ಸುವರ್ಣಸಂದೇಶ
ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥರ
ಸುವರ್ಣ ಜಯಂತಿ ಉತ್ಸವದ ಹಾಗೂ ಪೀಠಾರೋಹಣ ರಜತೋತ್ಸವದ
ಸವಿನೆನಪಿಗಾಗಿ ಪೋಣಿಸಲ್ಪಟ್ಟ ಅವರ ಸಂದೇಶಗಳ ಸಂಗ್ರಹ

"ಓಂ ಕ್ರತೋ ಸ್ಮರ ಕೃತಂ ಸ್ಮರ"

ಮೂಲ - ಶ್ರೀ ಶ್ರೀ ವಿದ್ಯೇಶತೀರ್ಥರು
ಭಂಡಾರಕೇರಿ ಮಠ, ಬಾರ್ಕೂರು, ಉಡುಪಿ

ಸಂಗ್ರಹ - ಸಂಪಾದನೆ - ಸಗ್ರಿ ರಾಘವೇಂದ್ರ ಉಪಾಧ್ಯಾಯ

ಪರವಿದ್ಯಾಪ್ರಕಾಶನ
'ಶಮ್ಯಾಪ್ರಾಸ' ಮೂಡಸಗ್ರಿ

ಪರಿಶಿಷ್ಟ - ೨
ಸುವರ್ಣಜಯಂತ್ಯುತ್ಸವ ಹಾಗೂ ಪೀಠಾರೋಹಣ ರಜತೋತ್ಸವಗಳ ಸಂಭ್ರಮದಲ್ಲಿರುವ
ಶ್ರೀ ಶ್ರೀ ವಿದ್ಯೇಶತೀರ್ಥರ ಜೀವನದ ಮಹತ್ತ್ವದ ಘಟನೆಗಳು ಹಾಗೂ ಸಾಧನೆಗಳು


ತಂದೆ ತಾಯಿ
ಹುಟ್ಟಿದ ಊರು,ಶುಭದಿನ ಮತ್ತು ಪೂರ್ವಾಶ್ರಮದ ಹೆಸರು
ಪೂರ್ವಾಶ್ರಮದ ವಿದ್ಯಾಭ್ಯಾಸ
ಪದವಿ ಪುರಸ್ಕಾರಗಳು
ಸಂನ್ಯಾಸ ಸ್ವೀಕಾರ
ಉನ್ನತ ವ್ಯಾಸಂಗ
ಸಹಾಧ್ಯಾಯಿಗಳು
ಶ್ರೀಮನ್ನ್ಯಾಯ ಸುಧಾ ಮಂಗಳ
ಪ್ರಥಮ ಸುಧಾ ಪ್ರವಚನ ಮಂಗಳೋತ್ಸವ
ಕಾಶಿಯಲ್ಲಿ ಪ್ರೌಢಗ್ರಂಥಗಳ ಅಧ್ಯಯನ
ಗಯಾದಲ್ಲಿ ಚಾತುರ್ಮಾಸ್ಯ
ಭಾಗವತನಿಕೇತ' ದ ಉದ್ಘಾಟನೆ
ಮೈಸೂರಿನಲ್ಲಿ ಭಾಗವತಾಶ್ರಮದ ಶಾಖೆ
ಗುರುಗಳ ವಿಯೋಗ
ಬಾರ್ಕೂರಿನಲ್ಲಿ ವೃಂದಾವನ ನವೀಕರಣ ಹಾಗೂ ಪ್ರತಿಷ್ಠೆ
ಉಡುಪಿಯಲ್ಲಿ ವಜ್ರ ಮಹೋತ್ಸವ ಸ್ಮಾರಕ ಭವನ
ಪೂರ್ಣಪ್ರಜ್ಞಜ್ಞಾನ ಸೇವಾನಿಧಿ
ವೇದವ್ಯಾಸ ಜಯಂತಿ ಯ ಆವಿಷ್ಕಾರ
ಮಾಧ್ವ ರಾದ್ಧಾಂತ ಸಂವರ್ಧಕ ಸಭೆಯ ೫೬ ನೆಯ ಅಧಿವೇಶನ
ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ ಪ್ರಶಸ್ತಿ ಹಾಗೂ ಭಂಡಾರಕೇರಿ ರಾಜಹಂಸ ಪ್ರಶಸ್ತಿ
ಮಾಧ್ವ ರಾದ್ಧಾಂತ ಸಂವರ್ಧಕ ಸಬೆಯ ವಜ್ರ ಮಹೋತ್ಸವದ ವೈಭವ
ಮಾತೃ ವಿಯೋಗ
ಶ್ರೀಪಾದರ ಕೃತಿಗಳು
ಶ್ರೀಪಾದರ ಸುವರ್ಣ ಜಯಂತಿ ಹಾಗೂ ಪೀಠಾರೋಹಣ ರಜತ ಮಹೋತ್ಸವದ ವೈಭವ

