ಸುವರ್ಣಸಂದೇಶ
ಭಂಡಾರಕೇರಿ ಮಠದ ಶ್ರೀ ಶ್ರೀ ವಿದ್ಯೇಶತೀರ್ಥರ
ಸುವರ್ಣ ಜಯಂತಿ ಉತ್ಸವದ ಹಾಗೂ ಪೀಠಾರೋಹಣ ರಜತೋತ್ಸವದ
ಸವಿನೆನಪಿಗಾಗಿ ಪೋಣಿಸಲ್ಪಟ್ಟ ಅವರ ಸಂದೇಶಗಳ ಸಂಗ್ರಹ

"ಓಂ ಕ್ರತೋ ಸ್ಮರ ಕೃತಂ ಸ್ಮರ"

ಮೂಲ - ಶ್ರೀ ಶ್ರೀ ವಿದ್ಯೇಶತೀರ್ಥರು
ಭಂಡಾರಕೇರಿ ಮಠ, ಬಾರ್ಕೂರು, ಉಡುಪಿ

ಸಂಗ್ರಹ - ಸಂಪಾದನೆ - ಸಗ್ರಿ ರಾಘವೇಂದ್ರ ಉಪಾಧ್ಯಾಯ

ಪರವಿದ್ಯಾಪ್ರಕಾಶನ
'ಶಮ್ಯಾಪ್ರಾಸ' ಮೂಡಸಗ್ರಿ

ಶ್ರೀ ಶ್ರೀ ವಿದ್ಯೇಶತೀರ್ಥರ
ಲೇಖನಿಯ ಸಾಧನೆ

''....ಸತ್ಯತೀರ್ಥ ಇಹ ಭಾಷ್ಯಮಾಲಿಖತ್' ಎಂದು ಮಧ್ವ ವಿಜಯದಲ್ಲಿ ೯-೧೩, ಉಲ್ಲೇಖ ಗೊಂಡಿರುವಂತೆ ಶ್ರೀ ಮಧ್ವಗುರುಗಳ ಸೂತ್ರ ಭಾಷ್ಯವನ್ನು ಲಿಪಿಬದ್ಧಗೊಳಿಸಿದ ಭಾಗ್ಯಶಾಲಿಗಳು ಶ್ರೀಸತ್ಯತೀರ್ಥರು. ಭಂಡಾರಕೇರಿ ಮಠದ ಮೂಲಯತಿಗಳಾಗಿರುವ ಅವರ ಆ ಬಗೆಯ ವಾಙ್ಮಯ ಸೇವೆಯ ಫಲವಾಗಿಯೇ ಅವರ ಪರಂಪರೆಯಲ್ಲಿಯೇ ಬಂದಿರುವ ಶ್ರೀ ಶ್ರೀ ವಿದ್ಯೇಶತೀರ್ಥರಿಂದ ಅನಿತರಸಾಧಾರಣವಾದ ಬರವಣಿಗೆಯ ಸೇವೆಯನ್ನು ಹರಿಗುರುಗಳು ಮಾಡಿಸಿಕೊಳ್ಳಿತ್ತಿರುವರೋ.! ''


ಪರಿಶಿಷ್ಟ - ೧
ಶ್ರೀ ಶ್ರೀ ವಿದ್ಯೇಶತೀರ್ಥರ ಕೃತಿಗಳ ಸಮಾಲೋಚನೆ

        ಶ್ರೀ ವೇದವ್ಯಾಸರನ್ನು ಪಾಠಪ್ರವಚನಗಳ ಮುಲಕ, ವಿದ್ವಾಂಸರನ್ನು ಸಮ್ಮಾನಿಸುವ ಮೂಲಕ ಹೇಗೋ ಹಾಗೆ ಶ್ರೀ ವೇದವ್ಯಾಸರ ಕೃತಿಗಳ ಬಗ್ಗೆ ಬೆಳಕುಚೆಲ್ಲುವ ಕೃತಿಗಳನ್ನು ನಿರ್ಮಿಸುವ ಮೂಲಕವೂ ಶ್ರೀ ವಿದ್ಯೇಶತೀರ್ಥರು ಪೂಜಿಸಿರುವರು.

ಹೊರಹೊಮ್ಮಿರುವ ಕೃತಿಗಳು
ನಾಳಿಕೇರಪಾಕ
        ಸರ್ವಮೂಲದ ಮಾತುಗಳ, ಸಂದೇಶಗಳ ಆಧಾರದಲ್ಲಿಯೇ ಹೊಸ ಹೊಸ ವಿಚಾರಗಳ ಆವಿಷ್ಕಾರ, ದುರ್ಮತವಿಚಾರಗಳ ನಿರಾಕರಣೆ ಇವನ್ನು ಹೆಚ್ಚಾಗಿ ನಡೆಸಲಾಗುವ ಈ ಕೃತಿಗಳಲ್ಲಿ ನಾಳಿಕೇರಪಾಕದ ಅಳವಡಿಕೆ ಅನಿವಾರ್ಯ.
        ಆದ್ದರಿಂದಲೇ ಈ ಕೃತಿಗೆ ಶಾಸ್ತ್ರದಲ್ಲಿ ಈಗಾಗಲೇ ಪ್ರವೇಶಮಾಡಿ ಪ್ರಾಥಮಿಕ ಶಾಸ್ತ್ರೀಯ ಪರಿಚಯ ಪಡೆದುಕೊಂಡಿರುವ ಜಿಜ್ಞಾಸುಗಳೇ ಮುಖ್ಯ ಅಧಿಕಾರಿಗಳು, ಹೊರತು ಶಾಸ್ತ್ರವನ್ನು ಒಳಹೊಕ್ಕದೆ ಹೊರಗಿನಿಂದಲೇ ಶಾಸ್ತ್ರದ ಸಂದೇಶಗಳನ್ನು - 'ದ್ರಾಕ್ಷಾಪಾಕಕ್ಕೊಳಪಡಿಸಿ ಬಡಿಸಿಕೊಳ್ಳಲು ಬಯಸುವ ಜಿಜ್ಞಾಸುಗಳು ಮುಖ್ಯಾಧಿಕಾರಿಗಳೆನಿಸಲಾರರು.
        ಯಾವ ಕೃತಿಯೂ ಸರ್ವಾಧಿಕಾರಿಕ ಎನಿಸಲಾರದು ತಾನೇ?
ಕೃತಿಗಳ ವೈಶಿಷ್ಟ್ಯಗಳು
ಸೌಹಾರ್ದದ ಸೂಚನೆಗಳು
        ಈ ನಿಟ್ಟಿನಲ್ಲಿ ಶಬ್ದಗಳ ವಾಕ್ಯಗಳ ಪ್ರಯೋಗದಲ್ಲಿಯ ಪರಿಷ್ಕಾರದೊಂದಿಗೆ ಇನ್ನೂ ಕೆಲವು ಕ್ರಮಗಳನ್ನು ಅಳವಡಿಸಿಕೊಳ್ಳಬಹುದು -
ಕೃತಿಪರಿಚಯ
        ಹೀಗೆ ಶ್ರೀ ವಿದ್ಯೇಶತೀರ್ಥರ ಸುಮಾರು ಇಪ್ಪತ್ತು ಕೃತಿಗಳ ಬಗ್ಗೆ ಸ್ಥೂಲ ಮಾಹಿತಿಯನ್ನು ಪಡೆದುಕೊಂಡ ಬಳಿಕ ಪ್ರತಿಯೊಂದು ಕೃತಿಯನ್ನೂ ಅದರ ವಿಷಯಾದಿಗಳ ವಿವರದೊಂದಿಗೆ ಪರಿಚಯಿಸಿಕೊಳ್ಳೋಣ. 'ಸ್ಥಾಲೀಪುಲಾಕ' ನ್ಯಾಯವನ್ನನುಸರಿಸಿ ಆಯಾ ಕೃತಿಯಲ್ಲಿ ಪ್ರಸ್ತುತಪಡಿಸಿದ ಒಂದು ವಿಚಾರವನ್ನೂ ತಿಳಿದುಕೊಳ್ಳೋಣ........

