ಶ್ರೀ ರಾಮಕೃಷ್ಣೌ ವಿಜಯತೆ
ಶೀ ಭಂಡಾರಕೇರಿ ಮಠ, ರಥ ಬೀದಿ, ಉಡುಪಿ - ೫೭೬ ೧೦೧
ನಂ.೧೩೪೩, ಭಾಗವತನಿಕೇತ
ಗಿರಿನಗರ ೨ ನೇ ಹಂತ, ಬೆಂಗಳೂರು - ೮೫
ಫೋ: ೨೬೭೨೧೫೨೭
ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ

ಶ್ರೀ ಅಮೃತಕೀರ್ತಿ ಪ್ರತಿಷ್ಠಾನ
ಶ್ರೀ ಭಾಗವತಾಶ್ರಮ, ಶೀ ಭಂಡಾರಕೇರಿ ಮಠ

"ಕಲೌತು ನಾಮ ಮಾತ್ರೇಣ ಪೂಜ್ಯತೇ ಭಗವಾನ್ ಹರಿಃ"
ಎಂಬ ಆಚಾರ್ಯ ಮಧ್ವರ ವಾಣಿಯು ಕಲಿಯುಗದಲ್ಲಿ ವಿಶೇಷವಾಗಿ ಭಗವಂತನನ್ನು ನಾಮಸಂಕೀರ್ತನೆಯಿಂದ ಆರಾಧಿಸಬೇಕೆಂದು ಸೂಚಿಸಿದೆ.
ಕಲೇದೋಷನಿಧೇರಾಜನ್ನಸ್ತಿ ಯೇತೋ ಮಹಾಗುಣಃ |
ಕೀರ್ತಿನಾದೇವಸ್ಯ ಮುಕ್ತಬಂಧಃ ಪರಂವ್ರಜೇತ್ ||
ಕಲಿಯುಗವು ಮಹಾದೋಷಗಳಿಗೆ ಆಕರವೆನಿಸಿದರೂ ಬೇರೆಯಾವ ಯುಗದಲ್ಲೂ ಇಲ್ಲದ ಒಂದು ಮಹಾಗುಣವನ್ನು ಇಲ್ಲಿ ಕಾಣಬಹುದು. ಅದು ಸುಲಭವಾದ ಭಗವನ್ನಾಮ ಸಂಕೀರ್ತನ ಮಾತ್ರದಿಂದ ಭಗವತ್ ಪ್ರಾಪ್ತಿರೂಪವಾದ ಫಲ ವೆಂದು ಶುಕರು ಸಾರಿದ್ದಾರೆ. ಆದುದರಿಂದ ಶ್ರೀಭಾಗವತಾಶ್ರಮ ಪ್ರತಿಷ್ಠಾನ ಭಾಗವತಪ್ರಸಾರದ ಜೊತೆಯಲ್ಲೆ ಭಗವನ್ನಾಮಸಂಕೀರ್ತನಯಜ್ಞವನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ''ಅಮೃತಕೀರ್ತಿಪ್ರತಿಷ್ಠಾನ'' ಎಂಬ ಅಂಗ ಸಂಸ್ಥೆಯನ್ನು ರೂಪಿಸಿ ತನ್ಮೂಲಕ ಭಕ್ತಾಭಿಮಾನಿಗಳ ಸಹಯೋಗದಿಂದ ಭಗವನ್ನಾಮ , ಸಂಕೀರ್ತನೆ, ದಾಸಸಾಹಿತ್ಯವನ್ನು ಹರಿದಾಸರು ಹಾಗೂ ಗಾನಕಲಾವಿದರಿಂದ ಹಾಡಿಸುವ ಕಾರ್ಯಕ್ರಮ ಹಾಗೂ ದಾಸರ ಮುಂಡಿಗೆಬಗ್ಗೆ ಉಪನ್ಯಾಸಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.
ಪ್ರಕೃತ, ವಸಂತ, ಗ್ರೀಷ್ಮ,ವರ್ಷ, ಶರತ್, ಹೇಮಂತ ಹಾಗೂ ಶಿಶಿರ ಎಂಬ ಆರು ಋತುಗಳಲ್ಲಿ ಒಂದೊಂದು ದಾಸಪದ ಗಾನಕಾರ್ಯಕ್ರಮವನ್ನು ಯೋಜಿಸಲಾಗಿದೆ.ಎಲ್ಲಾ ಋತುವಿನ ನಾಮಗಳು ಭಗವಂತನ ಹೆಸರುಗಳು ಹೀಗಾಗಿ ವಸಂತಋತುವಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ''ಶ್ರೀವಸಂತ ಕೀರ್ತನೋತ್ಸವ '' ಎಂಬ ಹೆಸರಿನಲ್ಲಿ ನಡೆಸಲಾಗುವುದು. ಹೀಗೆ ಪ್ರತಿಯೊಂದು ಋತುವಿನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಆ ಆಋತುವಿನ ಹೆಸರಿನೊಂದಿಗೆ ಸೇರಿಸಿ ''ಕೀರ್ತನೋತ್ಸವ" ಎಂಬ ಹೆಸರಿನಲ್ಲಿ ನಡೆಸಲಾಗುವುದು. ಶ್ರೀ ಭಂಡಾರಕೇರಿ ಶ್ರೀಪಾದರಾದ ಶ್ರೀವಿದ್ಯೇಶತೀರ್ಥರ ನೇತೃತ್ವದಲ್ಲಿ ಭಕ್ತಾಭಿಮಾನಿಗಳ ಸಹಯೋಗದಿಂದ ನಡೆಸಲ್ಪಡುವ ಈ ಕೀರ್ತನೋತ್ಸವಕ್ಕೆ ಪ್ರಾಯೋಜಕತ್ವ ರೂಪದಲ್ಲೂ ಸೇವೆಸಲ್ಲಿಸಲು ವಕಾಶವಿದೆ. ಪ್ರಾಯೋಜಕರ ಹೆಸರನ್ನು ಬ್ಯಾನರ್ ನಲ್ಲಿ ಉಲ್ಲೇಖಿಸಲಾಗುವುದು.

ವ್ಯವಸ್ಥಾಪಕರು,
 ಅಮೃತಕೀರ್ತಿ ಪ್ರತಿಷ್ಠಾನ
ಶ್ರೀ ಭಂಡಾರಕೇರಿ ಮಠ