ತಂದೆ ತಾಯಿ:

        ಪಡುತೋನ್ಸೆಯ ಶ್ರೀ ಪೂರ್ಣ ಭಟ್ಟರು ಹಾಗೂ ಶ್ರೀಮತಿ ವೇದವತಿ
       
ಹುಟ್ಟಿದ ಊರು,ಶುಭದಿನ ಮತ್ತು ಪೂರ್ವಾಶ್ರಮದ ಹೆಸರು:
 
        ಉಡುಪಿಯ ಹತ್ತಿರ ಕಲ್ಯಾಣಪುರ, ೬.೭.೧೯೫೪, ಹರೇಕೃಷ್ಣ ಭಟ್

ಪೂರ್ವಾಶ್ರಮದ ವಿದ್ಯಾಭ್ಯಾಸ:

        ಐದನೆಯ ತರಗತಿಯವರೆಗೆ ಲೌಕಿಕ ವಿದ್ಯಾಭ್ಯಾಸ ನಡೆಸಿ, ಬಳಿಕ ಶ್ರೀ ವಿಶ್ವೇಶ ತೀರ್ಥರ ಎರಡನೇ ಪರ್ಯಾಯಾವಧಿಯಲ್ಲಿ, (೧೯೬೮-೧೯೭೦) ಹಾಗೂ ವಿದ್ಯಾಮಾನ್ಯ ತೀರ್ಥರ ಪ್ರಥಮ ಪರ್ಯಾಯಾವಧಿಯಲ್ಲಿ (೧೯೭೦-೧೯೭೨) ಶ್ರೀ ಕೃಷ್ಣ ಮುಖ್ಯಪ್ರಾಣರ ಸನ್ನಿಧಿಯಲ್ಲಿ ವೇದ ಸಂಸ್ಕೃತಾದಿಗಳ ಅಧ್ಯಯನ. ಆ ಅವಧಿಯಲ್ಲೇ ಉಡುಪಿ ಸಂಸ್ಕೃತ ಮಹಾವಿದ್ಯಾಲಯದಲ್ಲೂ ಕಿಂಚಿತ್ ಅಧ್ಯಯನ. ಬಳಿಕ ೧೯೮೦ ರ ವರೆಗೆ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮೂರನೇ ತರಗತಿಗೆ ಸೇರಿ ಕಾವ್ಯ, ವ್ಯಾಕರಣ, ತರ್ಕ, ವೇದಾಂತಗಳ ಅಧ್ಯಯನ. ಶ್ರೀ ವಿಶ್ವೇಶತೀರ್ಥರಲ್ಲಿ ಒಂದು ವರ್ಷದ ಸುಧಾಧ್ಯಯನ.

ಪದವಿ ಪುರಸ್ಕಾರಗಳು:
ಸಂನ್ಯಾಸ ಸ್ವೀಕಾರ:

        ೨೧-೪-೧೯೮೦ ರಂದು ಬಾರಕೂರಿನಲ್ಲಿರುವ ಭಂಡಾರಕೇರಿ ಮಠದಲ್ಲಿ ಶ್ರೀ ಶ್ರೀವಿದ್ಯಾಮಾನ್ಯ ತೀರ್ಥರಿಂದ ಸಂನ್ಯಾಸವನ್ನು ಸ್ವೀಕರಿಸಿ, ವಿದ್ಯೇಶತೀರ್ಥರೆಂಬ ನಾಮಾಂಕಿತದಿಂದ ಭಂಡಾರಕೇರಿ ಮಠದ ೩೪ ನೆಯ ಯತಿಯಾಗಿ ನಿಯೋಜನೆ.