ಜಿಜ್ಞಾಸುಗಳಿಗೆ ಸರಿಯಾದ ಗುರಿಯನ್ನು
ಗುರಿತಿಸಿಕೊಟ್ಟು ಮಾರ್ಗದರ್ಶನ ನೀಡಬಲ್ಲ

ಗುರಿಯಿಲ್ಲದ ದಾರಿ
        ೧೯೮೮ ರಲ್ಲಿ ಪ್ರಕಟಗೊಂಡ ಈ ಕೃತಿ ಪ್ರಾಯಃ ಶ್ರೀಪಾದರದ್ದು ಚೊಚ್ಚಲ ಕೃತಿ. ಗುರು ಶ್ರೀ ವಿದ್ಯಾಮಾನ್ಯ ತೀರ್ಥರು ಮನಬಿಚ್ಚಿ ಈ ಕೃತಿಗೆ ನೀಡಿರುವ ಸಂದೇಶದ ಮಾತುಗಳೇ ಇದರ ಮೌಲ್ಯವನ್ನು ಸಾರಬಲ್ಲವು. ''ಗುರಿ ಇಲ್ಲದ ದಾರಿ, ನಾಮವು ಈ ನಾಮದ ಗ್ರಂಥವನ್ನು ಓದಬೇಕು ಎಂದು ಚಿತ್ತಾಕರ್ಷಣ ಮಾಡಿದರೆ ಗ್ರಂಥಸ್ಥ ವಿಷಯ ಗಳು ನ್ಯಾಯಸುಧಾ, ನ್ಯಾಯಾಮೃತ, ಚಂದ್ರಿಕಾ, ಯುಕ್ತಿಮಲ್ಲಿಕಾ ಗ್ರಂಥಗಳ ಸಾರಭೂತವಾಗಿದ್ದು ವಿದ್ವಾಂಸರನ್ನು ಪರಮಾನಂದಭರಿತರನ್ನು ಮಾಡಲು ಸಮರ್ಥವಾಗಿವೆ. ಪ್ರಸಕ್ತ ದೃಷ್ಟಾಂತಗಳಿಗೆ ಸದೃಶ ದೃಷ್ಟಾಂತಗಳು, ಕಥೆಗಳು ಈ ಗ್ರಂಥದಲ್ಲಿ ಇರುವುದು ವಿಶೇಷ ಚಿತ್ತಾಕರ್ಷಕವಾಗಿದೆ''.
        ಮುಖಪುಟದಲ್ಲಿಯೇ 'ಸಪ್ತಾರ್ಚಿಃ' ಎಂದು ಉಲ್ಲೇಖಿಸಿರುವಂತೆ ೧. ತತ್ವವಿಮರ್ಶೆ ಅಗತ್ಯ ೨. ನಿರಂಕುಶ ಕಲ್ಪನೆಯ ಕೂಸು - ಏಕಾತ್ಮವಾದ ೩. ನಿರಾಶ್ರಿತ ಅವಿದ್ಯೆಯಿಂದ ಭಿನ್ನ ಜೀವ-ಜಗತ್ತಿನ ಪ್ರಸವ ಸಾಧ್ಯವೇ? ೪. ಬ್ರಹ್ಮನು ಅಜ್ಞಾನದ ಆರೋಪಕ್ಕೆ ಅಧಿಷ್ಠಾನವೇ? ೫. ಬೆಂಬಲವಿಲ್ಲದ 'ತತ್ವಮಸಿ' ೬. ಬೇಡಿಕೆಯಿಲ್ಲದ ಭಯಾನಕ ಬಿಡುಗಡೆ - ಮೋಕ್ಷ ೭.ಐಕ್ಯೋಪದೇಶವು ಸಂಗತವೇ? - ಎಂಬ ಈ ಏಳು ವಿಚಾರಜ್ಯೋತಿಗಳ ಬೆಳಕಿನಲ್ಲಿ ಅದ್ವೈತಮತ ಪ್ರಸ್ತುತಪಡಿಸುವ ಆಧ್ಯಾತ್ಮಿಕ ದಾರಿ ಗುರಿ ಇಲ್ಲದಿರುವಂತಹದ್ದೆಂಬುದನ್ನು ಸಮರ್ಥಿಸಲಾಗಿದೆ.
        ಶ್ರೀಮದಾಚಾರ್ಯರು ತೋರಿಸಿರುವ ಮೋಕ್ಷವೇ ನಿಜವಾದ ಅಪೇಕ್ಷಣೀಯ ಎಂಬುದನ್ನು ಅಲ್ಲಲ್ಲಿ ಸ್ಪಷ್ಟಪಡಿಸಲಾಗಿದೆ.
        ಭೇದಖಂಡನೆ, ಏಕಾತ್ಮವಾದಿಗಳ ಭ್ರಮೆ ಕಲ್ಪನೆಗಳ ನಿರಾಕರಣೆ, ಸ ಆತ್ಮಾ ತತ್ತ್ವಮಸಿ - ಎಂಬಲ್ಲಿಯ ಪದಚ್ಛೇದ ಮುಂತಾದ ಪ್ರಮುಖ ಶಾಸ್ತ್ರೀಯ ಪ್ರಮೇಯಗಳನ್ನು ಕಥೆಗಳ ಮೂಲಕ ಸಮರ್ಥಿಸಿರುವುದು ಉಲ್ಲೇಖಾರ್ಹ.
        ಈ ಕೃತಿಯ ಉಪಸಂಹಾರದ ಪ್ರಮೇಯ ಹೀಗಿದೆ:

ಶ್ರೀಮದಾನಂದತೀರ್ಥರ ದಾರಿಯೇ ಹೆದ್ದಾರಿ
        '.....ಹೀಗೆ ವಿವಿಧ ನಿಟ್ಟಿನಲ್ಲಿ ವಿಮರ್ಶೆ ಮಾಡಿದಾಗ ಏಕಾತ್ಮವಾದಿಗಳ ಗುರಿ - 'ಮೋಕ್ಷ' ಯಾರಿಗೂ ಮೆಚ್ಚಿಗೆಯಾಗಲಾರದು. ಆದುದರಿಂದ ಅದನ್ನು ಗುರಿಯಾಗಿಟ್ಟುಕೊಂಡು ಹೊರಟ ಇಂತಹ ಶಾಸ್ತ್ರವು ವಿಮರ್ಶಕರ ದೃಷ್ಟಿಯಲ್ಲಿ 'ಗುರಿಯಿಲ್ಲದ ದಾರಿ' ಎನ್ನುವ ವಿಷಯದಲ್ಲಿ ಎರಡುಮಾತಿಲ್ಲ.
        ಆದುದರಿಂದ ಶ್ರೀಮದಾಚಾರ್ಯರ ಗುರಿಯೇ - ಮೋಕ್ಷವೇ -ಸಕಲ ಜ್ಞಾನಿಗಳಿಂದಲೂ ಬೇಡಿಕೆಯನ್ನು ಪಡೆದ ಗುರಿ. ಅದನ್ನು ಗುರಿಯಾಗಿಟ್ಟುಕೊಂಡು ಹೊರಟ ಅವರ ಸುದರ್ಶನವೇ - ಸಚ್ಛಾಸ್ತ್ರವೇ ತನ್ನ ಜ್ಞಾನಪ್ರಭೆಯಿಂದ ಮುಕ್ತರಿಗೂ ಸ್ವಾಮಿಯಾದ ಹರಿಯನ್ನು ತೋರಿಸಿ, ಅಲ್ಲಿಗೆ ನಮ್ಮನ್ನು ಕೊಂಡೊಯ್ಯಬಲ್ಲದು. ಅವರ ಶಾಸ್ತ್ರವು ಬರೇ ಕವಲುದಾರಿಯಲ್ಲ. ಇಡೀ ಜಗತ್ತಿಗೆ ಅನುಗ್ರಹಿಸಿದ ಶ್ರೀ ರಾಘವೇಂದ್ರಸ್ವಾಮಿಗಳು, ಜಯತೀರ್ಥರು, ವ್ಯಾಸತೀರ್ಥರು, ವಾದಿರಾಜರು, ಪುರಂದರದಾಸರು, ಕನಕದಾಸರು ಮುಂತಾದ ಶ್ರೇಷ್ಠ ಜ್ಞಾನಿಗಳೂ 'ರಾಜಮಾರ್ಗ' ವೆಂದು ಗುರಿತಿಸುವ ಮೂಲಕ ಹಿಡಿದ ಹೆದ್ದಾರಿ - 'ಅರ್ಚಿಮಾರ್ಗ'


