶಗಳಾಗಿರುವುದರಿಂದ ಅವು ಸುವರ್ಣ ಸಂದೇಶಗಳು.
ಶ್ರೀ ವಿದ್ಯೇಶತೀರ್ಥರು ತಮ್ಮ ಬದುಕಿನ
ಪೂರ್ವಾರ್ಧದಲ್ಲಿ ಶ್ರೀ ವಿಶ್ವೇಶತೀರ್ಥರ ಹಾಗೂ ಶ್ರೀ ವಿದ್ಯಾಮಾನ್ಯತೀರ್ಥರ
ಅನುಗ್ರಹದಿಂದಾಗಿ ಸರ್ವಮೂಲಗ್ರಂಥಗಳ ಬಗ್ಗೆ ನಡೆಸಿರುವ ವಿಶಿಷ್ಟವಾದ ಕೃಷಿಕಾರ್ಯದ
ಫಸಲಿನ ರೂಪದಲ್ಲಿ ಈ ಸಂದೇಶಗಳಿರುವುದರಿಂದ, ಸುವರ್ಣಜಯಂತ್ಯುತ್ಸವಕಾಲದಲ್ಲಿ
ಸಂಗ್ರಹರೂಪದಲ್ಲಿ ಬೆಳಕಿಗೆ ಬಂದವು - ಎಂಬ ದೃಷ್ಟಿಯಿಂದಲೂ ಇವು ಸುವರ್ಣಸಂದೇಶಗಳು.
ಸಮಗ್ರ ಶಾಸ್ತ್ರಪ್ರಪಂಚವನ್ನು ಮಥಿಸಿ,
ಸರ್ವಮೂಲಗ್ರಂಥಗಳ ರೂಪದಲ್ಲಿ ನವನೀತ ವನ್ನೆಂಬಂತೆ ನಮಗೆ ಅನುಗ್ರಹಿಸಿರುವ
ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳನ್ನು ಪಾಠಪ್ರವಚನಾದಿಗಳಲ್ಲಿ ಅಳವಡಿಸಿಕೊಳ್ಳುವ
ಮೂಲಕ, ಅವುಗಳಿಗೆ ಟೀಕೆಟಿಪ್ಪಣೆಗಳನ್ನು ರಚಿಸುವಮೂಲಕ ಹೇಗೋ ಹಾಗೆ
ಸರ್ವಮೂಲಗ್ರಂಥಗಳಲ್ಲಿ ಪ್ರಸ್ತುತಗಳಾದ ಸಂದೇಶಗಳನ್ನು, ವಿಚಾರಗಳನ್ನು, ಪ್ರಮಾಣಗಳನ್ನು
ಬೇರೆ ಬೇರೆ ಶಾಸ್ತ್ರಗ್ರಂಥಗಳ ಸಂದರ್ಭಗಳಲ್ಲೂ ಬಳಸಿಕೊಂಡು ವಿಶಿಷ್ಟ ಬೆಳಕನು
ಪಡೆಯುವಂತಹದ್ದೂ ಸರ್ವಮೂಲಗ್ರಂಥಗಳ ಒಂದು ಬಗೆಯ ವೈಚಾರಿಕ ಪ್ರಚಾರ. ಇದು ಶ್ರೀ
ವಿದ್ಯೇಶತೀರ್ಥರಿಂದ ಪ್ರವಚನಗಳಲ್ಲಿ ಬರವಣಿಗೆಯಲ್ಲಿ ವಿಶೇಷವಾಗಿ ನಡೆದಿದೆ.
ಈ ಬಗೆಯ ವಿಶಿಷ್ಟ ಕೃಷಿಕಾರ್ಯದ ಪರಿಚಯವೇ 'ಸುವರ್ಣಸಂದೇಶ'ದ ಸದುದ್ದೇಶ.
ಹೀಗೆ ಶ್ರೀಪಾದರ ವೈಚಾರಿಕ ವ್ಯಕ್ತಿತ್ವದ
ಪರಿಚಯದ ಜೊತೆಗೆ ಅವರ ಆಧ್ಯಾತ್ಮಿಕ, ಧಾರ್ಮಿಕ ಹಾಗೂ ಭಾವುಕತನದ ವ್ಯಕ್ತಿತ್ವವನ್ನು
ಪರಿಚಯಿಸಿಕೊಡುವುದಕ್ಕಾಗಿ ಅವರ ಮೂಲಕ ನೆಡೆದ ಆಯಾ ಕ್ಷೇತ್ರಕ್ಕೆ ಸಂಬಂಧಿಸುವ
ಸಾಧನೆಗಳನ್ನೂ ಇಲ್ಲಿ ಸಂಗ್ರಹಿಸಲಾಗಿದೆ.
ಈ ಮೂಲಕ ಒಬ್ಬ ಪ್ರಾಮಾಣಿಕ ಸಾಧಕನ
ಸಾಧನ್ಗಳನ್ನು ಹರಿಗುರುಗಳಲ್ಲಿ ಸಮರ್ಪಿಸಿದಂತಾಗುವುದಲ್ಲದೆ, ಉಳಿದ ಸಾಧಕರಿಗೂ ಒಂದಿಲ್ಲ
ಒಂದು ಅಂಶದಲ್ಲಿ ಸ್ಫೂರ್ತಿಪ್ರದವೆನಿಸಬಹುದಾಗಿದೆ.
ಈ ಉದ್ದೇಶದಿಂದಲೇ 'ಸುವರ್ಣಸಂದೇಶ'
ಕೃತಿಯ ಮೂಲೋದ್ದೇಶಕ್ಕೆ ಪೂರಕ ವಾಗುವಂತೆ ಕವಚ ಪುಟಗಳ ನಿರ್ಮಾಣವನ್ನು ಮಾಡಲಾಗಿದೆ.
ಸಾಧಕರು ಈ ಎಲ್ಲ ಉದ್ದೇಶಗಳನ್ನು ಅರಿತು,
ಈ ಕೃತಿ ಸಾರ್ಥಕಗೊಳ್ಳುವಂತೆ ಉಪಯೀಗಿಸಿಕೊಳ್ಳಬಲ್ಲರೆಂದು ನಿರೀಕ್ಷಿಸಲಾಗಿದೆ.
ಕೃತಜ್ಞತೆಗಳು:
ತಮ್ಮ ಸಂದೇಶಗಳನ್ನು ಸಂಗ್ರಹಿಸಿ ಪ್ರಕಟಿಸಲು ಅನುಮತಿ ನೀಡಿ ಅನುಗ್ರಹಿಸಿದ ಶ್ರೀ ಶ್ರೀ ವಿದ್ಯೇಶತೀರ್ಥರಿಗೆ.