ಉನ್ನತ ವ್ಯಾಸಂಗ:

        ಅದಮಾರಿನ ಆದರ್ಶ ಗುರುಕುಲದಲ್ಲಿ ೧೯೮೦ ರಿಂದ ೧೯೮೪ ರವರೆಗೆ ಶ್ರೀ ವಿದ್ಯಾಮಾನ್ಯ ತೀರ್ಥರಿಂದ ಶ್ರೀಮನ್ನ್ಯಾಯಸುಧಾ, ವ್ಯಾಸತ್ರಯ ಹಾಗೂ ನ್ಯಾಯಶಾಸ್ತ್ರದ ಉದ್ಗ್ರಂಥಾದಿಗಳ ಅಧ್ಯಯನ. ಅದೇ ಅವಧಿಯಲ್ಲಿ ಗುರುಕುಲದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ.

ಸಹಾಧ್ಯಾಯಿಗಳು:

        ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರು, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥರು, ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥರು.

ಶ್ರೀಮನ್ನ್ಯಾಯ ಸುಧಾ ಮಂಗಳ:

        ೧-೨-೧೯೮೪ ರಂದು ಶ್ರೀ ವಿದ್ಯಾಮಾನ್ಯತೀರ್ಥರಲ್ಲಿ ನಡೆಸಿದ ಶ್ರೀಮನ್ನ್ಯಾಯ ಸುಧಾ ಗ್ರಂಥಾಧ್ಯಯನದ ಮಂಗಳೋತ್ಸವ, ಅದಮಾರಿನಲ್ಲಿ ಸಹಾಧ್ಯಾಯಿಗಳೊಂದಿಗೆ.

ಪ್ರಥಮ ಸುಧಾ ಪ್ರವಚನ ಮಂಗಳೋತ್ಸವ:

        ಶ್ರೀ ಶ್ರೀವಿದ್ಯಾಮಾನ್ಯ ತೀರ್ಥರ ದ್ವಿತೀಯ ಪರ್ಯಾಯಾವಧಿಯಲ್ಲಿ ಉಡುಪಿ ಶ್ರೀ ಕೃಷ್ಣನ ಸನ್ನಿಧಿಯಲ್ಲಿ ಎರಡು ವರ್ಷಗಳಕಾಲ ನಾರಾಯಣ ಮತ್ತು ರಾಘವೇಂದ್ರತಂತ್ರಿ ಇವರಿಗೆ ನಡೆಸಿದ ಶ್ರೀ ಮನ್ನ್ಯಾಯ ಸುಧಾ ಪ್ರವಚನದ ಮಂಗಳೋತ್ಸವ ೧೦-೧-೧೯೮೮ ರಂದು ಶ್ರೀಕೃಷ್ಣ ಮುಖ್ಯಪ್ರಾಣರ ಸನ್ನಿಧಿಯಲ್ಲಿ; ಗುರುಗಳ ಸಮ್ಮುಖದಲ್ಲಿ.

ಕಾಶಿಯಲ್ಲಿ ಪ್ರೌಢಗ್ರಂಥಗಳ ಅಧ್ಯಯನ:

        ೧೯೮೪ ರಿಂದ ಒಂದೂವರೆ ವರ್ಷಗಳ ಕಾಲ ಕಾಶಿಯಲ್ಲಿ ವಿದ್ವದ್ವರೇಣ್ಯರ ಮೂಲಕ ಮೀಮಾಂಸಾ ಶಸ್ತ್ರ ಹಾಗೂ ನ್ಯಾಯಶಾಸ್ತ್ರಗಳ ಕೋಟಿ ಕ್ರಮದ ಪದ್ಧತಿಯ ಅಧ್ಯಯನ.