ಗಾಯತ್ರಿಯ ವೈಭವವನ್ನು ಸಾರುವ
'ಗಾಯತ್ರೀಹೃದಯ'
        ಎರಡು ಬಾರಿ ಎರಡೆರಡು ಸಾವಿರ ಪ್ರತಿಗಳಂತೆ ಮುದ್ರಣಗೊಂಡಿರುವ ಶ್ರೀಪಾದರ ಈ ಕೃತಿಯ ವೈಶಿಷ್ಟ್ಯ ಜಿಜ್ಞಾಸುಗಳ ವ್ಯಾಪಕ ಬೇಡಿಕೆಯಿಂದಲೇ ಸಿದ್ದವಾಗುವುದು. ಗುರುಗಳಾದ ಶ್ರೀ ವಿದ್ಯಾಮಾನ್ಯತೀರ್ಥರ ಸಂದೇಶದ '೧೫ ದಿನಗಳಲ್ಲಿ ನೂರು ಪುಟದ ವರೆಗೆ ಗಾಯತ್ರಿಹೃದಯವೆಂಬ ಶ್ರೇಷ್ಠ ಪ್ರಬಂಧವನ್ನು ಚಾತುರ್ಮಾಸ್ಯಕಾಲದಲ್ಲಿ ಬರೆದು ಶ್ರೀಬದರಿ ನಾರಾಯಣದೇವರಿಗೆ ಸಮರ್ಪಿಸುವ ಸಂಕಲ್ಪ ಮಾಡಿದ್ದಾರೆ' ಎಂಬ ಮಾತು ಈ ಕೃತಿಯ ರಚನೆಯ ಅವಧಿಯ ಬಗ್ಗೆಯೂ ಉದ್ದೇಶದ ಬಗ್ಗೆಯೂ ಬೆಳಕು ಚೆಲ್ಲಬಲ್ಲದು.
        ಜಪ ಶಬ್ದದ ಅರ್ಥವೇನು? ಇತ್ಯಾದಿಯಾಗಿ ಹದಿನಾಲ್ಕು ಶೀರ್ಷಿಕೆಗಳಲ್ಲಿ ಗಾಯತ್ರೀ ಮಂತ್ರದ ಸುತ್ತಮುತ್ತದ ಮಾಹಿತಿಗಳನ್ನೂ ಅರ್ಥಗಾಂಭೀರ್ಯವನ್ನೂ ಪ್ರತಿಪಾದಿಸಿ, 'ಗಾಯತ್ರಿಯಲ್ಲಿ ಪ್ರಾರ್ಥಿತವಾದ ತತ್ತ್ವಜ್ಞಾನದ ಸ್ವರೂಪವೇನು?' - ಎಂಬ ಕೊನೆಯ ಶೀರ್ಷಿಕೆಯಲ್ಲಿ 'ಆದುದರಿಂದ ಶ್ರೀಮದಾನಂದತೀರ್ಥರ ಗುಣಪೂರ್ಣ, ಸುಂದರನಾದ ಶ್ರೀಹರಿಯ ಜ್ಞಾನವನ್ನೇ ಪಡೆದು ಕೃತಕೃತ್ಯರಗಬೇಕು' - ಎಂದು ಕರೆನೀಡುವ ಜೊತೆಗೆ ಈ ಕಾಲದಲ್ಲಿ ಉಪನಯನ ಬಗ್ಗೆ ತಾಳಿರುವ ವಿಕೃತರೂಪದ ವಿರುದ್ಧ ಎಚ್ಚರಿಕೆ ನೀಡುತ್ತ ಉಪಸಂಹರಿಸಲಾಗಿದೆ. ಗಾಯತ್ರಿಯ ಸವಿತೃ, ಭರ್ಗ ಇತ್ಯಾದಿ ಶಬ್ದಗಳ ಪ್ರತಿಪಾದ್ಯವ್ಯಕ್ತಿಗಳ ಕುರಿತೂ ಆಯಾ ಶಬ್ದಗಳ ಅರ್ಥಗಾಂಭೀರ್ಯದ ಕುರಿತೂ ಮಾಧ್ವ ತತ್ತ್ವಜ್ಞಾನದ ಬೆಳಕಿನಲ್ಲಿ ಚಿಂತಿಸಲಾಗಿದೆ.
        ಈ ಕೃತಿಯಲ್ಲಿ ಪ್ರಸ್ತುತವಾದ ಒಂದು ಪ್ರಮೇಯ....

ಧಿಯೋ ಯೋ ನಃ ಪ್ರಚೋದಯಾತ್
        ....ಈ ವಚನವು ಗಾಯತ್ರಿಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದಿದೆ. ಇಲ್ಲಿ ಗಾಯತ್ರೀ ಪ್ರತಿಪಾದ್ಯನಿಗೆ ಬುದ್ಧಿ ಪ್ರೇರಕತ್ವರೂಪವಾದ ಗುಣವು ಹೇಳಲ್ಪಟ್ಟಿದೆ.
        ಈ ಗುಣದಿಂದ 'ಹೃಷೀಕೇಶ' - ಸರ್ವ ಇಂದ್ರಿಯಗಳ ಒಡೆಯನೆನಿಸಿದ ಶ್ರೀಹರಿಯೇ ಇಲ್ಲಿ ಪ್ರತಿಪಾದ್ಯನೆಂದು ತೀರ್ಮಾನಿಸಬಹುದು.
        ಇಲ್ಲಿ 'ಧೀಯಃ' ಎಂದು ಬಹುವಚನ ಪ್ರಯೋಗವಿದೆ. ಸಂಸ್ಕೃತದಲ್ಲಿ ಬಹುವಚನ ಪ್ರಯೋಗವು ಆದ್ಯರ್ಹವನ್ನು, ಮೊದಲಾದ ಎಂಬ ಅರ್ಥವನ್ನು ನೀಡುವುದು. 'ಕಡಾರಾಃ ಕರ್ಮಧಾರಯೇ' ಎಂಬ ಸೂತ್ರದಲ್ಲಿ ಕಡಾರವೇ ಮೊದಲಾದ ಶಬ್ದಗಳು ಎನ್ನುವ ಅರ್ಥದಲ್ಲಿ ಬಹುವಚನವನ್ನು ಪ್ರಯೋಗಿಸಲಾಗಿದೆ. ಆದಿದರಿಂದ ಇಲ್ಲಿ 'ಧಿಯಃ' ಎಂಬ ಬಹುವಚನಪ್ರಯೋಗದಿಂದ ಬುದ್ಧಿ ಮೊದಲಾದ ಇಂದ್ರಿಯಗಳು ಸೂಚಿಸಲ್ಪಟ್ಟಿವೆ ಎಂದು ಇಟ್ಟುಕೊಳ್ಳಬಹುದು.
        ಒಟ್ಟು ಇಂದ್ರಿಯಗಳು ಹನ್ನೆರಡು. ಶ್ರೀಮದಾಚಾರ್ಯರು ಬ್ರಹ್ಮಸೂತ್ರಭಾಷ್ಯದಲ್ಲಿ ಪ್ರಮಾಣದಿಂದ ಹೀಗೆ ಸಮರ್ಥಿಸಿದ್ದಾರೆ-
ಶ್ರೋತ್ರಾದೀನಿ ತು ಪಂಚೈವ ತಥಾ ವಾಗಾದಿ ಪಂಚಕಮ್ |
ಮನೋಬುದ್ಧಿಸಹಾಯಾನಿ ದ್ವಾದಶೈವೇಂದ್ರಿಯಾಣಿ ತು ||
        ಈ ಹನ್ನೆರಡು ಇಂದ್ರಿಯಗಳಲ್ಲಿ ಬುದ್ಧಿಯೂ ಒಂದು.
        ಏವಂ ಚ 'ಧಿಯೋ ಯೋ ನಃ ಪ್ರ್ಚೋದಯಾತ್' ಎಂಬ ವಚನದಿಂದ ನಿಯಾಮಕನೆನಿಸಿ 'ಯ' ಎಂದು ವೇದಖ್ಯಾತನಾದ ಶ್ರೀಹರಿಯು ನಮ್ಮ ಬುದ್ಧಿ ಮೊದಲಾದ ಹನ್ನೆರಡು ಇಂದ್ರಿಯಗಳನ್ನು ಪ್ರೇರಿಸುತ್ತಾನೆ ಎನ್ನುವ ಅರ್ಥವು ಸಿದ್ಧವಾಗುವುದು.

ವೇದಾಭಿಮಾನಿನಿಯ ಆಶಯ
        ಕ್ಷೀರಸಾಗರದ ಮಥನಕಾಲದಲ್ಲಿ ಸಾಗರದಿಂದ ಪಾದುರ್ಭೂತಳಾದ ಸಕಲ ವೇದಗಳಿಗೆ ಅಭಿಮಾನಿನಿಯಾದ ರುಮೆಯು ಇತರ ಎಲ್ಲಾ ದೇವತೆಗಳಲ್ಲಿ ಕೋಪ, ಕಾಮ, ಪಾರತಂತ್ರ್ಯ ಮೊದಲಾದ ದೋಷಗಳನ್ನೂ, ಗುಣಗಳ ನ್ಯೂನತೆಯನ್ನೂ ಕಂಡಳು. ಆದರೆ ಶ್ರೀಹರಿಯು ಅವ್ಯಭಿಚಾರಿ (ಬೇರೆಕಡೆ ಇಲ್ಲದ) ಸದ್ಗುಣಗಳ ನಿಧಿ ಹಾಗೂ ನಿರ್ದೋಷನಾದ ಸುಮಂಗಲ ಪುರುಷೋತ್ತಮನೆಂದು ಗುರುತಿಸಿ ಆತನನ್ನೇ ಪತಿರೂಪದಲ್ಲಿ ವರಿಸಿದಳು. ವೇದ ಹಗೂ ಅದರ ಅಭಿಮಾನಿನಿಯಾದ ಲಕ್ಷ್ಮಿಯ ಅಭಿಪ್ರಾಯ ಒಂದೇ ಆಗಿದೆ.
        ಆದುದರಿಂದ ಸಕಲ ವೇದಗಳೂ ಶ್ರೀಹರಿಯನ್ನೇ ನಿರ್ದೋಷ ಗುಣ ಪೂರ್ಣನಾದುದರಿಂದ ಸರ್ವೋತ್ತಮನೆಂದು ಆಯ್ಕೆಮಾಡಿವೆ ಎನ್ನುವ ಮಾತಿಗೆ, ವೇದಾಭಿಮಾನಿನಿಯಾದ ಲಕ್ಷ್ಮಿಯು ವಿಮರ್ಶಪೂರ್ವಕವಾಗಿ ಮಾಡಿದ ನಾರಾಯಣನ ಆಯ್ಕೆಯೇ ಜ್ವಲಂತ ನಿದರ್ಶನ. ಲಕ್ಷ್ಮಿಯು ಮಾಡಿದ ವಿಮರ್ಶಾಪೂರ್ವಕವಾದ ಶ್ರೀಹರಿಯ ಆಯ್ಕೆಯು ಭಾಗವತದ (೮-೭-೧೮,೨೨) ಭಾಗದಲ್ಲಿ ಉಲ್ಲಿಖಿತವಾಗಿದೆ.
-ಶ್ರೀ ಶ್ರೀ ವಿದ್ಯೇಶತೀರ್ಥರು.


ಭಾಗವತದ 'ಬ್ರಹ್ಮಾತ್ಮೈಕತ್ವ' ಸಂದೇಶದ ಮೇಲೆ
ಬೆಳಕುಚೆಲ್ಲುವ
ಭಾಗವತವು ಬೆಳಗಿದ ವೇದಾಂತದೀಪಾವಳಿ
'ಸರ್ವವೇದಾಂತಸಾರಂ ಯದ್ ಬ್ರಹ್ಮಾತ್ಮೈಕತ್ವಲಕ್ಷಣಮ್ |
        ಎಂಬುದಾಗಿ ಭಾಗವತದಲ್ಲಿ ಸರ್ವವೇದಾಂತಗಳ ಸಾರವಾಗಿ ಹೇಳಲಾದ 'ಬ್ರಹ್ಮಾತ್ಮೈಕತ್ವ' ಸಂದೇಶಕ್ಕೆ, ಮೇಲ್ನೋಟಕ್ಕೆ ಕಾಣಿಸುವ 'ಜೀವಬ್ರಹ್ಮೈಕ್ಯ' ಅರ್ಥ ಯಾಕೆ ಅಲ್ಲ? ಎಂಬುದನ್ನು ಸಮರ್ಥಿಸಿ, ಅದರ ನಿಜವಾದ ಅರ್ಥದ ಬಗ್ಗೆ ಬೆಳಕುಚೆಲ್ಲಹೊರಟ ಕೃತಿ ಇದು. 'ಬ್ರಹ್ಮಾತ್ಮೈಕ್ಯ' ಸಂದೇಶಕ್ಕೆ ವೇದಾಂತ ಎಂದು ಪ್ರಸಿದ್ಧ
ಗಳಾಗಿರುವ ಬ್ರಹ್ಮಸೂತ್ರ ಹಾಗೂ ಉಪನಿಷತ್ತುಗಳಿಗೆ ಮತ್ತು ಭಾಗವತದ ಪೂರ್ವಾಪರವಿಚಾರಗಳಿಗೆ ಹೊಂದಿಕೆಯಾಗುವಂತೆ ೨೦ ಅರ್ಥಗಳನ್ನು ಇಲ್ಲಿ ತೋರಿಸಲಾಗಿದೆ.
        'ವಾಸುದೇವನ ಸರ್ವೋತ್ಕರ್ಷವೇ ಸರ್ವವೇದಾಂತಗಳ ಸಾರ' , 'ಸ್ವತಂತ್ರ ಪರಿ ಪೂರ್ಣಾದ್ವೈತವೇ ಸಕಲವೇದಾಂತಗಳ ತಿರುಳು' - ಹೀಗೆ ಸರ್ವವೇದಾಂತಸಾರ ಎನಿಸಿದ 'ಬ್ರಹ್ಮಾತ್ಮೈಕತ್ವ' ಸಂದೇಶದ ಮೇಲೆ ದೀಪಾವಳಿ - ದೀಪಗಳ ಸಾಲೇ ಹಚ್ಚಲ್ಪಟ್ಟಿದೆ.
        ಹಾಗೆ ಹಚ್ಚಲ್ಪಟ್ಟ ದೀಪಾವಳಿಯ ಒಂದು ದೀಪ:

ಅಂತರ್ಯಾಮಿ ಭಗವದ್ರೂಪಗಳ ಏಕರೂಪತೆ
        'ಬ್ರಹ್ಮಾಣಿ ಜೀವಾಃ ಸರ್ವೇಪಿ.....' ಎಂದು ಪ್ರಮಾಣವಚನವು ವಿವರಿಸಿದಂತೆ ಜೀವರು ತಮ್ಮ ತಮ್ಮ ಯೋಗ್ಯತಾನುಸಾರಿಯಾದ ಪೂರ್ಣತೆಯನ್ನು ಪಡೆಯುವುದರಿಂದ 'ಬ್ರಹ್ಮ' ರೆನಿಸಿರುವರು. ಇವರು ಒಳಗಿದ್ದು ನಿಯಾಮಕಗಳಾದ ಭಗವಂತನ ಅಂತರ್ಯಾಮಿ ರೂಪಗಳೇ 'ಆತ್ಮಾ' ಎಂದು ಪ್ರಸಿದ್ಧವಾಗಿದೆ. ಭಗವಂತನ ಈ ರೂಪಗಳಲ್ಲಿ ಭೇದವಿಲ್ಲ, ತಾರತಮ್ಯವಿಲ್ಲ. ಉತ್ತಮ ಬ್ರಾಹ್ಮಣ, ಗೋವು ಮುಂತಾದವರಲ್ಲಿರುವ ಭಗವದ್ರೂಪಗಳಿಗೂ, ನೀಚರಾದ ಚಾಂಡಾಲ, ನಾಯಿ ಮುಂತಾದವರಲ್ಲಿರುವ ಭಗವದ್ರೂಪಗಳಿಗೂ ಅನ್ಯೋನ್ಯವಾಗಿ ಭೇದವನ್ನಾಗಲೀ ವೈಷಮ್ಯವನ್ನಾಗಲೀ ಜ್ಞಾನಿಗಳು ಕಾಣುವುದಿಲ್ಲ ಎಂದು ಭಗವದ್ಗೀತೆ ಸಾರಿದೆ. ಆದುದರಿಂದ ಅಂತಹ ಜ್ಞಾನಿಗಳು ಭಗವದ್ರೂಪಗಳಲ್ಲಿ ಕಾಣುವ ಏಕತ್ವ ಅರ್ಥಾತ್ ಏಕರೂಪತೆಯೇ - ಬ್ರಹ್ಮಾತ್ಮೈಕತ್ವ ಎಂದು ಅರ್ಥೈಸಿಕೊಳ್ಳಬಹುದು. 'ನ ಸ್ಥಾನತೋಪಿ ಪರಸ್ಯ ಉಭಯಲಿಂಗಂ ಸರ್ವತ್ರಹಿ' ಎಂಬ ವೇದಾಂತಸೂತ್ರದಲ್ಲಿ ಈ ಬಗೆಯ ಬ್ರಹ್ಮಾತ್ಮೈಕತ್ವವನ್ನೇ ಸಿದ್ಧಾಂತಿಸಲಾಗಿದೆ.
ಸರ್ವ ಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ |
ಅವಿಭಕ್ತಂ ವಿಭಕ್ತೇಷು ತದ್ ಜ್ಞಾನಂ ವಿದ್ಧಿ ಸಾತ್ವಿಕಮ್ ||
        ಎಂದು ಭಗವದ್ಗೀತೆಯಲ್ಲಿ ಈ ಬಗೆಯ ಬ್ರಹ್ಮಾತ್ಮೈಕತ್ವದ ಜ್ಞಾನವನ್ನೇ ಸಾತ್ವಿಕಜ್ಞಾನವನ್ನಾಗಿ ಪರಿಗಣಿಸಲಾಗಿದೆ.
ಏಕಮೇವ ಪರೋ ಹ್ಯಾತ್ಮಾ ಭೂತೇಷ್ವಾತ್ಮನ್ಯವಸ್ಥಿತಃ |
ಸರ್ವಭೂತೇಷು ಯಃ ಪಶ್ಯೇತ್ ಭಗವದ್ಭಾವಮಾತ್ಮನಃ ||
        ;ಭೂತಾನಿ ಭಗ್ವತ್ಯಾತ್ಮನ್ಯೇಷ ಭಾಗವತೋತ್ತಮಃ' ಎಂಬ ಭಾಗವತದ ಮಾತಿನ ಈ ಬಗೆಯ ಬ್ರಹ್ಮಾತ್ಮೈಕ್ಯದ ತಿಳಿವಳಿಕೆಯುಳ್ಳವನನ್ನೇ ಭಾಗವತೋತ್ತಮನನ್ನಾಗಿ ಗುರುತಿಸಲಾಗಿದೆ.
        'ಯಾಸಾವಸೌ ಪುರುಷಃ ಸೋಹಮದ್ಮಿ....', 'ಅಹಂ ಮನುರಭವಂ ಸೂರ್ಯಶ್ಚ' ಮುಂತಾದ ಶಸ್ತ್ರದ ಮಾತುಗಳೂ ಜೀವರ ಒಳಗೆ ನಿಯಾಮಕಗಳಾದ ಅಂತರ್ಯಾಮಿ ಭಗವದ್ರೂಪಗಳ ಏಕರೂಪತೆಯನ್ನು ಪ್ರತಿಪಾದಿಸುತ್ತ 'ಬ್ರಹ್ಮಾತ್ಮೈಕತ್ವ' ವನ್ನೇ ಸಾರುತ್ತಿವೆ. ಆದುದರಿಂದ ಸಾಧಕನು ಈ ತೆರನಾದ 'ಬ್ರಹ್ಮಾತ್ಮೈಕತ್ವ' ವನ್ನು ಉಪಾಸನೆ ಮಾಡಬೇಕೆಂಬುದು ವೇದಾಂತದ ಆಂತರ್ಯ.

ಗಾಯತ್ರೀಪ್ರತಿಪಾದ್ಯ ಸರ್ವಶ್ರೇಷ್ಠ
ಎಲ್ಲ ವೇದಗಳ ಸಾರ ಶ್ರೀಗಾಯತ್ರೀಮಂತ್ರ. ಅದೇ ಸರ್ವಶ್ರೇಷ್ಠವಾದ ಮಂತ್ರ. ಆದುದರಿಂದ ಆ ಮಂತ್ರದಿಂದ ಪ್ರತಿಪಾದ್ಯನಾದ ದೇವತೆಯೇ ಸರ್ವೋತ್ತಮದೇವತೆ. ಗಾಯತ್ರೀಮಂತ್ರಕ್ಕೆ ಅಭಿಮಾನಿನಿ ಎನಿಸಿಕೊಂಡ ಭಾರತೀ ದೇವಿಯ ಅವತಾರಭೂತರಾದ ದ್ರೌಪದೀದೇವಿಯರು ಆ ಮಂತ್ರದಿಂದ ಪ್ರತಿಪಾದ್ಯನು ಸೂರ್ಯಮಂಡಲ ಮಧ್ಯವರ್ತಿಯಾದ ನಾರಾಯಣನೇ ಎಂದು ಎತ್ತಿ ತೋರಿಸಿದ್ದಾರೆ. ಅವರು ಕೀಚಕನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸೂರ್ಯಮಂಡಲ ಮಧ್ಯವರ್ತಿಯಾದ ಶ್ರೀನಾರಾಯಣನನ್ನೇ ರಕ್ಷಕನೆಂದು ನಂಬಿ ಮೊರೆಯಿಟ್ಟು ಆತನ ಅನ್ಗ್ರಹದಿಂದ ಸುರಕ್ಷಿತರಾದರು. ಇದರಿಂದ ಶ್ರೀಮನ್ನಾರಾಯಣನೇ ರಕ್ಷಕನಾದುದರಿಂದ ಗಾಯತ್ರೀಮಂತ್ರದಲ್ಲಿ ಪ್ರತಿಪಾದ್ಯನದ 'ಭರ್ಗನು' (ಸಕಲ ವ್ಯಾಪಾರಗಳನ್ನು, ಜಗದ್ರಕ್ಷಣೆಯನ್ನು ಮಾಡುವವನೇ 'ಭರ್ಗ' ಎಂದು ಕರೆಯಲ್ಪಡುವನು.) ಎಂದು ಸಾಬೀತುಪಡಿಸಿ ಆತನೇ ಸರ್ವೋತ್ತಮದೇವತೆ ಎಂದು ಸೂಚಿಸಿದರು. ಧರ್ಮರಾಜನೂ ವನವಾಸದ ಕಾಲದಲ್ಲಿ ಸೂರ್ಯನಲ್ಲಿ ಸನ್ನಿಹಿತನಾದ ನಾರಾಯಣನ ಅನುಗ್ರಹದಿಂದಲೆ ಅಕ್ಷಯ ಪಾತ್ರೆಯನ್ನು ಪಡೆದು ತನ್ನ ಸಂಗಡಿಗರಾದ ಸಹಸ್ರಾರು ಮುನಿಗಳಿಗೆ ಅನ್ನವನ್ನಿತ್ತು ಸಂರಕ್ಷಣೆ ಮಾಡಿದನು. ಇದರಿಂದ ಸೂರ್ಯನಲ್ಲಿರುವ ಶ್ರೀಮನ್ನಾರಾಯಣನೇ ಅನ್ನವನ್ನಿತ್ತು ಸಲಹುವ ಭರ್ಗನು ಎಂದು ದೃಢವಾಗುತ್ತದೆ.
-ಶ್ರೀ ಶ್ರೀ ವಿದ್ಯೇಶತೀರ್ಥರು.
       