ಗಯಾದಲ್ಲಿ ಚಾತುರ್ಮಾಸ್ಯ:

        ೧೯೯೪ ರಲ್ಲಿ ಗಯಾದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವರು.

ಭಾಗವತನಿಕೇತ' ದ ಉದ್ಘಾಟನೆ:

        ೧೯೯೫ ರಲ್ಲಿ ಹತ್ತು ಲಕ್ಷಗಳ ವಿನಿಯೋಗದಲ್ಲಿ ಭಾಗವತ ನಿಕೇತ ಭವನದ ಉದ್ಘಾಟನೆ.

ಮೈಸೂರಿನಲ್ಲಿ ಭಾಗವತಾಶ್ರಮದ ಶಾಖೆ

        ೧೯೯೭ ರಲ್ಲಿ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ ಭಾಗವತಾಶ್ರಮದ ಶಾಖೆಯ ಸ್ಥಾಪನೆ ನಡೆದಿದೆ.

ಗುರುಗಳ ವಿಯೋಗ:

        ಶ್ರೀ ಪಾದರ ಆಶ್ರಮ ಗುರುಗಳೂ, ವಿದ್ಯಾಗುರುಗಳೂ ಆಗಿದ್ದ ಶ್ರೀ ಶ್ರೀ ವಿದ್ಯಾಮಾನ್ಯ ತೀರ್ಥರು ೧೪-೫-೨೦೦೦ ದಂದು ಮಹಾಪ್ರಸ್ಥಾನ ಕೈಗೊಂಡಿದ್ದು , ಆಪ್ರಯುಕ್ತ ಅಂದಿನಿಂದ ಗುರುಗಳ ವಿಯೋಗಕ್ಕೆ ಒಳಗಾಗಿದ್ದರು.

ಬಾರ್ಕೂರಿನಲ್ಲಿ ವೃಂದಾವನ ನವೀಕರಣ ಹಾಗೂ ಪ್ರತಿಷ್ಠೆ:

        ೨೦೦೧ ರಲ್ಲಿ ಬಾರ್ಕೀರಿನ ಭಂಡಾರಕೇರಿ ಮಠದಲ್ಲಿ ಶ್ರೀ ಸುರೋತ್ತಮ ತೀರ್ಥ ವೃದಾವನದ ನವೀಕರಣ್ ಹಾಗೂ ಶ್ರೀ ವಿದ್ಯಾಮಾನ್ಯ ತೀರ್ಥರ ಮೃತ್ತಿಕಾ ವ್ರ್‍ಂದಾವನದ ಪ್ರತಿಷ್ಠೆ ನಡೆದಿದೆ.
       
ಉಡುಪಿಯಲ್ಲಿ ವಜ್ರ ಮಹೋತ್ಸವ ಸ್ಮಾರಕ ಭವನ:

        ಭಂಡರಕೇರಿ ಮಠದ ಮೂಲಗುರುಗಳಾದ ಅಚ್ಯುತ ಪ್ರೇಕ್ಷಾಚಾರ್ಯರ ತಾಣ ಎಂದು ಪ್ರಸಿದ್ಧವಾದ ಉಡುಪಿ ಭಂಡಾರಕೇರಿ ಮಠದ ನಿವೇಶನದಲ್ಲಿ ೨೦೦೩ ರಂದು ನಧ್ವರಾದ್ಧಾಂತ ಸಂವರ್ಧಕ ಸಭೆಯ ವಜ್ರ ಮಹೋತ್ಸವ ಸ್ಮಾರಕವಾಗಿ 'ವಿದ್ಯಾಮಾನ್ಯ ವಿಜ್ಞಾನ ಭವನ' ೩೦ ಲಕ್ಷ ರೂ. ವೆಚ್ಚದಲ್ಲಿ ಭವ್ಯಭವನವನ್ನು ನಿರ್ಮಿಸಲಾಗಿದೆ.