        

ಶ್ರೀವೇದವ್ಯಾಸರ ಉದ್ಘೋಶಹಣೆಯನ್ನು
ಸಮರ್ಥಿಸುವ
ಹರಿತತ್ವಚೂಡಾಮಣಿ
        'ನಾಸ್ತಿ ನಾರಾಯಣ ಸಮಂ....' ಸರ್ವಶಸ್ತ್ರಗಳಲ್ಲಿ ಚೂಡಾಮಣಿಯಂತಿರುವ ಮಹಾಭಾರತದ ಈ ಶ್ಲೋಕವು ಹರಿತತ್ತ್ವದ ಉತ್ಕರ್ಷವನ್ನು ಹೇಗೆ ಸಾರುತ್ತಿದೆ ಎಂಬುದನ್ನು ಈ ಶ್ಲೋಕದಲ್ಲಿಯ 'ಸತ್ಯವಾಕ್ಯ' ಪದಕ್ಕೆ ಒತ್ತುಕೊಟ್ಟು ಈ ಕೃತಿಯಲ್ಲಿ ಸಾಧಿಸಲಗಿದೆ.
        'ಸತ್ಯ' ಎಂಬುದಕ್ಕೆ ಚತುರ್ಮುಖ ಎಂಬ ಅರ್ಥವನ್ನು ತೋರಿಸಿಕೊಟ್ಟು ಚತುರ್ಮುಖನ ಭಾಗವತಾದಿಗಳಲ್ಲಿ ಉಲ್ಲೇಖಗೊಂಡ ಮಾತುಗಳ ಆಧಾರದಲ್ಲಿ 'ನಾಸ್ತಿ ನಾರಾಯಣ ಸಮಂ' ಎನ್ನುವುದನ್ನು ಉಪಪಾದಿಸಲಾಗಿದೆ. ಎಂಟು ಯುಕ್ತಿಗಳಿಂದಲೂ ನಾರಾಯಣನ ಸರ್ವೋತ್ತಮತ್ತ್ವವನ್ನು ಸಮರ್ಥಿಸಲಾಗಿದೆ.
        ಸತ್ಯವಾಕ್ಯ ಎಂಬುದಕ್ಕೆ ನಿತ್ಯವಾಕ್ಯ, ಪ್ರಧಾನವಾಕ್ಯ - ಈ ಅರ್ಥವನ್ನಿಟ್ಟುಕೊಂಡು ಆ ಪದ್ಯದ ಅರ್ಥವನ್ನು ವಿವರಿಸಲಾಗಿದೆ.
        ಸತ್ಯ ಶಬ್ದಕ್ಕೆ ರುದ್ರ - ಎಂಬ ಅರ್ಥವಿಟ್ಟುಕೊಂಡು ಪಾಶುಪತಮತಪ್ರವರ್ತಕರಾದ ರುದ್ರದೇವರ ಮುಖದಿಂದಲೇ ಹರಿಸರ್ವೋತ್ಕರ್ಷದ ಮಾತು ಹೊರಟಿದೆ ಎಂದು ತೋರಿಸಲಾಗಿದೆ.
        ಯುಕ್ತಿಗಳಿಂದಲೂ ಹರಿನಿಗಿಂತ ಹರಿಯ ಉತ್ತಮತ್ವವನ್ನು ಸಮರ್ಥಿಸಲಾಗಿದೆ.
        ಸತ್ಯಶಬ್ದಕ್ಕೆ ಭಾರತೀದೇವಿ ಎಂಬ ಅರ್ಥವನ್ನಿಟ್ಟುಕೊಂಡೂ ಈ ಶ್ಲೋಕದ ಅರ್ಥವನ್ನು ಪ್ರತಿಪಾದಿಸಲಾಗಿದೆ.
        ರುದ್ರನಂತೆ ಸೂರ್ಯ, ಸ್ಕಂದ, ಗಣಪತಿ, ಪಶುಪತಿ ಮುಂತಾದವರು ಸರ್ವೋತ್ತಮರೆಂದು ಸಾರುವ ಮತಗಳ ವಿಚಾರಗಳನ್ನೂ ಸ್ಥೂಲವಾಗಿ ನಿರಾಕರಿಸಲಾಗಿದೆ.
        ಕೊನೆಯಲ್ಲಿ ನಾರಾಯಣನಾಮದು ಅರ್ಥವನ್ನು ವಿವರಿಸುವ, ಐತರೇಯಭಾಷ್ಯದಲ್ಲಿ ಉದಾಹರಿಸಲಾದ 'ಬ್ರಹ್ಮಸಾರ' ದ ಮಾತನ್ನು ಉಲ್ಲೇಖಿಸಿ, ಅದರಲ್ಲಿ ಸೂಚಿಸಲಾದ ಮೊಕ್ಷದಾತೃತ್ವವೇ ಮುಂತಾದ ಮೂರು ನಾಲ್ಕು ಯುಕ್ತಿಗಳಿಂದಲೂ ಹರಿಯ ಪಾರಮ್ಯದ ಸಮರ್ಥನೆಯನ್ನು ಸೂಚಿಸುವುದಕ್ಕಾಗಿಯೇ 'ನಾಸ್ತಿ ನಾರಾಯಣ ಸಮಂ...' ಎಂಬಲ್ಲಿ ನಾರಾಯಣಪದವನ್ನೇ ಬಳಸಲಾಗಿದೆ ಎಂದು ತಿಳಿಸಲಾಗಿದೆ.
        ಹೀಗೆ 'ಹರಿತತ್ವಚೂಡಾಮಣಿ' ಶಾಸ್ತ್ರಗಳಲ್ಲಿಯ ಚೂಡಾಮಣಿ ಎನಿಸಿದ ಮಹಾಭಾರತದ 'ನಾಸ್ತಿ ನಾರಾಯಣ ಸಮಂ....' ಎನ್ನುವ ಮಾತೆಂಬ ಚೂಡಾಮಣಿಯಲ್ಲಿ ವಿರಾಜಿಸುತ್ತಿರುವ ನಾರಾಯಣ ಸರ್ವೋತ್ತಮತ್ವ ಎಂಬ ತತ್ತ್ವಚೂಡಾಮಣಿಯನ್ನು ಜಿಜ್ಞಾಸುಗಳ ಹೃದಯಮಂದಿರದಲ್ಲಿ ಧರಿಸುವಂತೆ ಮಾಡುತ್ತ 'ಹರಿತತ್ತ್ವಚೂಡಾಮಣಿ' ಎಂಬುದಾಗಿ ಅನ್ವರ್ಥ ಶೀರ್ಷಿಕೆಯನ್ನು ಹೊಂದಿರುವುದು.
        ಇದರಲ್ಲಿ ಪ್ರಸ್ತುತವಾದ ಪ್ರಮೇಯ:

ರಾಜಸೂಯಯಾಗದ ಸಭೆಯ ನಿರ್ಣಯ
        'ನಾಸ್ತಿ ನಾರಾಯಣ ಸಮಂ....' ಎಂಬ ವಾಕ್ಯವನ್ನು ಸತ್ಯವಾಕ್ಯ ಎಂದು ಕರೆಯಲಾಗಿದೆ. 'ಸತ್ಯಂ ಬ್ರಹ್ಮಾ ಸಮುದ್ದಿಷ್ಟಃ....' ಎಂಬ ಪ್ರಮಾಣವಚನದಿಂದ ಬ್ರಹ್ಮದೇವರಿಗೆ 'ಸತ್ಯ' ಎಂಬ ನಾಮವಿದೆ ಎಂದು ತಿಳಿದುಬರುವುದು.
        ಪಾಂಡವರ ರಾಜಸೂಯಯಾಅದಲ್ಲಿ ವೇದವ್ಯಾಸ ಹಾಗೂ ಪರಶುರಾಮದೇವರ ದಿವ್ಯ ಸನ್ನಿಧಾನದಲ್ಲಿ ತತ್ವನಿರ್ಣಯದ ಸಲುವಾಗಿ ವೇದಾದಿ ಶಸ್ತ್ರಗಳ ಭಾರೀ ಚರ್ಚೆನಡೆಯಿತು. ಈ ಚರ್ಚೆಯಲ್ಲಿ ಜ್ಞಾನಿವರೇಣ್ಯರಾದ ಬ್ರಹ್ಮಾದಿ ದೇವತೆಗಳು ಭಾಗವಹಿಸಿದ್ದರು.
        ಚರ್ಚೆಯ ಫಲಿತಾಂಶವಾಗಿ ಹರಿಯೇ ಸಕಲದೋಷದೂರನೂ ಗುಣಪೂರ್ಣನೂ ಆದುದರಿಂದ ಸರ್ವೋತ್ತಮನೆಂದು ಬ್ರಹ್ಮಾದಿದೇವತೆಗಳು ತೀರ್ಮಾನ ಮಾಡಿದರು. ಈ ತೀರ್ಪಿಗೆ ವೇದವ್ಯಾಸರ ಅಂಗೀಕಾರ ಮುದ್ರೆಯೂ ಬಿತ್ತು. ಸಾಧಕ ಜೀವರ ಪೈಕಿ ನಿರ್ಣಾಯಕರಲ್ಲಿ ಜಗದ್ಗುರುಗಳಾದ ಶ್ರೀಬ್ರಹ್ಮದೇವರೇ ಹಿರಿಯರು. ಆದುದರಿಂದ ಅವರಿಗೆ ಪ್ರಾಧಾನ್ಯವನ್ನು ನೀಡಿ, ಇಲ್ಲಿ 'ನಾಸ್ತಿ ನಾರಾಯಣ ಸಮಂ....' ಎನ್ನುವ ನಿರ್ಣಾಯಕವಾಕ್ಯವು ಅವರ ವಾಕ್ಯವೆಂದು ಹೇಳುವುದು ಸಮಂಜಸವೇ ಆಗಿದೆ.
        ಈ ವಿಚಾರವನ್ನೇ ಶ್ರೀಮದಾನಂದತೀರ್ಥರು-
'ನಾಸ್ತಿ ನಾರಾಯಣ ಸಮಮಿತಿ ವಾದೇನ ನಿರ್ಣಯೇ |
ಕೃತೇ ಬ್ರಹ್ಮಾದಿರಪಿ....'
        ಎನ್ನುವ ತಾತ್ಪರ್ಯನಿರ್ಣಯದ ಮಾತಿನಲ್ಲಿ ಸ್ಪಷ್ಟಪಡಿಸಿರುವರು.
        ಹಿರಿಯ ಜ್ಞಾನಿಗಳೂ ಜಗದ್ಗುರುಗಳೂ ಆದ ಬ್ರಹ್ಮದೇವರ 'ಹರಿಯೇ ಸರ್ವದಾ ಸರ್ವೋಚ್ಚದೇವತೆ' ಎಂಬ ನಿರ್ಣಯವು ವೇದವ್ಯಾಸರಿಂದಲೂ ಅನುಮೋದಿತವಾದುದ ರಿಂದ ಬೇರೆ ಮತಗಳಲ್ಲಿ ಹೇಳಿದ ಸ್ಕಂದ ಮೊದಲಾದ ದೇವತೆಗಳ ಸರ್ವೋತ್ಕರ್ಷವನ್ನು ಮಾನ್ಯಮಾಡಬಾರದೆಂದು ಸಿದ್ಧವಾಗುವುದು.

ಗಾಯತ್ರಿಯ ಆಂತರ್ಯಕ್ಕೆ ಹಚ್ಚಿದ ತಿಲಕ
ಗಾಯತ್ರೀ ಭಾವತಿಲಕಮ್
        ಸಂಸ್ಕೃತ ಭಾಷೆಯಲ್ಲಿರುವ ಈ ಕೃತಿ ಗಯಾದಲ್ಲಿ ಶ್ರೀಪಾದರು ಕೈಗೊಂಡಿದ್ದ (೧೯೯೪ ರಲ್ಲಿ) ಚಾತುರ್ಮಾಸ್ಯವ್ರತದ ಸವಿನೆನಪಿಗಾಗಿ ರೂಪಿತವಾಗಿದ್ದು, ಗಯೆಯ ಗದಾಧರನ ಪಾದಾರವಿಂದಕ್ಕೆ ತಿಲಕವಾಗಿ ಸಮರ್ಪಿತವಾಗಿದೆ.
        ಗಾಯತ್ರೀಮಂತ್ರದ ಜಪದ ಆವಶ್ಯಕತೆಯನ್ನು ಪರಿಶೀಲಿಸಿ, ಗಾಯತ್ರೀಮಂತ್ರಪ್ರತಿಪಾದ್ಯ ಸವಿತಾ ಯಾರು? ಗಾಯತ್ರಿಯಲ್ಲಿಯ ಭರ್ಗ ರುದ್ರ ಆಗಲಾರ; ಶ್ರೀಹರಿಯೇ ಭರ್ಗ....' ಇತ್ಯಾದಿಯಾಗಿ ವಿಷಯಗಳ ಸಮರ್ಥನೆ ನಡೆದಿದೆ. ಗಾಯತ್ರಿಯಲ್ಲಿ ದಶಾವತಾರಗಳನ್ನು ಹೇಗೆ ಅನುಸಂಧಾನ ಮಾಡಬಹುದು? ಪ್ರಾಣದೇವನ ಆಂಜನೇಯಾದಿ ರೂಪತ್ರಯದಿಂದ ಉಪಾಸ್ಯ ಭಗವದ್ರೂಪಗಳ ಪರವಾಗಿ ಹೇಗೆ ಅನುಸಂಧಾನ ಮಾಡಬಹುದು? ಉವುಗಳನ್ನು ಪ್ರತಿಪಾದಿಸಲಾಗಿದೆ. ಪರಿಶಿಷ್ಟದಲ್ಲಿ ಭಗವಂತನ ಧ್ಯಾನಯಾಕೆ ಮಾಡಬೇಕೆಂಬುದನ್ನು ಗಾಯತ್ರಿಯ ಮೂಲಕ ಸಮಾಧಾನಿಸಲಾಗಿದೆ. ಗಾಯತ್ರಿಯಲ್ಲಿ ಭಗವಂತನನ್ನು ಸವಿತೃನಾಮದಿಂದ ಉಲ್ಲೇಖಿಸುವ ಮೂಲಕ ಸೂರ್ಯನ ಸಾದೃಶ್ಯವನ್ನು ಯಾವ ಯಾವ ಅಂಶದಲ್ಲಿ ಸೂಚಿಸಲ್ಪಟ್ಟಿದೆ ಎಂಬುದನ್ನು ಶಾಸ್ತ್ರದಲ್ಲಿ ಅಲ್ಲಲ್ಲಿ ಬಂದಿರುವ ಸೂರ್ಯನ ಪ್ರಸ್ತಾವದ ಆಧಾರದಲ್ಲಿ ತೋರಿಸಿಕೊಡಲಾಗಿದೆ.
        ಅದರಲ್ಲಿ ಹಚ್ಚಿದ ಒಂದು ತಿಲಕ ಹೀಗಿದೆ-

ಗಾಯತ್ರಿಯಲ್ಲಿಯ ದೇವ-ವಾಮನ
        ಭಗವಂತನ ದಶಾವತಾರಗಳಲ್ಲಿ ದೇವಯೀನಿಯಲ್ಲಿ ಪ್ರಾದುರ್ಭವಿಸಿದವನು ವಾಮನ. ಕಶ್ಯಪರಿಂದ ದೇವಮಾತೆಯಾದ ಅದಿತಿಯಲ್ಲಿ ಇಂದ್ರನ ತಮ್ಮನಾಗಿ ಅವನ ಪ್ರಾದುರ್ಭಾವ. ಆದುದರಿಂದಲೇ ಗಾಯತ್ರೀ ಮಂತ್ರದ ಹತ್ತು ಪದಗಳನ್ನು ದಶಾವತಾರಗಳ ಬಗ್ಗೆ ಅನುಸಂಧಾನ ನಡೆಸುವಾಗ ದೇವ ಪದದಿಂದ ವಾಮನನು ಪ್ರಸ್ತಾವಿಸಲ್ಪಡುವನು.
        ಅಲ್ಲದೆ, ಗಮನಾರ್ಥಕವಾದ 'ದಿವ್' ಧಾತುವಿನಿಂದ ನಿಷ್ಪನ್ನವಾದ ದೇವ ಶಬ್ದವು ವಾಮನನ ವೇದಪ್ರಸಿದ್ಧವಾದ ವಿಶಿಷ್ಟ ಗಮನವನ್ನು ಸಾರುವುದು. ವಾಮನನೇ ತ್ರಿವಿಕ್ರಿಮನಾಗಿ ತನ್ನ ಮೂರು ಪಾದಗಳಿಂದ ಸಕಲವನ್ನೂ ಕಬಳಿಸಿರುವುದು 'ತ್ರೀಣಿ ಪದಾ ವಿಚಕ್ರಮೇ' ಮುಂತಾದ ಮಾತುಗಳಿಂದ ಸೂಚಿತವಾಗಿವೆ. ಹೀಗೆ ತ್ರಿವಿಕ್ರಮನಾಗಿ ನಡೆಸಿದ ಈ ಬಗೆಯ ವಿಶಿಷ್ಟ ಗಮನವನ್ನು ದೇವಶಬ್ದ ಸೂಚಿಸಿಕೊಡಬಲ್ಲದು. ಅಂತೆಯೇ ಭಗವಂತನು ವಾಮನನಾಗಿ ಅವತರಿಸಿದವನೇ ತನ್ನ ಆ ಅವತಾರದ ಪ್ರಧಾನ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಬಲಿಯ ನೂರನೆಯ ಅಶ್ವಮೇಧಯಾಗ ನಡೆಯುತ್ತಿದ್ದ ಭೃಗುವತ್ಸ ಪ್ರದೇಶದೆಡೆಗೆ ಸಾಗುವಾಗ ವಿಶಿಷ್ಟವಾದ ಗಮನಶೈಲಿಯನ್ನು ಅಳವಡಿಸಿಕೊಂಡಿದ್ದನು.
        ಭಾಗವತದಲ್ಲಿ....
        'ಜಗಾಮ ತತ್ರಾಖಿಲಸಾರಸಂಭೃತೋ ಭಾರೇಣ ಗಾಂ ಸನ್ನಮಯಮ್ ಪದೇ ಪದೇ' - ಬ್ರಹ್ಮಾಂಡವನ್ನೇ ಹೊತ್ತು ತನ್ನ ಭಾರದಿಂದ ಭೂಮಿಯನ್ನು ಹೆಜ್ಜೆ ಹೆಜ್ಜೆಗೆ ಭಾಗಿಸುತ್ತ - ಭೃಗುವತ್ಸ ಪ್ರದೇಶಕ್ಕೆ ಸಾಗಿದನೆಂದು ವರ್ಣಿಸಲಾಗಿದೆ.
        ಆದುದರಿಂದ ವಾಮನನ ಈ ಗಮನವನ್ನೂ ಗಯತ್ರಿಯ ದೇವಶಬ್ದ ಸೂಚಿಸಿ ಕೊಡಬಲ್ಲದು.


ಗೀತೆಯಲ್ಲಿ ವಾಸುದೇವನ ಪಾರಮ್ಯವನ್ನು ಸಾರುವ
ವಾಸುದೇವನಲ್ಲಿ ಗೀತಾಕಟಾಕ್ಷ
        ಭಗವದ್ಗೀತೆಯಲ್ಲಿ ವಾಸುದೇವನ ಪಾರಮ್ಯವು ಹೇಗೆ ಹಾಸುಹೊಕ್ಕಾಗಿ ತುಂಬಿಕೊಂಡಿದೆ ಎಂಬುದನ್ನು ತೋರಿಸಹೊರಟ 'ವಾಸುದೇವನಲ್ಲಿ ಗೀತಾಕಟಾಕ್ಷ' ದ ಪ್ರಾರಂಭದಲ್ಲಿ ಗೀತೆಗೆ ಹರಿಸರ್ವೋತ್ಕರ್ಷದಲ್ಲಿ ಹೇಗೆ ಅಭಿಪ್ರಾಯವಿದೆ? ವಾಯು ಜೀವೋತ್ತಮನೆಂದು ಸಮರ್ಥಿಸುವಲ್ಲೂ ಹೇಗೆ ತಾತ್ಪರ್ಯ ಇದೆ? ಎಂಬುದನ್ನು ಸಮರ್ಥಿಸಿ ಬಳಕ 'ವಾಸುದೇವಃ ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ' - ಎಂಬ ವಚನದಲ್ಲಿ ಹರಿ ಸರ್ವೋತ್ತನತ್ವ, ವಯುಜೀವೋತ್ತಮತ್ವಗಳ ಪ್ರತಿಪಾದನೆ ಹೇಗೆ ನಡೆದಿದೆ ಎಂಬುದನ್ನು ತೋರಿಸಿಕೊಡಲಾಗಿದೆ.
        ಹರಿಸರ್ವೋತ್ತಮತ್ವಕ್ಕೆ ವಿರುದ್ಧಗಳೆನಿಸಿರುವ ಸ್ಕಾಂದ, ಗಾಣಪತ್ಯ, ಪಾಶುಪತ, ಶಕ್ತ, ಹೈರಣ್ಯಗರ್ಭ ಹಾಗೂ ಸೌರಮತಗಳ ದೂಷಣೆ ಗೀತೆಯಲ್ಲೂ ಭಾಗವತಾದಿಗಳಲ್ಲೂ ಹೇಗೆ ನಡೆದಿದೆ ಎಂಬುದನ್ನು ತೋರಿಸಿಕೊಡಲಾಗಿದೆ.
        'ವಾಸುದೇವಃ ಸರ್ವಮಿತಿ....' ಎಂಬ ಮಾತಿನಲ್ಲಿರುವ 'ವಾಸುದೇವ' ಹಾಗೂ 'ಸರ್ವ' ಶಬ್ದಗಳಿಂದ ವಾಸುದೇವನ ಪಾರಮ್ಯಕ್ಕೆ ಪ್ರಯೋಜಕಗಳಾದ ಯುಕ್ತಿಗಳು ಹೇಗೆ ಸೂಚಿತಗಳಾಗಿವೆ ಎಂಬ ಪ್ರತಿಪಾದನೆಯೂ ಇದರಲ್ಲಿ ನಡೆದಿದೆ.
        ಆ ಕೃತಿಯಲ್ಲಿ ಪ್ರಸ್ತುತವಾದ ಪ್ರಮೇಯ....

ವಾಸುದೇವಃ ಭಗವತಾಂ....
        ವಾಸುದೇವನೇ ವೀರ್ಯ, ಯಶಸ್ಸು, ಐಶ್ವರ್ಯ, ಶ್ರೀ, ಜ್ಞಾನ ಹಾಗೂ ವೈರಾಗ್ಯ ಎನ್ನುವ ಆರು ಗುಣವುಳ್ಳ ಭಗವಂತರ (ದೇವತೆಗಳ) ಸಮುದಾಯದಲ್ಲಿ ಅಗ್ರಗಣ್ಯ ನಾಗಿದ್ದಾನೆಂದು ಶ್ರೀ ಕೃಷ್ಣನೇ ಉದ್ಧವಗೀತೆಯಲ್ಲಿ ಸಾರಿದ್ದಾನೆ-
        'ವಾಸುದೇವಃ ಭಗವತಾಂ....'
-ಭಾಗ ೧೧-೧೬-೨೯
        ಆದುದರಿಂದ ಮಿತಿಯಿಲ್ಲದ ಷಡ್ಗುಣಗಳಿಂದ ತುಂಬಿದ ಶ್ರೀವಾಸುದೇವನಿಗೆ ಸರ್ವ ಎನ್ನುವ ಅಭಿಧಾನವು ಅನ್ವರ್ಥಕವಾಗಿದೆ ಎಂದು ಭಾಗವತವು ಸಮರ್ಥಿಸುವುದು.
        'ತದಿದಂ ಗುಣಪೂರ್ತ್ಯೈವ ಸರ್ವಮಿತ್ಯೇವ ಶಬ್ದಿತಂ....' ಎನ್ನುವ ಪ್ರಮಾಣ ಸಾರುತ್ತಿರುವಂತೆ ವಾಸುದೇವನು ಗುಣಪೂರ್ಣನಾಗಿರುವುದರಿಂದಲೇ 'ಸರ್ವಂ' ಎನಿಸುವುದು ತಾನೇ?
        ಯಾರು ಗ&#