ಪೂರ್ಣಪ್ರಜ್ಞಜ್ಞಾನ ಸೇವಾನಿಧಿ:

        ೧೯೯೫ ಇಸವಿಯಲ್ಲಿ ಒಂದು ಲಕ್ಷ ರೂ. ಮಊಲ ನಿಧಿಯನ್ನಿಟ್ಟು 'ಪೂರ್ಣಪ್ರಜ್ಞ ಜ್ಞಾನ ಸೇವಾ ನಿಧಿ' ಯನ್ನು ಸ್ಠಾಪಿಸಿ, ಅದರ ಮೂಲಕ ತತ್ತ್ವ ಪ್ರಸಾರ ನಡೆಸಲಾಗುತ್ತಿದೆ.

ವೇದವ್ಯಾಸ ಜಯಂತಿ ಯ ಆವಿಷ್ಕಾರ:

        ೧೯೯೬ ರಿಂದ ಪ್ರತಿವರ್ಷ ವೈಶಾಖ ಶುಕ್ಲ ದ್ವಾದಶಿಯಂದು ವೇದವ್ಯಾಸ ಜಯಂತಿಯನ್ನು ಆಚರಿಸುತ್ತ ವೇದವ್ಯಾಸ ಜಯಂತಿಯ ಆಚರಣೆ ಮೇಲ್ಪಂಕ್ತಿ ಹಾಕಿ ಕೊಟ್ಟಂತಾಗಿದೆ. ಈ ಪ್ರಯುಕ್ತ ಮೂರು ದಿನಗಳ, ಏಳು ದಿನಗಳ ಸಭೆ ನಡೆಸಿ, ಅದರಲ್ಲಿ ಶ್ರೀ ಪಾದರುಗಳ, ವಿದ್ವಾಂಸರ ಪ್ರವಚನಗಳು, ವಾಕ್ಯಾರ್ಥ ಗೋಷ್ಠಿಗಳು, ಕೃತಿಗಳ ಬಿಡುಗಡೆ, ಗುರುಗಳಿಗೆ ತುಲಾಬಾರ, ವೇದವ್ಯಾಸ ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಮಾಧ್ವ ರಾದ್ಧಾಂತ ಸಂವರ್ಧಕ ಸಭೆಯ ೫೬ ನೆಯ ಅಧಿವೇಶನ:

        ೨೦೦೧ ನೆಯ ಇಸವಿಯಲ್ಲಿ ಎಪ್ರಿಲ್ ೨೫,೨೬ ಹಾಗೂ ೨೭ ರಂದು ಬಾರಕೂರಿನ ಭಂಡಾರಕೇರಿ ಮಠದಲ್ಲಿ ಮಾಧ್ವರಾದ್ಧಾಂತ ಸಂವರ್ಧಕ ಸಭೆಯ ೫೬ ನೆಯ ಅಧಿವೇಶನ ನಡೆಯಿತು. ಸುಮಾರು ೩೨ ವಿದ್ವಾಂಸರು ಪ್ರವಚನ ನೀಡಿದ್ದರು.

ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ ಪ್ರಶಸ್ತಿ ಹಾಗೂ ಭಂಡಾರಕೇರಿ ರಾಜಹಂಸ ಪ್ರಶಸ್ತಿ:

        ತಮ್ಮ ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಸವಿನೆನಪಿಗಾಗಿ ೨೦೦೦ ನೆಯ ಇಸವಿಯಿಂದ ಪ್ರತಿವರ್ಷ ಇಬ್ಬರು ವಿದ್ವಾಂಸರಿಗೆ ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ ಪ್ರಶಸ್ತಿ ಹಾಗೂ ಬಂಡಾರಕೇರಿ ರಾಜಹಂಸ ಪ್ರಶಸ್ತಿಗಳನ್ನು ನೀಡಿ ಅನುಗ್ರಹಿಸಲಾಗಿದೆ. ೨೦೦೧ ನೆಯ ಇಸವಿಯಲ್ಲಿ ವಿದ್ವಾನ್ ಹಯವದನ ಪುರಾಣಿಕರಿಗೆ ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ ಪ್ರಶಸ್ತಿಯನ್ನು ೨೦೦೨ ನೆಯ ಇಸವಿಯಲ್ಲಿ ವಿದ್ವಾನ್ ಪ್ರಭಂಜನಾಚಾರ್ಯರಿಗೆ ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ ಪ್ರಶಸ್ತಿಯನ್ನೂ, ವಿದ್ಯಾರತ್ನಾಕರ ಬನ್ನಂಜೆ ಗೋವಿಂದಾಚಾರ್ಯರಿಗೆ ಭಂಡಾರಕೇರಿ ರಾಜಹಂಸ ಪ್ರಶಸ್ತಿಯನ್ನೂ ೨೦೦೩ ರಲ್ಲಿ, ವುದ್ವಾನ್ ಪ್ರಹ್ಲಾದಾಚಾರ್ಯರಿಗೆ ವಿದ್ಯಾಮಾನ್ಯವಿಜ್ಞಾನ ಭಾಸ್ಕರ ಪ್ರಶಸ್ತಿಯನ್ನೂ, ವಿದ್ವಾನ್ ಶೇಷಗಿರಿ ಆಚಾರ್ಯರಿಗೆ ಭಂಡಾರಕೇರಿ ರಾಜಹಂಸ ಪ್ರಶಸ್ತಿಯನ್ನೂ, ೨೦೦೪ ನೆಯ ಇಸವಿಯಲ್ಲಿ ಡಾ.ಬಿ.ಎನ್.ಕೆ ಶರ್ಮಾ ಇವರಿಗೆ ಭಂಡರಕೇರಿ ರಾಜಹಂಸ ಪ್ರಶಸ್ತಿಯನ್ನೂ, ಪ್ರೊ.ಕೆ.ಟಿ.ಪಾಂಡುರಂಗ ಇವರಿಗೆ ವಿದ್ಯಾಮಾನ್ಯ ವಿಜ್ಞಾನ ಭಾಸ್ಕರ ಪ್ರಶಸ್ತಿಯನ್ನೂ, ೨೦೦೫ ರಲ್ಲಿ ಹುಣಸಗಿ ರಾಮಾಚಾರ್ಯರಿಗೆ ಶ್ರೀ ಭಂಡಾರಕೇರಿ ರಾಜಹಂಸ ಪ್ರಶಸ್ತಿಯನ್ನೂ, ಶ್ರೀ ಪಂಡರಿನಾಥಾಚಾರ್ಯ ಗಲಿಗಲಿ ಇವರಿಗೆ ಶ್ರೀ ರಾಜ ವಿದ್ಯಾಮಾನ್ಯ ಪ್ರಸಸ್ತಿಯನ್ನೂ ನೀಡಿ ಅನುಗ್ರಹಿಸಲಾಗಿದೆ.
        ಪ್ರಶಸ್ತಿಯ ಅಂಗವಾಗಿ ೨೫ ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಬೆಳ್ಳಿಅಯ ತಂಬಿಗೆ, ಜರೀ ಶಾಲು ಇತ್ಯಾದಿಗಳನ್ನು ನೀಡಲಾಗಿದೆ.

ಮಾಧ್ವ ರಾದ್ಧಾಂತ ಸಂವರ್ಧಕ ಸಬೆಯ ವಜ್ರ ಮಹೋತ್ಸವದ ವೈಭವ:

        ೨೦೦೩ ರಲ್ಲಿ ಮಾಧ್ವ ರಾದ್ಧಾಂತ ಸಂವರ್ಧಕ ಸಭೆಯ ವಜ್ರ ಮಹೋತ್ಸವವನ್ನು ಬೆಂಗಳೂರಿನ ಗಿರಿನಗರದ ವಿಜ್ಞಾನ ಭಾರತಿ ಪ್ರೌಢಶಾಲೆಯ ಆವರಣದಲ್ಲಿ ೮-೫-೨೦೦೩ ರಿಂದ ೧೪-೫-೨೦೦೩ ರ ವರೆಗೆ ನಡೆದಿದ್ದು, ಆ ಸಂದರ್ಭದಲ್ಲಿ ೬೦ ವಿದ್ವಾಂಸರನ್ನುಬೇರೆ ಬೇರೆ ಬಿರುಉ ನೀಡಿ ಸಮ್ಮಾನಿಸಲಾಗಿದೆ.
       
ಮಾತೃ ವಿಯೋಗ:

        ೧೪-೯-೨೦೦೫ ರಂದು ಶ್ರೀ ಪಾದರಿಗೆ ಮಾತೃಶ್ರೀ ವೇದಾವತಿ ಇವರ ವಿಯೋಗ.

ಶ್ರೀಪಾದರ ಕೃತಿಗಳು:

        'ಗೀತಾರ್ಥ ವೈಭವ', 'ವಾಸುದೇವನಲ್ಲಿ ಗೀತಾ ಕಟಾಕ್ಷ', ಮುಂತಾದ ಗೀತೆಯ ಬಗ್ಗೆ, 'ಗಾಯತ್ರೀ ಹೃದಯ', 'ಗಾಯತ್ರ್ಯಲ್ಲಿ ಅಧ್ಯಾತ್ಮ ದೀಪ' ಮುಂತಾದ ಗಾಯತ್ರಿಯ ಬಗ್ಗೆ, 'ಕಠ ತತ್ತ್ವ ಕೌಸ್ತುಭ', 'ಕಾಠಕ ತತ್ತ್ವ ಮಾಲಾ' ಇತ್ಯಾದಿ ಉಪನಿಷತ್ತುಗಳ ಬಗ್ಗೆ, 'ಭಾಗವತ ಬೆಳಗಿದ ವೇದಾಂತ ದೀಪಾವಳಿ', 'ಭಾಗವತ ರಸ ಸಂದೇಶ' ಇತ್ಯಾದಿ ಭಾಗವತದ ಬಗ್ಗೆ, 'ಹರಿತತ್ತ್ವ ಚೂಡಾಮಂಇ' ಎಂಬ ಮಹಾಭಾರತದ ಬಗ್ಗೆ, 'ಗುರಿ ಇಲ್ಲದ ದಾರಿ', 'ಭಗವಂತನ ನೈರ್ಗುಣ್ಯ ನಿರಾಕರಣೆ' ಇತ್ಯಾದಿ ವೇದಾಂತದ ಪ್ರಮುಖ ಪ್ರಮೇಯದ ಬಗ್ಗೆ 'ಶಿವಾರಾತ್ರಿ ರಹಸ್ಯ' ಎಂಬ ಶಿವರಾತ್ರಿಯ ಬಗ್ಗೆ - ಹೀಗೆ ಸುಮಾರು ೧೮ ಕೃತಿಗಳು ಶ್ರೀ ಪಾದರಿಂದ ಬೆಳಕು ಕಂಡಿವೆ.

ಶ್ರೀಪಾದರ ಸುವರ್ಣ ಜಯಂತಿ ಹಾಗೂ ಪೀಠಾರೋಹಣ ರಜತ ಮಹೋತ್ಸವದ ವೈಭವ :

        ೩೧-೧೨-೨೦೦೫ ರಂದು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಶ್ರೀ ಶ್ರೀ ವಿಶ್ವೇಶತೀರ್ಥರ ಮಹಾಧ್ಯಕ್ಷತೆಯಲ್ಲಿ ಶ್ರೀ ಪಾದರ ಸುವರ್ಣ ಜಯಂತ್ಯುತ್ಸವವೂ, ಪೀಠಾರೋಹಣ ರಜತ ಮಹೋತ್ಸವವೂ ವಿಜೃಂಭಣೆಯಿಂದ ಜರುಗಿತು. ಶ್ರೀ ಪಾದರ ಸಾಧನೆಗಳ ಬಗ್ಗೆ, ಜೀವನ ಘಟನೆಗಳ ಬಗ್ಗೆ ಬೆಳಕು ಚೆಲ್ಲುವ 'ಹರಿಮೇಧಾ' ಎಂಬ ಸ್ಮರಣ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.

''ಕ್ಷೇಮಂ ನ ವಿಂದತಿ ವಿನಾ ಯದರ್ಪಣಂ
ತಸ್ಮೈ ಸುಭದ್ರಶ್ರವಸೇ ನಮೋನಮಃ''